ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ʻತುಂಬಾ ನೋವಾಗುತ್ತಿದೆʼ: ಸಿಎಸ್‌ಕೆ ಹ್ಯಾಟ್ರಿಕ್‌ ಸೋಲಿನ ಬಗ್ಗೆ ಅಶ್ವಿನ್‌ ಪ್ರತಿಕ್ರಿಯೆ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧವೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸೋಲು ಅನುಭವಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಇದರ ಬಗ್ಗೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಬೇಸರ ವ್ಯಕ್ತಪಡಿಸಿದ್ದಾರೆ.

RCB vs CSK: ಸಿಎಸ್‌ಕೆ ಸೋಲಿಗೆ ಬೇಸರ ವ್ಯಕ್ತಪಡಿಸಿದ ಅಶ್ವಿನ್‌!

ಚೆನ್ನೈ ಸೂಪರ್‌ ಕಿಂಗ್ಸ್‌ ಸೋಲಿನ ಬಗ್ಗೆ ಆರ್‌ ಅಶ್ವಿನ್‌ ಬೇಸರ. -

Profile
Ramesh Kote Apr 6, 2026 4:25 PM

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) 2026ರ ಸಾಲಿನಲ್ಲಿ ಐದು ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ (RCB vs CSK) ತಂಡದ ವೈಫಲ್ಯ ಮುಂದುವರಿದಿದೆ. ಭಾನುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿಯೂ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 251 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, 207 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಹ್ಯಾಟ್ರಿಕ್‌ ಸೋಲು ಅನುಭವಿಸಿತು. ಸಿಎಸ್‌ಕೆ ತಂಡದ ಸೋಲಿನ ಬಗ್ಗೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಪ್ರತಿಕ್ರಿಯಿಸಿದ್ದಾರೆ.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆರ್‌ ಅಶ್ವಿನ್‌, "ಸಿಎಸ್‌ಕೆ ಸೋಲಿಗೆ ಯಾವುದಾದರೂ ದುಖಃಭರಿತ ಹಾಡಿದ್ದರೆ ಸಲಹೆ ನೀಡುತ್ತೀರಾ? ನಾನು ಈ ಪಂದ್ಯವನ್ನು ತಟಸ್ಥ ದೃಷ್ಟಿಕೋನದಿಂದ ನೋಡುತ್ತಿದ್ದೇನೆ, ಆದರೆ ಇತ್ತೀಚೆಗೆ ಸಿಎಸ್‌ಕೆ ಜೊತೆ ನಿರಾಶಾಜನಕ ಸೀಸನ್ ಕಳೆದಿದ್ದೇನೆ ಎಂಬುದನ್ನು ನೆನಪಿಡಿ. ವೈಯಕ್ತಿಕವಾಗಿ ಕೂಡ ಅದು ನನಗೆ ನಿರಾಶಾಜನಕ ಸೀಸನ್ ಆಗಿತ್ತು. ನಿಜ ಹೇಳುವುದಾದರೆ, ನನ್ನ ಮನಸ್ಸಿನಲ್ಲಿ ನಾನು ಇನ್ನಷ್ಟು ಆಡಬಹುದಿತ್ತು ಅನ್ನಿಸುತ್ತಿತ್ತು, ಆದರೆ ಭಾವನಾತ್ಮಕವಾಗಿ ಆಡಲು ಬೇಕಾದ ಸಾಮರ್ಥ್ಯ ನನ್ನಲ್ಲಿ ಇರಲಿಲ್ಲ,” ಎಂದು ಹೇಳಿದ್ದಾರೆ.

Updated IPL 2026 Points Table: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಅಗ್ರಸ್ಥಾನಕೇರಿದ ಆರ್‌ಸಿಬಿ

ನಾನಿನ್ನೂ ಐಪಿಎಲ್‌ ಆಡಬಹುದಿತ್ತು: ಆರ್‌ ಅಶ್ವಿನ್‌

“ನಾನು ಪುನಃ ಸಿಎಸ್‌ಕೆಗೆ ಹೋಗಲು ಇಷ್ಟಪಡುವುದಿಲ್ಲ, ಅದು ಮಾನಸಿಕವಾಗಿ ಅಸ್ವಸ್ಥಗೊಳಿಸುತ್ತದೆ. ಅದು ನನಗೆ ತುಂಬಾ ನೋವು ತಂದಿತ್ತು. ನಾನು ಅಲ್ಲಿ ಹೋಗಲು ಬಯಸುವುದಿಲ್ಲ. ನಾನು ಚೆನ್ನೈನಲ್ಲಿ ಪ್ರಾರಂಭಿಸಿದ್ದೇನೆ, ಈಗ ನನ್ನ ತವರು ತಂಡದಲ್ಲಿಯೇ ನನ್ನ ಕೆರಿಯರ್‌ ಮುಗಿಸುತ್ತಿದ್ದೇನೆ. ಇದು ಒಳ್ಳೆಯದು. ನನ್ನನ್ನು ಉಳಿಸಬೇಕೋ ಅಥವಾ ಬಿಡುಗಡೆ ಮಾಡಬೇಕೋ ಎಂಬ ವಿಚಾರದಲ್ಲಿ ಮ್ಯಾನೇಜ್ಮೆಂಟ್‌ಗೆ ತಲೆನೋವು ಉಂಟಾಗಬಾರದೆಂದು ನಾನು ಸ್ವತಃ ನಿವೃತ್ತಿ ಪಡೆಯಲು ನಿರ್ಧರಿಸಿದೆ. ನಾನು ಹೊರಗೆ ಹೋದರೆ ಅವರಿಗೆ 10 ಕೋಟಿ ರು ಉಳಿಯುತ್ತದೆ. ಆದರೂ ನಾನು ಇನ್ನೂ ನಿರಾಶನಾಗಿದ್ದೇನೆ. ನನಗೆ ನಿರೀಕ್ಷೆಗಳಿದ್ದವು, ಆಶಯಗಳಿದ್ದವು,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

IPL 2026: ಟಿಮ್‌ ಡೇವಿಡ್‌ ಅಬ್ಬರಕ್ಕೆ ಕೊಚ್ಚಿಹೋದ ಸಿಎಸ್‌ಕೆ, ಆರ್‌ಸಿಬಿಗೆ ಭರ್ಜರಿ ಜಯ!

ಸಿಎಸ್‌ಕೆ ತಂತ್ರಗಾರಿಕೆಯನ್ನು ಶ್ಲಾಘಿಸಿದ ಅಶ್ವಿನ್‌

“ಈ ಯುವ ಆಟಗಾರರಿಗೆ ಈಗಿನಿಂದ ಉತ್ತಮ ಅಭ್ಯಾಸ, ತೀವ್ರತೆ ಮತ್ತು ಸರಿಯಾದ ವಾತಾವರಣ ನೀಡಬೇಕು. ಆದರೆ, ಅವರು ಇದನ್ನು ಹೇಗೆ ಸಾಧಿಸುತ್ತಾರೆ? ತಂತ್ರಜ್ಞಾನಾತ್ಮಕ ನಿರ್ಧಾರಗಳನ್ನು ಟೀಕಿಸಿದ ಅವರು, ಬೌಲಿಂಗ್ ಬಳಕೆಯಲ್ಲಿರುವ ಸಮಸ್ಯೆಗಳನ್ನು ಹೈಲೈಟ್ ಮಾಡಿದರು: ನೀವು SA20 ನೋಡಿಕೊಂಡು ಯೋಜನೆ ರೂಪಿಸಬಹುದು. ಜೇಮಿ ಓವರ್‌ಟನ್ ಯಾರ್ಕರ್‌ಗಳನ್ನು ಚೆನ್ನಾಗಿ ಬೌಲ್‌ ಮಾಡುವಲ್ಲಿ ಪರಿಣತಿ ಹೊಂದಿಲ್ಲ. ಆದರೆ ನೀವು ಅವರನ್ನು ಅದನ್ನೇ (ಯಾರ್ಕರ್‌) ಮಾಡಲು ಒತ್ತಾಯಿಸುತ್ತಿದ್ದೀರಿ. ಬೌಲರ್‌ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಬೇಕು. ನೀವು ಅವರನ್ನು ಅರೌಂಡ್‌ ದಿ ಸ್ಟಂಪ್‌ನಿಂದ ವೈಡ್ ಯಾರ್ಕರ್‌ಗಳನ್ನು ಬೌಲ್‌ ಮಾಡಲು ಬಳಸುತ್ತಿದ್ದೀರಿ. ಟಿಮ್ ಡೇವಿಡ್ ಅವುಗಳನ್ನು ಚೆನ್ನಾಗಿ ಹೊಡೆದಿದ್ದಾರೆ,” ಎಂದು ಅಶ್ವಿನ್ ತಿಳಿಸಿದ್ದಾರೆ.