LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್ ಜಯಂಟ್ಸ್!
ಮುಂಬೈ ಇಂಡಿಯನ್ಸ್ ಎದುರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ಅವರು ಅಬ್ಬರಿಸಿ ಪವರ್‌ಪ್ಲೇನಲ್ಲಿ 90 ರನ್‌ಗಳನ್ನು ಕಲೆ ಹಾಕಿದರು. ಇದು ಎಲ್‌ಎಸ್‌ಜಿ ಪಾಲಿಗೆ ಪವರ್‌ಪ್ಲೇನಲ್ಲಿ ಅತ್ಯಧಿಕ ಮೊತ್ತವಾಗಿದೆ.
ಮುಂಬೈ ಇಂಡಿಯನ್ಸ್ ಎದುರು ಅರ್ಧಶತಕ ಬಾರಿಸಿದ ನಿಕೋಲಸ್ ಪೂರನ್. -
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ(MI vs LSG) ಲಖನೌ ಸೂಪರ್ ಜಯಂಟ್ಸ್ ತಂಡ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಯಿತು. ಮಿಚೆಲ್ ಮಾರ್ಷ್ ಅವರ ಜೊತೆಗೆ ಇನಿಂಗ್ಸ್ ಆರಂಭಿಸಿದ ಹೊಸ ಆಟಗಾರ ಜಾಶ್ ಇಂಗ್ಲಿಸ್ 5 ಎಸೆತಗಳಲ್ಲಿ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಮಿಚೆಲ್‌ಗೆ ಜೊತೆಯಾದ ನಿಕೋಲಸ್ ಪೂರನ್ (Nicholas Pooran) ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಪವರ್‌ಪ್ಲೇನಲ್ಲಿ ಎಲ್‌ಎಸ್‌ಜಿ ತಂಡ ಒಂದು ವಿಕೆಟ್ ನಷ್ಟಕ್ಕೆ 90 ರನ್‌ಗಳನ್ನು ಕಲೆ ಹಾಕಿತು. ಇದು ಐಪಿಎಲ್ ಟೂರ್ನಿಯಲ್ಲಿ ಲಖನೌ ಪವರ್‌ಪ್ಲೇನಲ್ಲಿ ಗಳಿಸಿದ ಅತ್ಯಧಿಕ ಮೊತ್ತವಾಗಿದೆ.
ಲಖನೌ ತಂಡ ಪವರ್‌ಪ್ಲೇನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಮುಖ್ಯ ಕಾರಣರಾದರು ನಿಕೋಲಸ್ ಪೂರನ್ ಹಾಗೂ ಮಿಚೆಲ್ ಮಾರ್ಷ್. ಜಾಶ್ ಇಂಗ್ಲಿಷ್ ಔಟ್ ಆದ ಬಳಿಕ ಈ ಇಬ್ಬರೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇವರು ಪವರ್‌ಪ್ಲೇನಲ್ಲಿ 61 ರನ್‌ಗಳನ್ನು ಕಲೆ ಹಾಕಿದರು. ಅದರಲ್ಲಿಯೂ ವಿಶೇಷವಾಗಿ ನಿಕೋಲಸ್ ಪೂರನ್ 12 ಎಸೆತಗಳಲ್ಲಿ 39 ರನ್ ಚಚ್ಚಿದರೆ, ಮಿಚೆಲ್ ಮಾರ್ಷ್ 20 ಎಸೆತಗಳಲ್ಲಿ 35 ರನ್ ಗಳಿಸಿದರು. ಅಂತಿಮವಾಗಿ ಈ ಜೋಡಿ ಎರಡನೇ ವಿಕೆಟ್‌ಗೆ 34 ಎಸೆತಗಳಲ್ಲಿ 94 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ತಮ್ಮ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿತು.
MI vs LSG ಪಂದ್ಯದಿಂದ ಹಾರ್ದಿಕ್ ಪಾಂಡ್ಯಗೆ ಕೊಕ್! ಕಾರಣ ತಿಳಿಸಿದ ಸೂರ್ಯಕುಮಾರ್ ಯಾದವ್!
ಲಖನೌ ಸೂಪರ್ ಜಯಂಟ್ಸ್ ತಂಡದ ಪವರ್‌ಪ್ಲೇನಲ್ಲಿ ಅತ್ಯಧಿಕ ಮೊತ್ತ
90/1 vs ಮುಂಬೈ ಇಂಡಿಯನ್ಸ್, ವಾಂಖೆಡೆ, 2026*
80/1 vs ಚೆನ್ನೈ ಸೂಪರ್ ಕಿಂಗ್ಸ್, ಚೆನ್ನೈ, 2023
77/1 vs ಸನ್‌ರೈಸರ್‌ಸ್ ಹೈದರಾಬಾದ್, ಹೈದರಾಬಾದ್, 2025
74/2 vs ಪಂಜಾಬ್ ಕಿಂಗ್ಸ್, ಮೊಹಾಲಿ, 2023
72/0 vs ಗುಜರಾತ್ ಟೈಟನ್ಸ್, ಅಹಮದಾಬಾದ್, 2023
ನಿಕೋಲಸ್ ಪೂರನ್ ಸ್ಪೋಟಕ ಫಿಫ್ಟಿ
ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಿಕೋಲಸ್ ಪೂರನ್, ತಮ್ಮ ಬ್ಯಾಟಿಂಗ್‌ನಲ್ಲಿ ತುಂಬಾ ವಿಭಿನ್ನವಾಗಿ ಕಂಡು ಬಂದರು. ಆ ಮೂಲಕ ಸೀಸನ್‌ನಲ್ಲಿ ಮೊದಲ ಅರ್ಧಶತಕವನ್ನು ಪೂರೈಸಿದರು. ಅವರು ಆಡಿದ 16 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಎಲ್‌ಎಸ್‌ಜಿ ಪರ ಎರಡನೇ ವೇಗದ ಅರ್ಧಶತಕವನ್ನು ಬಾರಿಸಿದರು. ಅಂತಿಮವಾಗಿ ಇವರು ಆಡಿದ 21 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 63 ರನ್ ಗಳಿಸಿದ ಬಳಿಕ ಕಾರ್ಬಿನ್ ಬಾಷ್‌ಗೆ ವಿಕೆಟ್ ಒಪ್ಪಿಸಿದರು. ಅವರು 300ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದು ವಿಶೇಷ.
300 SR. 8 sixes. Sab ki taraf se aaj flying kiss, Nicky P ❤️💙 pic.twitter.com/PbeRgLBPB5
— Lucknow Super Giants (@LucknowIPL) May 4, 2026
ಎಲ್‌ಎಸ್‌ಜಿ ಪರ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ಸ್
15 - ನಿಕೋಲಸ್ ಪೂರನ್ vs ಆರ್‌ಸಿಬಿ, ಬೆಂಗಳೂರು, 2023
16 - ನಿಕೋಲಸ್ ಪೂರನ್ vs ಎಂಐ, ವಾಂಖೆಡೆ, 2026*
18 - ನಿಕೋಲಸ್ ಪೂರನ್ vs ಎಸ್‌ಆರ್‌ಎಚ್, ಹೈದರಾಬಾದ್, 2025
19 - ನಿಕೋಲಸ್ ಪೂರನ್ vs ಎಂಐ, ವಾಂಖೆಡೆ, 2024
20 - ಕೈಲ್ ಮೇಯರ್ಸ್ vs ಪಿಬಿಕೆಎಸ್, ಮೊಹಾಲಿ, 2023
20 - ನಿಕೋಲಸ್ ಪೂರನ್ vs ಡಿಸಿ, ದೆಹಲಿ, 2024