RCB vs GT, IPL 2026 Final: ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು!
RCB vs GT, IPL 2026 Final Toss: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಆರ್‌ಸಿಬಿ vs ಜಿಟಿ ನಡುವಣ 2026ರ ಐಪಿಎಲ್ ಫೈನಲ್ ಪಂದ್ಯ. -
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ (RCB vs GT) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಜಿಟಿಯನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಳಿಕ ಮಾತನಾಡಿದ ರಜತ್ ಪಾಟಿದಾರ್, ತಮ್ಮ ತಂಡದ ಪ್ಲೇಯಿಂಗ್ XI ಅನ್ನು ಬಹಿರಂಗಪಡಿಸಿದರು. ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಿದ್ದ ಅದೇ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗಾಗಿ ರೊಮ್ಯಾರಿಯೊ ಶೆಫರ್ಡ್ ಈ ಪಂದ್ಯದಲ್ಲಿ ಫೀಲ್ಡಿಂಗ್‌ಗೆ ಆಯ್ಕೆಯಾಗಿದ್ದಾರೆ. ಇನ್ನು ಎದುರಾಳಿ ಗುಜರಾತ್ ಟೈಟನ್ಸ್ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ತರಲಾಗಿದೆ ಎಂದು ನಾಯಕ ಶುಭಮನ್ ಗಿಲ್ ಹೇಳಿದ್ದಾರೆ. ಅದರಂತೆ ಸಾಯಿ ಕಿಶೋರ್ ಅವರ ಸ್ಥಾನಕ್ಕೆ ಅರ್ಷದ್ ಖಾನ್ ಪ್ಲೇಯಿಂಗ್ XIಗೆ ಮರಳಿದ್ದಾರೆ.
RCB vs GT: ʻರೊಮ್ಯಾರಿಯೊ ಶೆಫರ್ಡ್ ಬೌಲ್ ಮಾಡಿದ್ರೆ ಸೋಲು ಖಚಿತʼ-ಆರ್‌ಸಿಬಿಗೆ ಕೆ ಶ್ರೀಕಾಂತ್ ವಾರ್ನಿಂಗ್!
ಈ ಎರಡೂ ತಂಡಗಳು ಇಲ್ಲಿಯವರೆಗೂ ಮೂರು ಬಾರಿ ಕಾದಾಟ ನಡೆಸಿದ್ದವು. ಇದರಲ್ಲಿ ಆರ್‌ಸಿಬಿ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಇನ್ನೊಂದು ಪಂದ್ಯದಲ್ಲಿ ಜಿಟಿ ಗೆದ್ದಿದೆ. ಕೊನೆಯ ಬಾರಿ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಎರಡೂ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 92 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಅಂದ ಹಾಗೆ ಇದೀಗ ಫೈನಲ್ ನಡೆಯುತ್ತಿರುವ ಅಹಮದಾಬಾದ್‌ನಲ್ಲಿ ಎರಡನೇ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಸೋತಿತ್ತು. ಇದೀಗ ಇದೇ ವಿಶ್ವಾಸದಲ್ಲಿ ಆತಿಥೇಯರು ಕಣಕ್ಕೆ ಇಳಿಯಲಿದ್ದಾರೆ.
🚨 Toss Update from the FINAL 🚨@RCBTweets have won the toss & will bowl first against @gujarat_titans in Ahmedabad.
— IndianPremierLeague (@IPL) May 31, 2026
Updates ▶️ https://t.co/Yz6K3q6w0X#TATAIPL | #Final | #TheFinalLeap | #RCBvGT pic.twitter.com/kgrF0LJ0gQ
ಎರಡನೇ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಆರ್‌ಸಿಬಿ
ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ ಆರ್‌ಸಿಬಿ ತಂಡ, ಇದೀಗ ಸತತ ಎರಡನೇ ಬಾರಿ ಕಪ್ ಗೆಲ್ಲಲು ಎದುರು ನೋಡುತ್ತಿದೆ. ಅದರಂತೆ ಫೈನಲ್ ಗೆಲ್ಲುವ ನೆಚ್ಚಿನ ತಂಡ ಕೂಡ. ಲೀಗ್ ಹಂತದಲ್ಲಿ 18 ಅಕಗಳು ಹಾಗೂ ಅತ್ಯುತ್ತಮ ರನ್‌ರೇಟ್‌ನೊಂದಿಗೆ ಬೆಂಗಳೂರು ತಂಡ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿತ್ತು. ಇದೀಗ ಅದೇ ಧರ್ಮಶಾಲಾದಲ್ಲಿ ಸೋಲಿಸಿದ ರೀತಿ, ಅಹಮದಾಬಾದ್‌ನಲ್ಲಿಯೂ ಜಿಟಿಯನ್ನು ಮಣಿಸಲು ಆರ್‌ಸಿಬಿ ಎದುರು ನೋಡುತ್ತಿದೆ.
𝐀𝐥𝐥 𝐑𝐨𝐚𝐝𝐬 𝐥𝐞𝐚𝐝 𝐭𝐨 𝐭𝐡𝐢𝐬 𝐦𝐨𝐦𝐞𝐧𝐭. ❤️
— Royal Challengers Bengaluru (@RCBTweets) May 31, 2026
🪙 Cheers all around as 𝐂𝐚𝐩𝐭𝐚𝐢𝐧 𝐏𝐚𝐭𝐢𝐝𝐚𝐫 wins the flip of the coin and we’re going to bowl first in Ahmedabad. 🔥
No changes to our Playing XI from the last game. 👊
Let’s. Do. This. 12th. Man. Army. ❤️🔥… pic.twitter.com/MiYJIr94Wi
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಜಾಶ್ ಹೇಝಲ್‌ವುಡ್, ರಸಿಖ್ ಸಲಾಮ್ ದಾರ್
Only one thing on our mind today 🤞🏆#3in5 pic.twitter.com/mgXhFtCIJ7
— Gujarat Titans (@gujarat_titans) May 31, 2026
ಗುಜರಾತ್ ಟೈಟನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕಗಿಸೊ ರಬಾಡ, ಅರ್ಷದ್ ಖಾನ್, ಮೊಹಮ್ಮದ್ ಸಿರಾಜ್