ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KAR vs JK: ಕೆವಿ ಅನೀಶ್‌ಗೆ ತಲೆಯಿಂದ ಗುದ್ದಿದ ಜಮ್ಮು-ಕಾಶ್ಮೀರ ನಾಯಕ ಪರಾಸ್‌ ದೋಗ್ರಾ!

KAR vs JK Ranji Trophy Final: ಹುಬ್ಬಳ್ಳಿಯ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವಣ 2025-26ರ ಸಾಲಿನ ರಣಜಿ ಟ್ರೋಫಿ ಫೈನಲ್‌ ಪಂದ್ಯದ ಎರಡನೇ ದಿನ ಅಚ್ಚರಿ ಘಟನೆ ನಡೆಯಿತು. ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್‌ ದೋಗ್ರಾ, ಕರ್ನಾಟಕದ ಕೆವಿ ಅನೀಶ್‌ಗೆ ತಲೆಯಿಂದ ಗುದ್ದಿ ಅನುಚಿತ ವರ್ತನೆಯನ್ನು ತೋರಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Ranji Trophy: ಕೆವಿ ಅನೀಶ್‌ಗೆ ತಲೆಯಿಂದ ಗುದ್ದಿದ ಪರಾಸ್‌ ದೋಗ್ರಾ!

ಕೆವಿ ಅನೀಶ್‌ಗೆ ತಲೆಯಲ್ಲಿ ಗುದ್ದಿದ ಪರಾಸ್‌ ದೋಗ್ರಾ. -

Profile
Ramesh Kote Feb 25, 2026 7:07 PM

ಹುಬ್ಬಳ್ಳಿ: ಇಲ್ಲಿನ ಕೆಎಸ್‌ಸಿಎ ಕ್ರೀಡಂಗಣದಲ್ಲಿ ನಡೆಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕರ್ಣಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು (KAR vs JK) ಕಾದಾಟ ನಡೆಸುತ್ತಿವೆ. ಎರಡು ದಿನಗಳ ಅಂತ್ಯಕ್ಕೆ ಪ್ರವಾಸಿ ತಂಡ ಮೇಲುಗೈ ಸಾಧಿಸಿದೆ. ಅಂದ ಹಾಗೆ ಪಂದ್ಯದ ಎರಡನೇ ದಿನ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್‌ ದೋಗ್ರಾ (Paras Dogra) ಅವರು ಅನುಚಿತ ವರ್ತನೆಯನ್ನು ತೋರಿದ್ದಾರೆ. ಅವರು ಬ್ಯಾಟಿಂಗ್‌ ವೇಳೆ ಕರ್ನಾಟಕ ಆಟಗಾರ ಕೆವಿ ಅನೀಶ್‌ ಅವರ ತಲೆಗೆ ಗುದ್ದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಈ ಘಟನೆ ಜಮ್ಮು ಮತ್ತು ಕಾಶ್ಮೀರ ತಂಡದ ಪ್ರಥಮ ಇನಿಂಗ್ಸ್‌ನ 101ನೇ ಓವರ್‌ನಲ್ಲಿ ನಡೆದಿದೆ. ಆರಂಭಿಕ ಆಘಾತದ ಬಳಿಕ ದೋಗ್ರಾ ಮತ್ತು ಕನ್ಹಯ್ಯ ವಾಧವನ್ ಜೊತೆಯಾಗಿ ಇನಿಂಗ್ಸ್‌ ಅನ್ನು ಸ್ಥಿರಗೊಳಿಸುತ್ತಿದ್ದರು. ಪ್ರಸಿಧ್‌ ಕೃಷ್ಣ ಎಸೆದ ಚೆಂಡನ್ನು ಎಡ್ಜ್ ಮಾಡಿ ಬೌಂಡರಿಗೆ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ, ಸಿಲ್ಲಿ ಪಾಯಿಂಟ್‌ನಲ್ಲಿ ನಿಂತಿದ್ದ ಕರ್ನಾಟಕದ ಬದಲಿ ಫೀಲ್ಡರ್ ಕೆ.ವಿ. ಅನೀಶ್ ಅವರೊಂದಿಗೆ ದೋಗ್ರಾ ಮಾತಿನ ಚಕಮಕಿ ನಡೆಸಿದರು.

IND vs ZIM: ಭಾರತ ತಂಡದಲ್ಲಿ ರಿಂಕು ಸಿಂಗ್‌ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಹೆಸರಿಸಿದ ರವಿಶಾಸ್ತ್ರಿ!

ಪರಾಸ್‌ ದೋಗ್ರಾ, ಸಿಲ್ಲಿ ಪಾಯಿಂಟ್‌ನಲ್ಲಿ ನಿಂತಿದ್ದ ಕೆವಿ ಅನೀಶ್‌ ಕಡೆಗೆ ಬಂದರು ಹಾಗೂ ತಮ್ಮ ಹೆಲ್ಮೆಟ್ ಧರಿಸಿರುವ ತಲೆಯಿಂದ ಕರ್ನಾಟಕ ಆಟಗಾರನ ತಲೆಗೆ ಗುದ್ದಿದರು. ಈ ಘಟನೆಯ ನಂತರ ಪಂದ್ಯದ ಅಂಪೈರ್‌ಗಳು ಮಧ್ಯೆ ಪ್ರವೇಶಿಸಿ ಎರಡೂ ತಂಡಗಳ ಆಟಗಾರರನ್ನು ತಣ್ಣಗಾಗಿಸಿದರು. ಪಕ್ಕದಲ್ಲಿಯೇ ನಿಂತಿದ್ದ ಕರ್ನಾಟಕ ಬ್ಯಾಟರ್ ಮಯಾಂಕ್ ಅಗರ್ವಾಲ್ ಇಬ್ಬರನ್ನೂ ವಿಭಜಿಸಲು ಮುಂದಾದರು, ಇದರ ಜೊತೆಗೆ ಅಂಪೈರ್‌ಗಳು ಕೂಡ ಪರಿಸ್ಥಿತಿಯನ್ನು ತ್ವರಿತವಾಗಿ ಶಾಂತಗೊಳಿಸಿದರು.



70 ರನ್‌ ಗಳಿಸಿದ ಪರಾಸ್‌ ದೋಗ್ರಾ

ಪಂದ್ಯದ ಮೊದಲನೇ ದಿನ ಪರಾಸ್‌ ದೋಗ್ರಾ ಅವರು 48 ಎಸೆತಗಳಲ್ಲಿ 9 ರನ್‌ ಗಳಿಸಿದ ಬಳಿಕ, ವೈಶಾಖ್‌ ವಿಜಯ್‌ಕುಮಾರ್‌ ಅವರ ಬೌನ್ಸರ್‌ನಲ್ಲಿ ಚೆಂಡಿನಿದಂದ ತಮ್ಮ ಗ್ಲೌಸ್‌ಗೆ ತಗುಲಿಸಿಕೊಂಡಿದ್ದರು. ಇದರ ಪರಿಣಾಮ ಅವರು ರಿಟೈರ್‌ ಹರ್ಟ್‌ಆಗಿದ್ದರು. ಆದರೆ, ಎರಡನೇ ದಿನ ಕ್ರೀಸ್‌ಗೆ ಬಂದ ಪರಾಸ್‌, ಅದ್ಭುತವಾಗಿ ಬ್ಯಾಟ್‌ ಮಾಡಿದರು. ಅವರು ಆಡಿದ 166 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 70 ರನ್‌ ಗಳಿಸಿದ ಬಳಿಕ ಶ್ರೇಯಸ್‌ ಗೋಪಾಲ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು.

ಪರಾಸ್‌ ದೋಗ್ರಾಗೆ ದಂಡ ವಿಧಿಸಿದ ಬಿಸಿಸಿಐ

ಕರ್ನಾಟಕ ಆಟಗಾರ ಕೆವಿ ಅನೀಶ್‌ಗೆ ತಲೆಯಿಂದ ಗುದ್ದಿ ಅನುಚಿತ ವರ್ತನೆ ತೋರಿದ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್‌ ದೋಗ್ರಾ ಅವರಿಗೆ ಪಂದ್ಯದ ಅಧಿಕಾರಿಗಳು ದಂಡವನ್ನು ವಿಧಿಸಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಈ ಬಗ್ಗೆ ಚರ್ಚೆ ನಡೆಸಿದ ಪಂದ್ಯದ ಅಧಿಕಾರಿಗಳು ಪರಾಸ್‌ಗೆ ಪಂದ್ಯದ ಸಂಭಾವನೆಯ ಶೇ 50 ರಷ್ಟು ದಂಡವನ್ನು ವಿಧಿಸಿದ್ದಾರೆ.

IND vs ZIM: ಜಿಂಬಾಬ್ವೆ ಎದುರು ಸಂಜು ಸ್ಯಾಮ್ಸನ್‌ ಆಡ್ತಾರಾ? ಬ್ಯಾಟಿಂಗ್‌ ಕೋಚ್‌ ಸಿತಾಂಶು ಕೊಟಕ್‌ ಸ್ಪಷ್ಟನೆ!

ಎರಡನೇ ದಿನವೂ ಮೇಲುಗೈ ಸಾಧಿಸಿದ ಜಮ್ಮು-ಕಾಶ್ಮೀರ

ಇನ್ನು ಮೊದಲನೇ ದಿನದಂತೆ ಎರಡನೇ ದಿನವೂ ಪ್ರವಾಸಿ ಜಮ್ಮ-ಕಾಶ್ಮೀರ ತಂಡ ಮೇಲುಗೈ ಸಾಧಿಸಿದೆ. ಪರಾಸ್‌ ದೋಗ್ರಾ (70 ರನ್‌), ಕನ್ನಯ್ಯ ವಾಧವಾನ್‌ (70 ರನ್‌) ಹಾಗೂ ಸಾಯಿಲ್‌ ಲೋಥ್ರಾ (57 ರನ್‌) ಅವರ ಅರ್ಧಶತಕಗಳ ಬಲದಿಂದ ಜಮ್ಮು ಮತ್ತು ಕಾಶ್ಮೀರ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 156 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 527 ರನ್‌ಗಳನ್ನು ಕಲೆ ಹಾಕಿದೆ ಹಾಗೂ ಎರಡನೇ ದಿನವೂ ಮೇಲುಗೈ ಸಾಧಿಸಿದೆ.