IND vs NZ: ಡ್ಯಾರಿಲ್ ಮಿಚೆಲ್‌ರನ್ನು ಮಿಂಚಿನಂತೆ ರನ್‌ಔಟ್ ಮಾಡಿದ ರೋಹಿತ್ ಶರ್ಮಾ! ವಿಡಿಯೊ
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದರು. 22ನೇ ಓವರ್‌ನಲ್ಲಿ ಡೈವ್ ಹೊಡೆದು ಚೆಂಡನ್ನು ತಡೆದ ಅವರು ಕೆಎಲ್ ರಾಹುಲ್‌ಗೆ ಎಸೆದರು. ಪರಿಣಾಮ 28 ರನ್ ಗಳಿಸಿದ್ದ ಡ್ಯಾರಿಲ್ ಮಿಚೆಲ್ ರನೌಟ್ ಆದರು.
ಡ್ಯಾರಿಲ್ ಮಿಚೆಲ್‌ರನ್ನು ರನ್‌ಔಟ್ ಮಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ. -
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ (IND vs NZ) ಹಿರಿಯ ಆಟಗಾರ ರೋಹಿತ್ ಶರ್ಮಾ (Rohit Sharma) ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಇಲ್ಲಿನ ಈಡನ್ ಪಾರ್ಕ್‌ನಲ್ಲಿ ನವೆಂಬರ್ 4ರಂದು ನಡೆದಿದ್ದ ಪಂದ್ಯದಲ್ಲಿ ರೋಹಿತ್ ಅವರ ಸಮಯಪ್ರಜ್ಞೆ ಮತ್ತು ಚುರುಕುತನದಿಂದ ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟರ್ ಡ್ಯಾರಿಲ್ ಮಿಚೆಲ್ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಈ ವೇಳೆ ಪಂದ್ಯದ ಮೊದಲ ಇನಿಂಗ್ಸ್‌ನ 22ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಮಾಡಿದ ಫೀಲ್ಡಿಂಗ್ ವಿಶೇಷ ಗಮನ ಸೆಳೆಯಿತು.
IND vs NZ 1st ODI: ಅರ್ಷದೀಪ್ ಸಿಂಗ್ ಮಾರಕ ವೇಗಕ್ಕೆ 185ಕ್ಕೆ ನ್ಯೂಜಿಲೆಂಡ್ ಆಲ್‌ಔಟ್!
ರೋಹಿತ್ ಶರ್ಮಾ ಅದ್ಭುತ ಡೈವ್
22ನೇ ಓವರ್‌ನಲ್ಲಿ ಡ್ಯಾರಿಲ್ ಮಿಚೆಲ್ ಕವರ್ಸ್ ಕಡೆಗೆ ಚೆಂಡನ್ನು ತಳ್ಳಿ ಒಂದು ರನ್ ಗಳಿಸಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದ ರೋಹಿತ್ ಶರ್ಮಾ ಕ್ಷಣಾರ್ಧದಲ್ಲಿ ಪ್ರತಿಕ್ರಿಯಿಸಿ ಪೂರ್ಣ ಪ್ರಮಾಣದಲ್ಲಿ ಡೈವ್ ಹೊಡೆದು ಚೆಂಡನ್ನು ತಡೆದರು. ಚೆಂಡನ್ನು ಕೈಗೆ ಪಡೆದ ರೋಹಿತ್ ತಕ್ಷಣವೇ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅವರತ್ತ ಎಸೆದರು. ಚೆಂಡನ್ನು ಸ್ವೀಕರಿಸಿದ ರಾಹುಲ್ ಕ್ಷಿಪ್ರವಾಗಿ ವಿಕೆಟ್‌ಗಳನ್ನು ಕೆಡವಿದರು. ಆ ಮೂಲಕ ಡ್ಯಾರಿಲ್ ಮಿಚೆಲ್ ರನೌಟ್ ಆದರು.
ಡ್ಯಾರಿಲ್ ಮಿಚೆಲ್ 28 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸಂದರ್ಭದಲ್ಲಿ ವಿಕೆಟ್ ಕಳೆದುಕೊಂಡರು. ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಜೊತೆಯಾಟ ರೂಪಿಸುವ ಸಾಮರ್ಥ್ಯ ಹೊಂದಿದ್ದ ಮಿಚೆಲ್ ಅವರ ವಿಕೆಟ್ ಭಾರತಕ್ಕೆ ಮಹತ್ವದ ಯಶಸ್ಸು ತಂದುಕೊಟ್ಟಿತು.
Shanagiri and Reflexes both getting better with age for the Hitman 😍 Watch the HERO VIDA India Tour of New Zealand 1st ODI, LIVE NOW on Sony Sports Network TV channels, Sony LIV & Sony Vizha. #SonySportsNetwork #SonyLIV #SonyVizha #NZvIND https://t.co/NlYb7LRmHV
— Sony Sports Network (@SonySportsNetwk) November 4, 2026
ರೋಹಿತ್ ಶರ್ಮಾ ಸಾಮಾನ್ಯವಾಗಿ ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ಸುದ್ದಿಯಾಗುತ್ತಾರೆ. ಆದರೆ ಈ ಪಂದ್ಯದಲ್ಲಿ ಅವರ ಫೀಲ್ಡಿಂಗ್ ಕೌಶಲವೂ ಗಮನ ಸೆಳೆಯಿತು. ವೇಗವಾಗಿ ಚೆಂಡಿನ ಕಡೆಗೆ ಧಾವಿಸಿ ಡೈವ್ ಹೊಡೆದು ಅದನ್ನು ವಿಕೆಟ್ ಕೀಪರ್‌ಗೆ ತಲುಪಿಸಿದ ರೀತಿ ಪಂದ್ಯದ ಪ್ರಮುಖ ಕ್ಷಣಗಳಲ್ಲಿ ಒಂದಾಯಿತು. ರೋಹಿತ್ ಅವರ ಈ ಪ್ರಯತ್ನಕ್ಕೆ ಕೆಎಲ್ ರಾಹುಲ್ ಅವರ ಚುರುಕಾದ ವಿಕೆಟ್ ಕೀಪಿಂಗ್ ಕೂಡ ಸಾಥ್ ನೀಡಿತು.
185 ರನ್‌ಗಳಿಗೆ ನ್ಯೂಜಿಲೆಂಡ್ ಆಲ್‌ಔಟ್
ಇನ್ನು ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಸೇರಿದಂತೆ ಭಾರತೀಯ ವೇಗದ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ ತಂಡ, 40.2 ಓವರ್‌ಗಳಿಗೆ 185 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಟೀಮ್ ಇಂಡಿಯಾಗೆ 186 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು.
ಫಿಟ್‌ನೆಸ್ ಟೆಸ್ಟ್ ಪಾಸ್ ಮಾಡಿದ ಪ್ರಸಿಧ್ ಕೃಷ್ಣ; ನ್ಯೂಜಿಲೆಂಡ್ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡಕ್ಕೆ ಬಲ!
ಕಿವೀಸ್ ಪರ ಟಿಮ್ ಸೈಫರ್ಟ್ 38 ರನ್, ಗ್ಲೆನ್ ಫಿಲಿಪ್ಸ್ 30 ರನ್, ಬ್ಲೈರ್ ಟಿಕ್ನರ್ ಅವರು 34 ರನ್ ಹಾಗೂ ಡ್ಯಾರಿಲ್ ಮಿಚೆಲ್ 28 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರು.