PAK vs WI: ರನ್ ನೀಡದೆ 5 ವಿಕೆಟ್ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್ಟಿನ್ ಗ್ರೀವ್ಸ್!
ಪಾಕಿಸ್ತಾನ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗಿ ಜಸ್ಟಿನ್ ಗ್ರೀವ್ಸ್ ಅವರು ಐತಿಹಾಸಿಕ ಬೌಲಿಂಗ್ ಸ್ಪೆಲ್ ಹಾಕಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೇಡಿನ್ ಓವರ್‌ಗಳ ಐದು ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ. ಅಂತಿಮವಾಗಿ ಇವರು 27ಕ್ಕೆ 5 ಮೂಲಕ ತಮ್ಮ ಬೌಲಿಂಗ್ ಮುಗಿಸಿದರು.
ಆರಂಭಿಕ ಸ್ಪೆಲ್‌ನಲ್ಲಿ ರನ್ ನೀಡದೆ 5 ವಿಕೆಟ್ ಕಿತ್ತ ಜಸ್ಟಿನ್ ಗ್ರೀವ್ಸ್. -
ಟ್ರಿನಿಡಾಡ್: ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ತಂಡಗಳು (IND vs WI) ಇಲ್ಲಿನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದ ಮೂರನೇ ದಿನ ವಿಂಡೀಸ್ ವೇಗಿ ಜಸ್ಟಿನ್ ಗ್ರೀವ್ಸ್ (Justin Graves) ಅವರು ಐತಿಹಾಸಿಕ ಬೌಲಿಂಗ್ ಸ್ಪೆಲ್ ಹಾಕಿದ್ದಾರೆ. ಅವರು ತಮ್ಮ ಆರಂಭಿಕ ಓವರ್‌ಗಳಲ್ಲಿ ಮೇಡಿನ್ ಬೌಲ್ ಮಾಡಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ವಿಶ್ವದ ಮೊದಲ ಬೌಲರ್ ಎಂಬ ಅಪರೂಪದ ದಾಖಲೆಯನ್ನು ವಿಂಡೀಸ್ ವೇಗಿ ಬರೆದಿದ್ದಾರೆ.
ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ್ದ ಪಾಕಿಸ್ತಾನ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ಜಸ್ಟಿನ್ ಗ್ರೀವ್ಸ್ ಅವರು ತಮ್ಮ ಮಾರಕ ಬೌಲಿಂಗ್ ಮೂಲಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದರು. ಬಲಗೈ ವೇಗದ ಬೌಲರ್ ಆರಂಭಿಕ ಐದು ಓವರ್‌ಗಳಲ್ಲಿ ಯಾವುದೇ ರನ್ ನೀಡದೆ ಮೇಡಿನ್ ನೀಡಿದರು ಹಾಗೂ ಐದು ವಿಕೆಟ್‌ಗಳ ಸಾಧನೆ ಮಾಡಿದರು. ಅವರು ತಮ್ಮ ಐದು ಓವರ್‌ಗಳ ಅಂತ್ಯಕ್ಕೆ 5-0 ಸ್ಪೆಲ್ ಬೌಲ್ ಮಾಡಿದ್ದರು. ಆ ಮೂಲಕ ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನಕ್ಕೆ ಪೆಟ್ಟು ನೀಡಿದ್ದರು. ಅಂತಿಮವಾಗಿ ಇವರು 11 ಓವರ್‌ಗಳಿಗೆ 27 ರನ್ ನೀಡಿ 5 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಪಾಕಿಸ್ತಾನ ತಂಡ 282 ರನ್‌ಗಳಿಗೆ ಆಲ್‌ಔಟ್ ಆಯಿತು.
ಶ್ರೀಲಂಕಾ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಜಡೇಜಾ ಕಮ್‌ಬ್ಯಾಕ್
ಸ್ಟುವರ್ಟ್ ಬ್ರಾಡ್ ದಾಖಲೆ ಮುರಿದ ಗ್ರೀವ್ಸ್
ತಮ್ಮ ಐತಿಹಾಸಿಕ ಬೌಲಿಂಗ್ ಸ್ಪೆಲ್ ಮೂಲಕ ಜಸ್ಟಿನ್ ಗ್ರೀವ್ಸ್ ಅವರು ಇಂಗ್ಲೆಂಡ್ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಅವರ ದಾಖಲೆಯನ್ನು ಮುರಿದಿದ್ದಾರೆ. ಬ್ರಾಡ್ 2016ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ತಾವು ಬೌಲ್ ಮಾಡಿದ ಮೇಡಿನ್ ಓವರ್‌ಗಳ ಮೂಲಕ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ ಗ್ರೀವ್ಸ್ ಅವರು ಒಂದು ವಿಕೆಟ್ ಹೆಚ್ಚುವರಿಯಾಗಿ ಪಡೆದಿದ್ದಾರೆ. ಪಾಕ್ ಪ್ರಥಮ ಇನಿಂಗ್ಸ್‌ನಲ್ಲಿ 29 ರನ್‌ಗಳ ಹಿನ್ನಡೆಯನ್ನು ಅನುಭವಿಸಿತು.
Had it on a string ✨#WIvPAK | #MenInMaroon | #Milestone pic.twitter.com/QwWI4eYW2f
— Windies Cricket (@windiescricket) July 27, 2026
ಪಾಕಿಸ್ತಾನ ತಂಡಕ್ಕೆ ಮೇಲುಗೈ
ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದರೂ ಪ್ರಸ್ತುತ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ತಂಡ ಮೇಲುಗೈ ಸಾಧಿಸಿದೆ. ವೆಸ್ಟ್ ಇಂಡೀಸ್ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ಕುಸಿತ ಅನುಭವಿಸಿತು. ಮೂರನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ 126 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಇದೀಗ ವಿಂಡೀಸ್ 155 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದಿದೆ.
ನಾಲ್ಕನೇ ದಿನ ಪಾಕಿಸ್ತಾನ ಬೌಲರ್‌ಗಳು ಇನ್ನುಳಿದ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ವೆಸ್ಟ್ ಇಂಡೀಸ್ 170 ರಿಂದ 190 ರನ್‌ಗಳಿಗೆ ಆಲ್‌ಔಟ್ ಆಗಲಿದೆ. ಇಲ್ಲಿನ ಪಿಚ್ ನಿಯಮಿತವಾಗಿ ಸೀಮರ್‌ಗಳಿಗೆ ಹಾಗೂ ಸ್ಪಿನ್ನರ್‌ಗಳಿಗೆ ಇಬ್ಬರಿಗೂ ನೆರವು ನೀಡುತ್ತಿದೆ. ಹಾಗಾಗಿ ನಾಲ್ಕನೇ ದಿನ ವೆಸ್ಟ್ ಇಂಡೀಸ್ ತಂಡ, 200 ರನ್‌ಗಳ ಗುರಿಯನ್ನು ನೀಡಿದರೂ ಪಾಕಿಸ್ತಾನ ತಂಡ ಸುಲಭವಾಗಿ ಈ ಮೊತ್ತವನ್ನು ಚೇಸ್ ಮಾಡಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆಯಲಿದೆ.
STUMPS | DAY 3 🌅🏏
— Windies Cricket (@windiescricket) July 27, 2026
The fight continues. 💪🏾
West Indies close Day 3️⃣ on 126/7 in their second innings, extending the lead to 155 runs heading into a crucial Day 4️⃣.
Everything to play for.🏏#WIvPAK #WIOutside #MenInMaroon pic.twitter.com/s7YZ54whjm
ವಿಂಡೀಸ್‌ಗೆ ಅದ್ಭುತ ಆಲ್‌ರೌಂಡರ್ ಜಸ್ಟಿನ್ ಗ್ರೀವ್ಸ್
ಗ್ರೀವ್ಸ್ ಅವರ ಇತ್ತೀಚಿನ ಅದ್ಭುತ ಬೌಲಿಂಗ್ ಪ್ರದರ್ಶನವು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅದ್ಭುತ ಏಳಿಗೆಯ ಮತ್ತೊಂದು ಅಧ್ಯಾಯವಾಗಿದೆ. ಬಾರ್ಬಡೋಸ್‌ನ ಈ ಆಲ್‌ರೌಂಡರ್ 2025ರ ಡಿಸೆಂಬರ್‌ನಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 388 ಎಸೆತಗಳಲ್ಲಿ ಅಜೇಯ 202 ರನ್‌ಗಳ ಮ್ಯಾರಥಾನ್ ಇನಿಂಗ್ಸ್ ಆಡಿ ವೆಸ್ಟ್ ಇಂಡೀಸ್ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಇದು ಅವರ ಚೊಚ್ಚಲ ಟೆಸ್ಟ್ ದ್ವಿಶತಕವಾಗಿದ್ದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ ಕೇವಲ ಏಳನೇ ಬ್ಯಾಟರ್ ಎಂಬ ಅಪರೂಪದ ದಾಖಲೆಯನ್ನೂ ಅವರು ತಮ್ಮ ಹೆಸರಿಗೆ ಬರೆದಿದ್ದರು.