ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ವೈಭವ್‌ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನ ಕ್ರಿಸ್‌ ಗೇಲ್‌ ಎಂದ ಇರ್ಫಾನ್‌ ಪಠಾಣ್‌!

ಲಖನೌ ಸೂಪರ್‌ ಜಯಂಟ್ಸ್‌ ಎದುರು 38 ಎಸೆತಗಳಲ್ಲಿ 93 ರನ್‌ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಆರಂಭಿಕ ವೈಭವ್‌ ಸೂರ್ಯವಂಶಿ ಅವರನ್ನು ಭಾರತದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಹಾಗೂ ಸಂಜಯ್‌ ಬಾಂಗರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 15ರ ವಯಸ್ಸಿನ ವೈಭವ್‌ ಸೂರ್ಯವಂಶಿ, ಕ್ರಿಸ್‌ ಗೇಲ್‌ ರೀತಿ ಎದುರಾಳಿ ಬೌಲರ್‌ಗಳಿಗೆ ಭಯ ಹುಟ್ಟಿಸಿದ್ದಾರೆಂದು ಪಠಾಣ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈಭವ್‌ ಸೂರ್ಯವಂಶಿಯನ್ನು ಕ್ರಿಸ್‌ ಗೇಲ್‌ಗೆ ಹೋಲಿಸಿದ ಇರ್ಫಾನ್‌ ಪಠಾಣ್‌!

ವೈಭವ್‌ ಸೂರ್ಯವಂಶಿಯನ್ನು ಶ್ಲಾಘಿಸಿದ ಇರ್ಫಾನ್‌ ಪಠಾಣ್‌. -

Profile
Ramesh Kote May 20, 2026 5:14 PM

ಜೈಪುರ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಸಾಲಿನಲ್ಲಿ(IPL 2026) ಅಪಾಯಕಾರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕು ಹುಟ್ಟಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರನ್ನು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ (Irfan Pathan) ಹಾಗೂ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 15ರ ವಯಸ್ಸಿನ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಕೇವಲ 38 ಎಸೆತಗಳಲ್ಲಿ 93 ರನ್‌ ಸಿಡಿಸಿದ್ದರು ಹಾಗೂ ರಾಸ್ಥಾನ್‌ ರಾಯಲ್ಸ್‌ ತಂಡದ ಗೆಲುವಿಗೆ ನೆರವು ನೀಡಿದ್ದರು.

ಮಂಗಳವಾರ ಸವಾಯಿ ಮಾನ್ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ನೀಡಿದ್ದ 221 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ವೈಭವ್‌ ಸೂರ್ಯವಂಶಿ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಅವರು 244.74ರ ಸ್ಟ್ರೈಕ್‌ ರೇಟ್‌ನಲ್ಲಿ 10 ಭರ್ಜರಿ ಸಿಕ್ಸರ್‌ ಹಾಗೂ 7 ಬೌಂಡರಿಗಳನ್ನು ಸಿಡಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಈ ಸೀಸನ್‌ನಲ್ಲಿ 53 ಸಿಕ್ಸರ್‌ಗಳನ್ನು ಬಾರಿಸಿದ್ದು, ಆರ್‌ಸಿಬಿ ಮಾಜಿ ಆರಂಭಿಕ ಕ್ರಿಸ್‌ ಗೇಲ್‌ (59 ಸಿಕ್ಸರ್‌) ಅವರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.

IPL 2026: ಸಿಕ್ಸರ್‌ ಮೂಲಕ ಐಪಿಎಲ್‌ನಲ್ಲಿ ಭಾರತೀಯ ದಾಖಲೆ ನಿರ್ಮಿಸಿದ ಸೂರ್ಯವಂಶಿ

ಜಿಯೊ ಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಇರ್ಫಾನ್‌ ಪಠಾಣ್‌, ಇನಿಂಗ್ಸ್‌ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್‌ ಮಾಡಿದ ವೈಭವ್‌ ಸೂರ್ಯವಂಶಿ ಅವರು ತದನಂತರ ತಮ್ಮ ಬ್ಯಾಟಿಂಗ್‌ ವೇಗವನ್ನು ಎಷ್ಟು ಸರಾಗವಾಗಿ ಹೆಚ್ಚಿಸಿದರು ಎಂದು ಹೊಗಳಿದರು. ಆರಂಭಿಕ 10 ಎಸೆತಗಳಲ್ಲಿ ಅವರು 100ಕ್ಕಿಂತ ಕಡಿಮೆ ಸ್ಟ್ರೈಕ್‌ ರೇಟ್‌ ಅನ್ನು ಹೊಂದಿದ್ದರು. ಆದರೆ, ನಂತರ ಅವರು ಲಯವನ್ನು ಕಂಡುಕೊಂಡರು ಹಾಗೂ ಸ್ಪೋಟಕ ಬ್ಯಾಟಿಂಗ್‌ ಕೈ ಹಾಕಿದರು. ಅವರು ಒಮ್ಮೆ ಲಯವನ್ನು ಕಂಡುಕೊಂಡರೆ ಅವರನ್ನು ನಿಯಂತ್ರಿಸುವುದು ಬೌಲರ್‌ಗಳಿಗೆ ಕಠಿಣವಾಗಲಿದೆ ಎಂದು ಮಾಜಿ ಆಲ್‌ರೌಂಡರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"53 ಸಿಕ್ಸರ್‌ಗಳ ಬಳಿಕ ಅವರು, 2012ರಲ್ಲಿ ಕ್ರಿಸ್‌ ಗೇಲ್‌ ಸಿಡಿಸಿದ್ದ 59 ಸಿಕ್ಸರ್‌ಗಳ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ. ಬೌಲರ್‌ಗಳಾಗಿ ನಾವು ಕ್ರಿಸ್‌ ಗೇಲ್‌ ಅವರನ್ನು ಎದುರಿಸಲು ಭಯ ಆಗುತ್ತಿತ್ತು. ಇದೀಗ ವೈಭವ್‌ ಸೂರ್ಯವಂಶಿ ಅವರು ಕೂಡ ಅದೇ ಸನ್ನಿವೇಶವನ್ನು ಉಂಟು ಮಾಡಿದ್ದರು. ನಿಜಕ್ಕೂ ಕ್ರಿಸ್‌ ಗೇಲ್‌ ಅವರ ದಾಖಲೆ ಅಪಾಯದಲ್ಲಿದೆ," ಎಂದು ಇರ್ಫಾನ್‌ ಪಠಾಣ್‌ ತಿಳಿಸಿದ್ದಾರೆ.

'ಎ' ಸಂಭ್ರಮಾಚರಣೆಯ ಅರ್ಥವನ್ನು ಬಹಿರಂಗಪಡಿಸಿದ ವೈಭವ್ ಸೂರ್ಯವಂಶಿ

ವೈಭವ್‌ ಸೂರ್ಯವಂಶಿಗೆ ಬಾಂಗರ್‌ ಮೆಚ್ಚುಗೆ

ಭಾರತದ ಮಾಜಿ ಆಲ್‌ರೌಂಡರ್ ಹಾಗೂ ಕೋಚ್ ಸಂಜಯ್‌ ಬಾಂಗರ್‌ ಕೂಡ ವೈಭವ್‌ ಸೂರ್ಯವಂಶಿಗೆ ಬೆಂಬಲ ವ್ಯಕ್ತಪಡಿಸಿದರು. ಬಾಲಕನ ಪ್ರತಿಭೆಯ ಅಸಾಧಾರಣ ಸಾಮರ್ಥ್ಯವನ್ನು ಸಾಮಾನ್ಯ ಕ್ರಿಕೆಟ್ ಪದಗಳಲ್ಲಿ ವಿವರಿಸುವುದು ಕಷ್ಟ ಎಂದು ಅವರು ಒಪ್ಪಿಕೊಂಡರು. ಯುವ ಆಟಗಾರನ ಶಾಟ್‌ಮೇಕಿಂಗ್ ಸಾಮರ್ಥ್ಯವನ್ನು ಅವರು “ಅತ್ಯಂತ ಅಪರೂಪ ಹಾಗೂ ಅದ್ಭುತ” ಎಂದು ವರ್ಣಿಸಿದರು.

ಬಂಗಾರ್, ಆ ಇನ್ನಿಂಗ್ಸ್‌ನ್ನು ನಿಖರವಾದ ಮಾಸ್ಟರ್‌ಕ್ಲಾಸ್ ಎಂದು ಹೇಳಿ, ಅಭಿಮಾನಿಗಳಿಗೆ ಅದ್ಭುತ ಮನರಂಜನೆ ಒದಗಿಸಿತು ಎಂದು ಗುಣಗಾನ ಮಾಡಿದರು. ಭವಿಷ್ಯದಲ್ಲಿ ಈ ಯುವ ಪ್ರತಿಭೆ ಎಲ್ಲೆಲ್ಲಿ ತನ್ನ ಕೌಶಲ ಪ್ರದರ್ಶಿಸಿದರೂ, ಕ್ರೀಡಾಂಗಣಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯ ಅವರಿಗಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.