ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranji Trophy 2026-27: ಸೀರಾಮ್‌ ರಾಹುಲ್‌ ಶತಕ, ಕರ್ನಾಟಕ ಎದುರು ಎರಡನೇ ದಿನ ಆಂಧ್ರಕ್ಕೆ ಮೇಲುಗೈ!

ಸೀರಾಮ್‌ ವೆಂಕಟ್‌ ರಾಹುಲ್‌ ಶತಕ ಹಾಗೂ ರೇವಂತ್‌ ರೆಡ್ಡಿ ಅವರ ಅರ್ಧಶತಕದ ಬಲದಿಂದ ಆಂಧ್ರ ತಂಡ, 2026-27ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಪಂದ್ಯದ ಎರಡನೇ ದಿನ ಕರ್ನಾಟಕ ಎದುರು ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಆಂಧ್ರ ತಂಡ 57 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ.

ಆಂಧ್ರ ಎದುರು ಕರ್ನಾಟಕ ತಂಡಕ್ಕೆ ಎರಡನೇ ದಿನ ಹಿನ್ನಡೆ!

ಕರ್ನಾಟಕ ಎದುರು ಆಂಧ್ರ ತಂಡಕ್ಕೆ ಎರಡನೇ ದಿನ ಮುನ್ನಡೆ. -

Profile
Ramesh Kote Oct 12, 2026 9:31 PM

ವಿಜಯವಾಡ: ಇಲ್ಲಿನ ಗೋಕರಾಜು ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡಯುತ್ತಿರುವ 2026-27ರ ಸಾಲಿನ ರಣಜಿ ಟ್ರೋಫಿ (Ranji Trophy 2026-27) ಟೂರ್ನಿಯ ಎಲೈಟ್‌ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಆಂಧ್ರ ತಂಡಗಳು (KAR vs AP ಕಾದಾಟ ನಡೆಸುತ್ತಿವೆ. ಸೀರಾಮ್‌ ವೆಂಕಟ ರಾಹುಲ್‌ ಶತಕ (Seeram Ventak Rahul) ಹಾಗೂ ರೇವಂತ್‌ ರೆಡ್ಡಿ ಅವರ ಅರ್ಧಶತಕಗಳ ಬಲದಿಂದ ಆಂಧ್ರ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 57 ರನ್‌ಗಳ ಮುನ್ನಡೆ ಸಾಧಿಸಿದೆ.

ಸೋಮವಾರ ಬೆಳಿಗ್ಗೆ 16 ರನ್‌ಗೆ ಎರಡು ವಿಕೆಟ್‌ ಕಳೆದುಕೊಂಡು ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಆಂಧ್ರ ತಂಡಕ್ಕೆ ಶೇಖ್‌ ರಶೀದ್‌ ಹಾಗೂ ಅಭಿಷೇಕ್‌ ರೆಡ್ಡಿ ಅವರ 43 ರನ್‌ಗಳ ಜೊತೆಯಾಟ ಆಸರೆಯಾಯಿತು. ಅಭಿಷೇಕ್‌ 30 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಶೇಖ್‌ ರಶೀದ್‌ ಅವರು 121 ಎಸೆತಗಳಲ್ಲಿ 54 ರನ್‌ಗಳನ್ನು ಗಳಿಸಿ ತಂಡದ ಮೊತ್ತವನ್ನು 110ರ ಗಡಿ ದಾಟಿಸಿ ವಿಕೆಟ್‌ ಒಪ್ಪಿಸಿದರು. ಇದಕ್ಕೂ ಮುನ್ನ ನಾಯಕ ರಿಕಿ ಭುಯಿ ಅವರನ್ನು ರಿತೇಶ್‌ ಭಟ್ಕಳ್‌ ಔಟ್‌ ಮಾಡಿದ್ದರು. ಆ ಮೂಲಕ ಆಂಧ್ರ ತಂಡ 116 ಕ್ಕೆ 5 ವಿಕೆಟ್‌ ಕಳೆದುಕೊಂಡು ದೊಡ್ಡ ಹಿನ್ನಡೆಯ ಭೀತಿಗೆ ಒಳಗಾಗಿತ್ತು.

ಸ್ಮರಣ್‌ ಶತಕದ ಬಲ; ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಕರ್ನಾಟಕ

ಸೀರಾಮ್‌ ರಾಹುಲ್‌-ರೇವಂತ್‌ ರೆಡ್ಡಿ ಜುಗಲ್‌ಬಂದಿ

ಆದರೆ, ಆರನೇ ವಿಕೆಟ್‌ಗೆ ಕ್ರೀಸ್‌ನಲ್ಲಿ ಜೊತೆಯಾದ ಸೀರಾಮ್‌ ವೆಂಕಟ್‌ ರಾಹುಲ್‌ ಹಾಗೂ ರೇವಂತ್‌ ರೆಡ್ಡಿ ಜೋಡಿ ದೀರ್ಘಾವಧಿ ಕ್ರೀಸ್‌ನಲ್ಲಿ ಬ್ಯಾಟ್‌ ಮಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಕರ್ನಾಟಕ ಬೌಲರ್‌ಗಳು ಎಷೇ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಇದರ ಪರಿಣಾಮ ರೇವಂತ್‌ ಹಾಗೂ ಸೀರಾಮ್‌ ಆರನೇ ವಿಕೆಟ್‌ಗೆ 202 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ಅಪಾಯದಲ್ಲಿದ್ದ ತಂಡವನ್ನು 300ರ ಗಡಿ ದಾಟಿಸಿದರು.

ಸೀರಾಮ್‌ ರಾಹುಲ್‌ ಭರ್ಜರಿ ಶತಕ

ಎರಡನೇ ದಿನ ತವರು ಅಂಗಣದಲ್ಲಿ ಅದ್ಭುತವಾಗಿ ಬ್ಯಾಟ್‌ ಮಾಡಿದ ಸೀರಾಮ್‌ ರಾಹುಲ್‌, ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 187 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 112 ರನ್‌ಗಳನ್ನು ಗಳಿಸಿದ್ದು, ಮೂರನೇ ದಿನದಾಟಕ್ಕೆ ತಮ್ಮ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ್ದ ರೇವಂತ್‌, 143 ಎಸೆತಗಳಲ್ಲಿ 13 ಮನ ಮೋಹಕ ಬೌಂಡರಿಗಳೊಂದಿಗೆ 97 ರನ್‌ ಗಳಿಸಿದ ಬಳಿಕ ಶಿಖರ್‌ ಶೆಟ್ಟಿಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಕೇವಲ ಮೂರು ರನ್‌ಗಳ ಅಂತರದಲ್ಲಿ ಶತಕವನ್ನು ಕಳೆದುಕೊಂಡರು.

IND vs WI: ರೊವ್ಮನ್‌ ಪೊವೆಲ್‌, ಶೆರ್ಫೆನ್‌ ಋದರ್‌ಫೋರ್ಡ್‌ಗೆ ಡೀಮೆರಿಟ್‌ ಪಾಯಿಂಟ್‌ ನೀಡಿದ ಐಸಿಸಿ!

ಒಟ್ಟಾರೆ ಎರಡನೇ ದಿನದಾಟದ ಅಂತ್ಯಕ್ಕೆ ಆಂಧ್ರ ತಂಡ, 95 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 331 ರನ್‌ಗಳನ್ನು ಕಲೆ ಹಾಕಿದ್ದು, 57 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ. ಕ್ರೀಸ್‌ನಲ್ಲಿ ಸೀರಾಮ್‌ ಹಾಗೂ ಕೆವಿ ಶ್ರೀಕಾಂತ್‌ ಅಜೇಯರಾಗಿ ಉಳಿದಿದ್ದು, ಮೂರನೇ ದಿನ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ.

274 ರನ್‌ಗೆ ಆಲ್‌ಔಟ್‌ ಆಗಿದ್ದ ಕರ್ನಾಟಕ

ಇದಕ್ಕೂ ಮುನ್ನ ಕರ್ನಾಟಕ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 82.2 ಓವರ್‌ಗಳಿಗೆ 274 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಪ್ರವಾಸಿ ತಂಡದ ಪರ ಸ್ಮರಣ್‌ ರವಿಚಂದ್ರನ್‌ 126 ರನ್‌ಗಳನ್ನು ಕಲೆ ಹಾಕಿದ್ದರೆ, ಕೃಷ್ಣನ್‌ ಶ್ರೀಜಿತ್‌ 58 ರನ್‌ಗಳನ್ನು ಬಾರಿಸಿದ್ದರು. ಮಾದವ್‌ ಬಜಾಜ್‌ 33 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಆದರೆ, ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ಗಳಾದ ಕೆಎಲ್‌ ರಾಹುಲ್‌, ಮಯಾಂಕ್‌ ಅಗರ್ವಾಲ್‌ ಹಾಗೂ ಕರುಣ್‌ ನಾಯರ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು.