SA vs WI: ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಭಾರತದ ಹಾದಿ ಸುಗಮಗೊಳಿಸಿದ ದಕ್ಷಿಣ ಆಫ್ರಿಕಾ!
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ದದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಗೆದ್ದು ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಬಹುತೇಕ ಸನಿಹವಾಗಿದೆ. ವೆಸ್ಟ್ ಇಂಡೀಸ್ ಸೋಲು ಕಂಡ ಕಾರಣ ಭಾರತ ತಂಡದ ಸೆಮಿಫೈನಲ್ ಹಾದಿ ಸ್ವಲ್ಪ ಸುಲಭವಾಗಿದೆ. ಭಾರತ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತ ಸೆಮಿಫೈನಲ್ ಪ್ರವೇಶಿಸಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 9 ವಿಕೆಟ್ ಜಯ. -
ಅಹಮದಾಬಾದ್: ದಕ್ಷಿಣ ಆಫ್ರಿಕಾ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಸೂಪರ್-8ರ ಹಂತದ ಪಂದ್ಯದಲ್ಲಿ (SA vs WI) ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಹರಿಣ ಪಡೆ, ಸೆಮಿಫೈನಲ್‌ಗೆ ಬಹುತೇಕ ಅರ್ಹತೆಯನ್ನು ಪಡೆದುಕೊಂಡಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದಂತಾಗಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋತಿರುವುದರಿಂದ ಭಾರತ ತಂಡದ ಸೆಮಿಫೈನಲ್ ಕನಸು ಜೀವಂತವಾಗಿದೆ. ಟೀಮ್ ಇಂಡಿಯಾ (India) ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೆ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.
ಸೂಪರ್ 8ರ ಮೊದಲನೇ ಗುಂಪಿನಲ್ಲಿರುವ ನಾಲ್ಕು ತಂಡಗಳಲ್ಲಿ ಜಿಂಬಾಬ್ವೆ ಕೂಡ ಸೆಮಿಫೈನಲ್ ರೇಸ್‌ನಲ್ಲಿದೆ. ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಭಾರತ ಸೆಮಿಫೈನಲ್ ಸ್ಥಾನಕ್ಕಾಗಿ ಪ್ರಮುಖ ಸ್ಪರ್ಧಿಗಳಾಗಿದ್ದರೂ, ಒಂದು ಪಂದ್ಯ ಸೋತಿರುವ ಜಿಂಬಾಬ್ವೆ ಕೊನೆಯ ಎರಡೂ ಪಂದ್ಯಗಳನ್ನು ಗೆಲ್ಲುವ ಸಾಧ್ಯತೆ ತುಂಬಾ ವಿರಳ.
T20 world Cup 2026: ಶ್ರೀಲಂಕಾ ತಂಡದ ವೈಫಲ್ಯದ ಬಗ್ಗೆ ಕುಮಾರ ಸಂಗಕ್ಕಾರ ದೊಡ್ಡ ಹೇಳಿಕೆ!
ದಕ್ಷಿಣ ಆಫ್ರಿಕಾಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್
ಗುರುವಾರ ನಡೆದಿದ್ದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 177 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಏಡೆನ್ ಮಾರ್ಕಮ್ (82* ರನ್), ಕ್ವಿಂಡನ್ ಡಿ ಕಾಕ್ (47) ಹಾಗೂ ರಯಾನ್ ರಿಕೆಲ್ಟನ್ (45*) ಅವರ ಬ್ಯಾಟಿಂಗ್ ಬಲದಿಂದ 16.1 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು.
The Proteas inch closer to a #T20WorldCup semi-final spot with a comprehensive win over the West Indies 👌
— ICC (@ICC) February 26, 2026
📝: https://t.co/7sIwZ3AL3T pic.twitter.com/00jaM4QsVT
ಹರಿಣ ಪಡೆಯ ಚೇಸಿಂಗ್‌ನಲ್ಲಿ ನಾಯಕ ಏಡೆನ್ ಮಾರ್ಕ್ರಮ್ 46 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜರಾದರು. ಮಾರ್ಕ್ರಮ್ ಜೊತೆ ಇನಿಂಗ್ಸ್ ಆರಂಭಿಸಿದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ 47 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದರು. ಡಿಕಾಕ್ ಔಟಾದ ಬಳಿಕ ಕ್ರೀಸ್‌ಗೆ ಬಂದ ರಯಾನ್ ರಿಕೆಲ್ಟನ್ ಕೂಡ ಪರಿಣಾಮಕಾರಿಯಾಗಿ ಬ್ಯಾಟ್ ಬೀಸಿ ಅಜೇಯ 45* ರನ್ ಗಳಿಸಿದರು.
Aiden Markram's dominant knock of 82* powered South Africa to a big win over the West Indies👊
— ICC (@ICC) February 26, 2026
He wins the @aramco POTM🏅
📝: https://t.co/7sIwZ3AL3T pic.twitter.com/c49fODQP4H
ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ವೆಸ್ಟ್ ಇಂಡೀಸ್ ಉತ್ತಮವಾಗಿ ಆರಂಭ ಪಡೆದರೂ ಮುಂದುವರಿಸಲು ಸಾಧ್ಯವಾಗಲಿಲ್ಲ. ಬ್ರೆಂಡನ್ ಕಿಂಗ್ (21) ಹಾಗೂ ಶೇಯ್ ಹೋಪ್(16) ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಹೊಸ ಚೆಂಡನ್ನು ಹಂಚಿಕೊಂಡಿದ್ದ ಲುಂಗಿ ಎನ್ಗಿಡಿ ಹಾಗೂ ಕಗಿಸೊ ರಬಾಡ ಪವರ್‌ಪ್ಲೇನಲ್ಲಿ ವಿಂಡೀಸ್‌ನ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಲುಂಗಿ ಎನ್ಗಿಡಿ 3 ವಿಕೆಟ್ ಕಿತ್ತರೆ, ರಬಾಡ ಎರಡು ವಿಕೆಟ್ ಪಡೆದರು.
ಪಾಕಿಸ್ತಾನದ ಸೆಮಿ ಪ್ರವೇಶದ ಲೆಕ್ಕಾಚಾರ ಹೇಗಿದೆ?
ರೊಮ್ಯಾರಿಯೊ ಶೆಫರ್ಡ್ ನಿರ್ಣಾಯಕ ಅರ್ಧಶತಕ
ವೆಸ್ಟ್ ಇಂಡೀಸ್ ತಂಡ 83 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕ್ರೀಸ್‌ನಲ್ಲಿ ಜೊತೆಯಾದ ಜೇಸನ್ ಹೋಲ್ಡರ್ ಹಾಗೂ ರೊಮ್ಯಾರಿಯೊ ಶೆಫರ್ಡ್ ಜೋಡಿ ಎಂಟನೇ ವಿಕೆಟ್‌ಗೆ 57 ಎಸೆತಗಳಲ್ಲಿ ನಿರ್ಣಾಯಕ 89 ರನ್‌ಗಳನ್ನು ಗಳಿಸಿತು. ಆ ಮೂಲಕ ಕಡಿಮೆ ಮೊತ್ತಕ್ಕೆ ಕುಸಿಯುತ್ತಿದ್ದ ವಿಂಡೀಸ್ ತಂಡವನ್ನು 170ರ ಗಡಿ ದಾಟಿಸುವಲ್ಲಿ ಈ ಜೋಡಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಸ್ಪೋಟಕ ಬ್ಯಾಟ್ ಮಾಡಿದ ಜೇಸನ್ ಹೋಲ್ಡರ್ 39 ಎಸೆತಗಳಲ್ಲಿ 47 ರನ್ ಗಳಿಸಿದರೆ, ಶೆಫರ್ಡ್ 37 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 52 ರನ್ ಸಿಡಿಸಿದರು. ಆ ಮೂಲಕ ವಿಂಡೀಸ್ ತಂಡವನ್ನು ಕಾಪಾಡಿದ್ದರು.