ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಹುಲ್‌ ದ್ರಾವಿಡ್‌ ಔಟ್‌, ಭಾರತದ ಅಗ್ರ ಐವರು ಶ್ರೇಷ್ಠ ಕ್ರಿಕೆಟಿಗರನ್ನು ಆರಿಸಿದ ರವಿ ಶಾಸ್ತ್ರಿ!

ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಅವರು ಭಾರತದ ಐವರು ಶ್ರೇಷ್ಠ ಕ್ರಿಕಟಿಗರನ್ನು ಆರಿಸಿದ್ದಾರೆ. ಆದರೆ, ರಾಹುಲ್‌ ದ್ರಾವಿಡ್‌ ಹಾಗೂ ರೋಹಿತ್‌ ಶರ್ಮಾ ಅವರನ್ನು ಕೈ ಬಿಟ್ಟಿದ್ದಾರೆ. ಸಚಿನ್‌ ತೆಂಡೂಲ್ಕರ್‌, ಸುನೀಲ್‌ ಗವಾಸ್ಕರ್‌ ಸೇರಿದಂತೆ ಅಗ್ರ ಐವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

ಭಾರತದ ಅಗ್ರ ಐವರು ಶ್ರೇಷ್ಠ ಕ್ರಿಕೆಟಿಗರನ್ನು ಆರಿಸಿದ ರವಿ ಶಾಸ್ತ್ರಿ!

ಭಾರತದ ಶ್ರೇಷ್ಠ ಐವರು ಕ್ರಿಕೆಟಿಗರನ್ನು ಆರಿಸಿದ ರವಿ ಶಾಸ್ತ್ರಿ.

Profile Ramesh Kote Jul 22, 2025 5:04 PM

ನವದೆಹಲಿ: ಟೀಮ್‌ ಇಂಡಿಯಾ (India) ಹೆಡ್‌ ಕೋಚ್‌ ರವಿ ಶಾಸ್ತ್ರಿ (Ravi Shastri) ಅವರು ಕ್ರಿಕೆಟ್‌ ಇತಿಹಾಸದ ಶ್ರೇಷ್ಠ ಭಾರತೀಯ ಆಟಗಾರರನ್ನು ಆರಿಸಿದ್ದಾರೆ. ಆದರೆ, ರಾಹುಲ್‌ ದ್ರಾವಿಡ್‌ ಹಾಗೂ ರೋಹಿತ್‌ ಶರ್ಮಾ ಅವರನ್ನು ಕೈ ಬಿಟ್ಟಿದ್ದಾರೆ. 93 ವರ್ಷಗಳ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಆಟಟಗಾರರನ್ನು ರವಿ ಶಾಸ್ತ್ರಿ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಭಾರತಕ್ಕೆ 1983ರಲ್ಲಿ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌ (Kapil Dev) ಸೇರಿದಂತೆ ಐವರು ಶ್ರೇಷ್ಠ ಆಟಗಾರರನ್ನು ಆರಿಸಿದ್ದಾರೆ. ಇವರು ಮೂರೂ ಸ್ವರೂಪದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿರುವ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

ದಿ ಓವರ್‌ ಲ್ಯಾಪ್‌ ಕ್ರಿಕೆಟ್‌ ಯೂಟ್ಯೂಬ್‌ ಚಾನೆಲ್‌ನ ʻಸ್ಟಿಕ್‌ ಟು ಕ್ರಿಕೆಟ್‌ʼ ಪಾಡ್‌ ಕಾಸ್ಟ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಭಾರತೀಯ ಕ್ರಿಕೆಟ್‌ ಇತಿಹಾಸದ ಐವರು ಶ್ರೇಷ್ಠ ಆಟಗಾರರನ್ನು ಆರಿಸಿದ್ದಾರೆ. ಅವರು 1983ರ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಕಪಿಲ್‌ ದೇವ್‌ ಅವರನ್ನು ಮೊದಲನೇಯದಾಗಿ ಆಯ್ಕೆ ಮಾಡಿದ್ದಾರೆ. ನಂತರ ಇದೇ ತಂಡದಲ್ಲಿ ಆಡಿದ್ದ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಕಪಿಲ್‌ ದೇವ್‌ ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಆಗಿದ್ದಾರೆ. ಕಳೆದ ಮೂರು ದಶಕಗಳಿಂದ ಭಾರತ ತಂಡದಲ್ಲಿ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಾಗಲಿಲ್ಲ. ಇನ್ನು ಸುನೀಲ್‌ ಗವಾಸ್ಕರ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 10000 ರನ್‌ಗಳನ್ನು ಕಲೆ ಹಾಕಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ.

IND vs ENG: 8 ವರ್ಷಗಳ ಬಳಿಕ ಇಂಗ್ಲೆಂಡ್‌ ತಂಡಕ್ಕೆ ಮರಳಿದ ಲಿಯಾಮ್‌ ಡಾಸನ್‌ ಯಾರು?

ನಂತರ ಇನ್ನುಳಿದ ಮೂವರು ಆಟಗಾರರನ್ನಾಗಿ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ ಹಾಗೂ ಎಂಎಸ್‌ ಧೋನಿಯನ್ನು ರವಿ ಶಾಸ್ತ್ರಿ ಆಯ್ಕೆ ಮಾಡಿದ್ದಾರೆ. 2011ರ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದಿದ್ದ ಭಾರತ ತಂಡದಲ್ಲಿ ಈ ಮೂವರು ಆಟಗಾರರು ಆಡಿದ್ದಾರೆ. ಐಸಿಸಿ ಮೂರೂ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮಾಸ್ಟರ್‌-ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ಕಿಂಗ ವಿರಾಟ್‌ ಕೊಹ್ಲಿ ಇದ್ದಾರೆ.

ಈ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ರವಿ ಶಾಸ್ತ್ರಿ, "ಖಚಿತವಾಗಿಯೂ ಸುನೀಲ್‌ ಗವಾಸ್ಕರ್‌. ಕಪಿಲ್‌, ಸಚಿನ್‌ ಹಾಗೂ ವಿರಾಟ್‌ ಕೊಹ್ಲಿ. ಬಿಷನ್‌ ಕೂಡ ಇದ್ದಾರೆ... ಆದರೆ ಎಂಎಸ್‌ ಧೋನಿಯನ್ನು ಆರಿಸುತ್ತೇನೆ. ಜಸ್‌ಪ್ರೀತ್‌ ಬುಮ್ರಾ ಇನ್ನು ಯುವ ವೇಗದ ಬೌಲರ್‌. ಅವರಿಗೆ ಇನ್ನೂ ಕ್ರಿಕೆಟ್‌ ಆಡುವುದು ಬಾಕಿ ಇದೆ. ನಾನು ಈ ಮೇಲೆ ಹೇಳಿರುವವರು ತಮ್ಮ ವೃತ್ತಿಜೀವನವನ್ನು ಮುಗಿಸಿದ್ದಾರೆ.

70ರ ದಶಕದಲ್ಲಿ ಸುನೀಲ್‌ ಗವಾಸ್ಕರ್‌, 80ರ ದಶಕದಲ್ಲಿ ಕಪಿಲ್‌ ದೇವ್‌, 90ರ ದಶಕದಲ್ಲಿ ಸಚಿನ್‌ ತೆಂಡೂಲ್ಕರ್‌ ಮತ್ತು 2011ರ ದಶಕದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಎಂಎಸ್‌ ಧೋನಿ," ಎಂದು ಹೇಳಿದ್ದಾರೆ.

ENG vs IND: 4ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ; 8 ವರ್ಷದ ಬಳಿಕ ಮರಳಿದ ಸ್ಪಿನ್ನರ್‌

"(ಗವಾಸ್ಕರ್) ಬ್ಯಾಟಿಂಗ್ ಎಂದು ನಾನು ಹೇಳುತ್ತೇನೆ. ಕಪಿಲ್ ಅದ್ಭುತ ಆಟಗಾರ. ನಿರೀಕ್ಷೆಗಳಿಂದಾಗಿ ಇಡೀ ಪ್ಯಾಕೇಜ್‌ನಲ್ಲಿ ನಂಬರ್ ಒನ್ ಸಚಿನ್ ಆಗಿರುತ್ತಾರೆ. ದೀರ್ಘಾಯುಷ್ಯದಿಂದಾಗಿ. 24 ವರ್ಷಗಳು. ನೂರು ಶತಕಗಳು. ಆ ದಶಕದ ಪ್ರತಿಯೊಂದು ವೇಗದ ಬೌಲಿಂಗ್‌ ದಾಳಿಯನ್ನು ಅವರು ಎದುರಿಸಿದ್ದಾರೆ. ಅವರು ವಸೀಮ್, ವಖಾರ್, ಇಮ್ರಾನ್ ಅವರನ್ನು ಎದುರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ ಆಸೀಸ್‌ಗೆ ಹೋದರು, ನಂತರ ಇಂಗ್ಲೆಂಡ್‌ ದಾಳಿಯನ್ನು ಎದುರಿಸಿದ್ದರು," ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.