IPL 2026: ಲಖನೌ ಸೂಪರ್ ಜಯಂಟ್ಸ್ ವೈಫಲ್ಯಕ್ಕೆ ಬಲವಾದ ಕಾರಣ ತಿಳಿಸಿದ ಸೈಮನ್ ದುಲ್!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಮೇಲೆ ಒತ್ತಡ ಹೆಚ್ಚುತ್ತಿದೆ. ಅತ್ಯಂತ ದುಬಾರಿ ಆಟಗಾರರಾದ ರಿಷಭ್ ಪಂತ್ ಮತ್ತು ನಿಕೋಲಸ್ ಪೂರನ್ ಫಾರ್ಮ್‌ನಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ತಂಡಕ್ಕೆ ಚಿಂತೆಯಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂದಿನ ಪಂದ್ಯದಲ್ಲಿ ಈ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿದೆ.
ಲಖನೌ ವೈಫಲ್ಯಕ್ಕೆ ಬಲವಾದ ಕಾರಣ ತಿಳಿಸಿದ ಸೈಮನ್ ದುಲ್. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಆರಂಭಿಕ ಹಿನ್ನಡೆ ಅನುಭವಿಸಿರುವ ಲಖನೌ ಸೂಪರ್ ಜಯಂಟ್ಸ್ (LSG) ತಂಡ ಇದೀಗ ಒತ್ತಡಕ್ಕೆ ಸಿಲುಕಿದೆ. ಇದರ ನಡುವೆ ತಮ್ಮ ತಂಡದ ಅತ್ಯಂತ ದುಬಾರಿ ಆಟಗಾರರಾಗಿರುವ ರಿಷಭ್ ಪಂತ್ (Rishabh Pant) ಹಾಗೂ ನಿಕೋಲಸ್ ಪೂರನ್ (Nicholas Pooran) ಅವರ ಕಳಪೆ ಫಾರ್ಮ್ ಟೀಮ್ ಮ್ಯಾನೇಜ್‌ಮೆಂಟ್‌ಗೆ ತಲೆ ನೋವು ತರಿಸಿದೆ. ಈ ಇಬ್ಬರೂ ತಮ್ಮ ಬೆಲೆಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ.
ಲಖನೌ ಸೂಪರ್ ಜಯಂಟ್ಸ್ ತಂಡ ಇಲ್ಲಿಯವರೆಗೂ ಆಡಿದ 6 ಪಂದ್ಯಗಳ ಪೈಕಿ ಗೆದ್ದಿರುವುದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಲಖನೌ ನಾಯಕ ರಿಷಭ್ ಪಂತ್ ಹಾಗೂ ಅಪಾಯಕಾರಿ ಬ್ಯಾಟರ್ ನಿಕೋಲಸ್ ಪೂರನ್ ಕೂಡ ವಿಫಲರಾಗಿದ್ದಾರೆ. ರಿಷಭ್ ಪಂತ್ 27 ಕೋಟಿ ರು ಹಾಗೂ ನಿಕೋಲಸ್ ಪೂರನ್ 21 ಕೋಟಿ ರು. ಗಳ ಸಂಭಾವನೆಯೊಂದಿಗೆ 2026ರ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಆದರೆ, ಇವರು ತಮ್ಮ ಮೌಲ್ಯಕ್ಕೆ ತಕ್ಕಂತೆ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ.
RCB vs GT: ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI
ಲಖನೌ ತಂಡದ ದೊಡ್ಡ ಸಮಸ್ಯೆ ತಿಳಿಸಿದ ಸೈಮನ್ ದುಲ್
ಲಖನೌ ಸೂಪರ್ ಜಯಂಟ್ಸ್ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ 8 ಪಂದ್ಯಗಳಲ್ಲಿ ಕನಿಷ್ಠ 6 ರಲ್ಲಿ ಗೆಲುವು ಪಡೆಯಬೇಕಾಗುತ್ತದೆ. ಹಾಗಾಗಿ ಲಖನೌ ತಂಡದ ಕೀ ಬ್ಯಾಟರ್‌ಗಳಾದ ರಿಷಭ್ ಪಂತ್ ಹಾಗೂ ನಿಕೋಲಸ್ ಪೂರನ್ ಫಾರ್ಮ್‌ಗೆ ಮರಳಬೇಕಾದ ಅಗತ್ಯವಿದೆ. ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸೈಮನ್ ದುಲ್, ಲಖನೌ ತಂಡದಲ್ಲಿನ ದೊಡ್ಡ ಸಮಸ್ಯೆಯನ್ನು ರಿವೀಲ್ ಮಾಡಿದ್ದಾರೆ.
IPL 2026: ಇಶಾನ್ ಕಿಶನ್ ನಾಯಕತ್ವದ ಬಗ್ಗೆ ಸಂಜಯ್ ಬಾಂಗರ್ ದೊಡ್ಡ ಹೇಳಿಕೆ!
ಕ್ರಿಕ್‌ಬಝ್ ಜೊತೆ ಮಾತನಾಡಿದ ಸೈಮನ್ ದುಲ್, "ಲಖನೌ ತಂಡಕ್ಕೆ ಮೂರು ದೊಡ್ಡ ಸಮಸ್ಯೆಯೆಂದರೆ ಮೂವರು ವಿದೇಶಿ ಆಟಗಾರರು. ಅಗ್ರ ಐದು ಕ್ರಮಾಂಕಗಳಲ್ಲಿ ಮೂವರು ವಿದೇಶಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇದರಲ್ಲಿ ಏಡೆನ್ ಮಾರ್ಕ್ರಮ್ ಒಬ್ಬರು ಹಾಗೂ ಇವರು ಕೆಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಮಿಚೆಲ್ ಮಾರ್ಷ್ ಇನ್ನೂ ಉತ್ತಮ ಪ್ರದರ್ಶನವನ್ನು ತೋರಿಲ್ಲ. ಇನ್ನು ನಿಕೋಲಸ್ ಪೂರನ್ ಇನ್ನೂ ಪ್ರಭಾವ ಬೀರಿಲ್ಲ. ಇದು ಲಖನೌ ತಂಡದ ದೊಡ್ಡ ಸಮಸ್ಯೆ," ಎಂದು ಹೇಳಿದ್ದಾರೆ.
"ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ತಮ್ಮ ತಂಡಕ್ಕೆ ಒಂದು ಪಂದ್ಯವನ್ನು ಗೆದ್ದುಕೊಟ್ಟಿದ್ದರು, ಇದಾದ ಬಳಿಕ ಅವರಿಂದ ಉತ್ತಮ ಆಟ ಮೂಡಿಬರಲಿಲ್ಲ. ನಿಕೋಲಸ್ ಪೂರನ್ ಹಾಗೂ ರಿಷಭ್ ಪಂತ್‌ಗೆ 50 ಕೋಟಿ ರು. ಗಳನ್ನು ಬಳಸಿಕೊಂಡಿದ್ದೀರಿ. ನಿಮ್ಮ ತಂಡದ ಅರ್ಧದಷ್ಟು ಹಣವನ್ನು ಈ ಇಬ್ಬರ ಮೇಲೆ ಹಾಕಿದ್ದೀರಿ," ಎಂದು ಕಿವೀಸ್ ಮಾಜಿ ಆಟಗಾರ ತಿಳಿಸಿದ್ದಾರೆ.