ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶ್ರೇಯಸ್‌ ಅಯ್ಯರ್‌ ಭಾರತ ತಂಡದ ಭವಿಷ್ಯದ ನಾಯಕ ಎಂದ ವೈಶಾಖ್‌ ವಿಜಯ್‌ಕುಮಾರ್‌!

Shreyas Iyer: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿರುವ ಶ್ರೇಯಸ್‌ ಅಯ್ಯರ್‌ ಅವರನ್ನು ವೇಗಿ ವೈಶಾಖ್‌ ವಿಜಯ್‌ಕುಮಾರ್‌ ಶ್ಲಾಘಿಸಿದ್ದಾರೆ. ಭಾರತ ತಂಡವನ್ನು ಭವಿಷ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆಂದು ಹೇಳಿದ್ದಾರೆ.

ಶ್ರೇಯಸ್‌ ಅಯ್ಯರ್‌ ಭಾರತದ ಭವಿಷ್ಯದ ನಾಯಕ: ವೈಶಾಖ್‌ ವಿಜಯ್‌ಕುಮಾರ್‌!

ವೈಶಾಖ್‌ ವಿಜಯ್‌ಕುಮಾರ್‌-ಶ್ರೇಯಸ್‌ ಅಯ್ಯರ್‌. -

Profile
Ramesh Kote Apr 6, 2026 6:26 PM

ನವದೆಹಲಿ: ಶ್ರೇಯಸ್ ಅಯ್ಯರ್ (Shreyas Iyer) ಅವರ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಮೆಚ್ಚಿಕೊಂಡ ವೇಗದ ಬೌಲರ್‌ ವೈಶಾಖ್‌ ವಿಜಯಕುಮಾರ್ (Vyshak Vijaykumar), ಭವಿಷ್ಯದಲ್ಲಿ ಅವರು ಭಾರತ ತಂಡದ (Indian Captaincy) ನಾಯಕನಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಅಯ್ಯರ್ ತೋರಿಸುವ ಸ್ಥಿತಪ್ರಜ್ಞೆ ಮತ್ತು ಐಪಿಎಲ್‌ನಲ್ಲಿ ಬೆಳೆಯುತ್ತಿರುವ ನಾಯಕತ್ವ ಗುಣಗಳನ್ನು ಅವರು ಗುಣಗಾನ ಮಾಡಿದ್ದಾರೆ. ಮೈದಾನದಲ್ಲಿನ ತಂತ್ರಗಳಷ್ಟೇ ಅಲ್ಲ, ಡ್ರೆಸಿಂಗ್ ರೂಮ್‌ನಲ್ಲಿನ ಅವರ ಉಪಸ್ಥಿತಿಯೂ ತಂಡವನ್ನು ಬಲಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಐಪಿಎಲ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಐಪಿಎಲ್‌ ಟೂರ್ನಿಗಳಲ್ಲಿ ಫೈನಲ್‌ಗೆ ಪ್ರವೇಶ ಮಾಡಿದ್ದವು ಹಾಗೂ ಇವರ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, 2024ರಲ್ಲಿ ಚಾಂಪಿಯನ್‌ ಆಗಿತ್ತು. ಇದರ ಫಲವಾಗಿ ಈಗಾಗಲೇ ಅವರಿಗೆ ಭಾರತ ಏಕದಿನ ತಂಡದ ಉಪನಾಯಕ ಸ್ಥಾನವನ್ನು ನೀಡಲಾಗಿದೆ.

IPL 2026: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ತುಂಬಾ ಬದಲಾಗಿದೆ ಎಂದ ದೇವದತ್‌ ಪಡಿಕ್ಕಲ್‌!

ಶ್ರೇಯಸ್‌ ಅಯ್ಯರ್‌ ಭಾರತದ ಭವಿಷ್ಯದ ನಾಯಕ

“ಅವರು ಯಾವಾಗಲೂ ತಮ್ಮ ಬೌಲರ್‌ಗಳು ಮತ್ತು ಆಟಗಾರರನ್ನು ಬೆಂಬಲಿಸುವ ನಾಯಕ. ನೀವು ಚೆನ್ನಾಗಿ ಆಡುತ್ತಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೇ ಬೆಂಬಲಿಸುವುದು, ಬೌಲರ್‌ಗಳಿಗೆ ಬಹಳ ಮುಖ್ಯವಾದ ವಿಷಯ. ಈ ಫಾರ್ಮಾಟ್‌ನಲ್ಲಿ ಅವರು ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಭಾರತಕ್ಕಾಗಿ ಕೂಡ ಆಡುತ್ತಿದ್ದಾರೆ. ಅವರು ಶೀಘ್ರದಲ್ಲೇ ಭಾರತ ತಂಡದ ನಾಯಕನಾಗುತ್ತಾರೆ ಎಂಬ ವಿಶ್ವಾಸ ನನಗಿದೆ," ಎಂದು ವೈಶಾಖ್‌ ವಿಜಯಕುಮಾರ್ ಇಂಡಿಯಾ ಟುಡೇ ಜೊತೆ ನಡೆದ ರೌಂಡ್‌ಟೇಬಲ್ ಮಾತುಕತೆಯಲ್ಲಿ ಹೇಳಿದರು.

2025ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸದ ವೇಳೆ ಶುಭಮನ್‌ ಗಿಲ್ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದರು. ಆದರೆ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಅಲೆಕ್ಸ್ ಕೇರಿ ಅವರನ್ನು ಔಟ್ ಮಾಡಲು ಅದ್ಭುತ ಕ್ಯಾಚ್ ಪಡೆಯುವ ವೇಳೆ ಎಡ ಎದೆ ಭಾಗ ಗಾಯಗೊಂಡ ಕಾರಣ, ತಮ್ಮ ಮೊದಲ ನಾಯಕತ್ವದ ಅವಕಾಶವನ್ನು ಕಳೆದುಕೊಂಡಿದ್ದರು.

Updated IPL 2026 Points Table: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಅಗ್ರಸ್ಥಾನಕೇರಿದ ಆರ್‌ಸಿಬಿ

ಮುಖ್ಯವಾಗಿ, ನಾಯಕತ್ವದ ಜವಾಬ್ದಾರಿಗಳು ಅವರ ಬ್ಯಾಟಿಂಗ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಅವರು ಸರಾಸರಿ 50.33ರ ಸರಾಸರಿಯಲ್ಲಿ 604 ರನ್‌ಗಳನ್ನು ಗಳಿಸಿ ಅಗ್ರ ಸ್ಕೋರರ್ ಆಗಿದ್ದರು. ಜೊತೆಗೆ, 2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಐಪಿಎಲ್ ಜಯದ ಅಭಿಯಾನದಲ್ಲಿ 351 ರನ್ ಗಳಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 2020ರ ಫೈನಲ್‌ಗೆ ಕೊಂಡೊಯ್ದಾಗಲೂ ಅವರು 519 ರನ್‌ಗಳನ್ನು ಕಲೆಹಾಕಿದ್ದರು.