MI vs LSG: 300ರ ಸ್ಟ್ರೈಕ್ ರೇಟ್‌ನೊಂದಿಗೆ ವೈಭವ್ ಸೂರ್ಯವಂಶಿ ದಾಖಲೆ ಮುರಿದ ನಿಕೋಲಸ್ ಪೂರನ್!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಟೀಕೆಗಳಿಗೆ ಗುರಿಯಾಗಿದ್ದ ಲಖನೌ ಸೂಪರ್ ಜಯಂಟ್ಸ್ ತಂಡದ ನಿಕೋಲಸ್ ಪೂರನ್, ಮುಂಬೈ ಇಂಡಿಯನ್ಸ್ ವಿರುದ್ಧ ಸ್ಪೋಟಕ ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಅವರು ಈ ಇನಿಂಗ್ಸ್ ಅನ್ನು 300ರ ಸ್ಟ್ರೈಕ್ ರೇಟ್‌ನಲ್ಲಿ ಆಡಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ವೈಭವ್ ಸೂರ್ಯವಂಶಿ ದಾಖಲೆ ಮುರಿದ ನಿಕೋಲಸ್ ಪೂರನ್. -
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಾಲಿನ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಟೀಕೆಗಳಿಗೆ ಗುರಿಯಾಗಿದ್ದ ಲಖನೌ ಸೂಪರ್ ಜಯಂಟ್ಸ್ ತಂಡದ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್, ಈ ಸೀಸನ್‌ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಬಾರಿಸಿದ್ದಾರೆ. ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರಿನ ಟೂರ್ನಿಯ 47ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಎಲ್‌ಎಸ್‌ಜಿ ಪರ ಅವರು ಸ್ಪೋಟಕ ಬ್ಯಾಟಿಂಗ್ ನಡೆಸಿ ಭರ್ಜರಿ ಫಾರ್ಮ್‌ಗೆ ಮರಳಿದರು. ಆ ಮೂಲಕ ತಮ್ಮ ತಂಡದ ಮಾಲೀಕರಾದ ಸಂಜೀವ್ ಗೋಯಾಂಕ ಅವರ ಸಂತಸಕ್ಕೆ ಕಾರಣರಾದರು.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಈ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಜೊತೆಗೆ ಇನಿಂಗ್ಸ್ ಆರಂಭಿಸಿದ್ದ ಹೊಸ ಆಟಗಾರ ಜಾಶ್ ಇಂಗ್ಲಿಸ್ 13 ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಸಿದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಪೂರನ್, ತಮ್ಮ ಅಪಾಯಕಾರಿ ಬ್ಯಾಟಿಂಗ್ ಮೂಲಕ ಧೂಳೆಬ್ಬಿಸಿದರು ಹಾಗೂ ಮುಂಬೈ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಅವರು ಕೇವಲ 16 ಎಸೆತಗಳಲ್ಲಿಯೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಲಖನೌ ತಂಡದ ಪರ ಎರಡನೇ ವೇಗದ ಅರ್ಧಶತಕ ಬಾರಿಸಿದರು. ಮೊದಲನೇ ವೇಗದ ಅರ್ಧಶತಕ ಕೂಡ ಇವರ ಹೆಸರನಲ್ಲಿದೆ.
LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್ ಜಯಂಟ್ಸ್!
ವೈಭವ್ ಸೂರ್ಯವಂಶಿ ದಾಖಲೆ ಮುರಿದ ಪೂರನ್
ತಮ್ಮ ಕಮ್‌ಬ್ಯಾಕ್ ಇನಿಂಗ್ಸ್‌ನಲ್ಲಿ ಒಟ್ಟು ಆಡಿದ 21 ಎಸೆತಗಳಲ್ಲಿ ವಿಂಡೀಸ್ ಬ್ಯಾಟ್ಸ್‌ಮನ್ 63 ರನ್‌ಗಳನ್ನು ಚಚ್ಚಿದರು. ಇದರಲ್ಲಿ ಅವರು ಬರೋಬ್ಬರಿ 8 ಸಿಕ್ಸರ್ ಹಾಗೂ ಒಂದು ಬೌಂಡರಿಗಳನ್ನು ಬಾರಿಸಿದ್ದರು. ಅಂದ ಹಾಗೆ ಅವರು 300ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಸಿಡಿಸಿದ್ದು ವಿಶೇಷವಾಗಿತ್ತು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ 20ಕ್ಕೂ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಎಲೈಟ್ ಲಿಸ್ಟ್‌ನಲ್ಲಿ 15ರ ವಯಸ್ಸಿನ ವೈಭವ್ ಸೂರ್ಯವಂಶಿಯನ್ನು ನಿಕೋಲಸ್ ಪೂರನ್ ಹಿಂದಿಕ್ಕಿದ್ದಾರೆ.
1⃣6⃣- ball FIFTY 💥
— IndianPremierLeague (@IPL) May 4, 2026
𝐓𝐡𝐞 𝐍𝐢𝐜𝐡𝐨𝐥𝐚𝐬 𝐏𝐨𝐨𝐫𝐚𝐧 𝐒𝐡𝐨𝐰 🍿
His first of this season 👏
Updates ▶️ https://t.co/elXSOvaeig #TATAIPL | #KhelBindaas | #MIvLSG pic.twitter.com/OMxinwxoOY
ರಾಜಸ್ಥಾನ್ ರಾಯಲ್ಸ್ ಓಪನರ್ ನಾಲ್ಕು ಬಾರಿ 20ಕ್ಕೂ ಕಡಿಮೆ ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದಾರೆ. ಆದರೆ, ಲಖನೌ ಬ್ಯಾಟರ್ ಪೂರನ್ ಐದು ಬಾರಿ ಈ ಸಾಧನೆಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಅಭಿಷೇಕ್ ಶರ್ಮಾ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇವರು ಒಟ್ಟು ಆರು ಬಾರಿ 20ಕ್ಕೂ ಕಡಿಮೆ ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು 50 ರನ್ ಗಳಿಸಿದ ಬ್ಯಾಟರ್ಸ್
6 - ಅಭಿಷೇಕ್ ಶರ್ಮಾ
5 - ನಿಕೋಲಸ್ ಪೂರನ್
4 - ವೈಭವ್ ಸೂರ್ಯವಂಶಿ
ಲಖನೌ ಪರ ವೇಗದ ಅರ್ಧಶತಕ ಸಿಡಿಸಿದ ಆಟಗಾರರು
15 ಎಸೆತಗಳಲ್ಲಿ - ನಿಕೋಲಸ್ ಪೂರನ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬೆಂಗಳೂರು, 2023
16 ಎಸೆತಗಳಲ್ಲಿ- ನಿಕೋಲಸ್ ಪೂರನ್ vs ಮುಂಬೈ ಇಂಡಿಯನ್ಸ್, ವಾಂಖೆಡೆ, 2026*
18 ಎಸೆತಗಳಲ್ಲಿ- ನಿಕೋಲಸ್ ಪೂರನ್ vs ಸನ್‌ರೈಸರ್ಸ್ ಹೈದರಾಬಾದ್, ಹೈದರಾಬಾದ್, 2025
19 ಎಸೆತಗಳಲ್ಲಿ- ನಿಕೋಲಸ್ ಪೂರನ್ vs ಮುಂಬೈ ಇಂಡಿಯನ್ಸ್, ವಾಂಖೆಡೆ, 2024
20 ಎಸೆತಗಳಲ್ಲಿ- ಕೈಲ್ ಮೇಯರ್ಸ್ vs ಪಂಜಾಬ್ ಕಿಂಗ್ಸ್, ಮೊಹಾಲಿ, 2023
20 ಎಸೆತಗಳಲ್ಲಿ- ನಿಕೋಲಸ್ ಪೂರನ್ vs ಡೆಲ್ಲಿ ಕ್ಯಾಪಿಟಲ್ಸ್, ದೆಹಲಿ, 2024