ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

PAK vs SL: ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಗೆ ಶ್ರೀಲಂಕಾ ತಂಡ ಪ್ರಕಟ, ಕುಸಾಲ್‌ ಮೆಂಡಿಸ್‌ ನಾಯಕ!

Sri lanka test Squad: ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯ ಶ್ರೀಲಂಕಾ ಟೆಸ್ಟ್‌ ತಂಡ ಪಕಟವಾಗಿದ್ದು, ಕುಸಾಲ್‌ ಮೆಂಡಿಸ್‌ ಇದೇ ಮೊದಲ ಬಾರಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಧನಂಜಯ್‌ ಡಿ ಸಿಲ್ವಾ ಅವರು ಟೆಸ್ಟ್‌ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಗೆ ಶ್ರೀಲಂಕಾ ತಂಡ ಪ್ರಕಟ!

ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಗೆ ಶ್ರೀಲಂಕಾ ತಂಡ ಪ್ರಕಟ. -

Profile
Ramesh Kote Oct 13, 2026 5:22 PM

ನವದೆಹಲಿ: ಪಾಕಿಸ್ತಾನ ವಿರುದ್ಧ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಗೆ (PAK vs SL)15 ಸದಸ್ಯರ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಧನಂಜಯ್‌ ಡಿ ಸಿಲ್ವಾ ಅವರು ಕಳೆದ ಕೆಲವು ದಿನಗಳಲ್ಲಿ ಟೆಸ್ಟ್‌ ತಂಡದ ನಾಯಕತ್ವವನ್ನು ತೊರೆದಿದ್ದರು. ಇದೀಗ ಕುಸಾಲ್‌ ಮೆಂಡಿಸ್‌ (Kusal mendis) ಅವರು ಶ್ರೀಲಂಕಾ ಟೆಸ್ಟ್‌ ತಂಡದ ನಾಯಕತ್ವವನ್ನು ಸ್ವೀಕರಿಸಿದ್ದಾರೆ. ರಾಷ್ಟ್ರೀಯ ತಂಡವನ್ನು ಇದುವರೆಗೂ ಪ್ರತಿನಿಧಿಸದ ಅಂಜಲಾ ಬಂಡಾರಾ ಅವರು ಶ್ರೀಲಂಕಾ ತಂಡದಲ್ಲಿ ಮೊಟ್ಟ ಮೊದಲ ಬಾರಿ ಅವಕಾಶವನ್ನು ನೀಡಲಾಗಿದೆ.

ಪಥುಮ್‌ ನಿಸಾಂಕಾ ಅವರನ್ನು ಟೆಸ್ಟ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಅವರ ಫಿಟ್‌ನೆಸ್‌ ಅನ್ನು ನೋಡಿಕೊಂಡು ಬಳಿಕ ಅವರಿಗೆ ಆರಂಭಿಕ ಪಂದ್ಯದಲ್ಲಿ ಅವಕಾಶವನ್ನು ನೀಡಲಾಗುತ್ತದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಈ ಟೆಸ್ಟ್‌ ಸರಣಿಯಲ್ಲಿ ಪಥುಮ್‌ ನಿಸಾಂಕ ಅವರು ತುಂಬಾ ಮುಖ್ಯವಾಗಿದ್ದಾರೆ. ಹಾಗಾಗಿ ಅವರ ಲಭ್ಯತೆಯ ಬಗ್ಗೆ ಮುಂದಿನ ತಿಂಗಳಲ್ಲಿ ಮಾಹಿತಿ ಲಭ್ಯವಾಗಲಿದೆ. ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯ ನವೆಂಬರ್‌ 9 ರಂದು ರಾವಲ್ಪಿಂಡಿಯಲ್ಲಿ ಆರಂಭವಾಗಲಿದ್ದು, ಎರಡನೇ ಟೆಸ್ಟ್‌ ಪಂದ್ಯ ನವೆಂಬರ್‌ 17 ರಂದು ಲಾಹೋರ್‌ನಲ್ಲಿ ಆರಂಭವಾಗಲಿದೆ.

ಶ್ರೀಲಂಕಾ ಟೆಸ್ಟ್‌ ತಂಡದ ನಾಯಕತ್ವದಿಂದ ಕೆಳಗೆ ಇಳಿದು ಶಾಕ್‌ ನೀಡಿದ ಧನಂಜಯ ಡಿ ಸಿಲ್ವಾ!

ಪಾಕಿಸ್ತಾನ ಪ್ರವಾಸಕ್ಕೆ ಸಜ್ಜಾಗುತ್ತಿರುವ ಶ್ರೀಲಂಕಾ ತಂಡಕ್ಕೆ ಪಥುಮ್‌ ನಿಸಾಂಕ ಅವರ ಫಿಟ್‌ನೆಸ್‌ ತುಂಬಾ ಮುಖ್ಯವಾಗಿದೆ. ಇವರು ಸಂಪೂರ್ಣ ಫಿಟ್‌ ಆದರೆ, ಆರಂಭಿಕ ಪಂದ್ಯದಲ್ಲಿ ಅವರು ನೇರವಾಗಿ ಕಣಕ್ಕೆ ಇಳಿಯಲಿದ್ದಾರೆ. ಅಂದ ಹಾಗೆ ಪಂದ್ಯದ ದಿನ ಸೆಲೆಕ್ಟರ್‌ಗಳು ನಿಸಾಂಕ ಅವರ ಮ್ಯಾಚ್‌ ಫಿಟ್ನೆಸ್‌ ನೋಡಿ ಅಂತಿಮ ಕರೆಯನ್ನು ತೆಗೆದುಕೊಳ್ಳಲಿದ್ದಾರೆ. ಅವರು ಅಲಭ್ಯರಾದರೆ ಮೀಸಲು ಆರಂಭಿಕ ಬ್ಯಾಟ್ಸ್‌ಮನ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ.

ಕೊಲಂಬೊ ಕ್ರಿಕೆಟ್ ಕ್ಲಬ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಅನ್ಜಲಾ ಬಂಡಾರ ಅವರನ್ನು ಅಗತ್ಯವಿದ್ದರೆ ಆರಂಭಿಕ ಕ್ರಮಾಂಕದಲ್ಲೂ ಆಡಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ, ರಾವಲ್ಪಿಂಡಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಪಥುಮ್ ನಿಸಾಂಕ ಅವರ ಲಭ್ಯತೆಯ ಕುರಿತು ಹೆಚ್ಚಿನ ಸ್ಪಷ್ಟತೆ ಪಂದ್ಯ ಹತ್ತಿರವಾದಂತೆ ದೊರೆಯುವ ನಿರೀಕ್ಷೆಯಿದೆ.

ಇದರ ನಡುವೆ, ಬಂಡಾರ ಶ್ರೀಲಂಕಾ ತಂಡಕ್ಕೆ ಪ್ರಮುಖ ಆಟಗಾರರಾಗುವ ಸಾಧ್ಯತೆಯಿದೆ. ಪ್ರಥಮ ದರ್ಜೆ ಕ್ರಿಕೆಟ್‌ನ 31 ಪಂದ್ಯಗಳಲ್ಲಿ 2,239 ರನ್ ಗಳಿಸಿರುವ ಅವರು ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪಂಜಾಬ್‌ ಪರ ಐದು ವಿಕೆಟ್ ಕಬಳಿಸಿದ ಉಮೇಶ್ ಯಾದವ್

ಮತ್ತೊಂದೆಡೆ, ಶ್ರೀಲಂಕಾದ ಮಾಜಿ ನಾಯಕ ಧನಂಜಯ ಡಿ ಸಿಲ್ವಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಆದರೆ ನಾಯಕತ್ವವನ್ನು ತ್ಯಜಿಸಿದ ಬಳಿಕ ಅವರ ಮುಂದಿನ ಗುರಿಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ಈ ಸರಣಿಯಲ್ಲೂ ಸ್ಪಿನ್ನರ್‌ಗಳ ಪ್ರದರ್ಶನ ನಿರ್ಣಾಯಕವಾಗುವ ನಿರೀಕ್ಷೆಯಿದೆ. ಪ್ರವಾಸಿ ಶ್ರೀಲಂಕಾ ತಂಡದ ಪರ ಪ್ರಭಾತ್ ಜಯಸೂರ್ಯ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.



ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಶ್ರೀಲಂಕಾದ ಸಂಪೂರ್ಣ ತಂಡ

ಕುಸಾಲ್ ಮೆಂಡಿಸ್ (ನಾಯಕ), ಪಥುಮ್ ನಿಸಾಂಕ, ಪಸಿಂದು ಸೂರಿಯಬಂಡಾರ, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ಸೋನಲ್ ದಿನುಷ, ಧನಂಜಯ ಡಿ ಸಿಲ್ವಾ, ಅನ್ಜಲಾ ಬಂಡಾರ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಮಿಲನ್ ರತ್ನಾಯಕ, ಲಹಿರು ಕುಮಾರ, ಅಸಿತ ಫೆರ್ನಾಂಡೊ, ದಿಲ್ಶಾನ್ ಮಧುಶಂಕ ಮತ್ತು ಇಶಾನ್ ಮಾಲಿಂಗ