ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳಾ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಲು ಸಜ್ಜಾದ ಹರ್ಮನ್‌ಪ್ರೀತ್‌ ಕಾರ್‌

Harmanpreet Kaur Set To Create History: ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡದ ಎದುರು ಆಡುವುದು ಸುಲಭದ ಸವಾಲು ಅಲ್ಲ. ಆ ತಂಡದ ಬೌಲಿಂಗ್ ಅಮೋಘವಾಗಿದೆ. ಲಾರಾ ವೋಲ್ವಾರ್ಟ್‌ ನಾಯಕತ್ವದ ದಕ್ಷಿಣ ಆಫ್ರಿಕಾ ಬೌಲರ್‌ಗಳು ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.

ಐತಿಹಾಸಿಕ ದಾಖಲೆ ನಿರ್ಮಿಸಲು ಸಜ್ಜಾದ ಹರ್ಮನ್‌ಪ್ರೀತ್‌ ಕಾರ್‌

Harmanpreet Kaur -

Abhilash BC
Abhilash BC Jun 21, 2026 11:57 AM

ಮ್ಯಾಂಚೆಸ್ಟರ್, ಜೂ. 21: ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಭಾನುವಾರ ನಡೆಯಲಿರುವ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮೈಲಿಗಲ್ಲು ಸಾಧಿಸುವ ಸನಿಹದಲ್ಲಿದ್ದಾರೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್‌ ವೇಳೆ ಮೈದಾನಕ್ಕಿಳಿಯುತ್ತಿದ್ದಂತೆ 200 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

2009 ರ ಮಹಿಳಾ ಟಿ 20 ವಿಶ್ವಕಪ್ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಾರಂಭವಾದ ಕೌರ್ ಅವರ ಅಂರಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನಕ್ಕೆ ಈ ಐತಿಹಾಸಿಕ ಕ್ಷಣ ಮತ್ತೊಂದು ಅಧ್ಯಾಯವನ್ನು ಸೇರಿಸುತ್ತದೆ. ಹದಿನೇಳು ವರ್ಷಗಳ ನಂತರವೂ, ಅವರು ಕ್ರಿಕೆಟ್‌ನಲ್ಲಿ ಭಾರತದ ಬೆಳವಣಿಗೆಯ ಹಿಂದಿನ ಪ್ರೇರಕ ಶಕ್ತಿಯಾಗಿ ಮತ್ತು ಮಹಿಳಾ ಕ್ರಿಕೆಟ್‌ನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿ ಕೌರ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ಲೋಯ್ ಟ್ರಯಾನ್, ಭಾರತೀಯ ನಾಯಕಿಯ ದೀರ್ಘಾಯುಷ್ಯ ಮತ್ತು ಕ್ರೀಡೆಯ ಮೇಲಿನ ಪ್ರಭಾವವನ್ನು ಶ್ಲಾಘಿಸಿದರು.

ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಭಾರತ ಮಹಿಳಾ ತಂಡ; ಹರಿಣ ಪಡೆ ಎದುರಾಳಿ

ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡದ ಎದುರು ಆಡುವುದು ಸುಲಭದ ಸವಾಲು ಅಲ್ಲ. ಆ ತಂಡದ ಬೌಲಿಂಗ್ ಅಮೋಘವಾಗಿದೆ. ಲಾರಾ ವೋಲ್ವಾರ್ಟ್‌ ನಾಯಕತ್ವದ ದಕ್ಷಿಣ ಆಫ್ರಿಕಾ ಬೌಲರ್‌ಗಳು ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.

ತಂಡ ಎಲ್ಲ ವಿಭಾಗಗಳಲ್ಲೂ ಉತ್ತಮ ಆಟಗಾರ್ತಿಯರನ್ನು ಹೊಂದಿದೆ. ಆಲ್‌ರೌಂಡರ್ ನದಿನ್ ಡಿ ಕ್ಲರ್ಕ್, ಮರಿಝಾನ್ ಕಾಪ್, ತಾಜ್ಮಿನ್ ಬ್ರಿಟ್ಸ್‌, ಅನೇರೀ ಡಿಕೆನ್ಸನ್ ಹಾಗೂ ಸುನೆ ಲುಸ್ ಅವರು ತಮ್ಮ ತಂಡಕ್ಕೆ ಯಾವುದೇ ಹಂತದಲ್ಲಿಯೂ ಉಪಯುಕ್ತ ಕಾಣಿಕೆ ನೀಡಬಲ್ಲವರು.

ಬ್ಯಾಟಿಂಗ್‌ ಸ್ನೇಹಿ ಪಿಚ್

ಓಲ್ಡ್ ಟ್ರಾಫರ್ಡ್ ಪಿಚ್ ಬ್ಯಾಟಿಂಗ್‌ ಸ್ನೇಹಿಯಾಗಿದ್ದು ದೊಡ್ಡ ಮೊತ್ತದ ನಿರೀಕ್ಷೆ ಮಾಡಬಹುದು. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇರದ ಕಾರಣ ಸಂಪೂರ್ಣವಾಗಿ ಪಂದ್ಯ ಸಾಗಲಿದೆ. ಪಂದ್ಯವು ಸ್ಥಳೀಯ ಸಮಯ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಭಾರತೀಯ ಕಾಲಮಾನ ಸಂಜೆ 7:00 ಆಗಿರುತ್ತದೆ.

ಸಂಭಾವ್ಯ ಆಡುವ ಬಳಗ

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ,ಯಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ್, ರಾಧಾ ಯಾದವ್, ನಂದಿನಿ ಶರ್ಮ.

ದಕ್ಷಿಣ ಆಫ್ರಿಕಾ: ಸುನೆ ಲೂಸ್, ಲಾರಾ ವೊಲ್ವಾರ್ಡ್ಟ್ (ನಾಯಕಿ), ಅನ್ನೇರಿ ಡೆರ್ಕ್ಸೆನ್, ನಾಡಿನ್ ಡಿ ಕ್ಲರ್ಕ್, ಮರಿಝನ್ನೆ ಕಪ್, ಕ್ಲೋಯ್ ಟ್ರಯಾನ್, ಕೈಲಾ ರೇನೆಕೆ, ಸಿನಾಲೊ ಜಫ್ತಾ (ವಿ.ಕೀ.),ಶಬ್ನಿಮ್ ಇಸ್ಮಾಯಿಲ್, ಅಯಾಬೊಂಗಾ ಖಾಕಾ, ನಾನ್ಕುಲುಲೇಕೋ ಮ್ಲಾಬಾ.