IPL 2026ರ ಲೀಗ್ ಹಂತದ ಬೆಸ್ಟ್ XII ಆಟಗಾರರನ್ನು ಆರಿಸಿದ ಎಸ್ ಬದ್ರಿನಾಥ್!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟ್ಸ್‌ಮನ್ ಎಸ್ ಬದ್ರಿನಾಥ್ ಅವರು, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಅತ್ಯುತ್ತಮ 12 ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದಾರೆ. ಆರ್‌ಸಿಬಿ ತಂಡದಿಂದ ಮೂವರು ಆಟಗಾರರನ್ನು ಆರಿಸಿದರೂ ವಿರಾಟ್ ಕೊಹ್ಲಿಯನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
2026ರ ಐಪಿಎಲ್ ಲೀಗ್ ಹಂತದ ಬೆಸ್ಟ್ 12 ಆಟಗಾರರನ್ನು ಆರಿಸಿದ ಬದ್ರಿನಾಥ್. -
ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಎಸ್ ಬದ್ರಿನಾಥ್ ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ತಮ್ಮ ಅತ್ಯುತ್ತಮ 12 ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದಾರೆ. ಆದರೆ, ಈ ಇಬ್ಬರೂ ಲೀಗ್ ಹಂತದಲ್ಲಿ 550ಕ್ಕೂ ಹೆಚ್ಚು ರನ್‌ಗಳನ್ನು ಸಿಡಿಸಿರುವ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಆಯ್ಕೆಯಾದ 12 ಆಟಗಾರರ ಪೈಕಿ 9 ಮಂದಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ನಾಲ್ಕು ತಂಡಗಳಲಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಜೋಡಿಯಾಗಿ ವೈಭವ್ ಸೂರ್ಯವಂಶಿ ಮತ್ತು ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಸ್ಥಾನ ಪಡೆದಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಇದ್ದರೆ, ಐದನೇ ಸ್ಥಾನಕ್ಕೆ ರಜತ್ ಪಾಟಿದಾರ್ ಅವರನ್ನು ಎಸ್ ಬದ್ರಿನಾತ್ ಆಯ್ಕೆ ಮಾಡಿದ್ದಾರೆ.
'ನಾವು ನಿಮಗಾಗಿ ಬರುತ್ತಿದ್ದೇವೆ': ಫೈನಲ್‌ಗೂ ಮುನ್ನ ಆರ್‌ಸಿಬಿ ನಾಯಕನ ಎಚ್ಚರಿಕೆ
ಆಲ್‌ರೌಂಡರ್ ವಿಭಾಗದಲ್ಲಿ ಕೃಣಾಲ್ ಪಾಂಡ್ಯ ಮತ್ತು ಸುನೀಲ್ ನರೇನ್ ಸ್ಥಾನ ಪಡೆದಿದ್ದಾರೆ. ಜೊತೆಗೆ, ಗುಜರಾತ್ ಟೈಟನ್ಸ್ ಪರ ಪರ 19 ವಿಕೆಟ್ ಪಡೆದಿರುವ ರಶೀದ್ ಖಾನ್ ಅವರನ್ನು ಮತ್ತೊಬ್ಬ ಸ್ಪಿನ್ನರ್ ಆಗಿ ಆಯ್ಕೆ ಮಾಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಜೋಫ್ರಾ ಆರ್ಚರ್ ಮತ್ತು ಕಗಿಸೊ ರಬಾಡ ಅವರಿಗೆ ಸ್ಥಾನ ನೀಡಲಾಗಿದೆ. ಇನ್ನೊಂದು ವೇಗಿಯ ಸ್ಥಾನಕ್ಕಾಗಿ ಕಾರ್ತಿಕ್ ತ್ಯಾಗಿ ಹಾಗೂ ಪ್ರಿನ್ಸ್ ಯಾದವ್ ನಡುವೆ ಪೈಪೋಟಿ ಇದೆ ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ಅಕೀಲ್ ಹುಸೇನ್ ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಆಯ್ಕೆ ಮಾಡಲಾಗಿದೆ.
IPL 2026: ಗುಜರಾತ್ ಟೈಟನ್ಸ್‌ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಬಾರಿ ಫೈನಲ್‌ಗೇರಿದ ಆರ್‌ಸಿಬಿ!
ಫೈನಲ್‌ಗೆ ಪ್ರವೇಶ ಮಾಡಿರುವ ಆರ್‌ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮಂಗಳವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶವನ್ನು ತೋರಿದ್ದ ಆರ್‌ಸಿಬಿ, 92 ರನ್‌ಗಳಿಂದ ಜಿಟಿಯನ್ನು ಮಣಿಸಿ ಫೈನಲ್‌ಗೆ ಪ್ರವೇಶ ಮಾಡಿದೆ. ಇದೀಗ ಸೋತ ಗುಜರಾತ್ ತಂಡ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಎಲಿಮಿನೇಟರ್ ಪಂದ್ಯವನ್ನು ಗೆದ್ದ ತಂಡದ ವಿರುದ್ಧ ಆಡಲಿದೆ.
ಎಸ್ ಬದ್ರಿನಾಥ್ ಅವರ 2026ರ ಐಪಿಎಲ್ ಟೂರ್ನಿಯ ಲೀಗ್ ಹಂತದ 12 ಆಟಗಾರರ ತಂಡ: ವೈಭವ್ ಸೂರ್ಯವಂಶಿ, ಶುಭಮನ್ ಗಿಲ್, ಸಾಯಿ ಸುದರ್ಶನ್, ಹೆನ್ರಿಕ್ ಕ್ಲಾಸೆನ್, ರಜತ್ ಪಾಟಿದಾರ್, ಕೃಣಾಲ್ ಪಾಂಡ್ಯ, ಸುನೀಲ್ ನರೇನ್, ಭುವನೇಶ್ವರ್ ಕುಮಾರ್, ಜೋಫ್ರಾ ಆರ್ಚರ್, ಕಗಿಸೊ ರಬಾಡ, ಪ್ರಿನ್ಸ್ ಯಾದವ್/ಕಾರ್ತಿಕ್ ತ್ಯಾಗಿ
ಇಂಪ್ಯಾಕ್ಟ್ ಪ್ಲೇಯರ್: ಅಕೀಲ್ ಹುಸೇನ್