ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೈತ್ರ ನವರಾತ್ರಿಯಂದು ದೇವಿಗೆ ಟೂತ್‌ ಬ್ರಷ್ ನೀಡಿದ ಬಾಲಕಿ: ಕ್ಯೂಟ್ ವಿಡಿಯೊ ಇಲ್ಲಿದೆ

Viral Video: ದುರ್ಗಾ ದೇವಿಯ ಬಗ್ಗೆ ಪುಟ್ಟ ಹುಡುಗಿಯ ಮುಗ್ಧ ಭಕ್ತಿಯನ್ನು ತೋರಿಸುವ ವಿಡಿಯೊ ಗಮನ ಸೆಳೆದಿದೆ. ಈ ಲಕಿ ತಾನು ಪಡೆಯುವ ಎಲ್ಲವನ್ನೂ ಮೊದಲು ಮಾತಾ ರಾಣಿಗೆ (ದೇವಿ) ನೀಡುವ ಅಭ್ಯಾಸಹೊಂದಿದ್ದಾಳೆ. ಬಾಲಕಿಗೆ ಹೊಸದಾಗಿ ಟೂತ್‌ಬ್ರಷ್ ಮತ್ತು ಟೂತ್‌ಪೇಸ್ಟ್ ತಂದು ಕೊಟ್ಟಾಗ, ಅವಳು ತಕ್ಷಣ ಪೂಜಾ ಕೋಣೆಗೆ ಹೋಗಿ ದೇವಿಯ ವಿಗ್ರಹದ ಎದುರು ಇಟ್ಟಿದ್ದಾಳೆ.

ಚೈತ್ರ ನವರಾತ್ರಿಯಂದು ದೇವಿಗೆ ಟೂತ್‌ಬ್ರಷ್ ನೀಡಿ ಮನಗೆದ್ದ ಪುಟ್ಟ ಬಾಲಕಿ

ದೇವಿಗೆ ಟೂತ್‌ಬ್ರಷ್ ನೀಡಿದ ಪುಟ್ಟ ಬಾಲಕಿ -

Profile
Pushpa Kumari Mar 23, 2026 10:10 PM

ನವದೆಹಲಿ, ಮಾ. 23: ಈ ವರ್ಷದ ಚೈತ್ರ ನವರಾತ್ರಿ ಆರಂಭವಾಗಿದ್ದು, ಇದರ ಆಚರಣೆ ಮಾರ್ಚ್ 19ರಿಂದ ಮಾರ್ಚ್ 27ರವರೆಗೆ ನಡೆಯುತ್ತದೆ. ಈ ಸಂಭ್ರಮದ ನಡುವೆ ಪುಟ್ಟ ಬಾಲಕಿಯೊಬ್ಬಳ ಮುಗ್ಧ ಭಕ್ತಿಯ ವಿಡಿಯೊ ವೈರಲ್ (Viral News) ಆಗುತ್ತಿದೆ. ಆಕೆ ದೇವಿಯನ್ನು ವಿಗ್ರಹವಾಗಿ ನೋಡದೆ ಸ್ವಂತ ಮನೆಯ ಸದಸ್ಯರ ರೀತಿ ನೋಡಿಕೊಂಡಿದ್ದಾಳೆ. ಆ ಬಾಲಕಿ ತಾನು ಬಳಸುವ ಎಲ್ಲ ವಸ್ತುಗಳನ್ನು ಮೊದಲಿಗೆ ಆ ದೇವಿಯ ವಿಗ್ರಹಕ್ಕೆ ನೀಡಿ ಖುಷಿ ಪಡುತ್ತಾಳೆ ಎಂದು ಬಾಲಕಿಯ ತಾಯಿ ಹೇಳಿಕೊಂಡಿದ್ದಾರೆ.

ದುರ್ಗಾ ದೇವಿಯ ಬಗ್ಗೆ ಪುಟ್ಟ ಹುಡುಗಿಯ ಭಕ್ತಿಯನ್ನು ಚಿತ್ರಿಸುವ ಈ ವಿಡಿಯೊ ಭಾರಿ ಗಮನ ಸೆಳೆದಿದೆ. ಬಾಲಕಿ ತಾನು ಪಡೆಯುವ ಎಲ್ಲವನ್ನೂ ಮೊದಲು ಮಾತಾ ರಾಣಿಗೆ (ದೇವಿ) ನೀಡುವ ಅಭ್ಯಾಸ ಹೊಂದಿದ್ದಾಳೆ. ಬಾಲಕಿಗೆ ಹೊಸದಾಗಿ ಟೂತ್‌ಬ್ರಷ್ ಮತ್ತು ಟೂತ್‌ಪೇಸ್ಟ್ ತಂದುಕೊಟ್ಟಾಗ, ಅವಳು ತಕ್ಷಣ ಪೂಜಾ ಕೋಣೆಗೆ ಹೋಗಿ ಅದನ್ನು ದೇವಿಯ ವಿಗ್ರಹದ ಎದುರು ಇಟ್ಟಿದ್ದಾಳೆ.

ವಿಡಿಯೊ ನೋಡಿ:

ಅಷ್ಟೇ ಅಲ್ಲದೆ ಮಾತಾ ರಾಣಿಗೆ ಹೊಸ ಟೂತ್ ಬ್ರಷ್ ಮತ್ತು ಟೂತ್‌ಪೇಸ್ಟ್ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗಿನಿಂದ ಈ ಕ್ಲಿಪ್ 5.14 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸುಮಾರು 48,000 ಲೈಕ್‌ಗಳನ್ನು ಗಳಿಸಿದೆ.

ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್‌ ಕೆಳಗೆ ಬೈಕ್‌ ಓಡಿಸಿದ ಯುವಕ

ಈ ವಿಡಿಯೊ ನೆಟ್ಟಿಗರ ಮನಗೆದ್ದಿದ್ದು ಅನೇಕರು ಆಕೆಯ ಮುಗ್ಧತೆಗೆ ಫಿದಾ ಆಗಿದ್ದಾರೆ. ನೆಟ್ಟಿಗರೊಬ್ಬರು ದೇವಿಗೆ ಬೇಕಿರುವುದು ಇಂತಹ ಭಕ್ತಿ ಹೊರತು ಆಡಂಬರ ಅಲ್ಲ ಎಂದು ಬರೆದಿದ್ದಾರೆ. ಮತ್ತೊಬ್ಬರು ಆ ಮಗುವಿನ ಸಂಸ್ಕಾರ ನಿಜಕ್ಕೂ ಮೆಚ್ಚುವಂತದ್ದು ಎಂದಿದ್ದಾರೆ. ಪ್ರತಿ ವರ್ಷ, ಭಕ್ತರು ಈ ಹಬ್ಬವನ್ನು ಆಚರಣೆ ಮಾಡುತ್ತಾರೆ.‌ ಮನೆಗಳಲ್ಲಿ ಪವಿತ್ರ ಕಲಶವನ್ನು ಸ್ಥಾಪಿಸಿ ಒಂಬತ್ತು ದಿನಗಳ ಕಾಲ ದೇವಿಯ ಒಂಬತ್ತು ಅವತಾರಗಳನ್ನು ಪೂಜೆ ಮಾಡಲಾಗುತ್ತದೆ