ಭಾರತೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಕನ್ನಡಿಗ ಕೆಸಿ ಕಾರಿಯಪ್ಪ!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಭಿನ್ನ ತಂಡಗಳ ಪರ ಆಡಿದ್ದ ಕರ್ನಾಟಕದ ಸ್ಪಿನ್ನರ್ ಕೆಸಿ ಕಾರಿಯಪ್ಪ ಅವರು ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸ್ಪಿನ್ನರ್ ನಿವೃತ್ತಿ ಘೋಷಿಸಿದ್ದಾರೆ.
ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೆಸಿ ಕಾರಿಯಪ್ಪ. -
ಬೆಂಗಳೂರು: ದೇಶಿ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2026) ಖ್ಯಾತ ಲೆಗ್ ಸ್ಪಿನ್ನರ್ ಕೆಸಿ ಕಾರಿಯಪ್ಪ (KC Cariappa Retirement)) ಅವರು ಸೋಮವಾ ಭಾರತೀಯ ಕ್ರಿಕೆಟ್‌ಗೆ (Indian Cricket) ಹಠಾತ್ ವಿದಾಯ ಹೇಳಿದ್ದಾರೆ. 31ರ ವಯಸ್ಸಿನ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ, ಬೀದಿಗಳಲ್ಲಿ ಆಟವಾಡುವುದರಿಂದ ಹಿಡಿದು ದೇಶಾದ್ಯಂತ ಕ್ರೀಡಾಂಗಣದ ದೀಪಗಳ ಅಡಿಯಲ್ಲಿ ಸ್ಪರ್ಧಿಸುವವರೆಗಿನ ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ.
"ಬೀದಿಗಳಲ್ಲಿ ಆಟವಾಡುವುದರಿಂದ ಹಿಡಿದು ದೀಪಗಳ ನಡುವೆ ಕ್ರೀಡಾಂಗಣದಲ್ಲಿ ಹೆಮ್ಮೆಯಿಂದ ಜೆರ್ಸಿ ಧರಿಸಿ, ನಾನು ಒಮ್ಮೆ ಮಾತ್ರ ಕಲ್ಪಿಸಿಕೊಂಡಿದ್ದ ಕನಸನ್ನು ಬದುಕಿದೆ." ಎಂದ ಬರೆದಿರುವ ಕಾರಿಯಪ್ಪ, "ಇಂದು, ನಾನು ಅಧಿಕೃತವಾಗಿ ಬಿಸಿಸಿಐ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತೇನೆ. ಈ ಪ್ರಯಾಣವು ನನಗೆ ಎಲ್ಲವನ್ನೂ ನೀಡಿತು. ನನ್ನನ್ನು ನಗುವಂತೆ ಮಾಡಿದ ವಿಜಯಗಳು, ನನ್ನನ್ನು ಮುರಿದ ಸೋಲುಗಳು ಮತ್ತು ನನ್ನನ್ನು ರೂಪಿಸಿದ ಪಾಠಗಳು," ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಬರೆದಿದ್ದಾರೆ.
IND vs NZ: ಮೊದಲನೇ ಒಟಿಐನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ನೋಡಿ ಕೈಲ್ ಜೇಮಿಸನ್ ಹೇಳಿದ್ದಿದು!
ಕೆಎಸ್‌ಸಿಎಗೆ ಕೃತಜ್ಞತೆ ಸಲ್ಲಿಸಿದ ಕಾರಿಯಪ್ಪ
ತಮ್ಮ ವಿದಾಯದ ಪತ್ರದಲ್ಲಿ ತಮ್ಮ ವೃತ್ತಿಜೀವನದಲ್ಲಿ ಬೆಂಬಲ ನೀಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಮತ್ತು ನಿರ್ಣಾಯಕ ಹಂತದಲ್ಲಿ ತಮ್ಮ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಮಿಜೋರಾಂ ಕ್ರಿಕೆಟ್ ಸಂಸ್ಥಗೆ ಕಾರಿಯಪ್ಪ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.
"ನನ್ನನ್ನು ರೂಪಿಸಿ, ಮಾರ್ಗದರ್ಶನ ನೀಡಿ ಮತ್ತು ಅತ್ಯಂತ ಮುಖ್ಯವಾದಾಗ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಕೆಎಸ್‌ಸಿಎಗೆ ನನ್ನ ಆಳವಾದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಜೊತೆಗೆ ಮಿಜೋರಾಂ ಕ್ರಿಕೆಟ್ ಅಸೋಸಿಯೇಷನ್‌ಗೆ, ನನ್ನನ್ನು ನಂಬಿ ಕುಟುಂಬದಂತೆ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು," ಎಂದು ಅವರು ಹೇಳಿದ್ದಾರೆ.
2015ರಲ್ಲಿ ಕೆಸಿ ಕಾರಿಯಪ್ಪ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಅವರನ್ನು ಅಂದು ಕೋಲ್ಕತಾ ಫ್ರಾಂಚೈಸಿ 2.4 ಕೋಟಿ ರು. ಗಳಿಗೆ ಖರೀದಿಸಿತ್ತು. ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಕಾರಿಯಪ್ಪ ಐಪಿಎಲ್ ಫ್ರಾಂಚೈಸಿಗಳ ಗಮನವನ್ನು ಸೆಳೆದಿದ್ದರು.
IND vs NZ: ವಾಷಿಂಗ್ಟನ್ ಸುಂದರ್ ಔಟ್, ಎರಡನೇ ಒಡಿಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದ ಕಾರಿಯಪ್ಪ, ದಿಗ್ಗಜ ಎಬಿ ಡಿ ವಿಲಿಯರ್ಸ್ ವಿಕೆಟ್ ಕಿತ್ತಿದ್ದರು. ನಂತರ 2017 ಮತ್ತು 2018ರ ಆವೃತ್ತಿಗಳಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ನಂತರ 2019ಕ್ಕೆ ಪುನಃ ಕೋಲ್ಕತಾ ನೈಟ್ ರೈಡರ್ಸ್‌ಗೆ ಮರಳಿದ್ದರು. 2021 ರಿಂದ 2023ರವರಗೆ ಅವರು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು.
ಕೆಸಿ ಕಾರಿಯಪ್ಪರ ಅಂಕಿಅಂಶಗಳು
11 ಐಪಿಎಲ್ ಪಂದ್ಯಗಳಲ್ಲಿ ಕಾರಿಯಪ್ಪ 9.66ರ ಎಕಾನಮಿ ರೇಟ್‌ನಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಅವರು 14 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, 23.20 ರ ಪ್ರಭಾವಶಾಲಿ ಸರಾಸರಿಯಲ್ಲಿ 75 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಇದರಲ್ಲಿ ಐದು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ ಮತ್ತು ಎರಡು ಬಾರಿ 10 ವಿಕೆಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 20 ಲಿಸ್ಟ್ ಎ ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 24.62 ರ ಸರಾಸರಿಯಲ್ಲಿ ಮತ್ತು 6.60 ರ ಎಕಾನಮಿಯಲ್ಲಿ 58 ವಿಕೆಟ್‌ಗಳೊಂದಿಗೆ ತಮ್ಮ ಟಿ20 ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಬ್ಯಾಟಿಂಗ್‌ನಿಂದ, ಅವರು ಎಲ್ಲಾ ಸ್ವರೂಪಗಳಲ್ಲಿ 1,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.