ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: ಸೂರ್ಯಕುಮಾರ್‌ ಯಾದವ್‌ ಬಗ್ಗೆ ದೊಡ್ಡ ಹೇಳಿದ ಆರ್‌ ಅಶ್ವಿನ್!

ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಿಂದ ಹೊರಗುಳಿದಿದ್ದರೂ ತಂಡದ ಮಾಜಿ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಇನ್ನೂ ಅವಕಾಶವಿದೆ ಎಂದು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ದೊಡ್ಡ ಭವಿಷ್ಯ ನುಡಿದಿದ್ದಾರೆ.

‌ ಸೂರ್ಯಕುಮಾರ್‌ ಯಾದವ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಅಶ್ವಿನ್‌!

ಸೂರ್ಯಕುಮಾರ್‌ ಯಾದವ್‌‌ ಬಗ್ಗೆ ಅಶ್ವಿನ್‌ ದೊಡ್ಡ ಹೇಳಿಕೆ. -

Profile
Ramesh Kote Jul 13, 2026 4:48 PM

ನವದೆಹಲಿ: ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರ ನಾಯಕತ್ವದಲ್ಲಿ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಗೆಲುವಿನ ಬಳಿಕ ರಾಷ್ಟ್ರೀಯ ಟಿ20ಐ ತಂಡದಲ್ಲಿ ಸಾಕಷ್ಟು ಬದಲಾವವಣೆಗಳಾಗಿವೆ. ಅದರಲ್ಲಿಯೂ ವಿಶೇಷವಾಗಿ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೈ ಬಿಡಲಾಗಿದ್ದು, ಭಾರತ ಟಿ20ಐ ತಂಡಕ್ಕೆ ಶ್ರೇಯಸ್‌ ಅಯ್ಯರ್‌ (Shreyas Iyer) ಅವರನ್ನು ನಾಯಕನಾಗಿ ಆರಿಸಲಾಗಿದ್ದು, ಆದರೆ ಭಾರತ ತಂಡ ಅವರ ನಾಯಕತ್ವದಲ್ಲಿ ಆರಂಭಿಕ ಎರಡೂ ಸರಣಿಗಳಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭಿವಿಸಿದೆ. ಅದರಲ್ಲಿಯೂ ಅಯ್ಯರ್‌ ನಾಯಕತ್ವದಲ್ಲಿ ಭಾರತ ಇನ್ನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲದಿರುವುದು ಆಘಾತಕಾರಿ ವಿಷಯ.

ಇದರ ನಡುವೆ ಮಾಜಿ ನಾಯಕ ಸೂರ್ಯಕುಮಾರ್‌ ಯಾದವ್‌ ಬಗ್ಗೆಯೂ ಇದೀಗ ಚರ್ಚೆಗಳು ನಡೆಯುತ್ತಿವೆ. ಏಕೆಂದರೆ, ಸೂರ್ಯ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಒಂದೇ ಒಂದು ಟಿ20ಐ ಸರಣಿಯನ್ನೂ ಟೀಮ್‌ ಇಂಡಿಯಾ ಸೋತಿಲ್ಲ. ಹಾಗಾಗಿ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೈಬಿಟ್ಟಿರುವ ಬಗ್ಗೆ ವಿರೋಧಗಳು ಕೂಡ ವ್ಯಕ್ತವಾಗಿವೆ. ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಅವರು, ಸೂರ್ಯಕುಮಾರ್‌ ಯಾದವ್‌ ಅವರು ಭಾರತ ತಂಡಕ್ಕೆ ಮರಳಲು ಇನ್ನೂ ಅವಕಾಶವಿದೆ ಎಂದು ಹೇಳಿದ್ದಾರೆ.

IND vs ENG: ಭರ್ಜರಿ ಶತಕದ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಜೋಸ್‌ ಬಟ್ಲರ್‌!

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆರ್‌ ಅಶ್ವಿನ್‌, "ಅವರು ಈಗ ಎಲ್ಲಿ ಆಡಲಿದ್ದಾರೆ? ಸೈಯದ್ ಮುಷ್ಟಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ತಂಡಕ್ಕೆ ಮತ್ತೆ ಮರಳಲು ಏಕೆ ಸಾಧ್ಯವಾಗಬಾರದು? ನಾಯಕತ್ವದ ವಿಚಾರ ಈಗ ಕಷ್ಟಕರವಾಗಿದೆ. ಆದರೆ ಬ್ಯಾಟರ್ ಆಗಿ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕು. ಅವರ ಮುಂದಿರುವ ಎರಡು ಪ್ರಮುಖ ಟೂರ್ನಿಗಳು ಸೈಯದ್ ಮುಷ್ಟಾಕ್ ಅಲಿ ಟ್ರೋಫಿ ಮತ್ತು ಐಪಿಎಲ್. ಈ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಬೇಕಿದೆ. ಯಾರಿಗೂ ರಾಷ್ಟ್ರೀಯ ತಂಡದ ಬಾಗಿಲನ್ನು ಶಾಶ್ವತವಾಗಿ ಮುಚ್ಚಲು ಸಾಧ್ಯವಿಲ್ಲ. ಆದರೆ ಅವರನ್ನು ತಂಡದಿಂದ ಹೊರಗಿಟ್ಟ ರೀತಿಯನ್ನು ನೋಡಿದರೆ, ಮತ್ತೆ ಅವಕಾಶ ಸಿಗುವ ಬಗ್ಗೆ ನನಗೆ ನಿಜಕ್ಕೂ ಅನುಮಾನವಿದೆ," ಎಂದು ಅಶ್ವಿನ್ ಅಭಿಪ್ರಾಯಪಟ್ಟರು.

ಟಿ20ಐ ತಂಡಕ್ಕೆ ಮರಳಿದ ಶ್ರೇಯಸ್ ಅಯ್ಯರ್‌ಗೆ ನಾಯಕತ್ವದ ಜವಾಬ್ದಾರಿಯನ್ನೂ ನೀಡಲಾಗಿದ್ದು, ಸೂರ್ಯಕುಮಾರ್ ಯಾದವ್ ಅವರ ಸ್ಥಾನವನ್ನು ಅವರು ಅಲಂಕರಿಸಿದರು. ಐಪಿಎಲ್‌ನಲ್ಲಿ ನಾಯಕನಾಗಿ ತೋರಿದ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಬಿಸಿಸಿಐ ಶ್ರೇಯಸ್‌ಗೆ ಈ ಜವಾಬ್ದಾರಿಯನ್ನು ನೀಡಿತ್ತು. ಆದರೆ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 2-0 ಅಂತರದಿಂದ ವೈಟ್‌ವಾಶ್‌ ಆಘಾತ ಅನುಭವಿಸಿತು. ಬಳಿಕ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲೂ ಟೀಮ್‌ ಇಂಡಿಯಾ 0-4 ಅಂತರದ ಹೀನಾಯ ಸೋಲು ಅನುಭವಿಸಿತು.

ಭಾರತ vs ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ, ಪಂದ್ಯದ ಸಮಯದ ಮಾಹಿತಿ

ಸೂರ್ಯಕುಮಾರ್ ನಾಯಕತ್ವದಲ್ಲಿ ದ್ವಿಪಕ್ಷೀಯ ಸರಣಿ ಸೋಲದ ಭಾರತ

ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಯಾವುದೇ ದ್ವಿಪಕ್ಷೀಯ ಟಿ20 ಸರಣಿಯನ್ನು ಕಳೆದುಕೊಂಡಿರಲಿಲ್ಲ. ಅವರ ನಾಯಕತ್ವದಲ್ಲಿ ಭಾರತ 52 ಪಂದ್ಯಗಳಲ್ಲಿ 42 ಗೆಲುವು ದಾಖಲಿಸಿತ್ತು. ಅಲ್ಲದೆ, ಸೂರ್ಯಕುಮಾರ್ ಸಾರಥ್ಯದಲ್ಲಿ ಟೀಮ್‌ ಇಂಡಿಯಾ 2025ರ ಏಷ್ಯಾಕಪ್ ಪ್ರಶಸ್ತಿಯನ್ನೂ ಗೆದ್ದಿತ್ತು.

ಸೂರ್ಯಕುಮಾರ್ ಅವರನ್ನು ಟಿ20 ನಾಯಕನಾಗಿ ಆಯ್ಕೆ ಮಾಡಿದ್ದು ಅಚ್ಚರಿಯ ನಿರ್ಧಾರವಾಗಿತ್ತು. 2024ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ ಉಪನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿ ಸೂರ್ಯಕುಮಾರ್‌ಗೆ ನಾಯಕತ್ವ ನೀಡಲಾಗಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಅವರು ಸೆಪ್ಟೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೂಲಕ ಮತ್ತೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ.