ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ʼಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸಮಸ್ಯೆ ಇರುವುದ ಖಚಿತʼ- ಕೆ ಶ್ರೀಕಾಂತ್‌ ಅಚ್ಚರಿ ಹೇಳಿಕೆ!

ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆಲುವು ಪಡೆದ ಬಳಿಕ ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್‌ ಆಟಗಾರರು ಡಗ್‌ಔಟ್‌ನಲ್ಲಿ ತುಂಬಾ ಖುಷಿಯಾಗಿ ಕಾಣುತ್ತಿದ್ದರು ಎಂದು ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಹೇಳಿದ್ದಾರೆ. ಹಾರ್ದಿಕ್‌ ಪಾಂಡ್ಯ ಹಾಗೂ ಸೂರ್ಯಕುಮಾರ್‌ ಯಾದವ್‌ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಪಂಜಾಬ್‌ ಎದುರು 6 ವಿಕೆಟ್‌ಗಳ ಗೆಲುವು ಪಡೆಯಿತು.

ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸಮಸ್ಯೆ ಇದೆ: ಕೆ ಶ್ರೀಕಾಂತ್‌

ಮುಂಬೈ ಇಂಡಿಯನ್ಸ್‌ ತಂಡದ ಬಗ್ಗೆ ಕೆ ಶ್ರೀಕಾಂತ್‌ ಅಚ್ಚರಿ ಹೇಳಿಕೆ. -

Profile
Ramesh Kote May 15, 2026 4:52 PM

ನವದೆಹಲಿ: ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ಆಟಗಾರರು ತುಂಬಾ ಖುಷಿಯಾಗಿದ್ದಾರೆಂದು ಭಾರತ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್‌ (K Srikkanth) ಹೇಳಿದ್ದಾರೆ. ಆ ಮೂಲಕ ಹಾರ್ದಿಕ್‌ ನಾಯಕತ್ವದಲ್ಲಿ ಆಟಗಾರರು ಅಸಮಾಧಾನವನ್ನು ಹೊಂದಿದ್ದಾರೆಂದು ಅವರು ಪರೋಕ್ಷವಾಗಿ ದೂರಿದ್ದಾರೆ. ಅಂದ ಹಾಗೆ ಈ ಪ೦ದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ 6 ವಿಕೆಟ್‌ಗಳಿಂದ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿತು. ಹಾರ್ದಿಕ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ ಅನುಪಸ್ಥಿತಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸಿದ್ದರು.

ಮೇ 14 ರಂದು ಧರ್ಮಶಾಲಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 200 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌, ತಿಲಕ್‌ ವರ್ಮಾ ಅವರ ಅರ್ಧಶತಕದ ಬಲದಿಂದ ಕೊನೆಯ ಓವರ್‌ನಲ್ಲಿ ಗೆದ್ದು ಬೀಗಿತ್ತು. ಈಗಾಗಲೇ ಪ್ಲೇಆಫ್ಸ್‌ ಅವಕಾಶವನ್ನು ಕಳೆದುಕೊಂಡಿರುವ ಕಾರಣ, ಈ ಪಂದ್ಯದ ಫಲಿತಾಂಶ ಮುಂಬೈ ಇಂಡಿಯನ್ಸ್‌ಗೆ ಯಾವುದೇ ಲಾಭವಾಗಿಲ್ಲ. ಆದರೆ, ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಪಂಜಾಬ್‌ ತಂಡದ ಪ್ಲೇಆಫ್ಸ್‌ಗೆ ಹಾದಿ ಕಠಿಣವಾಗಿದೆ.

IPL 2026: ಜನಾಂಗೀಯ ನಿಂದನೆ ಮಾಡಿದ ಅರ್ಷದೀಪ್‌ ಸಿಂಗ್‌ಗೆ ಒಂದು ವರ್ಷ ಬ್ಯಾನ್‌ ಮಾಡಿ: ಶಿವರಾಮಕೃಷ್ಣನ್‌ ಆಗ್ರಹ!

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಕೆ ಶ್ರೀಕಾಂತ್‌, ಜಸ್‌ಪ್ರೀತ್‌ ಬುಮ್ರಾಗೆ ಮುಂಬೈ ಇಂಡಿಯನ್ಸ್‌ ನಾಯಕತ್ವ ನೀಡಿರುವುದು ಉತ್ತಮ ಬೆಳವಣಿಗೆ ಹಾಗೂ ಅವರು ನಾಯಕನಾಗಿ ಮೈದಾನದಲ್ಲಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆಂದು ತಿಳಿಸಿದ್ದಾರೆ. "ಜಸ್‌ಪ್ರೀತ್‌ ಬುಮ್ರಾಗೆ ನಾಯಕತ್ವ ನೀಡಿರುವುದು ಉತ್ತಮ ಕರೆಯಾಗಿದೆ. ನಿಜಕ್ಕೂ ಇದು ಉತ್ತಮ ನಿರ್ಧಾರವಾಗಿದೆ," ಎಂದು ಅವರು ಹೇಳಿದ್ದಾರೆ.

ಹಾರ್ದಿಕ್‌ ಅನುಪಸ್ಥಿತಿಯಲ್ಲಿ ಆಟಗಾರರು ತುಂಬಾ ಖುಷಿಯಾಗಿದ್ದಾರೆಂದು ಹೇಳುವ ಮೂಲಕ ಅವರು, ಆಲ್‌ರೌಂಡರ್‌ ಅನುಪಸ್ಥಿತಿಯಲ್ಲಿ ತಂಡದ ವಾತಾವರಣ ಅತ್ಯುತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಖಚಿತವಾಗಿಯೂ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಒಂದು ಸಮಸ್ಯೆ ಇದೆ. ಖಂಡಿತವಾಗಿಯೂ ತಂಡದ ಮನಸ್ಥಿತಿ ಹೆಚ್ಚು ಹಗುರವಾಗಿತ್ತು. ತಂಡವು ಒಟ್ಟಾರೆಯಾಗಿ ಇದ್ದಕ್ಕಿದ್ದಂತೆ ಹೆಚ್ಚು ಒಗ್ಗಟ್ಟಿನಿಂದ ಕೂಡಿರುವಂತೆ ಕಂಡಿದೆ," ಎಂದು ಕೆ ಶ್ರೀಕಾಂತ್‌ ತಿಳಿಸಿದ್ದಾರೆ.

IPL 2026: ‌ಮುಂಬೈ ಎದುರು ಪಂಜಾಬ್‌ ಕಿಂಗ್ಸ್‌ ಸೋಲಿಗೆ ಈ ಆಟಗಾರನೇ ಕಾರಣ ಎಂದ ಶ್ರೇಯಸ್‌ ಅಯ್ಯರ್‌!

"ಸೂರ್ಯಕುಮಾರ್‌ ಯಾದವ್‌ ಅವರು ಈ ಪಂದ್ಯದಲ್ಲಿ ಆಡಿಲ್ಲ. ವೈಯಕ್ತಿಕ ಕಾರಣಗಳಿಂದ ಅವರು ಈ ಪಂದ್ಯವನ್ನು ಆಡಿಲ್ಲ ಹಾಗೂ ಅವರು ಪಂದ್ಯವನ್ನು ಆಡಿಲ್ಲ. ಆದರೆ ಏನೇ ಆಗಿರಲಿ, ನೀವು ಹೇಳಿದಂತೆ ಈ ಯುವ ತಂಡ ಏಕಾಏಕಿ ಹೊಸ ಶಕ್ತಿಯನ್ನು ಕಂಡುಕೊಂಡಿದೆ. ದೀಪಕ್‌ ಚಹರ್‌ ಉತ್ತಮ ಬೌಲ್‌ ಮಾಡುತ್ತಿದ್ದಾರೆ. ರಾಜ್‌ ಬಾವಾ ಕೂಡ ಸಮರ್ಪಕವಾಗಿ ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ತಿಲಕ್‌ ವರ್ಮಾ ಅದ್ಭುತ ಪ್ರದರ್ಶನ ನೀಡಿದರು. ರಯಾನ್‌ ರಿಕೆಲ್ಟನ್‌ ಆರಂಭದಲ್ಲೇ ಆಕ್ರಮಣಕಾರಿ ಶಾಟ್‌ಗಳಿಂದ ಮೇಲುಗೈ ಸಾಧಿಸಿದರು,” ಎಂದು ಚೆನ್ನೈ ಮೂಲದ ಆಟಗಾರ ಹೇಳಿದ್ದಾರೆ.

“ಒಟ್ಟಾರೆ, ನೀವು ಹೇಳಿದಂತೆ ಗೆಲ್ಲಬೇಕೆಂಬ ಹಂಬಲ ಮತ್ತು ಯಶಸ್ಸು ಸಾಧಿಸಬೇಕೆಂಬ ಮನೋಭಾವ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ತಂಡ ಸಂಕಷ್ಟದಲ್ಲಿದ್ದರೂ ಗೆಲ್ಲುವ ಇಚ್ಛಾಶಕ್ತಿ ತೋರಿಸಿತು. ಕ್ರಿಕೆಟ್‌ನಲ್ಲಿ ಅದೇ ಮುಖ್ಯ. ಆ ಶಕ್ತಿ ಮತ್ತು ಉತ್ಸಾಹ ತಂಡದಲ್ಲಿತ್ತು,” ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

IPL 2026: ಮುಂಬೈ ಇಂಡಿಯನ್ಸ್‌ ಎದುರು ಸೋತ ಪಂಜಾಬ್‌ ಕಿಂಗ್ಸ್‌ ತಂಡದ ಪ್ಲೇಆಫ್ಸ್‌ ಲೆಕ್ಕಾಚಾರ!

ಜಸ್‌ಪ್ರೀತ್‌ ಬುಮ್ರಾ ಮುಖದಲ್ಲಿ ಮಂದಹಾಸ ಕಂಡಿತ್ತು

ಕೆ ಶ್ರೀಕಾಂತ್‌ ಅವರ ಪ್ರಕಾರ, ಜಸ್‌ಪ್ರೀತ್‌ ಬುಮ್ರಾ ಕೂಡ ಪಂದ್ಯದಲ್ಲಿ ಬಹಳ ಸಂತೋಷದಿಂದ ಕಾಣಿಸಿಕೊಂಡಿದ್ದು, ಇತರೆ ಬೌಲರ್‌ಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು.

“ಬೌಲಿಂಗ್ ವಿಭಾಗವನ್ನು ನೋಡಿದರೂ, ಬುಮ್ರಾ ನಿರಂತರವಾಗಿ ನಗುತ್ತಲೇ ಇದ್ದರು. ಅವರು ಬೌಲರ್‌ಗಳಿಗೆ ಸಾಕಷ್ಟು ಆತ್ಮವಿಶ್ವಾಸ ನೀಡುತ್ತಿದ್ದರು. ವಿಶೇಷವಾಗಿ ದೀಪಕ್‌ ಚಹರ್‌ ಅವರಂತಹ ಆಟಗಾರರ ಮೇಲೆ ಬುಮ್ರಾ ನಾಯಕತ್ವದ ದೊಡ್ಡ ಪ್ರಭಾವ ಕಂಡುಬಂತು. ಹಾಗೆಯೇ ಶಾರ್ದುಲ್‌ ಠಾಕೂರ್‌ ಕೂಡ ಉತ್ತಮ ಪ್ರದರ್ಶನ ನೀಡಿದರು. ಇಲ್ಲದಿದ್ದರೆ ಅವರು ಸಾಮಾನ್ಯವಾಗಿ ಸುಲಭ ಎಸೆತಗಳನ್ನು ಮಾಡಿ ರನ್‌ಗಳನ್ನು ಬಿಟ್ಟುಕೊಡುತ್ತಿದ್ದರು. ಆದರೆ ಗುರುವಾರ ಪ್ರತಿಯೊಬ್ಬರೂ ವಿಕೆಟ್ ಪಡೆದರು,” ಎಂದು ಶ್ರೀಕಾಂತ್ ಹೇಳಿದ್ದಾರೆ.