ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ತಿಂಗಳಿಗೆ ಸಿಗುವ ಪೆನ್ಷನ್‌ ಹಣವೆಷ್ಟು?

ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಅವರು ಇತ್ತೀಚೆಗೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ತಮ್ಮ ದೀರ್ಘಾವಧಿ ಕ್ರಿಕೆಟ್‌ ಬದುಕಿಗೆ ಪೂರ್ಣ ವಿರಾಮವನ್ನು ಇಟ್ಟಿದ್ದರು. ಇದೀಗ ಅವರಿಗೆ ಬಿಸಿಸಿಐ ತಿಂಗಳಿಗೆ ಪೆನ್ಷನ್‌ ಹಣವನ್ನು ನೀಡಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ಸಿಗುವ ಪೆನ್ಷನ್‌ ಹಣವೆಷ್ಟು?

ಜುಲೈ 30 ರಂದು ಅಜಿಂಕ್ಯ ರಹಾನೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. -

Profile
Ramesh Kote Aug 2, 2026 7:23 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ (Ajinya Rahane) ಅವರು ಜುಲೈ 30 ರಂದು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2020-21ರ ಸಾಲಿನ‌ಲ್ಲಿ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌(BGT 2020-21) ಸರಣಿಯನ್ನು ತಮ್ಮ ನಾಯಕತ್ವದಲ್ಲಿ ಗೆದ್ದಿದ್ದ ಅಜಿಂಕ್ಯ ರಹಾನೆ ಇತಿಹಾಸವನ್ನು ನಿರ್ಮಿಸಿದ್ದರು. ಇದೀಗ ಅವರು ತಮ್ಮ ಅದ್ಭುತ ಅಂಕಿಅಂಶಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

ಭಾರತದ ಹಿರಿಯ ಟಾಪ್-ಆರ್ಡರ್ ಬ್ಯಾಟರ್ ಅಜಿಂಕ್ಯ ರಹಾನೆ ತಮ್ಮ ವೃತ್ತಿಜೀವನದ ಹೊಸ ಹಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಆದಾಯದ ಹೊಸ ಮಾರ್ಗಗಳನ್ನು ಅನ್ವೇಷಿಸುವ ಸಾಧ್ಯತೆಯಿದೆ. ಈ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿರುವ ರಹಾನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಿಂದಲೂ ಸೂಕ್ತ ಬೆಂಬಲ ದೊರೆಯಲಿದೆ.

2022ರಲ್ಲಿ ಬಿಸಿಸಿಐ ನಿವೃತ್ತಿ ಕ್ರಿಕೆಟಿಗರಿಗೆ ನೀಡುವ ತಿಂಗಳ ಪಿಂಚಣಿ ಮೊತ್ತವನ್ನು ಪರಿಷ್ಕರಿಸಿತ್ತು. ಭಾರತ ತಂಡದ ಪರ ರಹಾನೆ ಅವರು ಒಟ್ಟು 85 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಈ ಹಿಂದೆ ಭಾರತದ ಅನುಭವಿ ಕ್ರಿಕೆಟಿಗರಿಗೆ 50,000 ರು. ಗಳ ಪಿಂಚಣಿ ಹಣವನ್ನು ತಿಂಗಳಿಗೆ ನೀಡಲಾಗುತ್ತಿತ್ತು. ಆದರೆ, ಇದೀಗ ಈ ಮೊತ್ತವನ್ನು 70,000 ರು. ಗಳಿಗೆ ಹೆಚ್ಚಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆಯೇ ಸೌರವ್‌ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದೀಗ ಅಜಿಂಕ್ಯ ರಹಾನೆ ಅವರು ತಿಂಗಳಿಗೆ 70,000 ರು ಗಳ ಪಿಂಚಣಿಯನ್ನು ಪಡೆದುಕೊಳ್ಳಲಿದ್ದಾರೆ.

IPL 2027: ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ತಲೆ ನೋವು!

2022ರಲ್ಲಿ ಸೌರವ್ ಗಂಗೂಲಿ ಹೇಳಿದ್ದೇನು?

"ನಮ್ಮ ಮಾಜಿ ಕ್ರಿಕೆಟಿಗರ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವುದು ಅತ್ಯಂತ ಮುಖ್ಯ. ಆಟಗಾರರೇ ಭಾರತೀಯ ಕ್ರಿಕೆಟ್‌ನ ಜೀವಾಳ. ಅವರ ಆಟದ ದಿನಗಳು ಮುಗಿದ ಬಳಿಕವೂ ಅವರೊಂದಿಗೆ ನಿಲ್ಲುವುದು ಮಂಡಳಿಯಾಗಿ ನಮ್ಮ ಕರ್ತವ್ಯ. ಅಂಪೈರ್‌ಗಳು ಕೂಡ ಕ್ರಿಕೆಟ್‌ನ ಸೈಲೆಂಟ್‌ ಹೀರೋಗಳಾಗಿದ್ದು, ಅವರ ಕೊಡುಗೆಯನ್ನು ಬಿಸಿಸಿಐ ಅತ್ಯಂತ ಗೌರವದಿಂದ ಪರಿಗಣಿಸುತ್ತದೆ," ಎಂದು ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 2022ರಲ್ಲಿ ಹೇಳಿದ್ದರು.

ಭಾರತದ ಪರ 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅಜಿಂಕ್ಯ ರಹಾನೆ, ತಮ್ಮ ವೃತ್ತಿಜೀವನದ ಮುಂದಿನ ಅಧ್ಯಾಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಮುಂದಿನ ತಲೆಮಾರಿನ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿರುವುದಾಗಿ ಅವರು ಸುಳಿವು ನೀಡಿದ್ದಾರೆ.