ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲು ಕಾರಣ ತಿಳಿಸಿದ ಮಿಚೆಲ್ ಸ್ಟಾರ್ಕ್!
IPL 2026: ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಇನ್ನೂ ಭಾರತಕ್ಕೆ ಆಗಮಿಸಿಲ್ಲ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೀಗ ಮಿಚೆಲ್ ಸ್ಟಾರ್ಕ್, ತಾವು ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಐಪಿಎಲ್‌ಟೂರ್ನಿಗೆ ಆಗಮಿಸುವ ಬಗ್ಗೆ ಮಿಚೆಲ್ ಸ್ಟಾರ್ಕ್ ಹೇಳಿಕೆ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 19ನೇ ಆವೃತ್ತಿ ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಟಾರ್ ಹಾಗೂ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಇನ್ನೂ ಭಾರತಕ್ಕೆ ಆಗಮಿಸಿಲ್ಲ. ಆಸೀಸ್ ವೇಗಿ ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ (Delhi capitals) ತಂಡಕ್ಕೆ ಏಕೆ ಸೇರ್ಪಡೆಯಾಗಿಲ್ಲ ಎಂಬುದದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರ ಎನ್‌ಒಸಿ ಕುರಿತ ಸಮಸ್ಯೆಗಳು ವರದಿಯಾಗುತ್ತಿದ್ದವು ಮತ್ತು ಅವರ ಫಿಟ್‌ನೆಸ್ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಮಿಚೆಲ್ ಸ್ಟಾರ್ಕ್ ಅವರೇ ತಾವು ಇನ್ನೂ ಏಕೆ ಭಾರತಕ್ಕೆ ಆಗಮಿಸಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಿಚೆಲ್ ಸ್ಟಾರ್ಕ್ "ಭಾರತೀಯ ಮಾಧ್ಯಮಗಳಲ್ಲಿ ಕೆಲವು ವ್ಯಕ್ತಿಗಳು ವಾಸ್ತವ ಅರಿತುಕೊಳ್ಳದೆ ತಮಗೆ ಬೇಕಾದ ರೀತಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಾನು ಪ್ರಸ್ತುತ ಭುಜ ಮತ್ತು ಮೊಣಕೈ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದೇನೆ. ಆಸ್ಟ್ರೇಲಿಯಾದ ಬೇಸಿಗೆಯಲ್ಲಿ ಈ ಗಾಯಗಳ ತೀವ್ರತೆಯ ಬಗ್ಗೆ ನನಗೆ ತಿಳಿದಿರಲಿಲ್ಲ," ಎಂದು ಬರೆದಿದ್ದಾರೆ.
IPL 2026: ಸಂಜು ಸಾಮ್ಸನ್ ಅಲ್ಲ! ಸಿಎಸ್‌ಕೆ ತಂಡದ ಬೆಸ್ಟ್ ಬ್ಯಾಟ್ಸ್‌ಮನ್ ಆರಿಸಿದ ಆರ್ ಅಶ್ವಿನ್!
"ಅವರು ಐಪಿಎಲ್ ಟೂರ್ನಿಯಲ್ಲಿ ಆಡುವ ಬಗ್ಗೆ ಕೆಲವು ಕಠಿಣ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಆಟಗಾರರ ಬಗ್ಗೆ ತಪ್ಪು ಮಾಹಿತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಸತ್ಯ ಎಂದು ಬಿಂಬಿಸುತ್ತಿದ್ದಾರೆ ಹಾಗೂ ಮತ್ತು ನನ್ನ ದೇಹದ ಬಗ್ಗೆ ನನಗಿಂತ ಅವರಿಗೇ ಚೆನ್ನಾಗಿ ತಿಳಿದಿರುವ ರೀತಿ ಹೇಳಿಕೆ ಕೊಟ್ಟಿದ್ದಾರೆ," ಎಂದು ಮಿಚೆಲ್ ಸ್ಟಾರ್ಕ್ ಟೀಕಿಸಿದ್ದಾರೆ.
"ಡೆಲ್ಲಿ ತಂಡಕ್ಕೆ ಈ ಗಾಯದ ಸಮಯ ದುರದೃಷ್ಟಕರ ಎಂದು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಲಭ್ಯವಿಲ್ಲದಿದ್ದಕ್ಕಾಗಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಲು ನಾನು ಬದ್ಧನಾಗಿರುತ್ತೇನೆ. ನಾನು ಫ್ರಾಂಚೈಸಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸಾಧ್ಯವಾದಷ್ಟು ಬೇಗ ತಂಡವನ್ನು ಸೇರಲು ನಾನು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ," ಎಂದು ಆಸ್ಟ್ರೇಲಿಯಾದ ಬೌಲರ್ ತಿಳಿಸಿದ್ದಾರೆ.
🚨JUST IN: STARC HITS OUT AT MISINFORMED IPL CRITICS 🇦🇺🇮🇳
— RAJAT (@RajatJain) March 28, 2026
Mitchell Starc apologised to Delhi Capitals for his unavailability in early IPL 2026 matches while slamming certain Indian media voices for spreading “heavily misinformed opinions” about his fitness.
• Rehabbing shoulder… pic.twitter.com/nFSp09C55r
ಮಿಚೆಲ್ ಸ್ಟಾರ್ಕ್ ಅವರ ಐಪಿಎಲ್ ವೃತ್ತಿಜೀವನ
36ರ ವಯಸ್ಸಿನ ಮಿಚೆಲ್ ಸ್ಟಾರ್ಕ್ 2014 ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ, ಅವರು ಐಪಿಎಲ್ ಟೂರ್ನಿಯಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ, 8.61ರ ಎಕಾನಮಿ ದರದಲ್ಲಿ 65 ವಿಕೆಟ್‌ಗಳನ್ನು ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಸ್ಟಾರ್ಕ್ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕೂಡ ಆಡಿದ್ದರು.
IPL 2026: ಎಸ್‌ಆರ್‌ಎಚ್ ವಿರುದ್ಧ ಜಾಶ್ ಹೇಝಲ್‌ವುಡ್ ಆಡ್ತಾರಾ? ಆಂಡಿ ಫ್ಲವರ್ ಸ್ಪಷ್ಟನೆ!
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್ (ನಾಯಕ), ಕೆ.ಎಲ್. ರಾಹುಲ್, ಕರುಣ್ ನಾಯರ್, ಡೇವಿಡ್ ಮಿಲ್ಲರ್, ಪಥುಮ್ ನಿಸಾಂಕ, ಸಾಹಿಲ್ ಪರಾಖ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಅಜಯ್ ಮಂಡಲ್, ತ್ರಿಪುರಣ ವಿಜಯ್, ಮಾಧವ್ ತಿವಾರಿ, ಆಕಿಬ್ ದರ್, ನಿತೀಶ್ ರಾಣಾ, ಮಿಚೆಲ್ ಸ್ಟಾರ್ಕ್, ಟಿ ನಟರಾಜನ್, ಮುಕೇಶ್ ಕುಮಾರ್, ದುಷ್ಮಾಂತ ಚಮೀರಾ, ಲುಂಗಿ ಎನ್‌ಗಿಡಿ, ಕೈಲ್ ಜೇಮಿಸನ್, ಕುಲ್ದೀಪ್ ಯಾದವ್