IPL 2026: ʻಈ ಆಟಗಾರನಿಗೋಸ್ಕರ ಎಸ್‌ಆರ್‌ಎಚ್ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದೆʼ-ಡೇಲ್ ಸ್ಟೇನ್!
ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಆಗಿದ್ದ ಮೊಹ್ಮಮದ್ ಶಮಿ ಅವರನ್ನು ಖರೀದಿಸಲು ನಾನು ಅಂದು ಹೈದರಾಬಾದ್ ಫ್ರಾಂಚೈಸಿ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದೆ ಎಂಬ ಅಂಶವನ್ನು ದಕ್ಷಿಣ ಆಫ್ರಿಕಾ ದಿಗ್ಗಜ ವೇಗಿ ಡೇಲ್ ಸ್ಟೇನ್ ಬಹಿರಂಗಪಡಿಸಿದ್ದಾರೆ. 2021 ರಿಂದ 2024ರ ಅವಧಿಯಲ್ಲಿ ಶಮಿ ತಮ್ಮ ಐಪಿಎಲ್ ವೃತ್ತಿ ಜೀವನದ ಶ್ರೇಷ್ಠ ಲಯದಲ್ಲಿದ್ದರು.
ಮೊಹಮ್ಮದ್ ಶಮಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಡೇಲ್ ಸ್ಟೇನ್. -
ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನು ಸಿದ್ದಪಡಿಸುತ್ತಿವೆ. ಇದರ ನಡುವೆ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ, ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರನ್ನು ಬಿಟುಗಡೆ ಮಾಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಹಾಗೂ ಎಸ್‌ಆರ್‌ಎಚ್ ತಂಡದ ಮಾಜಿ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಮೊಹಮ್ಮದ್ ಶಮಿಗೆ ಸಂಬಂಧಿಸಿದ ಅಚ್ಚರಿ ಸಂಗತಿಯೊಂದನ್ನು ಇದೀಗ ರಿವೀಲ್ ಮಾಡಿದ್ದಾರೆ.
ಡೇಲ್ ಸ್ಟೇನ್ ಅವರು 2021 ರಿಂದ 2024ರ ಅವಧಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಅವರು ಮೊಹಮ್ಮದ್ ಶಮಿ ಅವರನ್ನು ಎಸ್‌ಆರ್‌ಎಚ್ ತಂಡಕ್ಕೆ ಸೇರಿಸಿಕೊಳ್ಳಲು ಹೈದರಾಬಾದ್ ಫ್ರಾಂಚೈಸಿ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದೆ ಎಂಬ ಸಂಗತಿಯನ್ನು ಸ್ಟೇನ್ ಬಹಿರಂಗಪಡಿಸಿದ್ದಾರೆ. ಈ ಅವಧಿಯಲ್ಲಿ ಶಮಿ ಐಪಿಎಲ್ ಟೂರ್ನಿಯಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಫಾರ್ಮ್‌ನಲ್ಲಿದ್ದರು. 2023ರ ಐಪಿಎಲ್ ಟೂರ್ನಿಯಲ್ಲಿ ಶಮಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು.
IPL 2026 Mini Auction: 23 ಕೋಟಿಯ ಆಟಗಾರನನ್ನು ಕೈಬಿಡಲು ನಿರ್ಧರಿಸಿದ ಹೈದರಾಬಾದ್
ಕಳೆದ ಐಪಿಎಲ್ ಸೀಸನ್‌ನ ಮೆಗಾ ಹರಾಜಿನಲ್ಲಿ ಮೊಹಮ್ಮದ್ ಶಮಿ ಅವರನ್ನು ಹೈದರಾಬಾದ್ ಫ್ರಾಂಚೈಸಿ 10 ಕೋಟಿ ರು. ಗಳಿಗೆ ಖರೀದಿಸಿತ್ತು. ಆದರೆ, ಅವರು ಕಳೆದ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಅವರು ಫಿಟ್‌ನೆಸ್ ಹಾಗೂ ಲಯವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಶಮಿ ಅವರನ್ನು ಟ್ರೇಡ್ ಡೀಲ್ ಮಾಡಿಕೊಳ್ಳಲು ಎದುರು ನೋಡುತ್ತಿವೆ ಎಂದು ವರದಿಯಾಗಿದೆ. ಅಲ್ಲದೆ ಶಮಿಯನ್ನು ಹರಾಜಿಗೆ ಬಿಡುಗಡೆ ಮಾಡಲು ಕೂಡ ಎಸ್‌ಆರ್‌ಎಚ್ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ. 2025ರ ಟೂರ್ನಿಯಲ್ಲಿ ಶಮಿ ಕೇವಲ ಆರು ವಿಕೆಟ್ ಪಡೆದಿದ್ದರು.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯದ ಭೋಜನ ವಿರಾಮದ ವೇಳೆ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ್ದ ಡೇಲ್ ಸ್ಟೇನ್, ಮೊಹಮ್ಮದ್ ಶಮಿ ಅವರನ್ನು ಎಸ್‌ಆರ್‌ಎಚ್ ಕೈ ಬಿಟ್ಟರೆ, ನನಗೆ ತುಂಬಾ ನಿರಾಶೆಯಾಗಲಿದೆ ಎಂದಿದ್ದಾರೆ. ಶಮಿ ಸಂಪೂರ್ಣ ಫಿಟ್‌ನೆಸ್ ಇದ್ದರೆ ಯಾವುದೇ ತಂಡಕ್ಕೆ ಬೇಕಾದರೂ ಸೇರಬಲ್ಲರು ಎಂದು ಎಸ್‌ಆರ್‌ಎಚ್ ಮಾಜಿ ಬೌಲಿಂಗ್ ಕೋಚ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IPL 2026: 2 ಕೋಟಿ ರು. ಗಳಿಗೆ ಲಖನೌದಿಂದ ಮುಂಬೈ ಇಂಡಿಯನ್ಸ್‌ಗೆ ಸೇರಿದ ಶಾರ್ದುಲ್ ಠಾಕೂರ್!
ಶಮಿಗಾಗಿ ಎಸ್‌ಆರ್‌ಎಚ್ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದೆ: ಸ್ಟೇನ್
"ನಾನು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿದ್ದ ವೇಳೆ, ದಯವಿಟ್ಟು ಮೊಹಮ್ಮದ್ ಶಮಿ ಅವರನ್ನು ಖರೀದಿಸಿ ಎಂದು ಬೇಡಿಕೊಂಡಿದ್ದೆ. ಆದರೆ, ಶಮಿಯನ್ನು ಕಳೆದ ವರ್ಷ ಖರೀದಿಸಿದಾಗ ನಾನು ತಂಡದಲ್ಲಿ ಇರಲಿಲ್ಲ. ಹಾಗಾಗಿ ಮುಂದಿನ ಸೀಸನ್ ನಿಮಿತ್ತ ಅವರನ್ನು ಕಳೆದುಕೊಂಡರೆ, ನನಗೆ ಖಂಡಿತವಾಗಿಯೂ ನಿರಾಶೆಯಾಗಲಿದೆ. ಐಪಿಎಲ್ ಟೂರ್ನಿಯಲ್ಲಿ ಫಿಟ್‌ನೆಸ್ ಹಾಗೂ ಫಾರ್ಮ್ ಪ್ರಮುಖ ಪಾತ್ರವನ್ನು ವಹಿಸುತ್ತದೆ, ವಿಶೇಷವಾಗಿ ಬೌಲರ್‌ಗಳಿಗೆ. ಏಕೆಂದರೆ ನಿಮಗೆ ಬೌಲರ್‌ಗಳು ಫಿಟ್ ಆಗಿ ಇರಬೇಕು," ಎಂದು ಡೇಲ್ ಸ್ಟೇನ್ ತಿಳಿಸಿದ್ದಾರೆ.
"ನಿಮಗೆ ವೇಗದ ಬೌಲರ್ ಮಿಂಚಬೇಕು, ಒಂದು ವೇಳೆ ಶಮಿ ಫಿಟ್ ಆಗಿದ್ದು, ಚೆನ್ನಾಗಿ ಬೌಲ್ ಮಾಡುತ್ತಿದ್ದರೆ, ಅವರು ಯಾವುದೇ ತಂಡಕ್ಕೆ ಬೇಕಾದರೂ ಹೋಗಬಹುದು. ಆದರೆ, ಅವರು ಈಗ ಸ್ವಲ್ಪ ತೊಂದರೆ ಅನುಭವಿಸುತ್ತಿದ್ದರೆ, ಅವರು ಕೆಲ ತಿಂಗಳುಗಳ ಕಾಲ ಹೊರಗೆ ಉಳಿಯಬೇಕಾಗುತ್ತದೆ. ಅವರ ಜಾಗಕ್ಕೆ ಸಂಪೂರ್ಣ ಫಿಟ್ ಇರುವ ಬೌಲರ್ ತಂಡಕ್ಕೆ ಬರಲಿದ್ದಾರೆ. ಅವರು ಒಂದೂವರೆ ವರ್ಷ ಬೌಲಿಂಗ್‌ನಲ್ಲಿ ಮಿಂಚಿದ್ದರು, ಆದರೆ ಈಗ ಅವರು ಲಯವನ್ನು ಕಳೆದುಕೊಂಡಿದ್ದಾರೆ," ಎಂದು ಆಫ್ರಿಕಾ ದಿಗ್ಗಜ ಹೇಳಿದ್ದಾರೆ.