IPL 2027: ಯಾರಿಂದಲೂ ಮುರಿಯಲಾಗದ ಎಂಎಸ್ ಧೋನಿಯ ಸಿಎಸ್‌ಕೆ ನಾಯಕತ್ವದ ದಾಖಲೆಗಳು!
ಮಹೇಂದ್ರ ಸಿಂಗ್ ಧೋನಿ 2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸಿಎಸ್‌ಕೆ ನಾಯಕನಾಗಿ ಐದು ಐಪಿಎಲ್ ಟ್ರೋಫಿ ಗೆದ್ದಿರುವ ಧೋನಿ, 10 ಬಾರಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ. ಇದೀಗ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಎಂಎಸ್ ಧೋನಿಯ ಸಿಎಸ್‌ಕೆ ನಾಯಕತ್ವದ ಐಪಿಎಲ್ ದಾಖಲೆಗಳು. -
ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಗೂ ಮುನ್ನ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ತಂಡದ ಮೆಂಟರ್ ಆಗಿ ನೇಮಕ ಮಾಡುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಐಪಿಎಲ್ ಟೂರ್ನಿಯಲ್ಲಿ ಆಟಗಾರನಾಗಿ ತಮ್ಮ ಪಯಣವನ್ನು ಅಧಿಕೃತವಾಗಿ ಅಂತ್ಯಗೊಳಿಸಿರುವ ಧೋನಿ, ಇದೀಗ ಡಗೌಟ್‌ನಲ್ಲಿ ಕುಳಿತು ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಸ್‌ಕೆ ನಾಯಕನಾಗಿ ಅವರು ನಿರ್ಮಿಸಿರುವ ಅದ್ಭುತ ದಾಖಲೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಆವೃತ್ತಿಯಿಂದಲೇ ಚೆನ್ನೈ ತಂಡದ ನಾಯಕತ್ವ ವಹಿಸಿಕೊಂಡ ಧೋನಿ, ತಂಡವನ್ನು ಲೀಗ್‌ನ ಅತ್ಯಂತ ಯಶಸ್ವಿ ಹಾಗೂ ಸ್ಥಿರ ತಂಡವನ್ನಾಗಿ ರೂಪಿಸಿದರು. ಸಿಎಸ್‌ಕೆ ಪರ ಐಪಿಎಲ್ ಟೂರ್ನಿಯಲ್ಲಿ 221 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಅವರು, ಚಾಂಪಿಯನ್ಸ್ ಲೀಗ್ ಟಿ20 ಸೇರಿದಂತೆ ಒಟ್ಟಾರೆ 244 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ ಚೆನ್ನೈ ತಂಡ, 2010, 2011, 2018, 2021 ಮತ್ತು 2023ರಲ್ಲಿ ಒಟ್ಟು ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಜೊತೆಗೆ 2010 ಮತ್ತು 2014ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ.
IPL 2027: ʻಎಂಎಸ್ ಧೋನಿ ಆಡುವುದಿಲ್ಲವಾದರೆ ರಿಲೀಸ್ ಮಾಡಿʼ-ಸಿಎಸ್‌ಕೆಗೆ ಆರ್ ಅಶ್ವಿನ್ ಸಲಹೆ!
ಸಿಎಸ್‌ಕೆ ನಾಯಕನಾಗಿ ಧೋನಿಯ ದಾಖಲೆ
- ನಾಯಕನಾಗಿ ಒಟ್ಟು ಪಂದ್ಯಗಳು: 244 (ಫ್ರಾಂಚೈಸಿಯ ಒಟ್ಟಾರೆ ಟಿ20 ದಾಖಲೆ)
- ಗೆಲುವು: 145
- ಸೋಲು: 96
- ಟೈ: 1
- ಫಲಿತಾಂಶವಿಲ್ಲದ ಪಂದ್ಯಗಳು: 2
- ಗೆಲುವಿನ ಪ್ರಮಾಣ: ಶೇ.59.42
- ಐಪಿಎಲ್ ಪ್ರಶಸ್ತಿಗಳು: 5
- ಐಪಿಎಲ್ ಫೈನಲ್ ಪ್ರವೇಶ: 10 ಬಾರಿ
- ಪ್ಲೇಆಫ್ಸ್ ಪ್ರವೇಶ: 12 ಆವೃತ್ತಿಗಳು
- ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳು: 2
OFFICIAL ANNOUNCEMENT 🦁💛 A once-in-a-lifetime player. A new role. A bond that lasts forever 💛 Mahendra Singh Dhoni takes charge as the Team Mentor of Chennai Super Kings! Through countless victories, challenging times, and memories that will stay in our hearts forever, MS has been at the heart of our journey from the very beginning. From leading us to glory to guiding the next generation of Super Kings, Thala will always be a part of our identity. And Chennai will always be his home. Read more : https://t.co/YKsoHYE51A #WhistlePodu
— Chennai Super Kings (@ChennaiIPL) November 17, 2026
ನಾಯಕನಾಗಿ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಎಂಎಸ್ ಧೋನಿ
ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಅತಿ ಹೆಚ್ಚು ಐದು ಟ್ರೋಫಿಗಳನ್ನು ಗೆದ್ದ ದಾಖಲೆ ಧೋನಿ ಹೆಸರಿನಲ್ಲಿದೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಐದು ಟ್ರೋಫಿಗಳನ್ನು ಗೆದ್ದಿದ್ದಾರೆ. ಅಲ್ಲದೆ, 2010 ಮತ್ತು 2011ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಐಪಿಎಲ್ ಟ್ರೋಫಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ.
ಪ್ಲೇಆಫ್‌ನಲ್ಲಿ ಅದ್ಭುತ ಸ್ಥಿರತೆ
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 12 ವಿಭಿನ್ನ ಆವೃತ್ತಿಗಳಲ್ಲಿ ಪ್ಲೇಆಫ್ಸ್ ಪ್ರವೇಶಿಸಿದೆ. ಅಲ್ಲದೆ, ಬರೋಬ್ಬರಿ 10 ಬಾರಿ ಫೈನಲ್ ತಲುಪಿದೆ. ಐಪಿಎಲ್ ಇತಿಹಾಸದಲ್ಲಿ ಇಂತಹ ಸುದೀರ್ಘ ಯಶಸ್ಸು ಬೇರೆ ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ.
ಐಪಿಎಲ್‌ನಿಂದ ನಿವೃತ್ತರಾದ ಎಂ.ಎಸ್. ಧೋನಿ; ಸಿಎಸ್‌ಕೆ ತಂಡಕ್ಕೆ ಮೆಂಟರ್ ಆಗಿ ಹೊಸ ಜವಾಬ್ದಾರಿ
ಹೊಸ ಪೀಳಿಗೆಗೆ ಮಾರ್ಗದರ್ಶನ
2008ರಿಂದ 2025ರವರೆಗೆ ಬಹುತೇಕ ಅವಧಿಯಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ ಧೋನಿ, 2022ರಲ್ಲಿ ರವೀಂದ್ರ ಜಡೇಜಾ ಅವರಿಗೆ ನಾಯಕತ್ವ ಹಸ್ತಾಂತರಿಸಿದ್ದರು. ಬಳಿಕ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ನಂತರ ಋತುರಾಜ್ ಗಾಯಕ್ವಾಡ್ ಅವರಿಗೆ ಪೂರ್ಣ ಪ್ರಮಾಣದ ನಾಯಕತ್ವದ ಜವಾಬ್ದಾರಿ ನೀಡಲಾಯಿತು. ಇದೀಗ ಮೆಂಟರ್ ಆಗಿ ಹೊಸ ಜವಾಬ್ದಾರಿ ಸ್ವೀಕರಿಸಿರುವ ಧೋನಿ, ಮುಂದಿನ ಪೀಳಿಗೆಯ ಆಟಗಾರರನ್ನು ರೂಪಿಸುವತ್ತ ಗಮನ ಹರಿಸಲಿದ್ದಾರೆ.