IPL 2026: 16,706 ಕೋಟಿ ರು. ಗಳಿಗೆ ಮಾರಾಟವಾದ ಆರ್‌ಸಿಬಿ, ಅತ್ಯಂತ ದುಬಾರಿ ಫ್ರಾಂಚೈಸಿ!
ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಒಳಗೊಂಡ ಒಕ್ಕೂಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯುಎಸ್ ಡಾಲರ್ 1.78 ಬಿಲಿಯನ್ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿದೆ. ಅಂದರೆ ಭಾರತೀಯ ರುಪಾಯಿ ಲೆಕ್ಕದಲ್ಲಿ 16.706 ಕೋಟಿ ರು. ಗಳಿಗೆ ಆರ್‌ಸಿಬಿ ತಂಡ ಮಾರಾಟವಾಗಿದೆ.
16,706 ಕೋಟಿ ರು. ಗೆ ಆರ್‌ಸಿಬಿ ಮಾರಾಟವಾಗಿದೆ. -
ನವದೆಹಲಿ: ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಹಾಗೂ ಬ್ಲ್ಯಾಕ್‌ಸ್ಟೋನ್‌ನ ಪರ್ಪೆಚುವಲ್ ಪ್ರೈವೇಟ್ ಇಕ್ವಿಟಿ ತಂತ್ರದ ಒಕ್ಕೂಟವು ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಒಟ್ಟಾರೆ ಯುಎಸ್ ಡಾಲರ್ 1.78 ಬಿಲಿಯನ್ (ಸುಮಾರು ₹16,706 ಕೋಟಿ) ಮೌಲ್ಯದ ಈ ಒಪ್ಪಂದದ ಮೂಲಕ ಆರ್‌ಸಿಬಿ ಇತಿಹಾಸದಲ್ಲೇ ಅತ್ಯಂತ ದುಬಾರಿ ಟಿ20 ಫ್ರಾಂಚೈಸಿಯಾಗಿ ಹೊರಹೊಮ್ಮಿದೆ.
ಈ ಒಪ್ಪಂದವು ಐಪಿಎಲ್ ಹಾಗೂ ಡಬ್ಲ್ಯುಪಿಎಲ್ ಎರಡೂ ತಂಡಗಳನ್ನು ಒಳಗೊಂಡಿದೆ. ಹೊಸ ವ್ಯವಸ್ಥೆಯಲ್ಲಿ ನಾಯಕತ್ವ ಹಂಚಿಕೆ ಈಗಾಗಲೇ ನಿರ್ಧಾರವಾಗಿದ್ದು, ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು ಟೈಮ್ಸ್ ಇಂಟರ್ನೆಟ್ ಅಧ್ಯಕ್ಷರಾದ ಸತ್ಯನ್ ಗಜವಾಣಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೂಡಿಕೆದಾರರ ಗುಂಪಿನಲ್ಲಿ ಡೇವಿಡ್ ಬ್ಲಡ್ಜರ್ ಹಾಗೂ ವಿರಾಲ್ ಪಟೇಲ್ ಕೂಡ ಸೇರಿದ್ದಾರೆ.
IPL 2026: 13,600 ಕೋಟಿ ರುಗೆ ಅಮೆರಿಕಾ ಮೂಲದ ಉದ್ಯಮಿ ಪಾಲಾದ ರಾಜಸ್ಥಾನ್ ರಾಯಲ್ಸ್?
ಆದಿತ್ಯ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಮ್ ಬಿರ್ಲಾ ಹೇಳಿಕೆ
“ಕಳೆದ ಎರಡು ದಶಕಗಳಲ್ಲಿ ಐಪಿಎಲ್ ಜಾಗತಿಕ ಕ್ರೀಡಾ ಶಕ್ತಿಯಾಗಿ ರೂಪಾಂತರಗೊಂಡು ಭಾರತೀಯ ಕ್ರಿಕೆಟ್ ಮುಖವನ್ನು ಬದಲಾಯಿಸಿ, ಭಾರತದಲ್ಲಿ ಅಪಾರ ಮೌಲ್ಯವನ್ನು ಸೃಷ್ಟಿಸಿದೆ. ಆರ್‌ಸಿಬಿ ಆಧುನಿಕ ಕ್ರೀಡೆಯಲ್ಲಿ ಅತ್ಯಂತ ಆಕರ್ಷಕ ಫ್ರಾಂಚೈಸಿಗಳಲ್ಲಿ ಒಂದಾಗಿದೆ ಹಾಗೂ ಆದಿತ್ಯ ಬಿರ್ಲಾ ಗ್ರೂಪ್, ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಸಂಸ್ಥಾಪನಾ ಪರಂಪರೆಯನ್ನು ಮುಂದುವರಿಸಲು ವಿಶಿಷ್ಟ ವೇದಿಕೆ ಒದಗಿಸುತ್ತದೆ. ಈ ಆಸ್ತಿಯ ರಕ್ಷಣಾಧಿಕಾರಿಗಳಾಗಿ ನಾವು ಆಯ್ಕೆಯಾಗಿದ್ದು ಸಂತೋಷವಾಗಿದ್ದು, ಈ ಅದ್ಭುತ ಪರಂಪರೆಯನ್ನು ಇನ್ನಷ್ಟು ಕಟ್ಟಲು ನಾವು ಬದ್ಧರಾಗಿದ್ದೇವೆ," ಎಂದು ಕುಮಾರ್ ಮಂಗಳಮ್ ಬಿರ್ಲಾ ಹೇಳಿದ್ದಾರೆ.
🚨 RCB HAS BEEN SOLD TO BIRLAS. 🚨
— Mufaddal Vohra (@mufaddal_vohra) March 24, 2026
- A consortium of Aditya Birla Group, American sports investor David Blitzer, US private equity firm Blackstone has acquired RCB. (Money Control). pic.twitter.com/O8xTvQW3ML
ಐಪಿಎಲ್ ಟೂರ್ನಿಯನ್ನು 2008 ರಲ್ಲಿ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಯುಎಸ್ ಡಾಲರ್ 111.6 ಮಿಲಿಯನ್ ಬಿಡ್‌ನೊಂದಿಗೆ ಸ್ವಾಧೀನಪಡಿಸಿಕೊಂಡಿತ್ತು. 2023 ರಲ್ಲಿ ಆರ್‌ಸಿಬಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತಂಡವನ್ನು ಸ್ವಾಧೀನಪಡಿಸಿಕೊಳ್ಳಲು 901 ಕೋಟಿ ರು. ಗಳನ್ನು ಪಾವತಿಸಿತ್ತು.
ಸಾತ್ವನ್ ಗಾಜ್ವಾಣಿ ಹೇಳಿಕೆ
“ಆರ್‌ಸಿಬಿ ಪ್ರಸ್ತುತ ಹಾಲಿ ಚಾಂಪಿಯನ್ ಮತ್ತು ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಜನಪ್ರಿಯ ಬ್ರ್ಯಾಂಡ್. ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಮತ್ತು ನಮ್ಮ ಸಹಭಾಗಿಗಳೊಂದಿಗೆ, ನಾವು ಆರ್‌ಸಿಬಿಯನ್ನು ಜಾಗತಿಕ ಕ್ರೀಡಾ ಸಂಸ್ಥೆಯಾಗಿ ಕಟ್ಟುತ್ತೇವೆ, ಆದರೆ ಬೆಂಗಳೂರಿನ, ಕರ್ನಾಟಕದ ಮತ್ತು ಅದರ ಅದ್ಭುತ ಅಭಿಮಾನಿಗಳ ಬೆಟ್ಟದ ಮೇಲೆ ಆಧಾರಿತವಾಗಿಯೇ ಇರಿಸುತ್ತೇವೆ. ಈ ಚಾಂಪಿಯನ್‌ಶಿಪ್ ಗೆದ್ದ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸಿದ ಎಲ್ಲರಿಗೂ—ಆಟಗಾರರು, ಕೋಚ್‌ಗಳು, ನಾಯಕತ್ವ ತಂಡ ಮತ್ತು ಅಭಿಮಾನಿಗಳು—ನಾವು ಬದ್ಧರಾಗಿದ್ದೇವೆ. ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಶನಿವಾರ ಮೈದಾನಕ್ಕೆ ಇಳಿಯಲಿರುವ ತಂಡವನ್ನು ಬೆಂಬಲಿಸಲು ನಾವು ಎದುರು ನೋಡುತ್ತಿದ್ದೇವೆ," ಎಂದು ಟೈಮ್ ಗ್ರೂಪ್‌ನ ಸಾತ್ವನ್ ಗಾಜ್ವಾಣಿ ಹೇಳಿದ್ದಾರೆ.