ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KAR vs JK: ಎರಡನೇ ದಿನವೂ ಕರ್ನಾಟಕಕ್ಕೆ ಹಿನ್ನಡೆ, 500 ರನ್‌ ಗಡಿ ದಾಟಿದ ಜಮ್ಮು ಮತ್ತು ಕಾಶ್ಮೀರ!

KAR vs JK Ranji Trophy Final Day 2 Highlights: ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ ಫೈನಲ್‌ ಪಂದ್ಯದ ಎರಡನೇ ದಿನವೂ ಕರ್ನಟಕ ತಂಡಕ್ಕೆ ಹಿನ್ನಡೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ತಂಡ ಎರಡನೇ ದಿನ 500 ರ ಗಡಿ ದಾಟಿದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

Ranji Trophy Final: ಎರಡನೇ ದಿನವೂ ಕರ್ನಾಟಕಕ್ಕೆ ಹಿನ್ನಡೆ!

ಎರಡನೇ ದಿನವೂ ಕರ್ನಾಟಕ ತಂಡಕ್ಕೆ ಹಿನ್ನಡೆ. -

Profile
Ramesh Kote Feb 25, 2026 8:45 PM

ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರ ವಿರುದ್ಧದ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಫೈನಲ್‌ ಪಂದ್ಯದ (KAR VS JK) ಎರಡನೇ ದಿನವೂ ಕರ್ನಾಟಕ (Karnataka) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಪರಾಸ್‌ ದೋಗ್ರಾ, ಸಾಹಿಲ್‌ ಲೋಥ್ರಾ ಹಾಗೂ ಕನ್ನಯ್ಯ ವಾಧವನ್‌ ಅವರ ಅರ್ಧಶತಕಗಳ ಬಲದಿಂದ ಜಮ್ಮು ಮತ್ತು ಕಾಶ್ಮೀರ ತಂಡ, ಎರಡನೇ ದಿನದಾಟವೂ ಪ್ರಾಬಲ್ಯ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ 500ರ ಗಡಿ ದಾಟಿದ್ದು, ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ.

ಬುಧವಾರ ಬೆಳಿಗ್ಗೆ ಇಲ್ಲಿ ಕೆಎಸ್‌ಸಿಎ ಮೈದಾನದಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 284 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿ ಜಮ್ಮು ಮತ್ತು ಕಾಶ್ಮೀರ ತಂಡ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಪರಾಸ್‌ ದೋಗ್ರಾ, ಸಾಹಿಲ್‌ ಲೋಥ್ರಾ ಹಾಗೂ ಕನ್ನಯ್ಯ ವಾಧವನ್‌ ಅವರ ಅರ್ಧಶತಕಗಳ ನೆರವಿನಿಂದ ಪ್ರವಾಸಿ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 156 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 527 ರನ್‌ಗಳ ಬೃಹತ್‌ ಮೊತ್ತವನ್ನು ಕಲೆ ಹಾಕಿದೆ. ಆ ಮೂಲಕ ದೊಡ್ಡ ಮೊತ್ತದತ್ತ ದಾಪುಗಾಲು ಇಟ್ಟಿದೆ.

KAR vs JK: ಕೆವಿ ಅನೀಶ್‌ಗೆ ತಲೆಯಿಂದ ಗುದ್ದಿದ ಜಮ್ಮು-ಕಾಶ್ಮೀರ ನಾಯಕ ಪರಾಸ್‌ ದೋಗ್ರಾ!

ಪರಾಸ್‌ ದೋಗ್ರಾ ಅರ್ಧಶತಕ

ಮೊದಲನೇ ದಿನ ಶತಕ ಸಿಡಿಸಿ ಎರಡನೇ ದಿನ ಬೆಳಿಗ್ಗೆ ಕ್ರೀಸ್‌ಗೆ ಬಂದಿದ್ದ ಶುಭಮ್‌ ಪುಂಡಿರ್‌, 121 ರನ್‌ ಗಳಿಸಿದ ಬಳಿಕ ವಿದ್ಯಾದರ್‌ ಪಾಟೀಲ್‌ಗೆ ವಿಕೆಟ್‌ ಒಪ್ಪಿಸಿದರು. ಅಬ್ದುಲ್‌ ಸಮದ್‌ (61 ರನ್) ಎರಡನೇ ದಿನ ಅರ್ಧಶತಕ ಗಳಿಸಿದ ಬಳಿಕ ಪ್ರಸಿಧ್‌ ಕೃಷ್ಣಗೆ ಔಟ್‌ ಆದರು. ಆದರೆ, ಮೊದಲನೇ ರಿಟೈರ್‌ ಹರ್ಟ್‌ ಆಗಿದ್ದ ನಾಯಕ ಪರಾಸ್‌ ದೋಗ್ರಾ, ಎರಡನೇ ದಿನ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಅವರು ಆಡಿದ 166 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 70 ರನ್‌ಗಳಿಸಿದ ಬಳಿಕ ಶ್ರೇಯಸ್‌ ಗೋಪಾಲ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಇವರ ಅರ್ಧಶತಕ ಗಳಿಸುವ ಜೊತೆಗೆ ಕನ್ನಯ್ಯ ವಾಧವನ್‌ ಜೊತೆಗೆ 110 ರನ್‌ಗಳ ಜೊತೆಯಾಟವನ್ನು ಆಡಿದರು.

IND vs ZIM: ಭಾರತ ತಂಡದಲ್ಲಿ ರಿಂಕು ಸಿಂಗ್‌ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಹೆಸರಿಸಿದ ರವಿಶಾಸ್ತ್ರಿ!

ಕನ್ನಯ್ಯ ವಾಧವನ್‌ ಸೊಗಸಾದ ಅರ್ಧಶತಕ

ಎರಡನೇ ದಿನ ಕನ್ನಯ್ಯ ವಾಧವನ್‌ ಕೂಡ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಕರ್ನಾಟಕದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು, 109 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 70 ರನ್‌ಗಳನ್ನು ಗಳಿಸಿದರು. ಆ ಮೂಲಕ ಕರ್ನಾಟಕ ಬೌಲರ್‌ಗಳು ಬಹುತೇಕ ಸಮಯ ಕಾಡಿದರು. ಆದರೆ, ಶಿಖರ್‌ ಶೆಟ್ಟಿಗೆ ಔಟ್‌ ಆಗುವ ಮೂಲಕ ಅವರು ಶತಕ ಗಳಿಸಬಹುದಾದ ಅವಕಾಶವನ್ನು ಕಳೆದುಕೊಂಡರು.

'ಹಾರ್ದಿಕ್ ಪಾಂಡ್ಯರನ್ನು ನಂಬಿರಿ'; ಭಾರತ ತಂಡಕ್ಕೆ ಕುಂಬ್ಳೆ ಸಲಹೆ

ಸಾಹಿಲ್‌ ಲೋಥ್ರಾ ಅವರು ಕೂಡ ಎರಡನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಎರಡನೇ ದಿನದಾಟದ ಅಂತ್ಯದ ವೇಳೆಗೆ 93 ಎಸೆತಗಳಲ್ಲಿ ಅಜೇಯ 57 ರನ್‌ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ 31 ಎಸೆತದಲ್ಲಿ ಅಜೇಯ 20 ರನ್‌ ಗಳಿಸಿದ್ದಾರೆ.