IPL 2026: ಆರ್‌ಸಿಬಿ vs ಸಿಎಸ್‌ಕೆ ನಡುವೆ ಪಂದ್ಯ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಆರ್ ಅಶ್ವಿನ್!
RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಭಾನುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಆರ್ ಅಶ್ವಿನ್ ಆರಿಸಿದ್ದಾರೆ.
ಸಿಎಸ್‌ಕೆ-ಆರ್‌ಸಿಬಿ ನಡುವೆ ಪಂದ್ಯ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ಅಶ್ವಿನ್. -
ಬೆಂಗಳೂರು: ಸತತ ಎರಡು ಸೋಲುಗಳನ್ನು ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ, ಭಾನುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಹಣಾಹಣಿಯಲ್ಲಿ ಗೆಲ್ಲುವ ನೆಚ್ಚಿನ ತಂಡವನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಆರಿಸಿದ್ದಾರೆ. ಆದರೆ, ನನ್ನ ಹೃದಯ ಸಿಎಸ್‌ಕೆ ಎಂದು ಹೇಳುತ್ತಿದ್ದರೆ, ಮೆದಳು ಆರ್‌ಸಿಬಿ ಎಂದು ಹೇಳುತ್ತಿದೆ ಎಂದು ಹೇಳಿದ್ದಾರೆ.
ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿವ ಮೂಲಕ 2026ರ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಆದರೂ ಚೆನ್ನೈ ತಂಡವನ್ನು ಆರ್ ಅಶ್ವಿನ್ ಬಿಟ್ಟು ಕೊಡಲು ನಿರಾಕರಿಸಿದ್ದಾರೆ. ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ಪಂದ್ಯ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದರೂ ಅವರು ತಮ್ಮ ಹೃದಯ ಮಾತ್ರ ಸಿಎಸ್‌ಕೆ ತಂಡದ ಪರ ಇದೆ ಎಂದು ತಿಳಿಸಿದ್ದಾರೆ.
Updated IPL 2026 Points Table: ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್ ರಾಯಲ್ಸ್
"ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಯಾವುದೆಂದು ಹೇಳಲು ನಾನು ಬಯಸುವುದಿಲ್ಲ. ನನ್ನ ಹೃದಯ ಬಡಿತ ಯಾವಾಗಲೂ ಸಿಎಸ್‌ಕೆ ತಂಡದ ಪರ ಇರುತ್ತದೆ. ಈ ಮಾತನ್ನು ಹೇಳಲು ನನಗೆ ಯಾವುದೇ ನಾಚಿಕೆ ಇಲ್ಲ. ಈ ಪಂದ್ಯದಲ್ಲಿ ನನ್ನ ಹೃದಯ ಬಡಿತ ಸಿಎಸ್‌ಕೆ ಪರ ಇದೆ, ಆದರೆ ನನ್ನ ಮೆದಳು ಆರ್‌ಸಿಬಿ ಎಂದು ಹೇಳುತ್ತಿದೆ," ಎಂದು ಸ್ಪಿನ್ ದಂತಕತೆ ಹೇಳಿದ್ದಾರೆ.
"ನಾನು ಏನ ಹೇಳಬಹುದು? ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲನೇ ಪಂದ್ಯದಲ್ಲಿ ಸಿಎಸ್‌ಕೆ 127 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಅಂದು ಓವರ್‌ಕಾಸ್ಟ್ ಕಂಡೀಷನ್ಸ್ ಇತ್ತು, ಪಿಚ್ ಕೂಡ ಕವರ್ಸ್ ಒಳಗೆ ಇತ್ತು ಹಾಗೂ ಇದರಲ್ಲಿಯೂ ನೀವು ಇಂಥಾ ಸಂಯೋಜನೆಯೊಂದಿಗೆ ಕಣಕ್ಕೆ ಇಳಿದಿದ್ದೀರಿ. ಅಂದು ತಂಡ ಪತನವಾಗಿತ್ತು," ಎಂದು ಆರ್ ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ.
IPL 2026: ನಾನು ನೋಡಿದ ಬೆಸ್ಟ್ ಆಟಗಾರ ವೈಭವ್ ಸೂರ್ಯವಂಶಿ ಎಂದ ಜೋಸ್ ಬಟ್ಲರ್!
ಮೊದಲನೇ ಪಂದ್ಯದ ಗೆಲುವಿನ ಹೊರತಾಗಿಯೂ ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಜಾಶ್ ಹೇಝಲ್‌ವುಡ್ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ನುವಾನ್ ತುಷಾರಾಗೆ ಇನ್ನು ಎನ್‌ಒಸಿ ಸಿಕ್ಕಿಲ್ಲ. ಮತ್ತೊಂದೆಡೆ ವೈಯಕ್ತಿಕ ಕಾರಣಗಳಿಂದ ಎಡಗೈ ವೇಗಿ ಯಶ್ ದಯಾಳ್ ಆಡುತ್ತಿಲ್ಲ.