IPL 2026: ಅಜಿಂಕ್ಯ ರಹಾನೆ ನಾಯಕ, ಕೋಲ್ಕತಾ ನೈಟ್ ರೈಡರ್ಸ್‌ಗೆ ರಿಂಕು ಸಿಂಗ್ ಉಪನಾಯಕ!
KKR Voice captain: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 19ನೇ ಆವೃತ್ತಿಯ ನಿಮಿತ್ತ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ರಿಂಕು ಸಿಂಗ್ ಅವರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ. ಆ ಮೂಲಕ ನಾಯಕ ಅಜಿಂಕ್ಯ ರಹಾನೆಗೆ ರಿಂಕು ಸಿಂಗ್ ನೆರವು ನೀಡಲಿದ್ದಾರೆ.
ಕೆಕೆಆರ್‌ಗೆ ಉಪನಾಯಕನಾಗಿ ರಿಂಕು ಸಿಂಗ್ ನೇಮಕ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 2026ರ ಸಾಲಿನ ನಿಮಿತ್ತ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ, ರಿಂಕು ಸಿಂಗ್‌ಗೆ (Rinku Singh) ಉಪನಾಯಕತ್ವವನ್ನು ನೀಡಿದೆ. 28ರ ಪ್ರಾಯದ ಎಡಗೈ ಬ್ಯಾಟ್ಸ್‌ಮನ್, ಅನುಭವಸಂಪನ್ನ ನಾಯಕ ಅಜಿಂಕ್ಯ ರಹಾನೆ ಅವರಿಗೆ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ನಿರ್ಧಾರವನ್ನು ಮಂಗಳವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ‘Knights Unplugged’ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.
ರಿಂಕು ಸಿಂಗ್ ಅವರ ಉಪನಾಯಕತ್ವದ ಜವಾಬ್ದಾರಿಯನ್ನು ತಜ್ಞರು ದೀರ್ಘಕಾಲೀನ ಹೂಡಿಕೆಯಾಗಿ ಪರಿಗಣಿಸುತ್ತಿದ್ದಾರೆ. “God's plan has a new chapter” ಎಂದು ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ರಿಂಕು ಅವರ ಪ್ರಸಿದ್ಧ ಮಾತನ್ನು ಮತ್ತೆ ನೆನಪಿಸಿದೆ. 2018ರಿಂದ ತಂಡದೊಂದಿಗೆ ಇದ್ದ ರಿಂಕು, ಬೆಂಚ್ ಆಟಗಾರನಿಂದ ಕೇಕೆಆರ್ ಮಧ್ಯಮ ಕ್ರಮದ ಹೃದಯವಾಗುವ ಮಟ್ಟಕ್ಕೆ ಬೆಳೆದಿದ್ದಾರೆ.
IPL 2026: ʻಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಿದ್ರೆ ನಿವೃತ್ತಿ ಹೇಳಿʼ-ಎಂಎಸ್ ಧೋನಿಗೆ ಆಕಾಶ್ ಚೋಪ್ರಾ ಸಲಹೆ!
ರಿಂಕು ಸಿಂಗ್ ಬಗ್ಗೆ ಅಭಿಷೇಕ್ ನಾಯರ್ ಹೇಳಿದ್ದಿದು
ಕೆಕೆಆರ್ ಮುಖ್ಯ ಕೋಚ್ ಅಭಿಷೇಕ್ ನಾಯರ್ ಅವರು, ರಿಂಕು ಸಿಂಗ್ ಅವರಿಗೆ ಉಪನಾಯಕತ್ವದ ಹೆಚ್ಚುವರಿ ಜವಾಬ್ದಾರಿ ನೀಡಿರುವ ಹಿನ್ನೆಲೆಯನ್ನು ವಿವರಿಸಿದ್ದಾರೆ.
“ಇದು ತುಂಬಾ ಸೂಕ್ತವಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನಾನು ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಸಿಬ್ಬಂದಿಯಾಗಿ ಸೇರಿದಾಗಿನ ನನ್ನ ಮೊದಲ ನೆನಪು ರಿಂಕು ಸಿಂಗ್ ಜೊತೆ ಕೆಲಸ ಮಾಡಿದ್ದು. ಈಗ ಮುಖ್ಯ ಕೋಚ್ ಆಗಿ ಅವರ ಪಯಣವನ್ನು ನೋಡುವುದು ಬಹಳ ವಿಶೇಷವಾಗಿದೆ,” ಎಂದು ಅಭಿಷೇಕ್ ಶರ್ಮಾ ಮಂಗಳವಾರ ಹೇಳಿದರು.
Captain. Vice-Captain. Sorted 😌💜 pic.twitter.com/reeySu1chL
— KolkataKnightRiders (@KKRiders) March 24, 2026
“ಕಳೆದ ಕೆಲವು ವರ್ಷಗಳಲ್ಲಿ ರಿಂಕು ಕೇವಲ ಕ್ರಿಕೆಟಿಗನಾಗಿ ಮಾತ್ರವಲ್ಲ, ನಾಯಕನಾಗಿಯೂ ಬೆಳೆದಿರುವುದನ್ನು ನಾವು ನೋಡಿದ್ದೇವೆ. ಕಳೆದ ಎರಡು ಸೀಸನ್‌ಗಳಲ್ಲಿ ಅವರ ಪ್ರದರ್ಶನವೇ ಅದಕ್ಕೆ ಸಾಕ್ಷಿಯಾಗಿದೆ. ಮೈದಾನದ ಹೊರಗೂ ಅವರು ಹೆಚ್ಚು ಮಾತನಾಡದೆ ಇದ್ದರೂ, ತಂಡ ಸ್ವಾಭಾವಿಕವಾಗಿ ಅವರತ್ತ ನೋಡುವ ವ್ಯಕ್ತಿಯಾಗಿದ್ದಾರೆ.
“ದೊಡ್ಡ ಹೊಡೆತಗಳನ್ನು ಆಡುವ ಸಾಮರ್ಥ್ಯ ಇರುವ ಆಟಗಾರನಾಗಿ, ಅವರಿಗೆ ಇನ್ನಷ್ಟು ಜವಾಬ್ದಾರಿ ನೀಡಲು ಇದು ಸರಿಯಾದ ಸಮಯ ಎಂದು ನಾವು ಭಾವಿಸಿದ್ದೇವೆ. ವಿಶ್ವಕಪ್ ವಿಜೇತರಾದ ನಂತರ, ಇದು ಅವರಿಗಾಗಿ ಮುಂದಿನ ಹಂತಕ್ಕೆ ಏರಲು, ನಾಯಕತ್ವ ವಹಿಸಲು ಮತ್ತು ತಂಡವನ್ನು ಮುನ್ನಡೆಸಲು ಸೂಕ್ತ ಕ್ಷಣವಾಗಿದೆ,” ಎಂದು ಅವರು ತಿಳಿಸಿದ್ದಾರೆ.
IPL 2026: ಐಪಿಎಲ್ ಆಡುವ ವಿದೇಶಿ ಆಟಗಾರರ ವಿರುದ್ಧ ರೊಚ್ಚಿಗೆದ್ದ ಸುನೀಲ್ ಗವಾಸ್ಕರ್! ಇದಕ್ಕೆ ಕಾರಣವೇನು?
ರಿಂಕು ಸಿಂಗ್ ಬೆಳಕಿಗೆ ಬಂದಿದ್ದು ಹೇಗೆ?
ರಿಂಕು ಸಿಂಗ್ ಅವರ ‘ಗೋಲ್ಡ್ ಅಂಡ್ ಪರ್ಪಲ್’ ತಂಡವಾದ ಕೆಕೆಆರ್ ಜೊತೆಗಿನ ಪಯಣವು ಐಪಿಎಲ್ ಇತಿಹಾಸದಲ್ಲಿಯೇ ಸ್ಮರಣೀಯವಾಗಿದೆ. ಉತ್ತರ ಪ್ರದೇಶದ ಪರ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ, 2023ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಐದು ಸತತ ಸಿಕ್ಸರ್‌ಗಳನ್ನು ಹೊಡೆದು ಅಸಾಧ್ಯವೆನಿಸಿದ್ದ ಚೇಸ್ ಸಾಧಿಸಿದ ಕ್ಷಣದಿಂದ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವ ಮೂಡಿಸಿದ್ದಾರೆ.
ಅಂದಿನ ರಾತ್ರಿ ಬಳಿಕ ಅವರು ಫ್ರಾಂಚೈಸಿಯ ಪ್ರಮುಖ “ರಕ್ಷಕ ಆಟಗಾರ” ಆಗಿ ಹೊರಹೊಮ್ಮಿದ್ದಾರೆ. 2025ರ ಸಾಲಿನಲ್ಲಿ 206 ರನ್‌ಗಳೊಂದಿಗೆ ಸಾಧಾರಣ ಪ್ರದರ್ಶನ ನೀಡಿದರೂ, ಈ ವರ್ಷದ ಹರಾಜು ಮುನ್ನ ಅವರನ್ನು 13 ಕೋಟಿ ರು. ಗಳಿಗೆ ಉಳಿಸಿಕೊಳ್ಳುವ ಮೂಲಕ ಕೋಲ್ಕತಾ ಫ್ರಾಂಚೈಸಿ ಅಪಾರ ವಿಶ್ವಾಸ ತೋರಿಸಿದೆ. ಡೆತ್ ಓವರ್‌ಗಳಲ್ಲಿ 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಕಾಯ್ದುಕೊಳ್ಳುವ ಅವರ ಸಾಮರ್ಥ್ಯವೇ ಅವರ ದೊಡ್ಡ ಶಕ್ತಿ. ಈ ಅಂಕಿಅಂಶವು ಪ್ರಸ್ತುತ ವಿಶ್ವದ ಅತ್ಯುತ್ತಮ ಫಿನಿಷರ್‌ಗಳ ಮಟ್ಟಕ್ಕೆ ಸಮಾನವಾಗಿದೆ.