ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻರಾಹುಲ್‌ ದ್ರಾವಿಡ್‌ಗೆ ಗೇಟ್‌ ಪಾಸ್‌ʼ: ರಾಜಸ್ಥಾನ್‌ ರಾಯಲ್ಸ್‌ ಬಗ್ಗೆ ಎಬಿಡಿ ಅಚ್ಚರಿ ಹೇಳಿಕೆ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ರಾಜಸ್ಥಾನ್‌ ರಾಯಲ್ಸ್‌ ತಂಡದ ಹೆಡ್‌ ಕೋಚ್‌ ಹುದ್ದೆಗೆ ರಾಹುಲ್‌ ದ್ರಾವಿಡ್‌ ಆಗಸ್ಟ್‌ 30 ರಂದು ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಆರ್‌ ಕೋಚ್‌ ಸ್ಥಾನವನ್ನು ತೊರೆದ ದ್ರಾವಿಡ್‌ ಬಗ್ಗೆ ಎಬಿಡಿ ಹೇಳಿಕೆ!

ಆರ್‌ಆರ್‌ ಕೋಚ್‌ ಸ್ಥಾನವನ್ನು ತೊರೆದ ರಾಹುಲ್‌ ದ್ರಾವಿಡ್‌ ಬಗ್ಗೆ ಎಬಿಡಿ ಪ್ರತಿಕ್ರಿಯೆ. -

Profile Ramesh Kote Sep 1, 2025 12:44 PM

ನವದೆಹಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ನಿಮಿತ್ತ ರಾಹುಲ್‌ ದ್ರಾವಿಡ್‌ (Rahul Dravid) ಅವರು ರಾಜಸ್ಥಾನ್‌ ರಾಯಲ್ಸ್‌ ತಂಡದ ಹೆಡ್‌ ಕೋಚ್‌ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದರು. ಈ ಬಗ್ಗೆ ಇದೀಗ ದಕ್ಷಿಣ ಆಫ್ರಿಕಾ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ (AB De Villiers) ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಆವೃತ್ತಿಯ ಐಪಿಎಲ್‌ ಟೂರ್ನಿಗೆ ರಾಜಸ್ಥಾನ್‌ ರಾಯಲ್ಸ್‌ನ ಯೋಜನೆ ಬೇರೆ ಇರಹುದು. ಈ ಕಾರಣದಿಂದಲೇ ಅವರು ಹೆಡ್‌ ಕೋಚ್‌ ಹುದ್ದೆಯಿಂದ ರಾಹುಲ್‌ ದ್ರಾವಿಡ್‌ ಅವರನ್ನು ಕೈ ಬಿಟ್ಟಿರಬಹುದು ಎಂದು ಆರ್‌ಸಿಬಿ ದಿಗ್ಗಜ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಗಸ್ಟ್‌ 30 ರಂದು ರಾಹುಲ್‌ ದ್ರಾವಿಡ್‌ ಅವರು ಹೆಡ್‌ ಕೋಚ್‌ ಹುದ್ದೆಯನ್ನು ತೊರೆದಿದ್ದಾರೆಂದು ರಾಜಸ್ಥಾನ್‌ ರಾಯಲ್ಸ್‌ ಫ್ರಾಂಚೈಸಿ ತನ್ನ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಪ್ರಕಟಿಸಿತ್ತು. ನಾವು ನೀಡಿದ್ದ ದೊಡ್ಡ ಆಫರ್‌ ಅನ್ನು ದ್ರಾವಿಡ್‌ ಕೈ ಬಿಟ್ಟಿದ್ದಾರೆಂದು ತಿಳಿಸಿತ್ತು. ಅಂದ ಹಾಗೆ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ ಅವರ ವಿಷಯದಲ್ಲಿ ಅಸಮಾಧಾನದೊಂದಿಗೆ ರಾಹುಲ್‌ ದ್ರಾವಿಡ್‌ ಹೆಡ್‌ ಕೋಚ್‌ ಹುದ್ದೆಯನ್ನು ತೊರೆದಿದ್ದಾರೆಂದು ಹೇಳಲಾಗುತ್ತಿದೆ.

ಈ ಇಬ್ಬರಿಂದ ರಾಜಸ್ಥಾನ್‌ ರಾಯಲ್ಸ್‌ ಹೆಡ್‌ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್‌ ದ್ರಾವಿಡ್‌!

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ರಾಹುಲ್‌ ದ್ರಾವಿಡ್‌ ಭಾರತ ತಂಡದ ಕೋಚ್‌ ಹುದ್ದೆಯನ್ನು ತೊರೆದಿದ್ದರು. ಇದಾದ ಬಳಿಕ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡದ ಹೆಡ್‌ ಕೋಚ್‌ ಹುದ್ದೆಯನ್ನುಅಲಂಕರಿಸಿದ್ದರು. ಆದರೆ, ಇವರ ಮಾರ್ಗದರ್ಶನದಲ್ಲಿ ರಾಜಸ್ಥಾನ್‌ ತಂಡ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗಿತ್ತು.

"ಕೆಲವೊಮ್ಮೆ ನೀವು ಫುಟ್‌ಬಾಲ್‌ ಲೀಗ್‌ ರೀತಿ ಪ್ರೀಮಿಯರ್‌ ಲೀಗ್‌ಗಳನ್ನು ನೋಡಬಹುದು, ತಮ್ಮ ತಂಡಗಳು ಉತ್ತಮ ಪ್ರದರ್ಶನವನ್ನು ತೋರಬೇಕು ಹಾಗೂ ಟ್ರೋಫಿಯನ್ನ ಗೆಲ್ಲಬೇಕೆಂದು ಕೋಚ್‌ಗಳು ಹಾಗೂ ಮ್ಯಾನೇಜರ್‌ಗಳು ಯಾವಾಗಲೂ ಒತ್ತಡದಲ್ಲಿರುತ್ತಿದ್ದರು. ಒಮ್ಮೆ ಅವರು ಕಪ್‌ ಗೆದ್ದಿಲ್ಲವಾದರೆ, ಮಾಲೀಕರಿಂದ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಅಂದ ಹಾಗೆ ವಾಸ್ತವದ ಅಂಶಗಳು ನಮಗೆ ಗೊತ್ತಿರುವುದಿಲ್ಲ. ಅವರು ಇನ್ನೊಂದು ಪಾತ್ರವನ್ನು ತಿರಸ್ಕರಿಸಿದ ಕಾರಣ ಅವರನ್ನು ಹೊರಗೆ ಹಾಕಲಾಯಿತು ಎಂದು ನನಗೆ ತೋರುತ್ತದೆ, ಅದು ಎಂದಿಗೂ ಆದರ್ಶಪ್ರಾಯವಲ್ಲ," ಎಂದು ಎಬಿ ಡಿ ವಿಲಿಯರ್ಸ್‌ ತಿಳಿಸಿದ್ದಾರೆ.

ಶುಭಮನ್‌ ಗಿಲ್‌ ಅಲ್ಲ! ಟಿ20 ಕ್ರಿಕೆಟ್‌ನಲ್ಲಿ ತನ್ನ ಮನಸು ಗೆದ್ದ ಆಟಗಾರನನ್ನು ಹೆಸರಿಸಿದ ರಾಹುಲ್‌ ದ್ರಾವಿಡ್‌!

"ಆದರೆ, ಮುಂದಿನ ಆವೃತ್ತಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡ ವಿಭಿನ್ನ ಯೋಜನೆಯನ್ನು ಹೊಂದಿರಬಹುದು. ಈ ಕಾರಣದಿಂದಲೇ ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ವ್ಯಾಪ್ತಿಯಲ್ಲಿ ಹಲವು ಬದಲಾವಣೆಯನ್ನು ಮಾಡಿಕೊಳ್ಳುತ್ತಿರಬಹುದು. ಈ ಕಾರಣದಿಂದಲೇ ದ್ರಾವಿಡ್‌ ಅವರನ್ನು ಕೈ ಬಿಡಲಾಗಿದೆ," ಎಂದು ಆರ್‌ಸಿಬಿ ದಿಗ್ಗಜ ಹೇಳಿದ್ದಾರೆ.

ಆರ್‌ಆರ್‌ ಕೋಚ್‌ ಹುದ್ದೆಯನ್ನು ತೊರೆದ ಬಗ್ಗೆ ರಾಹುಲ್‌ ದ್ರಾವಿಡ್‌ ಇನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಹಾಗೂ ಅವರು ಈ ವಿಷಯದಲ್ಲಿ ಎಲ್ಲಿಯೂ ಹೇಳುವುದಿಲ್ಲ. 2026ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ರಿಯಾನ್‌ ಪರಾಗ್‌ ಅವರಿಗೆ ನಾಯಕತ್ವ ನೀಡಬಹುದು. ಬಹುಶಃ ಈ ಕಾರಣದಿಂದಲೇ ದ್ರಾವಿಡ್‌ ಅಸಮಾಧಾನದೊಂದಿಗೆ ಆರ್‌ಆರ್‌ ಕೋಚ್‌ ಹುದ್ದೆಯನ್ನು ತೊರೆದಿರಬಹುದೆಂದು ಹೇಳಲಾಗಿದೆ.