ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಪಂದ್ಯವಾಡುವ ಮೂಲಕ ಇತಿಹಾಸ ಬರೆದ ಆರ್‌ಸಿಬಿ!

RCB vs DC: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 26ನೇ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದ ಆರ್‌ಸಿಬಿ ತವರು ಅಂಗಣದಲ್ಲಿಇತಿಹಾಸ ಬರೆದಿದೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಆರ್‌ಸಿಬಿ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ದಾಖಲೆ ಬರೆದ ಆರ್‌ಸಿಬಿ. -

Profile
Ramesh Kote Apr 18, 2026 6:52 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ತಮ್ಮ ಆರನೇ ಪಂದ್ಯದಲ್ಲಿ ಕಣಕ್ಕಿಳಿದ ಬಳಿಕ ಇತಿಹಾಸ ನಿರ್ಮಿಸಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಸೀಸನ್‌ನಲ್ಲಿ ಶುಭಾರಂಭ ಕಂಡಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಒಟ್ಟು ಎಂಟು ಅಂಕಗಳನ್ನು ಪಡೆದಿರುವ ತಂಡ, ಕೇವಲ ಒಂದೇ ಒಂದು ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮಾತ್ರ ಸೋಲು ಕಂಡಿದೆ.

ಆರ್‌ಸಿಬಿ ಈ ಆವೃತ್ತಿಯಲ್ಲಿ ತನ್ನ ತವರು ಅಂಗಣದಲ್ಲಿ ಅದ್ಭುತ ಆರಂಭ ಮಾಡಿದ್ದು, ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಹಿಂದಿನ ವರ್ಷಗಳಲ್ಲಿ ಬೆಂಗಳೂರು ತಂಡದ ತವರು ಅಂಗಣದ ದಾಖಲೆಯು ಹೆಚ್ಚು ಉತ್ತಮವಾಗಿರಲಿಲ್ಲವಾದರೂ, ಈ ಬಾರಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡುತ್ತಿದೆ. ಸನ್‌ರೈಸರ್ಸ್‌ ಹೈದರಾಬಾದ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಜಯ ಸಾಧಿಸಿದೆ.

IPL 2026: ಜಸ್‌ಪ್ರೀತ್‌ ಬುಮ್ರಾ ಎದುರಿಸುತ್ತಿರುವ ಸಮಸ್ಯೆಯನ್ನು ತಿಳಿಸಿದ ಇರ್ಫಾನ್‌ ಪಠಾಣ್‌!

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲೆ ಬರೆದ ಆರ್‌ಸಿಬಿ

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಾಲಿಗೆ ಇದು 100ನೇ ಐಪಿಎಲ್‌ ಪಂದ್ಯವಾಗಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಏಕೈಕ ಕ್ರೀಡಾಂಗಣದಲ್ಲಿ 100 ಪಂದ್ಯಗಳನ್ನು ಪೂರ್ಣಗೊಳಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಆರ್‌ಸಿಬಿ ತಂಡ ಬರೆದಿದೆ. ಇನ್ನು ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ತಮ್ಮ-ತಮ್ಮ ಅಂಗಣದಲ್ಲಿ 90ಕ್ಕೂ ಅಧಿಕ ಪಂದ್ಯಗಳನ್ನು ಆಡಿವೆ.



ಐಪಿಎಲ್‌ ಇತಿಹಾಸದಲ್ಲಿ ತವರು ಅಂಗಣದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಂಡಗಳು

ಆರ್‌ಸಿಬಿ: 100 ಪಂದ್ಯಗಳು- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಕೆಕೆಆರ್‌: 98 ಪಂದ್ಯಗಳು-ಈಡನ್‌ ಗಾರ್ಡನ್ಸ್‌, ಕೋಲ್ಕತಾ

ಎಂಐ: 95 ಪಂದ್ಯಗಳು-ವಾಂಖೆಡೆ ಕ್ರೀಡಾಂಗಣ, ಮುಂಬೈ

ಡಿಸಿ: 89 ಪಂದ್ಯಗಳು- ಅರುಣ್‌ ಜೆಟ್ಲಿ ಕ್ರೀಡಾಂಗಣ, ನವದೆಹಲಿ

ಸಿಎಸ್‌ಕೆ: 80 ಪಂದ್ಯಗಳು, ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ

ಅತಿ ಹೆಚ್ಚು ಫ್ಯಾನ್‌ ಫಾಲೋವರ್ಸ್‌ ಹೊಂದಿರುವ ಆರ್‌ಸಿಬಿ ತಂಡ 18 ವರ್ಷಗಳಲ್ಲಿ 100 ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. 2008ರ ಏಪ್ರಿಲ್‌ 18 ರಂದು ಆರ್‌ಸಿಬಿ ಈ ಅಂಗಣದಲ್ಲಿ ಮೊಟ್ಟ ಮೊದಲ ಪಂದ್ಯವನ್ನು ಆಡಿತ್ತು. ಐಪಿಎಲ್‌ ಟೂರ್ನಿಯ ಇತಿಹಾಸ ಮೊಟ್ಟ ಮೊದಲ ಪಂದ್ಯವನ್ನು ಇದೇ ಅಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಡಿದ್ದರು ಹಾಗೂ ಈಗಲೂ ಅವರು ಆಡುತ್ತಿದ್ದಾರೆ.