ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT ಫೈನಲ್‌ಗೂ ಮುನ್ನ ಆಟಗಾರರಿಗೆ ನೀಡಿದ್ದ ಸಂದೇಶವನ್ನು ರಿವೀಲ್‌ ಮಾಡಿದ ವಿರಾಟ್‌ ಕೊಹ್ಲಿ!

ಗುಜರಾತ್‌ ಟೈಟನ್ಸ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಆಟಗಾರರಿಗೆ ನೀಡಿದ್ದ ಸಂದೇಶವನ್ನು ವಿರಾಟ್‌ ಕೊಹ್ಲಿ ಚಾಂಪಿಯನ್ಸ್‌ ಆದ ಬಳಿಕ ರಿವೀಲ್‌ ಮಾಡಿದ್ದಾರೆ. ಈ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆಲುವು ಪಡೆದ ಬಳಿಕ ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IPL 2026: ಆರ್‌ಸಿಬಿ ಆಟಗಾರರಿಗೆ ನೀಡಿದ್ದ ಸಂದೇಶ ರಿವೀಲ್‌ ಮಾಡಿದ ಕೊಹ್ಲಿ!

ಫೈನಲ್‌ಗೂ ಮುನ್ನ ಆರ್‌ಸಿಬಿ ಹುಡುಗರಿಗೆ ನೀಡಿದ್ದ ಸಂದೇಶ ಏನೆಂದು ರವೀಲ್‌ ಮಾಡಿದ ಕೊಹ್ಲಿ. -

Profile
Ramesh Kote Jun 1, 2026 2:01 AM

ಅಹಮದಾಬಾದ್: ಗುಜರಾತ್ ಟೈಟನ್ಸ್ (GT)ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ 5 ವಿಕೆಟ್‌ ಗೆಲುವು ಪಡೆಯಿತು ಹಾಗೂ ಸತತ ಎರಡನೇ ಬಾರಿ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಈ ಪಂದ್ಯದಲ್ಲಿ 42 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳೊಂದಿಗೆ ಅಜೇಯ 75 ರನ್ ಗಳಿಸಿ ಆರ್‌ಸಿಬಿಯನ್ನು ಗೆಲ್ಲಿಸಿದ ವಿರಾಟ್‌ ಕೊಹ್ಲಿ (Virat Kohli) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ ಹಲವು ಸಂಗತಿಗಳನ್ನು ರಿವೀಲ್‌ ಮಾಡಿದರು. ಫೈನಲ್‌ ಪಂದ್ಯಕ್ಕೂ ಮುನ್ನ ತಮ್ಮ ಆಟಗಾರರಿಗೆ ನೀಡಿದ್ದ ಸಂದೇಶ ಏನೆಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಮೇ 31 ರಂದು ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಅವರ ಅತ್ಯಂತ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮೊದಲು ಅವರು 2018 ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊಹ್ಲಿ ಕೂಡ ಅದೇ ಸಂಖ್ಯೆಯ ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಕೊಹ್ಲಿ 2025ರಲ್ಲಿ 27 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

RCB vs GT: ʻಈ ಸಲಾನು ಕಪ್‌ ನಮ್ದೇʼ-ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಗರಿ!

ಪ್ರಶಸ್ತಿ ಗೆದ್ದ ಬಳಿಕ ವಿರಾಟ್‌ ಕೊಹ್ಲಿ ಹೇಳಿಕೆ

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, "ಕಳೆದ ವರ್ಷ ಇದ್ದ ಒತ್ತಡ ಈ ಬಾರಿ ನಮ್ಮ ತಂಡದ ಮೇಲೆ ಇರಲಿಲ್ಲ ಎಂದು ನಾನು ಕೆಲ ಆಟಗಾರರಿಗೆ ಹೇಳಿದ್ದೆ. ಇಂದಿನ ಪಂದ್ಯದಲ್ಲಿ ನಮ್ಮ ಆಟಗಾರರ ಸಮಚಿತ್ತತೆ ಮತ್ತು ಆತ್ಮವಿಶ್ವಾಸ ಸ್ಪಷ್ಟವಾಗಿ ಗೋಚರಿಸಿತು. ವಿರಾಮದ ನಂತರ ನಾವು ಕೆಲವು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರೂ, ಲೀಗ್ ಹಂತವನ್ನು ಅಗ್ರಸ್ಥಾನದಲ್ಲಿ ಮುಗಿಸುವ ಗುರಿಯನ್ನು ಹೊಂದಿದ್ದೆವು. ಮುಂಬೈ ಇಂಡಿಯನ್ಸ್‌ ವಿರುದ್ಧದ ಗೆಲುವು ನಮಗೆ ಅಪಾರ ಆತ್ಮವಿಶ್ವಾಸ ನೀಡಿತು. ತಂಡದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ಹೊತ್ತು ಆಡುತ್ತಿರುವಾಗ, ‘ತಂಡಕ್ಕಾಗಿ ನಾನು ಒಬ್ಬನೇ ಮುಂದೆ ಬರಬೇಕು’ ಎಂಬ ಭಾವನೆ ಉಂಟಾಗುವುದಿಲ್ಲ. ಅಂತಹ ಆಟಗಾರರ ಗುಂಪು ನಮ್ಮಲ್ಲಿರುವುದು ಅತ್ಯಂತ ವಿಶೇಷ,” ಎಂದು ಹೇಳಿದ್ದಾರೆ.



ಆರ್‌ಸಿಬಿ ಎರಡನೇ ಟ್ರೋಫಿ

ಇದಕ್ಕೂ ಮೊದಲು ಆರ್‌ಸಿಬಿ 2025ರಲ್ಲಿ ತಮ್ಮ ಮೊದಲ ಟ್ರೋಫಿಯನ್ನು ಗೆದ್ದಿತ್ತು. ಇನ್ನು ಈ ಪಂದ್ಯದಲ್ಲಿ ಟಾಸ್‌ ಗೆದ್ದ ರಜತ್‌ ಪಾಟಿದಾರ್‌ ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಇದಕ್ಕೆ ಆರ್‌ಸಿಬಿ ಬೌಲರ್‌ಗಳು ಸಾಥ್‌ ನೀಡಿದ್ದರ ಫಲವಾಗಿ ಗುಜರಾತ್‌ ತಂಡ, 8 ವಿಕೆಟ್‌ಗಳ ನಷ್ಟಕ್ಕೆ ಒಟ್ಟು 155 ರನ್ ಗಳಿಸಿತು. ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅಜೇಯ 50 ರನ್ ಗಳಿಸಿ ಜಿಟಿ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

IPL 2026 Final: ಆರ್‌ಸಿಬಿಗೆ ಸತತ 2ನೇ ಟ್ರೋಫಿ ಗೆದ್ದುಕೊಟ್ಟು ಹಲವು ದಾಖಲೆಗಳನ್ನು ಮುರಿದ ರಜತ್‌ ಪಾಟಿದಾರ್‌!

ನಿಶಾಂತ್ ಸಿಂಧು ತಂಡದ ಮೊತ್ತಕ್ಕೆ 20 ರನ್‌ಗಳ ಕೊಡುಗೆ ನೀಡಿದರು. ಹೆಚ್ಚುವರಿಯಾಗಿ, ಜೋಸ್ ಬಟ್ಲರ್ ತಂಡದ ಮೊತ್ತಕ್ಕೆ 19 ರನ್‌ಗಳ ಕೊಡುಗೆ ನೀಡಿದರು. ಆರ್‌ಸಿಬಿ ಪರ ರಸಿಕ್ ಸಲಾಂ ದಾರ್ 3 ವಿಕೆಟ್‌ಗಳನ್ನು ಪಡೆದು ಅಗ್ರ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.



156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ವಿರಾಟ್‌ ಕೊಹ್ಲಿಯ ಅರ್ಧಶತಕದ ಬಲದಿಂದ 18 ಓವರ್‌ಗಳಲ್ಲಿ ಗೆದ್ದು ಬೀಗಿತು. ವಿರಾಟ್ ಕೊಹ್ಲಿ ಅಗ್ರ ಸ್ಕೋರರ್ ಆಗಿದ್ದರೆ, ವೆಂಕಟೇಶ್ ಅಯ್ಯರ್ 16 ಎಸೆತಗಳಲ್ಲಿ 32 ರನ್‌ಗಳನ್ನು ಸೇರಿಸಿದರು. ಟಿಮ್ ಡೇವಿಡ್ ತಂಡದ ಮೊತ್ತಕ್ಕೆ 24 ರನ್‌ಗಳ ಕೊಡುಗೆ ನೀಡಿದರು.