ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿಗೆ ಕೆಟ್ಟ ಚಟ ಇದೆ, ಬಿಟ್ಟು ಬಿಡು ಎಂದು ಎಷ್ಟು ಬಾರಿ ಹೇಳಿದ್ರು ನನ್ನ ಮಾತು ಕೇಳಲಿಲ್ಲ: ಜಿತೇಶ್‌ ಶರ್ಮಾ!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಮಿಂಚಿನ ಬ್ಯಾಟಿಂಗ್‌ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ 14ರ ವಯಸ್ಸಿನ ವೈಭವ್‌ ಸೂರ್ಯವಂಶಿ ಬಗ್ಗೆ ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ ಕೀಪರ್‌ ಜಿತೇಶ ಶರ್ಮಾ ಅಚ್ಚರಿ ಹೇಳಿಕೆ ನೀಡಿದ್ದಾರೆ. ವೈಭವ್‌ ವೃತ್ತಿ ಪರ ಕ್ರಿಕೆಟಿಗನಲ್ಲ ಎಂದು ಅವರು ಹೇಳಿದ್ದಾರೆ ಹಾಗೂ ಇದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

ವೈಭವ್‌ ಸೂರ್ಯವಂಶಿಗೆ ವೃತ್ತಿಪರತೆ ಇಲ್ಲ: ಜಿತೇಶ್‌ ಶಾಕಿಂಗ್‌ ಹೇಳಿಕೆ!

ವೈಭವ್‌ ಸೂರ್ಯವಂಶಿ ಬಗ್ಗೆ ಜಿತೇಶ್‌ ಶರ್ಮಾ ಶಾಕಿಂಗ್‌ ಹೇಳಿಕೆ. -

Profile
Ramesh Kote Mar 23, 2026 8:35 PM

ನವದೆಹಲಿ: ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2206) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ವಿಶ್ವದ ಗಮನ ಸೆಳೆದಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿಯ (Vaibhav Suryavanshi) ಬಗ್ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ ಕೀಪರ್‌-ಬ್ಯಾಟರ್‌ ಜಿತೇಶ್‌ ಶರ್ಮಾ (Jitesh Sharma) ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ವೈಭವ್‌ ವೃತ್ತಿಪರ ಕ್ರಿಕೆಟಿಗ ಅಲ್ಲ ಎಂದ ಜಿತೇಶ್‌, ಇದಕ್ಕೆ ಬಲವಾದ ಕಾರಣವೇನೆಂದು ವಿವರಿಸಿದ್ದಾರೆ. ಅಂದ ಹಾಗೆ ಆರ್‌ಆರ್‌ ಬ್ಯಾಟ್ಸ್‌ಮನ್‌ ತಮ್ಮ ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲಿಯೇ ಸ್ಪೋಟಕ ಶತಕ ಬಾರಿಸಿದ್ದರು. ನಂತರ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿಯೂ ಗಮನವನ್ನು ಸೆಳೆದಿದ್ದರು. ಇದೀಗ ಅವರು ತನ್ನ ಎರಡನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ.

19ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ನಿಮಿತ್ತ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಜೊತೆಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಜಿತೇಶ್‌ ಶರ್ಮಾ, ವೈಭವ್‌ ಸೂರ್ಯವಂಶಿ ಮೈದಾನದಿಂದ ಹೊರಗೆ ಹೇಗೆ ಇರುತ್ತಾರೆಂಬ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಲ್ಲದೆ, ನನ್ನ ಪ್ರಕಾರ ವೈಭವ್‌ ಇನ್ನೂ ವೃತ್ತಿಪರ ಕ್ರಿಕೆಟಿಗನಾಗಿ ಬೆಳೆದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಉತ್ತಮವಾದ ಉದಾಹರಣೆಯನ್ನು ಕೊಟ್ಟಿದ್ದಾರೆ.

IPL 2026: ಏಕೈಕ ಆವೃತ್ತಿಯಲ್ಲಿ 800ಕ್ಕೂ ಅಧಿಕ ರನ್‌ ಗಳಿಸಿದ ನಾಲ್ವರು ಬ್ಯಾಟರ್ಸ್‌!

ವೈಭವ್‌ ಸೂರ್ಯವಂಶಿ ವೃತ್ತಿಪರ ಆಟಗಾರನಲ್ಲ

"ಅವರು ವೃತ್ತಿಪರ ಕ್ರಿಕೆಟಿಗನಲ್ಲ, ಇದನ್ನು ನಾನು ಹೇಳಬಲ್ಲೆ. ಅವರು ವೃತ್ತಿಪರ ಕ್ರಿಕೆಟಿಗನಾಗಬೇಕೆಂದು ಪ್ರತಿಯೊಬ್ಬರೂ ಪ್ರಯತ್ನಿಸುತ್ತಿದ್ದಾರೆ, ಆದರೆ ಅವರು ಎಂದಿಗೂ ವೃತ್ತಿಪರನಾಗುತ್ತಾನೆ ಎಂದು ನಾನು ಭಾವಿಸುವುದಿಲ್ಲ," ಎಂದು ಜಿತೇಶ್‌ ಶರ್ಮಾ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಸೂರ್ಯವಂಶಿ ರಾತ್ರಿ ಐಸ್‌ ಕ್ರೀಮ್‌ ತಿನ್ನುತ್ತಾರೆ

"ಅವರು ಮೈದಾನದಲ್ಲಿ ವೃತ್ತಿಪರ ಆಟಗಾರನ ರೀತಿ ಇರುತ್ತಾರೆ, ಆದರೆ ಮೈದಾನದ ಹೊರಗೆ ಅವರು ವೃತ್ತಿಪರ ಆಟಗಾರನ ರೀತಿ ಇರುವುದಿಲ್ಲ. ರಾತ್ರಿ ಹೊತ್ತು ಐಸ್‌ ಕ್ರೀಮ್ ತಿನ್ನಬೇಡಿ ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೇನೆ, ಇದನ್ನು ಅವರಿಂದ ತಪ್ಪಿಸಲು ನಾನು ನನ್ನ ಕಡೆಯಿಂದ ಉತ್ತಮ ಪ್ರಯತ್ನವನ್ನು ಮಾಡಿದ್ದೇನೆ," ಎಂದು ಆರ್‌ಸಿಬಿ ವಿಕೆಟ್‌ ಕೀಪರ್‌ ತಿಳಿಸಿದ್ದಾರೆ.

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌, ʻಹಾಲ್‌ ಆಫ್‌ ಫೇಮ್‌ಗೆʼ ಭಾಜನರಾದ ಮ್ಯಾಥ್ಯೂ ಹೇಡನ್‌, ಸುರೇಶ್‌ ರೈನಾ!

ಜಿತೇಶ್ ಶರ್ಮಾ ಮತ್ತು ವೈಭವ್‌ ಸೂರ್ಯವಂಶಿ ಒಬ್ಬರಿಗೊಬ್ಬರು ಅಪರಿಚಿತರಲ್ಲ. 2025ರ ನವೆಂಬರ್‌ನಲ್ಲಿ ನಡೆದಿದ್ದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ ಟೂರ್ನಿಯಲ್ಲಿ ಇಂಡಿಯಾ ‘ಎ’ ತಂಡದ ಪರ ಆಡುವಾಗ ಇಬ್ಬರೂ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಈ ವೇಳೆ ವೈಭವ್‌ ಅವರ ಮೈದಾನದಲ್ಲಿನ ಮತ್ತು ಮೈದಾನದ ಹೊರಗಿನ ವ್ಯಕ್ತಿತ್ವವನ್ನು ಸಮೀಪದಿಂದ ಅರಿಯುವ ಅವಕಾಶ ಜಿತೇಶ್ ಶರ್ಮಾಗೆ ದೊರಕಿತ್ತು.

ಇದೀಗ 2026ರ ಐಪಿಎಲ್ ಟೂರ್ನಿಯಲ್ಲಿ ಇಬ್ಬರೂ ಬೇರೆ-ಬರೆ ತಂಡಗಳ ಪರ ಆಡುತ್ತಿದ್ದಾರೆ. ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಆಡಿದರೆ, ಜಿತೇಶ್ ಶರ್ಮಾ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ.

IPL 2026: ಕೆಕೆಆರ್‌ ತಂಡದ ಬೆಸ್ಟ್ ಪ್ಲೇಯಿಂಗ್‌ XI ಆರಿಸಿದ ಇರ್ಫಾನ್‌ ಪಠಾಣ್‌!

ವೈಭವ್‌ ಸೂರ್ಯವಂಶಿ ಮೇಲೆ ದೊಡ್ಡ ಜವಾಬ್ದಾರಿ

ವೈಭವ್‌ ಸೂರ್ಯವಂಶಿಗೆ ಈ ಸೀಸನ್ ದೊಡ್ಡ ಸವಾಲಿನದ್ದಾಗಲಿದೆ. ಕಳೆದ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಅವರು, ತಾನು ಒಂದೇ ಸೀಸನ್ ಆಟಗಾರನಲ್ಲ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಇದೀಗ ಅವರ ಮೇಲೆ ಇದೆ. ಇದಾದ ಬಳಿಕ, ಭಾರತ ಅಂಡರ್-19 ತಂಡವನ್ನು ವಿಶ್ವಕಪ್ ಜಯದತ್ತ ಕೊಂಡೊಯ್ಯುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 175 ರನ್‌ಗಳ ಅದ್ಭುತ ಇನಿಂಗ್ಸ್‌ ಆಡಿದ್ದು, ಕ್ರಿಕೆಟ್ ಲೋಕದ ಗಮನವನ್ನು ಮತ್ತೊಮ್ಮೆ ತಮ್ಮತ್ತ ಸೆಳೆದಿದ್ದಾರೆ.