ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಯಶಸ್ವಿ ಜೈಸ್ವಾಲ್‌ ಜೊತೆ ಸಾಯಿ ಸುದರ್ಶನ್‌ ಇನಿಂಗ್ಸ್‌ ಆರಂಭಿಸಬೇಕೆಂದ ರಿಕಿ ಪಾಂಟಿಂಗ್‌!

Ricky Ponting on Sai Sudarshan: ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಯಶಸ್ವಿ ಜೈಸ್ವಾಲ್‌ ಅವರ ಜೊತೆ ಸಾಯಿ ಸುದರ್ಶನ್‌ ಇನಿಂಗ್ಸ್‌ ಆರಂಭಿಸಬೇಕೆಂದು ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೂನ್‌ 20 ರಂದು ಮೊದಲನೇ ಪಂದ್ಯದ ಮೂಲಕ ಟೆಸ್ಟ್‌ ಸರಣಿ ಆರಂಭವಾಗಲಿದೆ.

ಜೈಸ್ವಾಲ್‌ ಜೊತೆ ಸುದರ್ಶನ್‌ ಇನಿಂಗ್ಸ್‌ ಆರಂಭಿಸಬೇಕೆಂದ ಪಾಂಟಿಂಗ್‌!

ಸಾಯಿ ಸುದರ್ಶನ್‌ ಪರ ಪಾಂಟಿಂಗ್‌ ಬ್ಯಾಟಿಂಗ್‌.

Profile Ramesh Kote Jun 7, 2025 7:38 PM

ನವದೆಹಲಿ: ಇಂಗ್ಲೆಂಡ್‌ ವಿರುದ್ದದ ಮುಂಬರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ (IND vs ENG) ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್‌ (Yashasvi jaiswal) ಜೊತೆ ಸಾಯಿ ಸುದರ್ಶನ್‌ (Sai Sudarshan) ಇನಿಂಗ್ಸ್‌ ಆರಂಭಿಸಬೇಕೆಂದು ಆಸ್ಟ್ರೇಲಿಯಾ ಮಾಜಿ ನಾಯಕ ಹಾಗೂ ಪಂಜಾಬ್‌ ಕಿಂಗ್ಸ್‌ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ (Ricky Ponting) ಸಲಹೆ ನೀಡಿದ್ದಾರೆ. ಜೂನ್‌ 20 ರಂದು ಲೀಡ್ಸ್‌ನಲ್ಲಿ ಮೊದಲನೇ ಪಂದ್ಯದ ಮೂಲಕ ಉಭಯ ತಂಡಗಳ ನಡುವಣ ಟೆಸ್ಟ್‌ ಸರಣಿ ಆರಂಭವಾಗಲಿದೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಶುಭಮನ್‌ ಗಿಲ್‌ ನಾಯಕತ್ವದ ಭಾರತ ಹೊಸ ತಂಡ, ಟೆಸ್ಟ್‌ ಸರಣಿಯಲ್ಲಿ ಕಠಿಣ ಸವಾಲನ್ನು ಎದುರಿಸಲಿದೆ.

ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತ ಟೆಸ್ಟ್‌ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ ಜೊತೆ ಯಾರು ಇನಿಂಗ್ಸ್‌ ಆರಂಭಿಸಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಎಲ್‌ ರಾಹುಲ್‌ ಬಹುಶಃ ಇನಿಂಗ್ಸ್‌ ಆರಂಭಿಸಬಹುದು. ಆದರೆ, ಆಸ್ಟ್ರೇಲಿಯಾ ದಿಗ್ಗಜ ತಮಿಳುನಾಡು ಮೂಲದ ಸಾಯಿ ಸುದರ್ಶನ್‌ಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

IND vs ENG: ಇಂಗ್ಲೆಂಡ್‌ ವಿರುದ್ಧ ಅತಿ ಹೆಚ್ಚು ಟೆಸ್ಟ್‌ ರನ್‌ ಗಳಿಸಿದ ಭಾರತದ ಟಾಪ್‌ 5 ಬ್ಯಾಟರ್ಸ್‌!

"ಯಶಸ್ವಿ ಜೈಸ್ವಾಲ್‌ ಜೊತೆ ಮತ್ತೊಬ್ಬ ಓಪನರ್‌ ಆಗಿ ಸಾಯಿ ಸುದರ್ಶನ್‌ ಆಡಿದರೆ, ಮೂರನೇ ಕ್ರೆಮಾಂಕದಲ್ಲಿ ಅನುಭವ ಹೊಂದಿರುವ ಆಟಗಾರನನ್ನು ಆಡಿಸಬಹುದು. ಹಾಗಾಗಿ ಕೆಎಲ್‌ ರಾಹುಲ್‌ ಅಥವಾ ಕರುಣ್‌ ನಾಯರ್‌ ಅವರಲ್ಲಿ ಒಬ್ಬರನ್ನು ಆಡಿಸಬಹುದು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌ ಅವರನ್ನು ಆಡಿಸಬಹುದು," ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.

"ಭಾರತ ಟೆಸ್ಟ್‌ ತಂಡದಲ್ಲಿ ಸಾಯಿ ಸುದರ್ಶನ್‌ ಆಡಲು ಇದು ಸರಿಯಾದ ಸಮಯ ಎಂದು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇನೆ. ಪ್ರಸ್ತುತ ಭಾರತ ತಂಡದಲ್ಲಿ ಈಗ ಸ್ವಲ್ಪ ಪುನರುಜ್ಜೀವನ ಆಗಲಿದೆ. ಏಕೆಂದರೆ ಸ್ಪಷ್ಟವಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡದಲ್ಲಿಲ್ಲ. ಸಾಯಿ ಸುದರ್ಶನ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್‌ ಗಳಿಸಿದ್ದಾರೆ ಹಾಗೂ ಐಪಿಎಲ್‌ ಟೂರ್ನಿಯಲ್ಲಿ ಇತರೆ ಬ್ಯಾಟ್ಸ್‌ಮನ್‌ಗಳಿಗಿಂತ ಅಗ್ರ ದರ್ಜೆಯ ಫಾರ್ಮ್‌ನಲ್ಲಿದ್ದಾರೆ. ಅವರು ತಾಂತ್ರಿಕವಾಗಿಯೂ ಉತ್ತಮವಾಗಿದ್ದಾರೆ. ಕೆಎಲ್‌ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಿದರೆ, ತಂಡಕ್ಕೆ ಸ್ಥಿರತೆಯನ್ನು ತಂದುಕೊಡುತ್ತದೆ," ಎಂದು ಆಸೀಸ್‌ ದಿಗ್ಗಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IND vs ENG: ಭಾರತದ ಪ್ಲೇಯಿಂಗ್‌ XIನಲ್ಲಿ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಹೆಸರಿಸಿದ ಮೈಕಲ್‌ ಕ್ಲಾರ್ಕ್‌!

ಇಂಗ್ಲೆಂಡ್‌ ಲಯನ್ಸ್‌ ವಿರುದ್ದ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯವನ್ನು ಭಾರತ ಎ ಪರ ಸಾಯಿ ಸುದರ್ಶನ್‌ ಆಡಬೇಕಾಗಿತ್ತು. ಆದರೆ, ಭಾರತ ಟೆಸ್ಟ್‌ ತಂಡದ ಜೊತೆ ಅವರು ಇಂಗ್ಲೆಂಡ್‌ಗೆ ತೆರಳಿರುವುದು ತುಂಬಾ ತಡವಾಗಿದೆ. ಈ ಕಾರಣದಿಂದಲೇ ಅವರು ಎರಡನೇ ಟೆಸ್ಟ್‌ ಪಂದ್ಯವನ್ನು ಆಡಲು ಸಾಧ್ಯವಾಗಿಲ್ಲ.

ಇತ್ತೀಚೆಗೆ ಅಂತ್ಯವಾಗಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ಪರ ಆಡಿದ್ದ ಸಾಯಿ ಸುದರ್ಶನ್‌ ಆರೆಂಜ್‌ ಕ್ಯಾಪ್‌ ಅನ್ನು ಮುಡಿಗೇರಿಸಿಕೊಂಡಿದ್ದರು. ಅವರು ಈಗಾಗಲೇ ಭಾರತ ತಂಡದ ಪರ ವೈಟ್‌ಬಾಲ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಒಂದು ಟಿ20ಐ ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.