ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಖುಷಿ ಪಡೋದೊ-ಅಳೋದೊ ಗೊತ್ತಾಗ್ಲಿಲ್ಲ: ಟಿಮ್ ಡೇವಿಡ್‌ ಬ್ಯಾಟಿಂಗ್‌ ಬಗ್ಗೆ ಭುವಿ ಮಾತು!

ಆರ್‌ಸಿಬಿ 2026ರ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಸತತ 2 ಜಯ ದಾಖಲಿಸಿರುವ ಚಾಲೆಂಜರ್ಸ್‌, ಭಾನುವಾರ ನಡೆದ ತನ್ನ ಬದ್ಧ ಎದುರಾಳಿ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 43 ರನ್‌ಗಳ ಜಯ ದಾಖಲಿಸಿತು. ಈ ಗೆಲುವಿಗೆ ಕಾರಣರಾದ ಆರ್‌ಸಿಬಿ ಆಲ್‌ರೌಂಡರ್‌ ಟಿಮ್‌ ಡೇವಿಡ್‌ ಆಟವನ್ನು ಭುವನೇಶ್ವರ್‌ ಕುಮಾರ್‌ ತಮ್ಮದೇ ಶೈಲಿಯಲ್ಲಿ ಗುಣಗಾನ ಮಾಡಿದ್ದಾರೆ.

ಖುಷಿ ಪಡೋದೊ-ಅಳೋದೊ ಗೊತ್ತಾಗ್ಲಿಲ್ಲ: ಟಿಮ್‌ ಬ್ಯಾಟಿಂಗ್ ಬಗ್ಗೆ ಭುವಿ ಮಾತು!

ಭುವನೇಶ್ವರ್‌ ಕುಮಾರ್‌ ಮತ್ತು ಟಿಮ್ ಡೇವಿಡ್‌ -

Vijeth Kumar DN
Vijeth Kumar DN Apr 6, 2026 5:58 PM

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದಲ್ಲಿ ಟಿಮ್ ಡೇವಿಡ್ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು, ಅವರ ಆಟಕ್ಕೆ ಭಾರಿ ಮೆಚ್ಚುಗೆ ಹರಿದುಬಂದಿದೆ.

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ತಂಡದ ಅನುಭವಿ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌, ಆಲ್‌ರೌಂಡರ್‌ನ ಅಬ್ಬರ ಕಂಡು ಖಷಿ ಪಡೋದೊ ಅಥವಾ ಅಳೋದೊ ಗೊತ್ತಾಗಲಿಲ್ಲ ಎಂದು ತಮಾಷೆ ಮಾಡಿದ್ದಾರೆ. ಏಕಂದ್ರೆ, ಬ್ಯಾಟಿಂಗ್‌ಗೆ ಸ್ವರ್ಗದಂತ್ತಿದ್ದ ಪಿಚ್‌ನಲ್ಲಿ ಸಿಎಸ್‌ಕೆ ಎದುರು ಬೌಲಿಂಗ್‌ ಮಾಡಬೇಕಲ್ಲ ಎಂಬುದು ಭುವನೇಶ್ವರ್‌ ಕುಮಾರ್‌ ಅವರ ಅಳಲಾಗಿತ್ತು.

ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್

ಟಿಮ್‌ ಡೇವಿಡ್‌ ಎದುರಿಸಿದ ಕೇವಲ 25 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ಪಂದ್ಯದಲ್ಲಿ ಭಾರಿ ತಿರುವು ತಂದರು. ಅವರ ಬ್ಯಾಟಿಂಗ್‌ನಿಂದ ಆರ್‌ಸಿಬಿ ತಂಡ 250/3 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇದು ಐಪಿಎಲ್‌ 2026 ಟೂರ್ನಿಯ ಈವರೆಗಿನ ಗರಿಷ್ಠ ಮೊತ್ತವಾಗಿದೆ. ಪ್ರಸಕ್ತ ಸಾಲಿನಲ್ಲಿ 250ರ ಗಡಿ ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಯೂ ಆರ್‌ಸಿಬಿ ತಂಡದ್ದಾಗಿದೆ.

Updated IPL 2026 Points Table: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಅಗ್ರಸ್ಥಾನಕೇರಿದ ಆರ್‌ಸಿಬಿ

ಟಿಮ್‌ ಡೇವಿಡ್‌ ಅವರ ಈ ಸ್ಫೋಟಕ ಇನ್ನಿಂಗ್ಸ್ ಪಂದ್ಯ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಿತು. 15ನೇ ಓವರ್‌ ಮುಕ್ತಾಯಕ್ಕೆ ಕೇವಲ 2 ರನ್‌ಗಳಿಸಿ ಕ್ರೀಸ್‌ನಲ್ಲಿದ್ದ ಟಿಮ್, ಅಂತಿಮ 5 ಓವರ್‌ಗಳಲ್ಲಿ ಹೆಚ್ಚು ಸ್ಟ್ರೈಕ್‌ ಪಡೆದು ಸಿಎಸ್‌ಕೆ ಬೌಲರ್‌ಗಳನ್ನು ಬಡಿದು ಬೆಂಡೆತ್ತಿದರು. ಅವರ ಸ್ಪೋಟಕ ಇನಿಂಗ್ಸ್‌ನಲ್ಲಿ ಬರೋಬ್ಬರಿ 8 ಸಿಕ್ಸರ್‌ಗಳು ಮೂಡಿಬಂದವು. ಅದರಲ್ಲೂ ವೇಗಿ ಜೇಮಿ ಓವರ್‌ ಟರ್ನ್‌ ಎದುರು ಪುಲ್‌ ಶಾಟ್‌ ಮೂಲಕ ಹೊಡೆದ 106 ಮೀಟರ್‌ ದೂರದ ದೈತ್ಯ ಸಿಕ್ಸರ್‌ನಲ್ಲಿ ಚೆಂಡು ಕ್ರೀಡಾಂಗಣ ದಾಟಿ ಕಬ್ಬನ್‌ ಪಾರ್ಕ್‌ ತಲುಪಿತ್ತು.

ಟಿಮ್‌ ಡೇವಿಡ್‌ ಬಗ್ಗೆ ಭುವಿ ಹೇಳಿದ್ದೇನು?

ಭುವನೇಶ್ವರ್ ಕುಮಾರ್, ಟಿಮ್‌ ಡೇವಿಡ್‌ ಅವರ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನನ್ನು ಹಾಸ್ಯಾವಾಗಿ ವಿವರಿಸಿದರಷ್ಟೆ. "ಟಿಮ್‌ ಡೇವಿಡ್‌ ಬ್ಯಾಟಿಂಗ್‌ ನೋಡಿ ಖುಷಿ ಪಡಬೇಕಾ, ಅಥವಾ ಅಳಬೇಕಾ ಅನ್ನೋದು ಗೊತ್ತಾಗಲಿಲ್ಲ… ಏಕೆಂದರೆ ನಾವು ನಂತರ ಬೌಲಿಂಗ್ ಮಾಡಬೇಕಿತ್ತು." ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ ವೇಳೆ ಹೇಳಿದರು.

IPL 2026: ʻತುಂಬಾ ನೋವಾಗುತ್ತಿದೆʼ: ಸಿಎಸ್‌ಕೆ ಹ್ಯಾಟ್ರಿಕ್‌ ಸೋಲಿನ ಬಗ್ಗೆ ಅಶ್ವಿನ್‌ ಪ್ರತಿಕ್ರಿಯೆ!

ಸೂಪರ್‌ ಕಿಂಗ್ಸ್‌ನ ಬಗ್ಗು ಬಡಿದ ಆರ್‌ಸಿಬಿ

ಪಂದ್ಯದಲ್ಲಿ ಆಲ್‌ರೌಂಡ್‌ ಆಟವಾಡಿ ಪ್ರಾಬಲ್ಯ ಮೆರೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 43 ರನ್‌ಗಳಿಂದ ಮಣಿಸುವ ಮೂಲಕ ಸತತ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದೆ. ಮತ್ತೊಂದೆಡೆ ಸಿಎಸ್‌ಕೆ ತಾನು ಈವರೆಗೆ ಆಡಿದ 3 ಪಂದ್ಯಗಳಲ್ಲಿ ಎಲ್ಲದರಲ್ಲೂ ಸೋತು ಸುಣ್ಣವಾಗಿದೆ.

ಭುವನೇಶ್ವರ್‌ ಕುಮಾರ್‌ ಡಬಲ್‌ ಸೆಂಚುರಿ!

ಪಂದ್ಯದಲ್ಲಿ ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಪಡೆದು ಗಮನ ಸೆಳೆದರು. ಇದೇ ವೇಳೆ ಐಪಿಎಲ್‌ ಇತಿಹಾಸದಲ್ಲಿ 200ಕ್ಕೂ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಹಾಗೂ ಈ ಸಾಧನೆ ಮೆರೆದ ಮೊದಲ ಫಾಸ್ಟ್‌ ಬೌಲರ್‌ ಎಂಬ ಹಿರಿಮೆಗೆ ಭುವಿ ಪಾತ್ರರಾದರು. ಅಂದಹಾಗೆ ಈಗ ಪಂಜಾಬ್ ಕಿಂಗ್ಸ್‌ ತಂಡದಲ್ಲಿ ಆಡುತ್ತಿರುವ ಯುಜ್ವೇಂದ್ರ ಚಹಲ್‌ (ಲೆಗ್‌ ಸ್ಪಿನ್ನರ್‌) ಐಪಿಎಲ್‌ ವಿಕೆಟ್‌ಗಳ ಡಬಲ್‌ ಸೆಂಚುರಿ ಮಾಡಿದ ಮೊದಲ ಬೌಲರ್‌.