IPL 2026: ಶ್ರೇಯಸ್ ಅಯ್ಯರ್‌ಗೆ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಯುಜ್ವೇಂದ್ರ ಚಹಲ್!
IPL 2027: ಗುಜರಾತ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಶ್ರೇಯಸ್ ಅಯ್ಯರ್ ಗಾಯಕ್ಕೆ ತುತ್ತಾಗಿದ್ದರು. ಈ ಬಗ್ಗೆ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಗಾಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಅವರು ಸಂಪೂರ್ಣವಾಗಿ ಚೆನ್ನಾಗಿದ್ದಾರೆ, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಯುಜ್ವೇಂದ್ರ ಚಹಲ್ ಪ್ರತಿಕ್ರಿಯೆ. -
ನವದೆಹಲಿ: ಗುಜರಾತ್ ಜಯಂಟ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಗಾಯಕ್ಕೆ ತುತ್ತಾಗಿದ್ದರು. ಪಂಜಾಬ್ ಕಿಂಗ್ಸ್ ತಂಡದ ಗೆಲುವಿನ ಬಳಿಕ ಮಾತನಾಡಿದ ಯುಜ್ವೇಂದ್ರ ಚಹಲ್(Yuzvendra Chahal) ಶ್ರೇಯಸ್ ಅಯ್ಯರ್ ಅವರ ಗಾಯದ ಬಗ್ಗೆ ಮಾಹಿತಿ ನೀಡಿದರು. ಅವರು ಸಂಪೂರ್ಣವಾಗಿ ಚೆನ್ನಾಗಿದ್ದಾರೆಂದು ತಿಳಿಸಿದ್ದಾರೆ. ಈ ಪಂದ್ಯ ನವ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿತ್ತು.
ಶ್ರೇಯಸ್ ಅಯ್ಯರ್ ಅವರು ಪಂಜಾಬ್ ತಂಡದ ಚೇಸಿಂಗ್ ವೇಳೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ನಿಂತಿದ್ದರು. ಈ ವೇಳೆ ಕೂಪರ್ ಕನೋಲಿ ಹೊಡೆದು ಚೆಂಡು ಶ್ರೇಯಸ್ ಅಯ್ಯರ್ ಅವರ ಕೈಮಣಿಗೆ ಬಡಿದ ಪರಿಣಾಮ ಡಗೌಟ್‌ನಲ್ಲಿ ಆತಂಕ ಮೂಡಿತು. ತಕ್ಷಣವೇ ಫಿಸಿಯೋಗಳು ಮೈದಾನಕ್ಕಿಳಿದು ಚಿಕಿತ್ಸೆ ನೀಡಿದರು. ನೋವಿನಲ್ಲಿದ್ದರೂ ಅವರು ಸ್ವಲ್ಪ ಹೊತ್ತು ಆಟ ಮುಂದುವರಿಸಿದರು. ನಂತರ ಪ್ರಸಿಧ್ ಕೃಷ್ಣ ಅವರ ಬೌಲಿಂಗ್‌ನಲ್ಲಿ 11 ಎಸೆತಗಳಲ್ಲಿ 18 ರನ್ ಗಳಿಸಿದ ಬಕ ಔಟ್ ಆದರು. ಅವರ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಸೇರಿವೆ.
IPL 2026: ʻಇವರಿಂದಲೇ ನಾವು ಸೋಲಬೇಕಾಯಿತುʼ-ಸಿಎಸ್‌ಕೆ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಋತುರಾಜ್ ಗಾಯಕ್ವಾಡ್!
ಪಂಜಾಬ್ ಕಿಂಗ್ಸ್ ತಂಡದ ಮೂರು ವಿಕೆಟ್ ಜಯದಲ್ಲಿ ಪ್ರಮುಖ ಪಾತ್ರವಹಿಸಿದ ಯುಜ್ವೇಂದ್ರ ಚಹಲ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದರು. ಅಭಿಮಾನಿಗಳಿಗೆ ಧೈರ್ಯ ನೀಡಿದರು ಹಾಗೂ ಶ್ರೇಯಸ್ ಅಯ್ಯರ್ ಅವರ ಗಾಯದ ಬಗ್ಗೆ ಯಾವುದೇ ಚಿಂತೆ ಬೇಡ ಎಂದು ಹೇಳಿದರು.
“ಅವರು ಚೆನ್ನಾಗಿದ್ದಾರೆ, ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಯಾವುದೇ ಸಮಸ್ಯೆಯಿಲ್ಲ,” ಎಂದು ಯುಜ್ವೇಂದ್ರ ಚಹಲ್ ಪಂದ್ಯದ ಬಳಿಕ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
IPL 2026: ಐಪಿಎಲ್ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!
ಕೂಪರ್ ಕನೋಲಿ ಅವರನ್ನು ಶ್ಲಾಘಿಸಿದ ಚಹಲ್
ಐಪಿಎಲ್ ಡೆಬ್ಯೂ ಪಂದ್ಯದಲ್ಲೇ ಪ್ಲೇಯರ್ ಆಫ್ ದ ಮ್ಯಾಚ್ ಆಗಿ ಹೊರಹೊಮ್ಮಿದ ಕೂಪರ್ ಕನೋಲಿ ಅವರನ್ನು ಯುಜ್ವೇಂದ್ರ ಚಹಲ್ ಶ್ಲಾಘಿಸಿದರು. ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 44 ಎಸೆತಗಳಲ್ಲಿ 72 ರನ್ ಗಳಿಸಿದರು. ತಮ್ಮ ಇನಿಂಗ್ಸ್‌ನಲ್ಲಿ ಐದು ಫೋರ್‌ಗಳು ಮತ್ತು ಐದು ಸಿಕ್ಸರ್‌ಗಳನ್ನು ಸಿಡಿಸಿದರು. ಅವರ ಅದ್ಭುತ ಇನಿಂಗ್ಸ್ ನೆರವಿನಿಂದ ಪಂಜಾಬ್ ಕಿಂಗ್ಸ್ 163 ರನ್ ಗುರಿಯನ್ನು ಐದು ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟಿತು.
“ಖಂಡಿತವಾಗಿ. ಅವರು ಸುಮಾರು 20 ವರ್ಷದ ವಯಸ್ಸಿನವರಾಗಿರಬಹುದು, ನನಗೆ ಖಚಿತವಾಗಿ ಗೊತ್ತಿಲ್ಲ. ಆದರೆ ಅವರೊಳಗೆ ದೊಡ್ಡ ಹಸಿವು ಇದೆ. ಮೊದಲ ಪಂದ್ಯದಲ್ಲೇ ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ನಂ.3ರಲ್ಲಿ ಬ್ಯಾಟಿಂಗ್ ನಡಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದು ಅವರ ಮನೋಬಲ ಮತ್ತು ಪರಿಪಕ್ವತೆಯನ್ನು ತೋರಿಸುತ್ತದೆ,” ಎಂದು ಚಹಲ್ ಗುಣಗಾನ ಮಾಡಿದರು.
PBKS vs GT: ಕೂಪರ್ ಕಾನೋಲಿ ಚೊಚ್ಚಲ ಅರ್ಧಶತಕ; ಪಂಜಾಬ್‌ಗೆ ಗೆಲುವಿನ ಸಿಹಿ
“ಅವರು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ನಾನು ಅಂತ್ಯವರೆಗೆ ಇದ್ದು ಪಂದ್ಯವನ್ನು ಮುಗಿಸಬೇಕೆಂದು ಅವರು ತಿಳಿದಿದ್ದರು. ಇದು ಅವರ ಪರಿಪಕ್ವತೆಯ ಸಂಕೇತ, ನಮ್ಮ ತಂಡಕ್ಕೆ ಇದು ಒಳ್ಳೆಯ ಲಕ್ಷಣ. ಅವರು ಬ್ಯಾಟ್ ಮಾಡುತ್ತಿರುವ ರೀತಿಯನ್ನು ನೋಡಿದರೆ, ಈ ವರ್ಷ ಈ ಸೀಸನ್‌ನ ಪ್ರಮುಖ ಅನ್ವೇಷಣೆಗಳಲ್ಲಿ ಒಬ್ಬರಾಗಬಹುದು,” ಎಂದು ಸ್ಪಿನ್ನರ್ ತಿಳಿಸಿದ್ದಾರೆ.
ಟೈಟನ್ಸ್ ವಿರುದ್ಧದ ಜಯದ ನಂತರ, ಪಂಜಾಬ್ ಕಿಂಗ್ಸ್ ತಮ್ಮ ಗೆಲುವಿನ ಸರಣಿಯನ್ನು ಮುಂದುವರಿಸಲು ಏಪ್ರಿಲ್ 3 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಸೆಣಸಲಿದೆ.