Asia Cup 2025: ಶುಭಮನ್ ಗಿಲ್ ಆಗಮನದಿಂದ ಸೂರ್ಯಕುಮಾರ್ ಯಾದವ್‌ಗೆ ಆತಂಕ! ಏಕೆ ಗೊತ್ತೆ?
2025ರ ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಘೋಷಿಸಿದ ನಂತರ, ಬಿಸಿಸಿಐ ಆಯ್ಕೆದಾರರ ಬಗ್ಗೆ ಪ್ರಶ್ನೆಗಳು ಎದ್ದಿವೆ. ಶುಭಮನ್ ಗಿಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ, ಅವರನ್ನು ಉಪನಾಯಕನನ್ನಾಗಿಯೂ ಮಾಡಲಾಗಿದೆ, ಇದು ಸೂರ್ಯಕುಮಾರ್ ಯಾದವ್ ಅವರ ನಾಯಕತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ.

ಶುಭಮನ್ ಗಿಲ್ ಅವರಿಂದ ಸೂರ್ಯಕುಮಾರ್ ಯಾದವ್‌ಗೆ ಆತಂಕ ಎದುರಾಗಿದೆ.

ನವದೆಹಲಿ: ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಆಗಸ್ಟ್ 19 ರಂದು ಮುಂಬರುವ ಏಷ್ಯಾ ಕಪ್ ಟೂರ್ನಿಗೆ (Asia Cup 2025) ಭಾರತ ತಂಡವನ್ನು ಪ್ರಕಟಿಸಿದೆ. ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಆಯ್ಕೆ ಸಮಿತಿಗೆ ಹಲವು ಪ್ರಶ್ನೆಗಳು ಎದುರಾಗಿವೆ. ಇದರಲ್ಲಿ ಆಯ್ಕೆದಾರರು ಕೆಲವು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರ ನಡುವೆ ಶುಭಮನ್ ಗಿಲ್ (Shubman Gill) ಅವರನ್ನು ಏಷ್ಯಾ ಕಪ್ ತಂಡಕ್ಕೆ ಅವಕಾಶ ನೀಡಲಾಯಿತು. ಮಾತ್ರವಲ್ಲದೆ ಅವರನ್ನು ಉಪನಾಯಕನನ್ನಾಗಿಯೂ ಆಯ್ಕೆ ಮಾಡಲಾಗಿದೆ. ಗಿಲ್ ಕಳೆದ ಒಂದು ವರ್ಷದಿಂದ ಭಾರತ ಟಿ20ಐ ತಂಡದಲ್ಲಿ ಆಡಿಲ್ಲ. ಶುಭಮನ್ ಗಿಲ್ ಭಾರತ ಟಿ20ಐ ತಂಡಕ್ಕೆ ಮರಳಿದ್ದರಿಂದ ಸೂರ್ಯಕುಮಾರ್ ಯಾದವ್ (Suryakumar yadav) ಅವರಿಗೆ ದೊಡ್ಡ ಆತಂಕ ಎದುರಾಗಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡದ ಪ್ರದರ್ಶನ ಟಿ20ಐನಲ್ಲಿ ಅದ್ಭುತವಾಗಿದೆ. ಅವರ ನಾಯಕತ್ವದಲ್ಲಿ ಭಾರತ ಇಲ್ಲಿಯವರೆಗೆ ಒಂದೇ ಒಂದು ದ್ವಿಪಕ್ಷೀಯ ಸರಣಿಯನ್ನು ಸೋತಿಲ್ಲ. ಆದರೆ, ಇದೀಗ ಉಪನಾಯಕ ಶುಭಮನ್ ಗಿಲ್ ಆಗಮನದಿಂದ ಅವರಿಗೆ (ಸೂರ್ಯಕುಮಾರ್) ಆತಂಕ ಹೆಚ್ಚಾಗಿದೆ. ಸೂರ್ಯ ಇನ್ನು ಮುಂದೆ ನಾಯಕನಾಗಿ ಉತ್ತಮ ಪ್ರದರ್ಶನ ನೀಡದಿದ್ದರೆ ಅಥವಾ ತಂಡವು ಉತ್ತಮ ಪ್ರದರ್ಶನ ನೀಡಲು ವಿಫಲವಾದರೆ, ಅವರನ್ನು ನಾಯಕತ್ವದಿಂದ ತೆಗೆದುಹಾಕಬಹುದು ಮತ್ತು ಶುಭಮನ್ ಗಿಲ್ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಬಹುದು.
Asia Cup 2025: ಭಾರತ-ಪಾಕ್ ಏಷ್ಯಾ ಕಪ್ ಪಂದ್ಯದ ಅಗರ್ಕರ್ ಪ್ರತಿಕ್ರಿಯೆ ತಡೆದ ಬಿಸಿಸಿಐ ಅಧಿಕಾರಿ!
ಭಾರತ ತಂಡದ ಮೂರೂ ಸ್ವರೂಪಕ್ಕೆ ಏಕೈಕ ನಾಯಕನನ್ನು ಪರಿಗಣಿಸಲಾಗುತ್ತದೆ. ಇದೇ ವೇಳೆ ಶುಭಮನ್ ಗಿಲ್ ಅವರನ್ನು ಉಪನಾಯಕನನ್ನಾಗಿ ಮಾಡುವ ಹಿಂದಿನ ಆಯ್ಕೆದಾರರ ಚಿಂತನೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಇದೀಗ ಶುಭಮನ್ ಗಿಲ್ ಅವರನ್ನು ಎಲ್ಲಾ ಸ್ವರೂಪಗಳಲ್ಲಿ ಭಾರತದ ಮುಂದಿನ ನಾಯಕನನ್ನಾಗಿ ಮಾಡಬಹುದು. ಶುಭಮನ್ ಗಿಲ್ ಅವರನ್ನು ಇತ್ತೀಚೆಗೆ ಭಾರತೀಯ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ಇನ್ನು ರೋಹಿತ್ ಶರ್ಮಾ ಏಕದಿನ ಪಂದ್ಯಗಳನ್ನು ಆಡುತ್ತಿರುವವರೆಗೆ, ಅವರ ಸ್ಥಾನದಲ್ಲಿ ಬೇರೆ ಯಾರೂ ನಾಯಕರಾಗಲು ಸಾಧ್ಯವಾಗುವುದಿಲ್ಲ.
ಆದರೆ, ಮುಂಬರುವ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲೂ ಶುಭಮನ್ ಗಿಲ್ ಅವರನ್ನು ಭಾರತದ ಉಪನಾಯಕನನ್ನಾಗಿ ಮಾಡುವ ಸಾಧ್ಯತೆ ಹೆಚ್ಚಿದೆ. ಮುಂಬರುವ ದಿನಗಳಲ್ಲಿ ಗಿಲ್ ಭಾರತವನ್ನು ಮೂರು ಸ್ವರೂಪಗಳಲ್ಲಿ ಮುನ್ನಡೆಸುವುದನ್ನು ಕಾಣಬಹುದು.
Asia Cup 2025: ಭಾರತ ತಂಡ ಕಳೆದುಕೊಂಡಿರುವ ಎಕ್ಸ್ ಫ್ಯಾಕ್ಟರ್ ಆಟಗಾರರನ್ನು ಹೆಸರಿಸಿದ ಹರ್ಭಜನ್ ಸಿಂಗ್!
2025ರ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷ್‌ದೀಪ್ ಸಿಂಗ್, ಕುಲ್‌ದೀಪ್ ಯಾದವ್, ಹರ್ಷಿತ್ ರಾಣಾ ಹಾಗೂ ರಿಂಕು ಸಿಂಗ್
ಮೀಸಲು ಆಟಗಾರರು: ಪ್ರಸಿಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್