ʻಬುಮ್ರಾ ರೀತಿಯ ಬೌಲರ್ ನಾನಲ್ಲʼ: ತಮ್ಮ ಬೌಲಿಂಗ್ ಸಕ್ಸಸ್‌ಗೆ ಕಾರಣ ತಿಳಿಸಿದ ಜಾಶ್ ಹೇಝಲ್‌ವುಡ್!
ಲಖನೌ ಸೂಪರ್ ಜಯಂಟ್ಸ್ ವಿರುದ್ಧ ತಮ್ಮ ಅದ್ಭುತ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಜಾಶ್ ಹೇಝಲ್‌ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಬೌಲ್ ಮಾಡಿದ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಒಂದು ವಿಕೆಟ್ ಪಡೆದು ಕೇವಲ 20 ರನ್ ಕೊಟ್ಟಿದ್ದರು.
ಆರ್‌ಸಿಬಿ ಗೆಲುವಿನ ಬಳಿಕ ಜಾಶ್ ಹೇಝಲ್‌ವುಡ್ ಹೇಳಿಕೆ. -
ಬೆಂಗಳೂರು: ಲಖನೌ ಸೂಪರ್ ಜಯಂಟ್ಸ್ ವಿರುದ್ಧ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ (RCB vs LSG match Highlights) ನೆರವು ನೀಡಿದ್ದ ಜಾಶ್ ಹೇಝಲ್‌ವುಡ್ (Josh Hazlewood) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಆಸೀಸ್ ವೇಗಿಗೆ ಇದು ಎರಡನೇ ಪಂದ್ಯವಾಗಿದೆ. ಗೆಲುವಿನ ಬಳಿಕ ಜಿಯೊ ಹಾಟ್‌ಸ್ಟಾರ್ ಜೊತೆ ಮಾತನಾಡಿದ ಜಾಶ್ ಹೇಝಲ್‌ವುಡ್, ತಮ್ಮ ಬೌಲಿಂಗ್ ಯಶಸ್ಸಿಗೆ ಕಾರಣವೇನೆಂದು ತಿಳಿಸಿದ್ದಾರೆ. ಅಲ್ಲದೆ ಜಸ್‌ಪ್ರೀತ್ ಬುಮ್ರಾ ಅವರಂತಹ ಪ್ರತಿಭೆ ನನ್ನಲ್ಲಿ ಇಲ್ಲವಾದರೂ ತಾನು ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಪರಿಣಾಮಕಾರಿಯಾಗಿ ಬೌಲ್ ಮಾಡುತ್ತೇನೆಂದು ಅವರು ಹೇಳಿಕೊಂಡಿದ್ದಾರೆ.
ಬುಧವಾರ ರಾತ್ರಿ ಜಾಶ್ ಹೇಝಲ್‌ವುಡ್ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 20 ರನ್ ನೀಡಿ ಒಂದು ವಿಕೆಟ್ ಕಿತ್ತಿದ್ದರೂ ಅವರು ಪವರ್‌ಪ್ಲೇನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬೌಲ್ ಮಾಡಿದ್ದರು. ಇದರ ಪರಿಣಾಮ ಎಲ್‌ಎಸ್‌ಜಿ ಪವರ್‌ಪ್ಲೇನಲ್ಲಿ ಭರ್ಜರಿ ಆರಂಭ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಲಖನೌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ ಕೇವಲ 146 ರನ್‌ಗಳಿಗೆ ಸೀಮಿತವಾಗಿತ್ತು. 35ರ ವಯಸ್ಸಿನ ಜಾಶ್ ಹೇಝಲ್‌ವುಡ್ 2022ರಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ ಹಾಗೂ ಕೀ ವೇಗಿಯಾಗಿದ್ದಾರೆ.
RCB vs LSG: ರಸಿಖ್ ಸಲಾಮ್ ಮಾರಕ ದಾಳಿ, ಲಖನೌ ಎದುರು ಗೆದ್ದು ಅಗ್ರ ಸ್ಥಾನಕ್ಕೇರಿದ ಆರ್‌ಸಿಬಿ!
2022ರ ಟೂರ್ನಿಯಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದ ಹೇಝಲ್‌ವುಡ್, 2025ರ ಆರ್‌ಸಿಬಿ ತಂಡದ ಚೊಚ್ಚಲ ಕಪ್ ಗೆದ್ದ ವರ್ಷದಲ್ಲಿ 22 ವಿಕೆಟ್‌ಗಳನ್ನು ಕಿತ್ತಿದ್ದರು. ಆರ್‌ಸಿಬಿ ಪರ ಇಲ್ಲಿಯವರೆಗೂ ಆಡಿದ 27 ಪಂದ್ಯಗಳಲ್ಲಿ ಅವರು 45 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೇ ಅವಧಿಯಲ್ಲಿ ಜಸ್‌ಪ್ರೀತ್ ಬುಮ್ರಾ ಆರ್‌ಸಿಬಿ ವೇಗಿಗಿಂತ 8 ಹೆಚ್ಚುವರಿ ವಿಕೆಟ್‌ಗಳನ್ನು ಕಬಳಿಸಿದ್ದಾರೆ. 40 ವಿಕೆಟ್‌ಗಳ ಅವಧಿಯಲ್ಲಿ ಬುಮ್ರಾಗಿಂತ ಹೇಝಲ್‌ವುಡ್ ಅವರ ಸ್ಟ್ರೈಕ್ ರೇಟ್ 18.64 ಹಾಗೂ ಎಕಾನಮಿ ರೇಟ್ 8.43ರಷ್ಟಿದೆ. ಜಸ್‌ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಬಳಿಕ ಹೇಝಲ್‌ವುಡ್ ಮೂರನೇ ಸ್ಥಾನದಲ್ಲಿದ್ದಾರೆ.
A bowling masterclass in his first game at Chinnaswamy this szn! 😮💨🔥
— Royal Challengers Bengaluru (@RCBTweets) April 15, 2026
1️⃣3️⃣ dot balls and just 2️⃣0️⃣ runs in his 4️⃣ overs with a wicket to his name. 🙌
Josh Hazlewood, you beauty. 🤌❤️ pic.twitter.com/6N4BCneHJJ
ಜಸ್‌ಪ್ರೀತ್ ಬುಮ್ರಾ ರೀತಿಯ ಪಾಂಡಿತ್ಯ ನನ್ನಲ್ಲಿ ಇಲ್ಲ: ಹೇಝಲ್‌ವುಡ್
ಜಸ್‌ಪ್ರೀತ್ ಬುಮ್ರಾ ಸೇರಿದಂತೆ ಇತರೆ ಬೌಲರ್‌ಗಳ ರೀತಿ ಜಾಶ್ ಹೇಝಲ್‌ವುಡ್ ಅವರು ವಿಭಿನ್ನ ಎಸೆತಗಳ ಪಾಂಡಿತ್ಯವನ್ನು ಹೊಂದಿಲ್ಲವಾದರೂ ಅವರ ಬೌಲಿಂಗ್ ವಿಧಾನವು ನಿರಂತರ ನಿಖರತೆ, ಪುನಃ ಬಳಸಬಹುದಾದ ಲೆನ್ತ್‌ಗಳು ಮತ್ತು ಬೌಲಿಂಗ್ ದಾಳಿಯಲ್ಲಿ ತನ್ನ ಪಾತ್ರದ ಸ್ಪಷ್ಟ ಅರಿವಿನ ಮೇಲೆ ನಿರ್ಮಿತವಾಗಿದೆ.
"ನಾನು ಕೆಲವೊಮ್ಮೆ ಆಫ್-ಕಟ್ಟರ್ ಕೂಡ ಬೌಲ್ ಮಾಡುತ್ತೇನೆ. ಆದರೆ ಜಸ್‌ಪ್ರೀತ್ ಬುಮ್ರಾ ಅವರಂತೆಯೇ ನಿಧಾನಗತಿಯ ಎಸೆತಗಳು ನನ್ನ ಬಳಿ ಇಲ್ಲ. ಆದ್ದರಿಂದ, ಅದನ್ನು ಬೇರೆ ರೀತಿಯಲ್ಲಿ ಪೂರೈಸಲು ಪ್ರಯತ್ನಿಸುತ್ತೇನೆ. ತರಬೇತಿಯಲ್ಲಿ ನಾನು ಯಾವಾಗಲೂ ಹೊಸ ವಿಷಯಗಳ ಮೇಲೆ ಕೆಲಸ ಮಾಡುತ್ತಿರುತ್ತೇನೆ ಮತ್ತು ಅವುಗಳನ್ನು ಅಗತ್ಯವಿದ್ದಾಗ ಬಳಸುತ್ತೇನೆ. ಆದರೆ ಇಂದು (ಬುಧವಾರ) ಮುಖ್ಯವಾಗಿ ನಿಖರತೆಯ ಮೇಲೆ ಗಮನವಿತ್ತು — ಸರಿಯಾದ ಲೆನ್ತ್ ಹೊಡೆಯುವುದು, ಕೆಲವು ಕ್ರಾಸ್-ಸೀಮ್ ಡೆಲಿವರಿಗಳನ್ನು ಬಳಸುವುದು ಮತ್ತು ಸರಳವಾಗಿ ಆಟ ಆಡುವುದು. ನಾವು ಇತ್ತೀಚೆಗೆ ಹೆಚ್ಚು ಫ್ಲ್ಯಾಟ್ ವಿಕೆಟ್‌ಗಳಲ್ಲಿ ಆಡುತ್ತಿದ್ದೇವೆ, ಆದ್ದರಿಂದ ಅಲ್ಲಿ ಸ್ಲೋ ಎಸೆತಗಳು ಮತ್ತು ಯಾರ್ಕರ್‌ಗಳು ಹೆಚ್ಚು ಪರಿಣಾಮಕಾರಿ ಆಗುತ್ತವೆ,” ಎಂದು ಜಾಶ್ ಹೇಝಲ್‌ವುಡ್ ಜಿಯೋಹಾಟ್‌ಸ್ಟಾರ್‌ನಲ್ಲಿ ಫಾಫ್ ಡು ಪ್ಲೆಸಿಸ್‌ಗೆ ತಿಳಿಸಿದ್ದಾರೆ.
IPL 2026 Points table: ಲಖನೌ ಎದುರು ದೊಡ್ಡ ಗೆಲುವಿನ ಬಳಿಕ ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ!
ಪವರ್‌ಪ್ಲೇನಲ್ಲಿ ಕೇವಲ 10 ರನ್ ನೀಡಿದ್ದ ಜಾಶ್
ಎಲ್‌ಎಸ್‌ಜಿ ಎದುರು ಪವರ್‌ಪ್ಲೇನಲ್ಲಿ ಜಾಶ್ ಬೌಲ್ ಮಾಡಿದ್ದ ಮೂರು ಓವರ್‌ಗಳಲ್ಲಿ ಕೇವಲ 10 ರನ್ ನೀಡಿ ಒಂದು ವಿಕೆಟ್ ಕಿತ್ತಿದ್ದರು. ಆ ಮೂಲಕ ಲಖನೌ ತಂಡ ಪವರ್‌ಪ್ಲೇನಲ್ಲಿ ಒಂದು ವಿಕೆಟ್ ಕಳೆದುಕೊಂಡು ಕೇವಲ 35 ರನ್ ಗಳಿಗೆ ಸೀಮಿತವಾಗಿತ್ತು. ಇದು ಪಂದ್ಯದ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಅಲ್ಲದೆ ಅವರು ತಮ್ಮ ಲೆನ್ತ್ ಮೇಲೆ ಅಪಾರ ನಿಯಂತ್ರಣ ಸಾಧಿಸಿದ್ದರು ಹಾಗೂ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳನ್ನು ಆಡದೆ ತಡೆದಿದ್ದರು.