ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಮುಂಬೈ ಇಂಡಿಯನ್ಸ್‌ಗೆ ಗಾಯದ ಸಮಸ್ಯೆ, ಕ್ವಿಂಟನ್‌ ಡಿ ಕಾಕ್‌, ರಾಜ್‌ ಬಾವಾ ಔಟ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಅಭಿಯಾನ ಮುಗಿಯಲು ಇನ್ನು ಕೇವಲ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಇವೆ. ಆದರೆ, ಇದೀಗ ಐದು ಬಾರಿ ಚಾಂಪಿಯನ್ಸ್‌ ಗಾಯದ ಸಮಸ್ಯೆ ಎದುರಾಗಿದೆ. ಕ್ವಿಂಟನ್‌ ಡಿ ಕಾಕ್‌ ಹಾಗೂ ರಾಜ್‌ ಬಾವಾ ಅವರು ಗಾಯಕ್ಕೆ ತುತ್ತಾಗಿದ್ದು, ಟೂರ್ನಿಯ ಇನ್ನುಳಿದ ಭಾಗದಿಂದ ಹೊರಬಿದ್ದಿದ್ದಾರೆ.

2026ರ ಐಪಿಎಲ್‌ ಟೂರ್ನಿಯಿಂದ ಕ್ವಿಂಟನ್‌ ಡಿ ಕಾಕ್‌, ರಾಜ್‌ ಬಾವಾ ಔಟ್‌!

2026ರ ಐಪಿಎಲ್‌ನಿಂದ ರಾಜ್‌ ಬಾವಾ, ಡಿ ಕಾಕ್‌ ಔಟ್‌. -

Profile
Ramesh Kote May 19, 2026 4:25 PM

ನವದೆಹಲಿ: ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಯಣ ಮತ್ತಷ್ಟು ಕಷ್ಟಕರವಾಗುತ್ತಿದೆ. ಈಗಾಗಲೇ ಪ್ಲೇಆಫ್ಸ್‌ ರೇಸ್‌ನಿಂದ ಅದಿಕೃತವಾಗಿ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್‌ಗೆ, ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಿಗೂ ಮುನ್ನ ಮತ್ತಿಬ್ಬರು ಆಟಗಾರರು ಗಾಯದ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್-ಬ್ಯಾಟರ್ ಕ್ವಿಂಟನ್‌ ಡಿ ಕಾಕ್‌ (Quinton De Kock) ಹಾಗೂ ಯುವ ಆಲ್‌ರೌಂಡರ್ ರಾಜ್‌ ಅಂಗದ್‌ ಬಾವಾ (Raj Angad Bawa) ಟೂರ್ನಿಯ ಇನ್ನುಳಿದ ಭಾಗದಿಂದ ಹೊರಬಿದ್ದಿದ್ದಾರೆ. ಆ ಮೂಲಕ ಟೂರ್ನಿಯ ಕೊನೆಯ ಭಾಗದಲ್ಲಿ ಮುಂಬೈಗೆ ಭಾರಿ ಹಿನ್ನಡೆಯಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಡಿ ಕಾಕ್ ಅವರ ಎಡಗೈ ಮಣಿಕಟ್ಟಿನಲ್ಲಿ ಗಾಯ ಉಂಟಾಗಿತ್ತು. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ರಾಜ್ ಅಂಗದ್ ಬಾವಾ ಅವರ ಬಲಗೈ ಬೆರಳಿಗೆ ಗಾಯವಾಗಿತ್ತು. ಗಾಯದ ಹಿನ್ನೆಲೆ ಇಬ್ಬರೂ ಆಟಗಾರರು ತಮ್ಮ ತಮ್ಮ ಮನೆಗಳಿಗೆ ಮರಳಿದ್ದು, ಚಿಕಿತ್ಸೆ ಮತ್ತು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ.

2027ರ ಐಪಿಎಲ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ಆಡ್ತಾರಾ? ಬಿಗ್‌ ಅಪ್‌ಡೇಟ್‌ ಕೊಟ್ಟ ಸ್ಟೀಫನ್‌ ಫ್ಲೆಮಿಂಗ್‌!

ಅಧಿಕೃತ ಪ್ರಕಟಣೆಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಈ ಗಾಯಗಳ ಬಗ್ಗೆ ದೃಢಪಡಿಸಿದೆ. ಜೊತೆಗೆ, ಐಪಿಎಲ್ ನಿಯಮಾವಳಿಗಳ ಪ್ರಕಾರ ಗಾಯಗೊಂಡ ಆಟಗಾರರ ಬದಲಿಗೆ ಹೊಸ ಆಟಗಾರರ ಘೋಷಣೆ ಶೀಘ್ರದಲ್ಲೇ ಮಾಡಲಾಗುವುದು ಎಂದು ತಿಳಿಸಿದೆ.

ಕ್ವಿಂಟನ್‌ ಡಿ ಕಾಕ್‌ ಅವರ ಗೈರುಹಾಜರಿ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಹೊಡೆತವಾಗಿದೆ. ವಿಶೇಷವಾಗಿ ಟಾಪ್ ಆರ್ಡರ್‌ನಲ್ಲಿ ಅವರ ಅನುಭವ ಮತ್ತು ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯ ತಂಡಕ್ಕೆ ಮಹತ್ವದ್ದಾಗಿತ್ತು. ಡಿ ಕಾಕ್ ಈ ಸೀಸನ್‌ನಲ್ಲಿ ಕೊನೆಯದಾಗಿ ಏಪ್ರಿಲ್ 23ರಂದು ತಂಡದ ಪರ ಕಣಕ್ಕಿಳಿದಿದ್ದರು. ಅವರು ಮೂರು ಇನಿಂಗ್ಸ್‌ಗಳಲ್ಲಿ ಒಟ್ಟು 132 ರನ್ ಗಳಿಸಿದ್ದು, ಅದರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಅಜೇಯ 112 ರನ್‌ಗಳ ಶತಕವೂ ಸೇರಿದೆ.



ಇನ್ನೊಂದೆಡೆ ರಾಜ್‌ ಬಾವಾ ಅವರಿಗೆ ಈ ಸೀಸನ್‌ನಲ್ಲಿ ಹೆಚ್ಚು ಅವಕಾಶಗಳು ಸಿಗದಿದ್ದರೂ, ತಂಡದ ಪ್ರಮುಖ ಬ್ಯಾಕಪ್ ಆಟಗಾರರಲ್ಲಿ ಒಬ್ಬರಾಗಿದ್ದರು. 23 ವರ್ಷದ ಈ ಯುವ ಆಲ್‌ರೌಂಡರ್, ಭಾರತ ಅಂಡರ್-19 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದು, ಈ ಬಾರಿ ಮೂರು ಪಂದ್ಯಗಳಲ್ಲಿ ಆಡಿದ್ದಾರೆ. ಕಳೆದ ಸೀಸನ್‌ನಲ್ಲೂ ಅವರು ಅಷ್ಟೇ ಪಂದ್ಯಗಳಲ್ಲಿ ಅವಕಾಶ ಪಡೆದಿದ್ದರು.

ಫಿಟ್ನೆಸ್ ಕ್ಲಿಯರೆನ್ಸ್ ಆಧಾರದಲ್ಲಿ ಆಫ್ಘಾನ್‌ ಏಕದಿನ ಸರಣಿಗೆ ರೋಹಿತ್, ಪಾಂಡ್ಯ ಆಯ್ಕೆ

ಐದು ಬಾರಿ ಚಾಂಪಿಯನ್‌ ತಂಡಕ್ಕೆ 2026ರ ಐಪಿಎಲ್ ಸಂಪೂರ್ಣ ನಿರಾಶಾದಾಯಕವಾಗಿ ಪರಿಣಮಿಸಿದೆ. ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್, 12 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳನ್ನು ಮಾತ್ರ ದಾಖಲಿಸಿದ್ದು, -0.504 ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಪ್ಲೇಆಫ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ಮುಂಬೈಗೆ ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳು ಮಾತ್ರ ಬಾಕಿಯಿವೆ. ಮೇ 20ರಂದು ಕೋಲ್ಕತ್ತಾದಲ್ಲಿ ಕೆಕೆಆರ್‌ ವಿರುದ್ಧ ಹಾಗೂ ಮೇ 24ರಂದು ಮುಂಬೈನಲ್ಲಿ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಎಂಐ ಕಣಕ್ಕಿಳಿಯಲಿದೆ.

ಇದಕ್ಕಿಂತಲೂ ದೊಡ್ಡ ಹಿನ್ನಡೆ ಎಂದರೆ, ನಾಯಕ ಹಾರ್ದಿಕ್‌ ಪಾಂಡ್ಯ ಕಳೆದ ಮೂರು ಪಂದ್ಯಗಳಿಂದ ಬೆನ್ನುನೋವಿನ ಸಮಸ್ಯೆಯಿಂದಾಗಿ ತಂಡದಿಂದ ದೂರ ಉಳಿದಿದ್ದಾರೆ. ಸೀಸನ್ ಆರಂಭದಲ್ಲಿ ಕೆಕೆಆರ್ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಅಭಿಯಾನ ಆರಂಭಿಸಿದ್ದ ಮುಂಬೈ, ಬಳಿಕ ನಿರಂತರ ಸ್ಥಿರ ಪ್ರದರ್ಶನದ ಕೊರತೆಯಿಂದ ಸೋಲುಗಳಿಂದ ಹಿನ್ನಡೆಯನ್ನು ಅನುಭವಿಸಿತು. ತಂಡಕ್ಕೆ ಈ ಸೀಸನ್ ಪೂರ್ತಿ ಲಯ ಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ.