ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sher-E-Punjab T20 League: ಕೇವಲ 64 ಎಸೆತಗಳಲ್ಲಿ 173 ರನ್‌ ಸಿಡಿಸಿದ ನಮನ್‌ ಧೀರ್‌!

ಅಮೃತಸರ ಸೋರ್ಮಾ ಪರ ಆಡಿದ ನಮನ್ ಧೀರ್ ಸ್ಫೋಟಕ ಬ್ಯಾಟಿಂಗ್ ನಡೆಸಿ, ಕೇವಲ 20 ಓವರ್‌ಗಳಲ್ಲಿ ತಂಡದ ಮೊತ್ತವನ್ನು 279 ರನ್‌ಗಳಿಗೆ ಏರಿಸಿದರು. ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಧೀರ್ 173 ರನ್‌ಗಳನ್ನು ಸಿಡಿಸಿದರು. ಅವರ ಇನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ 12 ಸಿಕ್ಸರ್‌ಗಳು ದಾಖಲಾಗಿದ್ದು, ಅವರು 270.31ರ ಅದ್ಭುತ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಕೇವಲ 64 ಎಸೆತಗಳಲ್ಲಿ 173 ರನ್‌ ಸಿಡಿಸಿದ ನಮನ್‌ ಧೀರ್‌!

64 ಎಸೆತಗಳಲ್ಲಿ 17 ರನ್‌ ಸಿಡಿಸಿದ ನಮನ್‌ ಧೀರ್‌. -

Profile
Ramesh Kote Sep 8, 2026 6:33 PM

ನವದೆಹಲಿ: ದೇಶಿ ಟಿ20 ಕ್ರಿಕೆಟ್‌ನಲ್ಲಿ ಅಮೃತಸರ ಸೋರ್ಮಾ ಪರ ನಮನ್ ಧೀರ್ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಶೆರ್-ಇ-ಪಂಜಾಬ್ ಟಿ20 ಲೀಗ್‌ನಲ್ಲಿ ಮೊಹಾಲಿ ಕಿಂಗ್ಸ್ ವಿರುದ್ಧ ಕೇವಲ 64 ಎಸೆತಗಳಲ್ಲಿ 173 ರನ್ ಸಿಡಿಸಿದ ಧೀರ್, ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ವೈಯಕ್ತಿಕ ಗರಿಷ್ಠ ಸ್ಕೋರ್‌ ದಾಖಲೆ ಹೊಂದಿರುವ ಕ್ರಿಸ್ ಗೇಲ್ ಅವರ 175 ರನ್‌ಗಳ ದಾಖಲೆಯನ್ನು ಮುರಿಯುವ ಸನಿಹಕ್ಕೆ ಬಂದಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವ ಧೀರ್, ತಮ್ಮ ಸ್ಫೋಟಕ ಇನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ 12 ಸಿಕ್ಸರ್‌ಗಳನ್ನು ಸಿಡಿಸಿದರು. ಅವರು 270.31ರ ಅದ್ಭುತ ಸ್ಟ್ರೈಕ್‌ರೇಟ್ ದಾಖಲಿಸಿದರು. ಅವರ ಏಕಾಂಗಿ ಹೋರಾಟದ ನೆರವಿನಿಂದ ಅಮೃತಸರ ಸೋರ್ಮಾ, ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ 279 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

IND vs JAP ಭಾರತ ವಿರುದ್ದದ ಐತಿಹಾಸಿಕ ಏಕೈಕ ಟಿ20ಐ ಪಂದ್ಯಕ್ಕೆ ಜಪಾನ್‌ ತಂಡ ಪ್ರಕಟ!

37 ಎಸೆತಗಳಲ್ಲಿ ಶತಕ

ನಮನ್‌ ಧೀರ್ ಆರಂಭದಿಂದಲೇ ಅತ್ಯಂತ ವೇಗವಾಗಿ ರನ್ ಸಿಡಿಸಿದರು. ಕೇವಲ 37 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಈ ಮೈಲುಗಲ್ಲು ತಲುಪಿದರು. ಶತಕದ ಬಳಿಕವೂ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಅವರು, ಔಟಾಗುವ ಮುನ್ನ ಮತ್ತಷ್ಟು 73 ರನ್ ಸೇರಿಸಿದರು.

ಅಮೃತಸರ ಸೋರ್ಮಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಸಹಜ್ ಧವನ್ ಕೇವಲ ಒಂದು ರನ್‌ಗೆ ಔಟಾದರು. ಮತ್ತೊಂದೆಡೆ ಧೀರ್ ಕ್ರೀಸ್‌ನಲ್ಲಿ ನೆಲೆಯೂರಿ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದರು. ಮೂರನೇ ಕ್ರಮಾಂಕದ ಬ್ಯಾಟರ್ ರಾಹುಲ್ ಕುಮಾರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ 13 ರನ್‌ಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡದ ಬಹುತೇಕ ರನ್‌ಗಳ ಹೊಣೆ ನಮನ್‌ ಧೀರ್ ಅವರ ಹೆಗಲೇರಿತು.

ʻಇಶಾನ್‌ ಕಿಶನ್‌ ಬಳಿ ಕಲಿಯಿರಿʼ: ವೈಭವ್‌ ಸೂರ್ಯವಂಶಿಗೆ ವಿವೇಕ್‌ ರಾಝ್ದಾನ್‌ ಸಂದೇಶ!

ಜಶನ್‌ಪ್ರೀತ್ ಸಿಂಗ್ 41 ರನ್‌ಗಳ ಉಪಯುಕ್ತ ಕೊಡುಗೆ ನೀಡಿ ಧೀರ್‌ಗೆ ಸ್ವಲ್ಪ ಬೆಂಬಲ ನೀಡಿದರು. ಆದರೆ ಅಮೃತಸರ ಸೋರ್ಮಾ 279 ರನ್‌ಗಳ ಬೃಹತ್ ಮೊತ್ತ ತಲುಪಲು ಧೀರ್ ಅವರ ಅಸಾಧಾರಣ ಹೊಡೆತಗಳೇ ಪ್ರಮುಖ ಕಾರಣವಾದವು. 64 ಎಸೆತಗಳಲ್ಲಿ 16 ಬೌಂಡರಿ ಮತ್ತು 12 ಸಿಕ್ಸರ್‌ಗಳೊಂದಿಗೆ 173 ರನ್ ಸಿಡಿಸಿದ ಧೀರ್, ತಂಡದ ಸ್ಕೋರ್‌ಬೋರ್ಡ್‌ಗೆ ರನ್‌ಗಳ ಸುರಿಮಳೆ ಹರಿಸಿದರು.



ಕ್ರಿಸ್ ಗೇಲ್ ದಾಖಲೆಗಿಂತ ಕೇವಲ 2 ರನ್

ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್‌ನ ದಾಖಲೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಗೇಲ್, 2013ರ ಏಪ್ರಿಲ್‌ನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಅಜೇಯ 175 ರನ್ ಸಿಡಿಸಿದ್ದರು. ಇದೀಗ ನಮನ್ ಧೀರ್ 173 ರನ್‌ಗಳಿಗೆ ಔಟಾಗುವ ಮೂಲಕ ಗೇಲ್ ಅವರ ದಾಖಲೆಯಿಂದ ಕೇವಲ ಎರಡು ರನ್ ದೂರ ಉಳಿದರು. ಈ ಮೂಲಕ ವಿಶ್ವದ ಯಾವುದೇ ಟಿ20 ಪಂದ್ಯದಲ್ಲಿ ದಾಖಲಾದ ಅತ್ಯಂತ ದೊಡ್ಡ ವೈಯಕ್ತಿಕ ಸ್ಕೋರ್‌ಗಳ ಪೈಕಿ ಧೀರ್ ಅವರ ಇನಿಂಗ್ಸ್ ಕೂಡ ಸ್ಥಾನ ಪಡೆದುಕೊಂಡಿದೆ.

ಅಫ್ಘಾನಿಸ್ತಾನ ಟಿ20ಗೆ ವಾಷಿಂಗ್ಟನ್ ಸುಂದರ್ ಫಿಟ್; ಸೆ. 9ಕ್ಕೆ ಬುಮ್ರಾ ವರದಿ ಪ್ರಕಟ

37 ಎಸೆತಗಳಲ್ಲಿ ಶತಕ ಪೂರೈಸಿರುವುದು ಕೂಡ ಭಾರತದ ದೇಶಿ ಟಿ20 ಕ್ರಿಕೆಟ್‌ನ ಅತ್ಯಂತ ವೇಗದ ಶತಕಗಳ ಪೈಕಿ ಒಂದಾಗಿದೆ. ಈ ಇನಿಂಗ್ಸ್ ಮೂಲಕ ಧೀರ್ ಟಿ20 ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್ ಆಗಿ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಮೊಹಾಲಿ ಕಿಂಗ್ಸ್ ವಿರುದ್ಧ ಸೆಪ್ಟೆಂಬರ್ 8ರಂದು ನಡೆದಿದ್ದ ಈ ಪಂದ್ಯ, ನಮನ್ ಧೀರ್ ಅವರ ವೃತ್ತಿಜೀವನದ ಸ್ಮರಣೀಯ ದಿನವಾಗಿ ಉಳಿಯುವ ಸಾಧ್ಯತೆಯಿದೆ.