ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ʻನಮಗೆ ನೀವು ಥ್ಯಾಂಕ್ಸ್‌ ಹೇಳಬೇಕುʼ-ಆರ್‌ಸಿಬಿ ಸಕ್ಸಸ್‌ಗೆ ನಾವೇ ಕಾರಣ ಎಂದ ಅಂಬಾಟಿ ರಾಯುಡು!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಹಲವು ವರ್ಷಗಳ ಕಾಲ ಟೀಕೆ ಮಾಡಿದ್ದಕ್ಕೆಇದೀಗ ಅವರು ಅತ್ಯುತ್ತಮ ತಂಡವನ್ನು ಕಟ್ಟಿಕೊಂಟು ಚೊಚ್ಚಲ ಕಪ್‌ ಗೆದ್ದಿದ್ದಾರೆ, ಹಾಗಾಗಿ ಆರ್‌ಸಿಬಿ ಯಶಸ್ಸಿನ ಶ್ರೇಯ ನಮಗೆ ಸಲ್ಲಬೇಕು ಹಾಗೂ ಅವರು ನಮಗೆ ಧನ್ಯವಾದವನ್ನು ತಿಳಿಸಬೇಕು ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ತಿಳಿಸಿದ್ದಾರೆ.

ಆರ್‌ಸಿಬಿ ಸಕ್ಸಸ್‌ಗೆ ನಾವೇ ಕಾರಣ ಎಂದ ಅಂಬಾಟಿ ರಾಯುಡು!

ಆರ್‌ಸಿನಿ ಯಶಸ್ಸಿಗೆ ನಾವೇ ಕಾರಣ ಎಂದ ಅಂಬಾಟಿ ರಾಯುಡು. -

Profile
Ramesh Kote May 14, 2026 6:59 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2026) ಕೆಲವು ಸೀಸನ್‌ಗಳವರೆಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧ ತಾವು ಮಾಡಿದ ನೇರವಾದ ಹಾಗೂ ತಾರ್ಕಿಕ ಟೀಕೆಗಳು ಈ ತಂಡದ ಯಶಸ್ಸಿಗೆ ಕಾರಣವಾಗಿವೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಹೇಳಿದ್ದಾರೆ. ರಾಯ್ಪುರದಲ್ಲಿ ನಡೆದ 57ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಗೆದ್ದು ಆರ್‌ಸಿಬಿ ಮತ್ತೆ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದ ಬಳಿಕ ರಾಯುಡು ಅವರು ಈ ಹೇಳಿಕೆ ನೀಡಿದ್ದಾರೆ.

2025ರ ಐಪಿಎಲ್‌ವರೆಗೆ ಆರ್‌ಸಿಬಿಗೆ ಯಶಸ್ಸು ಸಿಗದಿದ್ದಕ್ಕೆ ಕಾರಣವಾದ ಹಲವು ಕೊರತೆಗಳ ಬಗ್ಗೆ ತಾವು ಸೇರಿದಂತೆ ಹಲವಾರು ಮಾಜಿ ಸಿಎಸ್‌ಕೆ ಆಟಗಾರರು ಟೀಕೆ ಮಾಡಿದ್ದರು ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಪಂದ್ಯದನಂತರ ವಿಶ್ಲೇಷಣೆಗಳು ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೂಲಕ ತಾವು ನೀಡಿದ ನಿರಂತರ ಪ್ರತಿಕ್ರಿಯೆಗಳು ಆರ್‌ಸಿಬಿ ತಂಡದ ಸಂಯೋಜನೆಯಲ್ಲಿ ಬದಲಾವಣೆ ತರಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಅಂತಿಮವಾಗಿ, ಆ ಬದಲಾವಣೆಗಳೇ ತಂಡಕ್ಕೆ 2025ರಲ್ಲಿ ಬಹುಕಾಲದ ಬಳಿಕ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿವೆ ಎಂದು ರಾಯುಡು ಬಲವಾಗಿ ನಂಬಿದ್ದಾರೆ.

IPL 2026: ಕೆಕೆಆರ್‌ ಎದುರು ಶತಕ ಬಾರಿಸಿದ ವಿರಾಟ್‌ ಕೊಹ್ಲಿ ಬಗ್ಗೆ ಗವಾಸ್ಕರ್‌ ದೊಡ್ಡ ಹೇಳಿಕೆ!

“ಆರ್‌ಸಿಬಿ ಚೆನ್ನಾಗಿ ಆಡಬೇಕು ಎಂದು ಬಯಸಿದ್ದವರು ನಾವೇ. ಯಾವಾಗ ಈ ತಂಡ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲವೋ, ಆಗಲೂ ನಿಜ ಹೇಳಿದ್ದವರು ನಾವೇ. ಹಲವರಿಗೆ ಅದನ್ನು ಹೇಳಲು ಸಾಧ್ಯವಾಗಲಿಲ್ಲ. ನಮ್ಮಂತಹವರ ಟೀಕೆಗಳಿಂದಲೇ ಆರ್‌ಸಿಬಿ ಉತ್ತಮ ತಂಡವನ್ನು ನಿರ್ಮಿಸಬೇಕೆಂಬ ಅರಿವು ಬಂದಿತ್ತು. ಅಂತಿಮವಾಗಿ ಅವರು ಅದನ್ನು ಮಾಡಿದ್ದಾರೆ ಮತ್ತು ಈಗ ಗೆಲ್ಲುತ್ತಿದ್ದಾರೆ. ಆದ್ದರಿಂದ ಅವರು ನಮಗೆ ಧನ್ಯವಾದ ಹೇಳಬೇಕು,” ಎಂದು ಅಂಬಾಟಿ ರಾಯುಡು ಅವರು ಇಎಸ್‌ಪಿಎನ್‌ ಕ್ರಿಕ್‌ಇನ್ಪೋಗೆ ತಿಳಿಸಿದ್ದಾರೆ.

ಗುಂಟೂರು ಮೂಲದ ಅವರು, 2025ರವರೆಗೆ ಆರ್‌ಸಿಬಿ ತಂಡದಲ್ಲಿ ಗುಣಮಟ್ಟದ ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಕೊರತೆ ಹಾಗೂ ಅನುಭವಿ ಬೌಲರ್‌ಗಳ ಅಭಾವವಿತ್ತು ಎಂದು ತಾವು ಹಲವು ಬಾರಿ ಸಲಹೆ ನೀಡಿದ್ದಾಗಿ ಹೇಳಿದ್ದಾರೆ. ಕ್ರಿಕೆಟಿಗನಿಂದ ಕಾಮೆಂಟೇಟರ್ ಆಗಿರುವ ರಾಯುಡು, ತಾವು ಆರ್‌ಸಿಬಿಯ ದೌರ್ಬಲ್ಯಗಳನ್ನು ಎತ್ತಿ ತೋರಿಸಿದ ಬಳಿಕ ಫ್ರಾಂಚೈಸಿ ಅದನ್ನು ಗಂಭೀರವಾಗಿ ಪರಿಗಣಿಸಿತು ಮತ್ತು ಅದರ ಪರಿಣಾಮವಾಗಿ ಕಳೆದ ಮೂರು ಸೀಸನ್‌ಗಳಿಂದ ಅಧಿಕಾರಯುತ ಪ್ರದರ್ಶನ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

IPL 2026 ಟೂರ್ನಿಯ ಬಳಿಕ ನಾಯಕತ್ವ ಕಳೆದುಕೊಳ್ಳಬಲ್ಲ ಮೂವರು ಆಟಗಾರರು!

“ಖಂಡಿತವಾಗಿಯೂ ಆರ್‌ಸಿಬಿಯ ಯಶಸ್ಸಿಗೆ ನಮಗೂ ಶ್ರೇಯ ಸಲ್ಲಬೇಕು. ನಮ್ಮ ಟೀಕೆಗಳು ಸಂಪೂರ್ಣ ತಾರ್ಕಿಕವಾಗಿದ್ದವು. ಯಾವುದೇ ಲಾಜಿಕ್ ಇಲ್ಲದೆ ನಾವು ಮಾತನಾಡಲಿಲ್ಲ. ಅವರು ಉತ್ತಮ ಗುಣಮಟ್ಟದ ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಆಯ್ಕೆ ಮಾಡುತ್ತಿಲ್ಲ ಎಂದು ನಾವು ಹೇಳುತ್ತಿದ್ದೆವು. ಜೊತೆಗೆ ಉತ್ತಮ ಫಿನಿಷರ್‌ಗಳೂ ಇರಲಿಲ್ಲ ಮತ್ತು ಅನುಭವಸಂಪನ್ನ ಬೌಲಿಂಗ್ ಘಟಕದ ಕೊರತೆಯೂ ಇತ್ತು. ಇದೇ ವಿಷಯವನ್ನು ನಾವು ನಿರಂತರವಾಗಿ ಹೇಳುತ್ತಿದ್ದೆವು. ಅಂತಿಮವಾಗಿ ಅವರು ಅದನ್ನು ಸರಿಪಡಿಸಿದರು ಮತ್ತು ಈಗ ಅದರ ಫಲವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಅವರು ನಮಗೆ ಧನ್ಯವಾದ ಹೇಳಬೇಕು,” ಎಂದು ರಾಯುಡು ಹೇಳಿದ್ದಾರೆ.

IPL 2026: 13 ಪಂದ್ಯಗಳು ಬಾಕಿ, 8 ತಂಡಗಳ ಪ್ಲೇ-ಆಫ್‌ ಅವಕಾಶದ ಲೆಕ್ಕಾಚಾರ ಹೀಗಿದೆ

ಗಮನಾರ್ಹವಾಗಿ, ಹಾಲಿ ಚಾಂಪಿಯನ್ ಆರ್‌ಸಿಬಿ, ಇದೀಗ ನಡೆಯುತ್ತಿರುವ ಐಪಿಎಲ್ 2026ರಲ್ಲಿ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ರಜತ್‌ ಪಾಟಿದಾರ್‌ ನಾಯಕತ್ವದ ಈ ತಂಡ, ಕೆಕೆಆರ್‌ ವಿರುದ್ಧ ರಾಯ್ಪುರದಲ್ಲಿ ಗೆಲುವು ಸಾಧಿಸುವ ಮೂಲಕ ಸೀಸನ್‌ನ ಎಂಟನೇ ಜಯವನ್ನು ದಾಖಲಿಸಿದೆ ಮತ್ತು ಅಂಕಪಟ್ಟಿಯಲ್ಲಿ ಆರಾಮದಾಯಕವಾಗಿ ಅಗ್ರಸ್ಥಾನದಲ್ಲಿದೆ. ಇದೀಗ ಆರ್‌ಸಿಬಿ ತಂಡವು ಪ್ಲೇಆಫ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಗುರಿಯೊಂದಿಗೆ ಮುಂದಿನ ಪಂದ್ಯಗಳನ್ನು ಆಡಲು ಎದುರುನೋಡುತ್ತಿದೆ.