ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಈ ಸಲವೂ ಕಪ್‌ ಗೆಲ್ಲಬೇಕಂದ್ರೆ ಆರ್‌ಸಿಬಿ ಈ 3 ಆಟಗಾರರ ಕೈಬಿಡಬೇಕು!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಟ್ರೋಫಿ ಗೆಲ್ಲುವ ಕನಸು ಕಂಡಿದೆ. 11 ಪಂದ್ಯಗಳಿಂದ 14 ಅಂಕ ಗಳಿಸಿ ಈಗಾಗಲೇ ಪ್ಲೇ ಆಫ್ಸ್‌ಗೆ ಹತ್ತಿರವಾಗಿದೆ. ಆದರೆ, ತಂಡದಲ್ಲಿನ ಕೆಲ ಸಮಸ್ಯೆಗಳನ್ನು ಆರ್‌ಸಿಬಿ ನೀಗಿಸಿಕೊಳ್ಳಬೇಕಿದೆ. ಮಹತ್ವದ ಪಂದ್ಯಗಳಿಗೂ ಮುನ್ನ ಆರ್‌ಸಿಬಿ ತನ್ನ ಆಡುವ 11ರ ಬಳಗದಲ್ಲಿ ತಂದುಕೊಳ್ಳಬೇಕಾದ ಬದಲಾವಣೆಗಳನ್ನು ಇಲ್ಲಿ ವಿವರಿಸಲಾಗಿದೆ.

ಈ ಸಲವೂ ಕಪ್‌ ಗೆಲ್ಲಬೇಕಂದ್ರೆ ಆರ್‌ಸಿಬಿ ಈ 3 ಆಟಗಾರರ ಕೈಬಿಡಬೇಕು!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ. -

Vijeth Kumar DN
Vijeth Kumar DN May 11, 2026 7:34 PM

ಡಿಫೆಂಡಿಂಗ್‌ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಕಮ್‌ಬ್ಯಾಕ್‌ ಮಾಡಿದೆ. ಸತತ ಸೋಲಿನ ಕೊಂಡಿ ಕಳಚಿದ ಆರ್‌ಸಿಬಿ ತನ್ನ ಬದ್ಧ ಎದುರಾಳಿ ಮುಂಬೈ ಇಂಡಿಯನ್ಸ್‌ ಎದುರು ಲಾಸ್ಟ್‌ ಬಾಲ್‌ನಲ್ಲಿ ರೋಚಕ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

11 ಪಂದ್ಯಗಳಿಂದ 14 ಅಂಕಗಳನ್ನು ಕಲೆಹಾಕಿರುವ ಆರ್‌ಸಿಬಿ, ಪ್ಲೇ-ಆಫ್ಸ್‌ ಹಂತಕ್ಕೆ ಒಂದು ಕಾಲನ್ನು ಈಗಾಗಲೇ ಇಟ್ಟಾಗಿದೆ. ಇನ್ನೇನಿದ್ದರೂ ಉಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ 2 ಜಯ ದಾಖಲಿಸಿ ಅಂಕಪಟ್ಟಿಯ ಅಗ್ರ 2ರಲ್ಲಿ ಸ್ಥಾನ ಉಳಿಸಿಕೊಳ್ಳುವುದಷ್ಟೇ ಆರ್‌ಸಿಬಿ ತಂಡದ ಲೆಕ್ಕಾಚಾರ.

ಆದರೆ, ಪ್ಲೇ-ಆಫ್ಸ್‌ ಹಂತ ಶುರುವಾಗುವ ಮೊದಲು ಆರ್‌ಸಿಬಿ ತನ್ನ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಇರುವ ಕೆಲ ವೀಕ್‌ಲಿಂಕ್‌ ಅನ್ನು ಸರಿಪಡಿಸಿಕೊಳ್ಳಬೇಕು. ಪ್ರಮುಖವಾಗಿ 11ರ ಬಳಗದಲ್ಲಿ ಚಾಲೆಂಜರ್ಸ್‌ 3 ಮಹತ್ವದ ಬದಲಾವಣೆಗಳನ್ನು ತಂದುಕೊಳ್ಳುವ ಅಗತ್ಯವಿದೆ.

RCB vs MI: ʻ4 ವಿಕೆಟ್‌ ಪಡೆದಿದ್ದು ವಿಶೇಷ ಎನ್ನಿಸಲಿಲ್ಲ, ಸಿಕ್ಸರ್‌ ಅನ್ನು ಆನಂದಿಸಿದ್ದೇನೆʼ-ಭುವನೇಶ್ವರ್‌ ಕುಮಾರ್‌

ಬೆಥೆಲ್‌ಗೆ ವಿಶ್ರಾಂತಿ ಕೊಟ್ಟು ಕಾಕ್ಸ್‌ಗೆ ಚಾನ್ಸ್

ತಂಡದ ಸ್ಟಾರ್‌ ಓಪನರ್‌ ಫಿಲಿಪ್‌ ಸಾಲ್ಟ್‌ ಗಾಯಗೊಂಡ ಬಳಿಕ ಆರ್‌ಸಿಬಿ ಪ್ರದರ್ಶನ ಮಟ್ಟದಲ್ಲಿಯೂ ಏರುಪೇರಾಗಿದೆ. ಸಾಲ್ಟ್‌ ಸ್ಪೋಟಕ ಆರಂಭ ಒದಗಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಜೊತೆಗೆ ಗನ್‌ ಫೀಲ್ಡರ್‌. ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡರೂ ಫೀಲ್ಡಿಂಗ್‌ನಲ್ಲಿ ಪಂದ್ಯದ ದಿಕ್ಕು ಬದಲಾಯಿಸುವಂತಹ ಕ್ಯಾಚ್‌ಗಳನ್ನು ತೆಗೆದುಕೊಳ್ಳುವಲ್ಲಿ ನಿಸ್ಸೀಮರು. ಆದರೆ, ಗಾಯಾಳು ಸಾಲ್ಟ್‌ ಸ್ಥಾನಕ್ಕೆ ಬೆಲೆ ತಂದುಕೊಡುವಲ್ಲಿ ಯುವ ಪ್ರತಿಭೆ ಜೇಕಬ್‌ ಬೆಥೆಲ್‌ ಸಂಪೂರ್ಣ ವಿಫಲರಾಗಿದ್ದಾರೆ.

ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಶತಕ ಬಾರಿಸಿ ಸದ್ದು ಮಾಡಿದ್ದ ಎಡಗೈ ಬ್ಯಾಟರ್‌ ಜೇಕಬ್‌ ಬೆಥೆಲ್‌, ಆರ್‌ಸಿಬಿ ಪರವೂ ಇಂಥದ್ದೇ ಅಬ್ಬರ ನಡೆಸುತ್ತಾರೆ ಎಂಬ ನಿರೀಕ್ಷೆ ದೊಡ್ಡದಿತ್ತು. ಆದರೆ, ಬೆಥೆಲ್‌ ಸತತ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್ ಇನಿಂಗ್ಸ್‌ ಆಡುವ ಅವಕಾಶವಿತ್ತು. ಅಲ್ಲಿಯೂ ನಿರಾಶೆ ಮೂಡಿಸಿ 27 ಎಸೆತಗಳಲ್ಲಿ 27 ರನ್‌ ಮಾತ್ರವೇ ಗಳಿಸಿದರು.

ಹೀಗಾಗಿ ಪ್ಲೇ-ಆಫ್ಸ್‌ ಅಂತಹ ಮಹತ್ವದ ಘಟ್ಟ ಶುರುವಾಗುವ ಮೊದಲು ಆರ್‌ಸಿಬಿ ಈ ವೀಕ್‌ ಲಿಂಕ್‌ ಸರಿ ಪಡಿಸಿಕೊಳ್ಳಬೇಕು. ಸಾಲ್ಟ್‌ ಚೇತರಿಸಿದ್ದರೆ. ಅವರನ್ನು ತಂಡಕ್ಕೆ ಮರಳಿ ಕರೆತರಬೇಕು. ಇಲ್ಲದಿದ್ದರೆ ಬೆಂಚ್‌ ಕಾಯುತ್ತಿರುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜಾರ್ಡನ್‌ ಕಾಕ್ಸ್‌ಗೆ ಅವಕಾಶ ಕೊಡಬೇಕು.

RCB vs MI: ಮುಂಬೈ ಎದುರು ಕೊನೆಯ ಓವರ್‌ ಥ್ರಿಲ್ಲರ್‌ ಗೆದ್ದ ಆರ್‌ಸಿಬಿಗೆ ಅಗ್ರ ಸ್ಥಾನ!

ಔಟ್‌ ಆಫ್‌ ಫಾರ್ಮ್‌ ಜಿತೇಶ್‌ ಶರ್ಮಾ ಕೈಬಿಡಬೇಕು

ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾ ತಮ್ಮ ಪ್ರಭಾವ ಬೀರುವಲ್ಲಿ ಸಾಲು ಸಾಲು ವೈಫಲ್ಯ ಕಂಡಿದ್ದಾರೆ. ಹೀಗಾಗಿ ವಿಕೆಟ್‌ಕೀಪಿಂಗ್‌ ಜವಾಬ್ದಾರಿಯನ್ನು ಫಿಲಿಪ್‌ ಸಾಲ್ಟ್‌ ಅಥವಾ ಜಾರ್ಡನ್‌ ಕಾಕ್ಸ್‌ಗೆ ಅವಕಾಶ ಕೊಟ್ಟು, ಜಿತೇಶ್‌ ಸ್ಥಾನದಲ್ಲಿ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ಗೆ ಅವಕಾಶ ನೀಡಿದಲ್ಲಿ ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲೂ ಹೆಚ್ಚಿನ ಆಯ್ಕೆ ಲಭ್ಯವಾಗುತ್ತದೆ.

ರೊಮಾರಿಯೋ ಶೆಫರ್ಡ್‌ ಇಂಪ್ಯಾಕ್ಟ್‌ ಪ್ಲೇಯರ್‌

ಫಿನಿಷರ್‌ ಕೆಲಸ ನಿಭಾಯಿಸುವಲ್ಲಿ ಆಲ್‌ರೌಂಡರ್‌ ರೊಮಾರಿಯೋ ಶೆಫರ್ಡ್‌ ವಿಫಲರಾಗಿದ್ದಾರೆ. ಹೀಗಾಗಿ ಅಗತ್ಯವಿದ್ದಾಗ ಅವರನ್ನು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಮಾತ್ರವೇ ಬಳಕೆ ಮಾಡಿದರೆ ಸೂಕ್ತ. ಅವರ ಸ್ಥಾನದಲ್ಲಿ ವಿಕೆಟ್‌ ಟೇಕಿಂಗ್‌ ಬೌಲರ್‌ ಎನಿಸಿರುವ ಜೇಕಬ್‌ ಡಫೀ ಅವರನ್ನು ಆಡಿಸಿದರೆ ಆರ್‌ಸಿಬಿ ಬೌಲಿಂಗ್‌ ವಿಭಾಗಕ್ಕೆ ಆನೆ ಬಲ ಬಂದಂತ್ತಾಗುತ್ತದೆ.

ಪ್ಲೇ-ಆಫ್ಸ್‌ಗೂ ಮುನ್ನ ಆರ್‌ಸಿಬಿ ಕಟ್ಟಬಹುದಾದ ಬಲಿಷ್ಠ ಪ್ಲೇಯಿಂಗ್‌ 1 ಹೀಗಿದೆ

01. ವಿರಾಟ್‌ ಕೊಹ್ಲಿ (ಓಪನರ್‌)

02. ಜಾರ್ಡನ್‌ ಕಾಕ್ಸ್‌ / ಫಿಲ್‌ ಸಾಲ್ಟ್‌ (ಓಪನರ್‌/ ಕೀಪರ್‌)

03. ದೇವದತ್‌ ಪಡಿಕ್ಕಲ್‌ (ಬ್ಯಾಟರ್‌)

04. ರಜತ್‌ ಪಾಟಿದಾರ್‌ (ಬ್ಯಾಟರ್‌/ ಕ್ಯಾಪ್ಟನ್‌)

05. ವೆಂಕಟೇಶ್‌ ಅಯ್ಯರ್‌ (ಆಲ್‌ರೌಂಡರ್‌)

06. ಟಿಮ್‌ ಡೇವಿಡ್‌ (ಆಲ್‌ರೌಂಡರ್‌)

07. ಕೃಣಾಲ್‌ ಪಾಂಡ್ಯ (ಆಲ್‌ರೌಂಡರ್‌)

08. ರಸಿಖ್‌ ಸಲಾಮ್‌ (ಫಾಸ್ಟ್‌ ಬೌಲರ್‌)

09. ಭುವನೇಶ್ವರ್‌ ಕುಮಾರ್‌ (ಫಾಸ್ಟ್‌ ಬೌಲರ್‌)

11. ಜೇಕಬ್‌ ಡಫೀ (ಫಾಸ್ಟ್‌ ಬೌಲರ್‌)

12. ಜಾಶ್‌ ಹೇಝಲ್‌ವುಡ್‌ (ಫಾಸ್ಟ್‌ ಬೌಲರ್‌)

ಇಂಪ್ಯಾಕ್ಟ್‌ ಸಬ್‌: ರೊಮಾರಿಯೊ ಶಫರ್ಡ್‌ ಮತ್ತು ಸುಯಶ್‌ ಶರ್ಮಾ

ಆರ್‌ಸಿಬಿಯ ಈ ಬಲಿಷ್ಠ ಪ್ಲೇಯಿಂಗ್‌ 11 ಬಗ್ಗೆ ನೀವೇನು ಹೇಳ್ತೀರಾ? ಕಾಮೆಂಟ್‌ ಮೂಲಕ ತಿಳಿಸಿ.