CSK vs MI: ಸಂಜು ಸ್ಯಾಮ್ಸನ್ ಶತಕದ ಬಲದಿಂದ ಮುಂಬೈಗೆ ಸೋಲಿನ ಬರೆ ಎಳೆದ ಚೆನ್ನೈ ಸೂಪರ್ ಕಿಂಗ್ಸ್!
CSK vs MI Match Highlights: ಸಂಜು ಸ್ಯಾಮ್ಸನ್ ಶತಕ ಹಾಗೂ ಅಕಿಲ್ ಹುಸೇನ್ ಅವರ ಸ್ಪಿನ್ ಮೋಡಿಯ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮುಂಬೈ ಇಂಡಿಯನ್ಸ್ ಎದುರು ಅವರದೇ ನೆಲದಲ್ಲಿ 103 ರನ್‌ಗಳಿಂದ ಗೆದ್ದು ಬೀಗಿತು. ತನ್ನ ಮೂರನೇ ಗೆಲುವಿನ ಮೂಲಕ ಸಿಎಸ್‌ಕೆ ಟೂರ್ನಿಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ 103 ರನ್ ಜಯ. -
ಮುಂಬೈ: ಸಂಜು ಸ್ಯಾಮ್ಸನ್ (Sanju Samson) ಅವರ ಎರಡನೇ ಶತಕ ಹಾಗೂ ಅಕಿಲ್ ಹುಸೇನ್ ಅವರ ಸ್ಪಿನ್ ಮೋಡಿಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 33ನೇ ಪಂದ್ಯದಲ್ಲಿ (CSK vs MI) ಮುಂಬೈ ಇಂಡಿಯನ್ಸ್ ಎದುರು 103 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ತನ್ನ ಮೂರನೇ ಗೆಲುವಿನ ಮೂಲಕ ಋತುರಾಜ್ ಗಾಯಕ್ವಾಡ್ ಸಾರಥ್ಯದ ಸಿಎಸ್‌ಕೆ ಟೂರ್ನಿಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಬ್ಯಾಟಿಂಗ್ ವೈಫಲ್ಯದಿಂದಾಗಿ ಐದು ಬಾರಿ ಚಾಂಪಿಯನ್ಸ್ ಮುಂಬೈ ಐದನೇ ಸೋಲು ಅನುಭವಿಸಿತು.
ಏಪ್ರಿಲ್ 23 ರಂದು ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿನ ಐದು ಬಾರಿ ಚಾಂಪಿಯನ್ಸ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಅಷ್ಟೇ ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
CSK vs MI: ಸೆಂಚುರಿ ಬಾರಿಸಿ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್!
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಸಿಎಸ್‌ಕೆ ತಂಡದ ಪರ ಬ್ಯಾಟಿಂಗ್‌ನಲ್ಲಿ ಸಂಜು ಸ್ಯಾಮ್ಸನ್ ಪ್ರಾಬಲ್ಯ ಸಾಧಿಸಿದರು. ಮುಂಬೈ ಬೌಲರ್‌ಗಳು ಕೂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರುವ ಮೂಲಕ ಸಿಎಸ್‌ಕೆ ತಂಡದಲ್ಲಿ ಸಂಜು ಸ್ಯಾಮ್ಸನ್ ಹೊರತುಪಡಿಸಿ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆಡಿದ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಲು ಮುಂಬೈ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ.
The W in Wankhede means WIN!🦁💪#WhistlePodu #MIvCSK pic.twitter.com/cDe610MyCa
— Chennai Super Kings (@ChennaiIPL) April 23, 2026
ಎರಡನೇ ಶತಕ ಬಾರಿಸಿದ ಸಂಜು ಸ್ಯಾಮ್ಸನ್
ಋತುರಾಜ್ ಗಾಯಕ್ವಾಡ್ (22), ಡೆವಾಲ್ಡ್ ಬ್ರೆವಿಸ್ (21) ಅವರು ಸ್ವಲ್ಪ ಹೊತ್ತು ಸಂಜು ಸ್ಯಾಮ್ಸನ್‌ಗೆ ಸಾಥ್ ನೀಡಿದ್ದರು. ಇನ್ನುಳಿದಂತೆ ಶಿವಂ ದುವೆ, ಸರ್ಫರಾಝ್ ಖಾನ್ ಬಹುಬೇಗ ವಿಕೆಟ್ ಒಪ್ಪಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಸಂಜು, 54 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 101 ರನ್ ಸಿಡಿಸಿದರು. ಇದು ಇವರ ಈ ಸೀಸನ್‌ನ ಎರಡನೇ ಹಾಗೂ ಒಟ್ಟಾರೆ 7ನೇ ಐಪಿಎಲ್ ಶತಕವಾಗಿದೆ. ಆ ಮೂಲಕ ಸಿಎಸ್‌ಕೆ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆ ಹಾಕಿತು.
Entertaining 🍿💛
— IndianPremierLeague (@IPL) April 23, 2026
Describe his knock in one word 👇
Relive his knock ▶️ https://t.co/Bfan9rmvpv #TATAIPL | #KhelBindaas | #MIvCSK | @IamSanjuSamson | @ChennaiIPL pic.twitter.com/oNDiHQ9AkL
ಮುಂಬೈ ಇಂಡಿಯನ್ಸ್‌ಗೆ ಆರಂಭಿಕ ಆಘಾತ
208 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್, ಬ್ಯಾಟಿಂಗ್ ಸ್ನೇಹಿ ತವರು ಪಿಚ್‌ನಲ್ಲಿ ಸುಲಭವಾಗಿ ಜಯ ಸಾಧಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಮೊದಲನೇ ಓವರ್‌ನಲ್ಲಿಯೇ ಸ್ಪಿನ್ನರ್ ಅಕಿಲ್ ಹುಸೇನ್, ದಾನೀಶ್ ಮಾಲೆವಾರ್ ಅವರನ್ನು ಔಟ್ ಮಾಡಿದರು. ನಂತರ ಎರಡನೇ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಮುಖೇಶ್ ಚೌಧರಿ ಔಟ್ ಮಾಡಿದರು. ನಂತರ ಮೂರನೇ ಓವರ್‌ನಲ್ಲಿ ನಮನ್ ಧೀರ್ ಅವರನ್ನು ಅಕೀಲ್ ಶೂನ್ಯಕ್ಕೆ ಔಟ್ ಮಾಡಿದರು. ಆ ಮೂಲಕ ಮುಂಬೈ ಪವರ್‌ಪ್ಲೇನಲ್ಲಿ ಮೂರು ವಿಕೆಟ್ ಕಳೆದುಕೊಂಡು 29 ರನ್‌ಗಳಿಗೆ ಸೀಮಿತವಾಗಿತ್ತು. ಇದು ಪಂದ್ಯದ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಯಿತು.
The Spin Twin for the win 🪄🦁#WhistlePodu #MIvCSK pic.twitter.com/GnrguYtLse
— Chennai Super Kings (@ChennaiIPL) April 23, 2026
ಸೂರ್ಯ-ತಿಲಕ್ 73 ರನ್ ಜೊತೆಯಾಟ
ನಾಲ್ಕನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ (36) ಹಾಗೂ ತಿಲಕ್ ವರ್ಮಾ (37) ಅವರು 73 ರನ್‌ಗಳ ಜೊತೆಯಾಟವನ್ನು ಆಡಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ಗಳಿಂದ ದೊಡ್ಡ ಜೊತೆಯಾಟ ಮೂಡಿಬರಲಿಲ್ಲ. ಸೂರ್ಯ ಹಾಗೂ ತಿಲಕ್ ಅವರನ್ನೂ ಅಕೀಲ್ ಹುಸೇನ್ ಪೆವಿಲಿಯನ್‌ಗೆ ಕಳುಹಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ವೈಯಕ್ತಿಕ ಎರಡಂಕಿ ಮೊತ್ತವನ್ನು ಕಲೆ ಹಾಕಲಿಲ್ಲ. ಅಂತಿಮವಾಗಿ ಮುಂಬೈ 19 ಓವರ್‌ಗಳಿಗೆ 104 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು.
CSK vs MI: ಮುಖೇಶ್ ಚೌಧರಿಯ ದಿವಂಗತ ತಾಯಿಗೆ ವಿಶೇಷ ಗೌರವ ಸಲ್ಲಿಸಿದ ಸಿಎಸ್‌ಕೆ!
ಅಕಿಲ್ ಹುಸೇನ್‌ಗೆ 4 ವಿಕೆಟ್
ಸಿಎಸ್‌ಕೆ ತಂಡದ ಗೆಲುವಿನಲ್ಲಿ ಅಕೀಲ್ ಹುಸೇನ್ ಕೂಡ ಪ್ರಮುಖ ಪಾತ್ರವಹಿಸಿದರು. ಇವರು ಬೌಲ್ ಮಾಡಿದ 4 ಓವರ್‌ಗಳಲ್ಲಿ ಒಂದು ಮೇಡಿನ್ ಮತ್ತು 14 ರನ್‌ಗೆ 4 ವಿಕೆಟ್ ಸಾಧನೆ ಮಾಡಿದರು. ನೂರ್ ಅಹ್ಮದ್ ಎರಡು ವಿಕೆಟ್ ಪಡೆದರು.