ʻರೋಹಿತ್ ದಾಖಲೆಯನ್ನು ಹೋಲಿಸಬೇಡಿʼ:ಗೌತಮ್ ಗಂಭೀರ್ ವಿರುದ್ಧ ಮೊಹಮ್ಮದ್ ಕೈಫ್ ಕಿಡಿ!
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಹೀನಾಯ ಸೋಲು ಅನುಭವಿಸಿದ ಬಳಿಕ ಹೆಡ್ ಕೋಚ್ ಗೌತಮ್ ಗಂಭೀರ್ ಅವರನ್ನು ಮಾಜಿ ಕ್ರಿಕೆಟಿಗ ಮೊಹ್ಮಮದ್ ಕೈಫ್ ಕಿಡಿಕಾರಿದ್ದಾರೆ. ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಅವರ ಪರಂಪರೆಯನ್ನು ಈಗಿನ ತಂಡ ಮುಂದುವರಿಸುತ್ತಿದೆ ಎಂದಿದ್ದಾರೆ.
ಗೌತಮ್ ಗಂಭೀರ್ ವಿರುದ್ಧ ಮೊಹಮ್ಮದ್ ಕೈಫ್ ಆಕ್ರೋಶ. -
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್-8 ಪಂದ್ಯದಲ್ಲಿ (IND vs SA) ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ 76 ರನ್‌ಗಳ ಭಾರೀ ಸೋಲು ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಆಘಾತಕಾರಿ ಫಲಿತಾಂಶದ ಬಳಿಕ ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್ (Mohammad Kaif), ಗೌತಮ್ ಗಂಭೀರ್ ಮಾರ್ಗದರ್ಶನದ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂಕಿಅಂಶಗಳತ್ತ ಅವರು, ಎರಡು ತಂಡಗಳ ನಡುವಿನ ಸ್ಪಷ್ಟ ಅಂತರವನ್ನು ಬಯಲಿಗೆಳೆದರು. ದಕ್ಷಿಣ ಆಫ್ರಿಕಾ ಮೊದಲ ಆರು ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 41 ರನ್ ಗಳಿಸಿತ್ತು. ಆದರೆ, 7ರಿಂದ 16ನೇ ಓವರ್‌ಗಳ ನಡುವೆ ಕೇವಲ ಎರಡು ವಿಕೆಟ್ ಕಳೆದುಕೊಂಡು 111 ರನ್‌ಗಳನ್ನು ಸಿಡಿಸಿತ್ತು. ಮಧ್ಯಮ ಓವರ್‌ಗಳ ಆಕ್ರಮಣಕಾರಿ ಆಟ ಪಂದ್ಯದ ದಿಕ್ಕನ್ನು ಬದಲಿಸಿತು ಎಂದು ಕೈಫ್ ಅಭಿಪ್ರಾಯಪಟ್ಟರು.
ಇನ್ನೊಂದೆಡೆ, ಹಾಲಿ ಚಾಂಪಿಯನ್ಸ್ ಭಾರತ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಬ್ಯಾಟಿಂಗ್ ವೈಫಲ್ಯದಿಂದಾಗಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ 19 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಭಾರೀ ಸೋಲಿನೊಂದಿಗೆ ಭಾರತ ತಂಡದ 2026ರ ಟಿ20 ವಿಶ್ವಕಪ್ ಸೆಮಿಫೈನಲ್ ಹಾದಿ ಸ್ವಲ್ಪ ಕಠಿಣವಾಗಿದೆ. ಜಿಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾಗಿದೆ.
IND vs SA: ಅಕ್ಷರ್ ಪಟೇಲ್‌ರನ್ನು ಹೇಗೆ ಮರೆತಿದ್ದೀರಿ?-ಭಾರತ ತಂಡವನ್ನು ಟೀಕಿಸಿದ ಆರ್ ಅಶ್ವಿನ್!
ಗಂಭೀರ್-ಸೂರ್ಯ ನಾಯಕತ್ವವನ್ನು ಪ್ರಶ್ನಿಸಿದ ಕೈಫ್
ಭಾರತದ ಮಾಜಿ ಬ್ಯಾಟರ್ ಪ್ರಸ್ತುತ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಅನ್ನು ಹಳೆಯ ಸಾಧನೆಗಳೊಂದಿಗೆ ಹೋಲಿಸುವುದನ್ನು ಪ್ರಶ್ನಿಸಿದರು. 2024ರ ಟಿ20 ವಿಶ್ವಕಪ್ ಜಯವು ನಾಯಕ ರೋಹಿತ್ ಶರ್ಮಾ ಮತ್ತು ಅಂದಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನೇತೃತ್ವದಲ್ಲಿ ಸಾಧ್ಯವಾಗಿತ್ತು ಎಂಬುದನ್ನು ಅವರು ನೆನಪಿಸಿದರು. ಪ್ರಸ್ತುತ ಕೋಚ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ವ್ಯವಸ್ಥೆ ಹಳೆಯ ದಾಖಲೆಗಳ ಹಿಂದೆ ಅಡಗಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದರು.
🚨 Mohammad Kaif questions the captain & team management.🚨
— Mithilesh (@WriterMK45) February 22, 2026
- Axar was MOTM in the SF and played a key knock in the Final.
- How many overs did Sundar bowl? What did he do with the bat? #T20WorldCup #INDvsSA pic.twitter.com/9M9frsWNjl
ಎಬಿಪಿ ನ್ಯೂಸ್‌ನಲ್ಲಿ ಮಾತನಾಡಿದ ಕೈಫ್, “ಇದು ನಮ್ಮ ವಿಶ್ವಕಪ್ ಟೂರ್ನಿಯ ಮೊದಲ ಸೋಲು ಎಂದು ಹೇಳುವುದು ಬೇರೆ ವಿಷಯ. ಆದರೆ ನಾನು ಹೇಳುವುದೇನೆಂದರೆ, ಆ ದಾಖಲೆ ಬರೆದಾಗ ಬೇರೆ ಟೀಮ್ ಮ್ಯಾನೇಜ್‌ಮೆಂಟ್ ಇತ್ತು. ಅಲ್ಲಿ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಇದ್ದರು. ಸೂರ್ಯಕುಮಾರ್ ಯಾದವ್ ಅವರಿಗೆ ಆ ವಿಶ್ವಕಪ್ ಟೂರ್ನಿಯಲ್ಲಿ ಯಾವುದೇ ಪಾತ್ರ ಇರಲಿಲ್ಲ—ಇದನ್ನು ಗಮನದಲ್ಲಿಡಿ. ನೀವು ಹೇಳುತ್ತಿರುವ ದಾಖಲೆ ಯಾರೋ ಬೇರೆ ಬರೆದ್ದದ್ದು,” ಎಂದು ಹೇಳಿದ್ದಾರೆ.
ಅಕ್ಷರ್ ಪಟೇಲ್ ಬಗ್ಗೆ ಪ್ರತಿಕ್ರಿಯಿಸಿದ ಕೈಫ್
ಹಳೆಯ ತಂಡದ ಪರಂಪರೆಯನ್ನು ಮುಂದುವರಿಸಲು ಪ್ರಸ್ತುತ ಟೀಮ್ ಮ್ಯಾನೇಜ್‌ಮೆಂಟ್‌ಗೆ ಅವಕಾಶ ಸಿಕ್ಕಿದ್ದರೂ, ಮ್ಯಾಚ್ ವಿನ್ನರ್ ಅಕ್ಷರ್ ಪಟೇಲ್ ಅವರನ್ನು ಕೈಬಿಡುವಂತಹ ತಪ್ಪುಗಳನ್ನು ಮಾಡುತ್ತಿದೆ ಎಂದು ಕೈಫ್ ಟೀಕಿಸಿದರು.
WI vs ZIM: 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಶಿಮ್ರಾನ್ ಹೆಟ್ಮಾಯೆರ್!
“ನೀವು ಹೇಳುತ್ತಿರುವ ತಂಡದ ಸಂಯೋಜನೆ ಸ್ಥಿರವಾಗಿಲ್ಲ; ಅದು ಮೇಲೆ-ಕೆಳಗೆ ಆಗುತ್ತಿದೆ. ಹಾಗಿದ್ದರೆ, ರೋಹಿತ್-ದ್ರಾವಿಡ್ ಅವರ ಸಾಧನೆಗಳನ್ನು ಈ ತಂಡಕ್ಕೆ ಏಕೆ ಕೊಂಡಿಹಾಕುತ್ತೀರಿ? ನಾವು ವಿಶ್ವಕಪ್ ಗೆದ್ದದ್ದು ದ್ರಾವಿಡ್ ಮತ್ತು ರೋಹಿತ್ ಅವರ ನೇತೃತ್ವದಲ್ಲಿ, ಗಂಭೀರ್ ಅಥವಾ ಸೂರ್ಯ ಅವರಿಂದ ಅಲ್ಲ. ಇವರು 2024ರಲ್ಲಿ ಇರಲಿಲ್ಲ. ಆದ್ದರಿಂದ ಈ ಪರಿಸ್ಥಿತಿಗಳನ್ನು ಅವರ ಸಾಧನೆಗಳೊಂದಿಗೆ ಕೊಂಡಿಹಾಕಬೇಡಿ,” ಎಂದು ಅವರು ಹೇಳಿದ್ದಾರೆ.