ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆಯ ಸನಿಹದಲ್ಲಿ ರಿಷಭ್‌ ಪಂತ್‌!

ಭಾರತ ಟೆಸ್ಟ್‌ ತಂಡದ ವಿಕೆಟ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ವಿಶೇಷ ದಾಖಲೆಯ ಸನಿಹದಲ್ಲಿದ್ದಾರೆ. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ 6 ಸಿಕ್ಸರ್‌ ಅಗತ್ಯವಿದೆ. ಅವರು ಈ ಟೆಸ್ಟ್‌ ಪಂದ್ಯದಲ್ಲಿ 6 ಸಿಕ್ಸರ್‌ ಬಾರಿಸಿದರೆ ಭಾರತೀಯ ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆಯಲಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆಯ ಸನಿಹದಲ್ಲಿ ರಿಷಭ್‌ ಪಂತ್‌!

100 ಟೆಸ್ಟ್‌ ಸಿಕ್ಸರ್‌ ಸನಿಹದಲ್ಲಿ ರಿಷಭ್‌ ಪಂತ್‌. -

Profile
Ramesh Kote Jun 5, 2026 12:11 PM

ನವದೆಹಲಿ: ಭಾರತ ಹಾಗೂ ಅಫ್ಘಾನಿಸ್ತಾನ (IND vs AFG) ನಡುವಣ ರೆಡ್‌ ಬಾಲ್‌ ಹಾಗೂ ವೈಟ್‌ ಬಾಲ್‌ ಸರಣಿಗಳ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇದೆ. ಉಭಯ ತಂಡಗಳು ಏಕೈಕ ಟೆಸ್ಟ್‌ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಅಂದ ಹಾಗೆ ಏಕೈಕ ಟೆಸ್ಟ್‌ ಪಂದ್ಯ ಜೂನ್‌ 6 ರಂದು ನವ ಚಂಡೀಗಢದ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ (Rishabh Pant), ದೊಡ್ಡ ದಾಖಲೆಯನ್ನು ಬರೆಯುವ ಸಾಧ್ಯತೆ ಇದೆ. ಈ ದಾಖಲೆ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗುವುದು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದರೂ ವೈಟ್‌ಬಾಲ್‌ ಸರಣಿಯಲ್ಲಿ ಪಂತ್‌ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಇದೀಗ ಆಫ್ಘನ್‌ ಎದುರು ಏಕೈಕ ಟೆಸ್ಟ್‌ ಪಂದ್ಯದಲ್ಲಿ ಪಂತ್‌ ಪ್ರಮುಖ ಕೇಂದ್ರ ಬಿಂದುವಾಗಿದ್ದಾರೆ. ಅವರು ಸದ್ಯ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 94 ಸಿಕ್ಸರ್‌ಗಳನ್ನು ಬಾರಿಸಿದ್ದು, ಅವರು 100 ಟೆಸ್ಟ್‌ ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ 6 ಸಿಕ್ಸರ್‌ ಅಗತ್ಯವಿದೆ. ಅವರು ಈ ಪಂದ್ಯದಲ್ಲಿ ಆರು ಸಿಕ್ಸರ್‌ ಸಿಡಿಸಿದರೆ, 100 ಟೆಸ್ಟ್‌ ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆಯಲಿದ್ದಾರೆ.

ಭಾರತ ಟಿ20 ತಂಡದ ನಾಯಕತ್ವದಿಂದ ಸೂರ್ಯಕುಮಾರ್‌ ಯಾದವ್‌ರನ್ನು ತೆಗೆಯಬೇಡಿ: ಎಂಎಸ್‌ಕೆ ಪ್ರಸಾದ್‌!

ಫಾರ್ಮ್‌ ಕಂಡುಕೊಳ್ಳುವತ್ತಾ ಪಂತ್‌ ಗಮನ

ಕಳೆದ ಐಪಿಎಲ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ರಿಷಭ್‌ ಪಂತ್‌, ಇದೀಗ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಹೇಗೆ ಬ್ಯಾಟ್‌ ಮಾಡಲಿದ್ದಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ. ಅವರು ಲಖನೌ ಸೂಪರ್‌ ಜಯಂಟ್ಸ್‌ ಪರ ಆಡಿದ್ದ 14 ಪಂದ್ಯಗಳಿಂದ 138.05ರ ಸ್ಟ್ರೈಕ್‌ ರೇಟ್‌ನಲ್ಲಿ 312 ರನ್‌ಗಳನ್ನು ಕಲೆ ಹಾಕಿದ್ದರು.

ರಿಷಭ್‌ ಪಂತ್‌ ನಾಯಕತ್ವದಲ್ಲಿ ಎಲ್‌ಎಸ್‌ಜಿ ತಂಡ ಐಪಿಎಲ್‌ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಟೂರ್ನಿಯಿಂದ ಎಲಿಮಿನೇಟ್‌ ಆದ ಮೊದಲ ತಂಡ ಕೂಡ ಲಖನೌ. ತಮ್ಮ ನಾಯಕತ್ವದಲ್ಲಿ ಸತತ ಎರಡೂ ಸೀಸನ್‌ಗಳಲ್ಲಿ ವೈಫಲ್ಯ ಅನುಭವಿಸಿದ ಕಾರಣ ರಿಷಭ್‌ ಪಂತ್‌ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. ಇದೀಗ ಆಫ್ಘನ್‌ ಎದುರು ರೆಡ್‌ ಬಾಲ್‌ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‌ ಮಾಡಲು ಪಂತ್‌ ಎದುರು ನೋಡುತ್ತಿದ್ದಾರೆ.

ʻಕ್ರಾಸ್‌ ಬ್ಯಾಟಿಂಗ್‌ ಶಾಟ್ಸ್‌ ಆಡುವುದನ್ನು ನಿಲ್ಲಿಸಿʼ: ರಿಷಭ್‌ ಪಂತ್‌ಗೆ ಬಾಲ್ಯದ ಕೋಚ್‌ ಸಲಹೆ!

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ಸಾಯಿ ಸುದರ್ಶನ್, ರಿಷಭ್‌ ಪಂತ್ (ವಿಕೆಟ್‌ ಕೀಪರ್‌), ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿಧ್‌ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಹರ್ಷ ದುಬೆ