ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಮಿನಿ ಹರಾಜಿನಲ್ಲಿ ಕೋಟಿ-ಕೋಟಿ ಜೇಬಿಗಿಳಿಸಿಕೊಂಡ ಅನ್‌ಕ್ಯಾಪ್ಡ್‌ ಆಟಗಾರರು!

ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ 30 ಲಕ್ಷ ರು ಮೂಲ ಬೆಲೆ ಹೊಂದಿದ್ದ ಅನ್‌ಕ್ಯಾಪ್ಡ್‌ ಆಟಗಾರರು ಕೋಟಿ ಕೋಟಿ ಹಣ ಜೇಬಿಗಿಳಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ಪ್ರಶಾಂತ್‌ ವೀರ್‌ ಮತ್ತು ಕಾರ್ತಿಕ್‌ ಶರ್ಮಾ ಸೇರಿದಂತೆ ಹಲವು ಅನ್‌ಕ್ಯಾಪ್ಡ್‌ ಆಟಗಾರರು ಸ್ಟಾರ್‌ ಆಟಗಾರರನ್ನು ಹಿಂದಿಕ್ಕಿ ದೊಡ್ಡ ಮೊತ್ತಕ್ಕೆ ಖರೀದಿಯಾಗಿದ್ದಾರೆ.

IPL 2026: ಕೋಟಿ, ಕೋಟಿ ಜೇಬಿಗಿಳಿಸಿಕೊಂಡ ಅನ್‌ಕ್ಯಾಪ್ಡ್‌ ಆಟಗಾರರು!

ಹರಾಜಿನಲ್ಲಿ ಕೋಟಿ ಕೋಟಿ ಜೇಬಿಗಿಳಿಸಿಕೊಂಡ ಅನ್‌ಕ್ಯಾಪ್ಡ್‌ ಆಟಗಾರರು. -

Profile
Ramesh Kote Dec 18, 2025 3:13 PM

ಅಬುಧಾಬಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2026 Mini Auction) ಹತ್ತೊಂಬತ್ತನೇ ಆವೃತ್ತಿಯ ಮಿನಿ ಹರಾಜಿನಲ್ಲಿ ಅನ್‌ಕ್ಯಾಪ್ಡ್‌ ಆಟಗಾರರು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಮತ್ತೊಂದು ಕಡೆ ಹೆಚ್ಚು ನಿರೀಕ್ಷೆಯಲ್ಲಿದ್ದ ಸ್ಟಾರ್‌ ಆಟಗಾರರು ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದಾರೆ. ಆದರೆ, ಈ ಬಾರಿ ಅನ್‌ಕ್ಯಾಪ್ಡ್‌ ಆಟಗಾರರಿಗೆ ಫ್ರಾಂಚೈಸಿಗಳು ಹೆಚ್ಚು ಅವಕಾಶಗಳನ್ನು ನೀಡಿದೆ. ಅದರಲ್ಲೂ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ತಲಾ 14.20 ಕೋಟಿ ರು ಗಳನ್ನು ಖರ್ಚು ಮಾಡಿ ಪ್ರಶಾಂತ್‌ ವೀರ್‌ (Prashant Veer) ಮತ್ತು ಕಾರ್ತಿಕ್‌ ಶರ್ಮಾ (Karthik sharma) ಅವರನ್ನು ಸೇರಿಸಿಕೊಂಡಿದೆ. ಈ ಇಬ್ಬರೂ ಐಪಿಎಲ್‌ನ ಇತಿಹಾಸದಲ್ಲೇ ಎರಡನೇ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್‌ ಆಟಗಾರರಾಗಿದ್ದಾರೆ.

ಇನ್ನು ಜಮ್ಮು ಮತ್ತು ಕಾಶ್ಮೀರ ಮೂಲದ ಆಕಿಬ್‌ ನಬಿ ದಾರ್‌ ಅವರು 8.40 ಕೋಟಿ ರು.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪಾಲಾಗಿದ್ದಾರೆ. ಆ ಮೂಲಕ ಈ ಬಾರಿ ಹರಾಜಿನಲ್ಲಿ ಖರೀದಿಯಾದ 3ನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಇವರು 43 ಟಿ20 ಪಂದ್ಯಗಳನ್ನಾಡಿದ್ದು, 7.74ರ ಎಕಾನಮಿಯಲ್ಲಿ 43 ವಿಕೆಟ್‌ ಕಬಳಿಸಿದ್ದಾರೆ. ಬಳಿಕ ಮಧ್ಯಪ್ರದೇಶ ಮೂಲದ ಬೌಲಿಂಗ್‌ ಆಲ್‌ರೌಂಡರ್‌ ಮಂಗೇಶ್‌ ಯಾದವ್‌ 5.20 ಕೋಟಿ ರು.ಗಳಿಗೆ ರಾಯಲ್‌ ಚಾಲೆಂಜ್ಸ್‌ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ. ಇವರೂ ಕೂಡ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಉತ್ತಮ ಸಾಮರ್ಥ್ಯ ಹೊಂದಿರುವುದರಿಂದ ಬೆಂಗಳೂರು ತಂಡದ ಪರ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

IPL 2026 Auction: 25.20 ಕೋಟಿ ರು ಪಡೆದ ಬೆನ್ನಲ್ಲೆ ಕೆಕೆಆರ್‌ಗೆ ನಿರಾಶೆ ಮೂಡಿಸಿದ ಕ್ಯಾಮೆರಾನ್‌ ಗ್ರೀನ್‌!

ಲಖನೌ ಸೇರಿದ ಮೂರು ಅನ್‌ಕ್ಯಾಪ್ಡ್‌ ಆಟಗಾರರು

ಕೊಲ್ಕತ್ತಾ ನೈಟ್‌ ರೈಡರ್ಸ್‌ ಡೆಲ್ಲಿ ಮೂಲದ ವಿಕೆಟ್‌ ಕೀಪಿಂಗ್‌ ಬ್ಯಾಟರ್‌ ತೇಜಸ್ವಿ ದಹಿಯಾ ಅವರನ್ನು 3 ಕೋಟಿ ರು. ಗಳಿಗೆ ಖರೀದಿಸಿದೆ. ಇವರು ಕಳೆದ ನವೆಂಬರ್‌ನಲ್ಲಿ ಅಹಮದಾಬಾದ್‌ನಲ್ಲಿ ತಮಿಳುನಾಡು ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇನ್ನು ಲಖನೌ ಸೂಪರ್‌ ಜಯಂಟ್ಸ್‌ ಫ್ರಾಂಚೈಸಿ ಹರಾಜಿನಲ್ಲಿ 3 ಜನ ಅನ್‌ಕ್ಯಾಪ್ಡ್‌ ಆಟಗಾರರನ್ನು ಖರೀದಿಸಿತು. ಮುಕುಲಕ್‌ ಚೌದರಿ 2.60 ಕೋಟಿ ರು, ಅಕ್ಷತ್‌ ರಘುವಂಶಿ 2.20 ಕೋಟಿ ರು. ಹಾಗೂ ನಮನ್‌ ತಿವಾರಿ ಅವರನ್ನು ಒಂದು ಕೋಟಿ ರು. ಖರ್ಚು ಮಾಡಿ ಎಲ್‌ಎಸ್‌ಜಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

IPL 2026 Auction: ಮಿನಿ ಹರಾಜಿನ ಬಳಿಕ ಆರ್‌ಸಿಬಿ ತಂಡದ ಬಲಾಬಲ ಹೇಗಿದೆ?

ಆರ್‌ಸಿಬಿ ಸೇರಿದ ಮಂಗೇಶ್‌ ಯಾದವ್‌ ಯಾರು?

ಮಧ್ಯಪ್ರದೇಶದ 24ನೇ ವಯಸ್ಸಿನ ಮಂಗೇಶ್‌ ಯಾದವ್‌ ಉತ್ತಮ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮಂಗೇಶ್‌ ಯಾದವ್‌ ಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟಿಂಗ್‌ಗೆ ಕೂಡ ಹೆಸರುವಾಸಿಯಾಗಿದ್ದಾರೆ. ಮಧ್ಯಪ್ರದೇಶ ಟಿ20 ಲೀಗ್‌ ಬಳಿಕ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ಪದಾರ್ಫಣೆ ಮಾಡಿದ್ದ ಇವರು, ಸೂಪರ್‌ ಲೀಗ್‌ ಹಂತದ ಎರಡು ಪಂದ್ಯಗಳನ್ನಾಡಿ 3 ವಿಕೆಟ್‌ ಕಬಳಿಸಿದ್ದರು. ಇತ್ತ ಬ್ಯಾಟಿಂಗ್‌ನಲ್ಲೂ ಕೂಡ 12 ಎಸೆತಗಳಲ್ಲಿ 28 ರನ್‌ಗಳ ಸ್ಪೋಟಕ ಇನಿಂಗ್ಸ್‌ ಆಡಿದ್ದರು.