ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: 26 ರನ್‌ಗೆ ಔಟಾದರೂ ವಿಶೇಷ ದಾಖಲೆಯನ್ನು ಬರೆದ ಟಿಮ್‌ ಡೇವಿಡ್!

Tim David 1000 Runs: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟ್ಸ್‌ಮನ್‌ ಟಿಮ್‌ ಡೇವಿಡ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಅತಿ ಹೆಚ್ಚು ಸ್ಟ್ರೈಕ್‌ ರೇಟ್‌ನಲ್ಲಿ ಈ ಮೊತ್ತ ಕಲೆ ಹಾಕಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡರು ಹಾಗೂ ಸಹ ಆಟಗಾರ ಫಿಲ್‌ ಸಾಲ್ಟ್‌ ದಾಖಲೆಯನ್ನು ಮುರಿದಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ನೂತನ ದಾಖಲೆ ಬರೆದ ಟಿಮ್‌ ಡೇವಿಡ್‌!

1000 ರನ್‌ಗಳ ಮೂಲಕ ವಿಶೇಷ ದಾಖಲೆ ಬರೆದ ಟಿಮ್‌ ಡೇವಿಡ್‌. -

Profile
Ramesh Kote Apr 18, 2026 7:25 PM

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಟಿಮ್‌ ಡೇವಿಡ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಶನಿವಾರ ಡೆಲ್ಲಿ ವಿರುದ್ಧ ಟಿಮ್‌ ಡೇವಿಡ್‌ (Tim David) 17 ಎಸೆತಗಳಲ್ಲಿ 26 ರನ್‌ ಗಳಿಸಿದ ಬಳಿಕ ವಿಕೆಟ್‌ ಒಪ್ಪಿಸಿದರು. ಇದರಲ್ಲಿ ಅವರು ಒಂದು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳನ್ನು ಬಾರಿಸಿದರು. ಆ ಮೂಲಕ ಈ ಪಂದ್ಯದಲ್ಲಿ ಆರ್‌ಸಿಬಿ ಪರ ಫಿಲ್‌ ಸಾಲ್ಟ್‌ (63 ರನ್‌) ಬಳಿಕ ಎರನೇ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

16ನೇ ಓವರ್‌ನ ಎರಡನೇ ಎಸೆತದಲ್ಲಿ ಅಕ್ಷರ್‌ ಪಟೇಲ್‌ ಬೌಲಿಂಗ್‌ನಲ್ಲಿ ಟಿಮ್‌ ಡೇವಿಡ್‌ ವಿಕೆಟ್‌ ಒಪ್ಪಿಸಿದರು. ಟಿಮ್‌ ಡೇವಿಡ್‌ ವಿಕೆಟ್‌ ಒಪ್ಪಿಸಿದ ಬಳಿಕ ಆರ್‌ಸಿಬಿ ತಂಡ ಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟಿಂಗ್‌ನಲ್ಲಿ ವಿಫಲವಾಯಿತು ಹಾಗೂ ಕೇವಲ 28 ರನ್‌ಗಳನ್ನು ಮಾತ್ರ ಕಲೆ ಹಾಕಿತು. ಅಂತಿಮವಾಗಿ ಆರ್‌ಸಿಬಿ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 175 ರನ್‌ಗಳನ್ನು ಕಲೆ ಹಾಕಿತ್ತು.

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಪಂದ್ಯವಾಡುವ ಮೂಲಕ ಇತಿಹಾಸ ಬರೆದ ಆರ್‌ಸಿಬಿ!

ವಿಶಷ ದಾಖಲೆ ಬರೆದ ಟಿಮ್‌ ಡೇವಿಡ್‌

ಈ ಪಂದ್ಯದಲ್ಲಿ ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆರ್‌ಸಿಬಿ ಸ್ಟಾರ್‌ ಬ್ಯಾಟ್ಸ್‌ಮನ್‌ ತಮ್ಮ 109ನೇ ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಈ ಸಾಧನೆ ಮಾಡಿದ ಒಟ್ಟು 109 ಆಟಗಾರರ ಪೈಕಿ ಯಾವುದೇ ಬ್ಯಾಟ್ಸ್‌ಮನ್‌ ಹೆಚ್ಚಿನ ಸ್ಟ್ರೈಕ್‌ ರೇಟ್‌ ಹೊಂದಿಲ್ಲ. ಆದರೆ, ಟಿಮ್‌ ಡೇವಿಡ್‌ 177.83ರ ಸ್ಟ್ರೈಕ್‌ ರೇಟ್‌ನಲ್ಲಿ ಗಳಿಸಿದ್ದಾರೆ. ಆ ಮೂಲಕ ಅವರು ತಮ್ಮ ಸಹ ಆಟಗಾರ ಫಿಲ್‌ ಸಾಲ್ಟ್‌ ಹಾಗೂ ಕೆಕೆಆರ್‌ ದಿಗ್ಗಜ ಆಂಡ್ರೆ ರಸೆಲ್ ಅವರನ್ನು ಡೇವಿಡ್‌ ಹಿಂದಿಕ್ಕಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಅತ್ಯುತ್ತಮ ಸ್ಟ್ರೈಕ್‌ ರೇಟ್‌ನಲ್ಲಿ 1000+ ರನ್‌ಗಳನ್ನು ಗಳಿಸಿದ ಆಟಗಾರರು

ಟಿಮ್ ಡೇವಿಡ್: 177.83ರ ಸ್ಟ್ರೈಕ್‌ ರೇಟ್‌ನಲ್ಲಿ 1019 ರನ್‌ಗಳು

ಫಿಲ್ ಸಾಲ್ಟ್: 174.47ರ ಸ್ಟ್ರೈಕ್‌ ರೇಟ್‌ನಲ್ಲಿ 1258 ರನ್‌ಗಳು

ಆಂಡ್ರೆ ರಸೆಲ್: 174.17ರ ಸ್ಟ್ರೈಕ್‌ ರೇಟ್‌ನಲ್ಲಿ 2651 ರನ್‌ಗಳು

ಟ್ರಾವಿಸ್ ಹೆಡ್: 168.12ರ ಸ್ಟ್ರೈಕ್‌ ರೇಟ್‌ನಲ್ಲಿ 1266 ರನ್‌ಗಳು

ಸುನೀಲ್ ನರೇನ್: 165.84ರ ಸ್ಟ್ರೈಕ್‌ ರೇಟ್‌ನಲ್ಲಿ 1816 ರನ್‌ಗಳು

ʻಆಶಿಶ್‌ ನೆಹ್ರಾ ಫುಟ್ಬಾಲ್‌ ಕೋಚ್‌ ಇದ್ದಂತೆʼ: ಗುಜರಾತ್‌ ಟೈಟನ್ಸ್‌ ಕೋಚ್‌ಗೆ ಹರ್ಭಜನ್‌ ಸಿಂಗ್‌ ಮೆಚ್ಚುಗೆ!

ವೇಗವಾಗಿ 1000 ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌

ಐಪಿಎಲ್‌ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ 1000 ರನ್‌ಗಳನ್ನು ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಟಿಮ್‌ ಡೇವಿಡ್‌ ಬರೆದಿದ್ದಾರೆ. ಆರ್‌ಸಿಬಿ ಬ್ಯಾಟ್ಸ್‌ಮನ್‌ ಈ ಮೈಲುಗಲ್ಲು ತಲುಪಲು 560 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಕೇವಲ 545 ಎಸೆತಗಳನ್ನು ತೆಗೆದುಕೊಂಡಿರುವ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮಾಜಿ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಅಗ್ರ ಸ್ಥಾನದಲ್ಲಿದ್ದಾರೆ.

ಅತಿ ವೇಗವಾಗಿ 1000 ರನ್‌ಗಳನ್ನು ಗಳಿಸಿದ ಬ್ಯಾಟರ್ಸ್‌

ಆಂಡ್ರೆ ರಸೆಲ್‌: 545 ಎಸೆತಗಳು (2019)

ಟಿಮ್‌ ಡೇವಿಡ್‌: 560 ಎಸೆತಗಳು (2026)

ಟ್ರಾವಿಸ್‌ ಹೆಡ್‌: 575 ಎಸೆತಗಳು (2025)

ಫಿಲ್‌ ಸಾಲ್ಟ್‌: 576 ಎಸೆತಗಳು (2025)

ಹೆನ್ರಿಕ್‌ ಕ್ಲಾಸೆನ್‌: 594 ಎಸೆತಗಳು (2025)