ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತ ತಂಡವನ್ನು ಮುನ್ನಡೆಸಿ 58 ವರ್ಷಗಳ ಹಳೆಯ ದಾಖಲೆ ಮುರಿದ ಶುಭಮನ್‌ ಗಿಲ್‌!

IND vs ENG: ಜೂನ್‌ 20 ರೆಂದು ಲೀಡ್ಸ್‌ನಲ್ಲಿ ಆರಂಭವಾಗಿದ್ದ ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ಗೆ ಬರುವ ಮೂಲಕ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ ಐದನೇ ಅತ್ಯಂತ ಕಿರಿಯ ಆಟಗಾಎ ಎಂಬ ದಾಖಲೆಯನ್ನು ಗಿಲ್‌ ಬರೆದಿದ್ದಾರೆ.

58 ವರ್ಷಗಳ ಹಳೆಯ ದಾಖಲೆ ಮುರಿದ ಶುಭಮನ್‌ ಗಿಲ್‌!

ಭಾರತ ತಂಡದ ನಾಯಕನಾಗಿ ವಿಶೇಷ ದಾಖಲೆಯನ್ನು ಮುರಿದ ಶುಭಮನ್‌ ಗಿಲ್‌.

Profile Ramesh Kote Jun 20, 2025 6:17 PM

ಲೀಡ್ಸ್‌: ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ (IND vs ENG) ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ಶುಭಮನ್‌ ಗಿಲ್‌ (Shubman Gill) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ರೋಹಿತ್‌ ಶರ್ಮಾ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಟೆಸ್ಟ್‌ ತಂಡಕ್ಕೆ (India) ನಾಯಕನಾಗುವ ಮೂಲಕ ಅವರು, ರೋಹಿತ್‌ ಶರ್ಮಾರ ಸ್ಥಾನವನ್ನು ತುಂಬಿದ್ದಾರೆ. ಇವರಿಗೆ ಉಪ ನಾಯಕನನ್ನಾಗಿ ರಿಷಭ್‌ ಪಂತ್‌ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಶುಭಮನ್‌ ಗಿಲ್‌, ಭಾರತ ಟಿ20 ತಂಡವನ್ನು ಮುನ್ನಡೆಸಿದ್ದರು.

93 ವರ್ಷಗಳಿಂದ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಐದನೇ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆಯನ್ನು ಶುಭಮನ್‌ ಗಿಲ್‌ ಬರೆದಿದ್ದಾರೆ. ಮನ್ಸೂರ್‌ ಅಲಿ ಖಾನ್‌ ಪಟೌಡಿ, ಸಚಿನ್‌ ತೆಂಡೂಲ್ಕರ್‌, ಕಪಿಲ್‌ ದೇವ್‌ ಹಾಗೂ ರವಿ ಶಾಸ್ತ್ರಿ ಅವರು ಶುಭಮನ್‌ ಗಿಲ್‌ ಅವರಿಗಿಂತ ಕಡಿಮೆ ವಯಸ್ಸಿನಲ್ಲಿ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದರು.

IND vs ENG: 3006 ದಿನಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ಮರಳಿದ ಕನ್ನಡಿಗ ಕರುಣ್‌ ನಾಯರ್‌!

ಮನ್ಸೂರಿ ಅಲಿ ಖಾನ್‌ ಅವರು 1962ರಲ್ಲಿ ತಮ್ಮ 21 ವರ್ಷ, 77 ದಿನಗಳಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ತಂಡವನ್ನು ಮುನ್ನಡೆಸಿದ್ದರು. ಇವರು ಈಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಇದ್ದಾರೆ. ಇವರು 1996ರಲ್ಲಿ ತಮ್ಮ 23 ವರ್ಷ, 169 ದಿನಗಳ ವಯಸ್ಸಿನಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡವನ್ನು ಮುನ್ನಡೆಸಿದ್ದರು. 1983ರಲ್ಲಿ ಕಿಂಗ್ಸ್‌ಸ್ಟನ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ತಮ್ಮ 25 ವರ್ಷ ಮತ್ತು 48 ದಿನಗಳ ವಯಸ್ಸಿನಲ್ಲಿ ಕಪಿಲ್‌ ದೇವ್ ಭಾರತ ತಂಡಕ್ಕೆ ನಾಯಕರಾಗಿದ್ದರು.

1988ರಲ್ಲಿ ಚೆನ್ನೈನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದ ತಮ್ಮ 25 ವರ್ಷ ಮತ್ತು 229 ದಿನಗಳ ವಯಸ್ಸಿನಲ್ಲಿ ರವಿಶಾಸ್ತ್ರಿ ಮೊದಲ ಬಾರಿ ಭಾರತ ತಂಡದ ಸಾರಥ್ಯವನ್ನು ವಹಿಸಿದ್ದರು. ಇದೀಗ ಶುಭಮನ್‌ ಗಿಲ್‌ ಇಂಗ್ಲೆಂಡ್‌ ವಿರುದ್ಧ ತಮ್ಮ 25 ವರ್ಷ ಮತ್ತು 285 ದಿನಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಮೂಲಕ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ ಐದನೇ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಗಿಲ್‌ ಬರೆದಿದ್ದಾರೆ.

IND vs ENG: ಟೆಸ್ಟ್‌ನಲ್ಲಿ ಆಂಗ್ಲರ ಬಾಝ್​ಬಾಲ್​ ಆಟ ಎಂದರೇನು?

ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ಗಿಲ್‌

21ನೇ (2000ರ ಬಳಿಕ) ಶತಕಮಾನದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಕೂಡ ಶುಭಮನ್‌ ಗಿಲ್‌ ಬರೆದಿದಾರೆ. ಆ ಮೂಲಕ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಭಾರತ ತಂಡವನ್ನು ಮುನ್ನಡೆಸಿದ್ದ 20 ಅಥವಾ ಅದಕ್ಕಿಂತ ಒಳಗಡೆ ವಯಸ್ಸಿನ ಮೊದಲ ಭಾರತೀಯ ಆಟಗಾರ ಎಂಬ ನೂತನ ದಾಖಲೆಯನ್ನು ಕೂಡ ಶುಭಮನ್‌ ಗಿಲ್‌ ಮುರಿದಿದ್ದಾರೆ.