ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ ಸ್ಟೋಕ್ಸ್‌ಗೆ ಸಂದೇಶ ರವಾನಿಸಿದ ಸಚಿನ್ ತೆಂಡೂಲ್ಕರ್!
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಬೆನ್ ಸ್ಟೋಕ್ಸ್‌ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಆಲ್‌ರೌಂಡರ್‌ನ ಶಕ್ತಿಯುತ ವಿಧಾನ ಮತ್ತು ನಿರ್ಭೀತ ಮನಸ್ಥಿತಿಯನ್ನು ಸಚಿನ್ ಉಲ್ಲೇಖಿಸಿದ್ದಾರೆ.
ಬೆನ್ ಸ್ಟೋಕ್ಸ್‌ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ. -
ನವದೆಹಲಿ: ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯದ ವೇಳೆ ನಾಯಕ ಬೆನ್ ಸ್ಟೋಕ್ಸ್ (Ben Stokes) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಇದರ ಬೆನ್ನಲೆ ಕ್ರಿಕೆಟ್ ಜಗತ್ತು ಬೆನ್ ಸ್ಟೋಕ್ಸ್‌ಗೆ ಅಭಿನಂದನೆ ಹಾಗೂ ಅವರು ಆಟಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸಿದರು. ಇದೀಗ ಭಾರತ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ (Sachin Tendulkar) ಕೂಡ, ಬೆನ್ ಸ್ಟೋಕ್ಸ್‌ಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ತಮ್ಮ ಭಾವನಾತ್ಮಕ ವಿದಾಯ ಸಂದೇಶದಲ್ಲಿ ಸ್ಟೋಕ್ಸ್ ಅವರ ನಾಯಕತ್ವದ ಗುಣಗಳನ್ನು ಶ್ಲಾಘಿಸಿದ್ದಾರೆ ಹಾಗೂ ಅವರನ್ನು ಇಂಗ್ಲೆಂಡ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಬಣ್ಣಿಸಿದ್ದಾರೆ. ಇದರ ಜೊತೆಗೆ ಅವರ ಜೀವನದ ಮುಂದಿನ ಹಂತಕ್ಕೆ ಶುಭ ಹಾರೈಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವಂತೆ ಬೆನ್ ಸ್ಟೋಕ್ಸ್ ಮೇಲೆ ಒತ್ತಡ? ಸ್ಪಷ್ಟನೆ ನೀಡಿದ ಮಾಜಿ ನಾಯಕ!
"ನೀವು ಕ್ರಿಕೆಟ್‌ಗೆ ತಂದ ಉತ್ಸಾಹವನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ನಿಮ್ಮ ಸಕಾರಾತ್ಮಕ ಮನೋಭಾವ, ನಿರ್ಭೀತಿಯ ಆಟದ ಶೈಲಿ ಮತ್ತು ಒತ್ತಡದ ಕ್ಷಣಗಳಲ್ಲಿ ಪಂದ್ಯವನ್ನು ತಿರುಗಿಸುವ ನಿಮ್ಮ ಸಾಮರ್ಥ್ಯವು ಪ್ರತಿ ಬಾರಿ ಎದ್ದು ಕಾಣುತ್ತಿತ್ತು. ಆಲ್‌ರೌಂಡರ್ ಆಗಿ ನೀವು ಇಂಗ್ಲೆಂಡ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದೀರಿ. ನಾಯಕನಾಗಿ ನಿಮ್ಮ ದಿಟ್ಟ ತಂತ್ರಗಳು ಮತ್ತು ಪಂದ್ಯದ ಸ್ಥಿತಿಯನ್ನು ಕ್ಷಣಾರ್ಧದಲ್ಲಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ನಿಮ್ಮ ತಂಡಕ್ಕೆ ಹೊಸ ಶಕ್ತಿಯನ್ನು ನೀಡಿತು."
"ನಿಮ್ಮ ಜೀವನದ ಮುಂದಿನ ಅಧ್ಯಾಯಕ್ಕೆ ಹೃತ್ಪೂರ್ವಕ ಶುಭಾಶಯಗಳು. ನಿಮ್ಮನ್ನು ತಿಳಿದಿರುವ ನನಗೆ, ಮೈದಾನದಿಂದ ದೂರವಿರುವುದೇ ನಿಮಗೆ ಅತ್ಯಂತ ಕಠಿಣವಾಗಬಹುದು ಎಂದು ಅನಿಸುತ್ತದೆ. ನಿಮ್ಮ ಜೀವನದ ಮುಂದಿನ ಇನಿಂಗ್ಸ್‌ಗೆ ಶುಭವಾಗಲಿ," ಎಂದು ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
.@benstokes38, I’ve always admired the way you brought energy into the game. Your positivity, your fearless intent, and the way you shaped moments under pressure stood out every time you walked in. As an all-rounder, you’ve been one of England’s finest, and as a captain, your…
— Sachin Tendulkar (@sachin_rt) June 29, 2026
ಬೆನ್ ಸ್ಟೋಕ್ಸ್‌ಗೆ ನಿರಾಸೆಯ ವಿದಾಯ; ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ ಸರಣಿ ಜಯ
ಬೆನ್ ಸ್ಟೋಕ್ಸ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಕೊನೆಯ ಪಂದ್ಯ, ಭಾರೀ ಸೋಲಿನೊಂದಿಗೆ ಅಂತ್ಯಗೊಂಡಿತು. ಸೋಮವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ಅಂತ್ಯವಾಗಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಗಾಯಗಳ ಸಮಸ್ಯೆಯಿಂದ ಬಳಲುತ್ತಿದ್ದ ನ್ಯೂಜಿಲೆಂಡ್ ತಂಡ, ಇಂಗ್ಲೆಂಡ್ ವಿರುದ್ಧ 160 ರನ್‌ಗಳ ಭರ್ಜರಿ ಜಯ ದಾಖಲಿಸಿತು.
ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿತು. ಇಂಗ್ಲೆಂಡ್ ನೆಲದಲ್ಲಿ 20 ಸರಣಿ ಪ್ರವಾಸಗಳಲ್ಲಿ ನ್ಯೂಜಿಲೆಂಡ್ ದಾಖಲಿಸಿದ ಕೇವಲ ನಾಲ್ಕನೇ ಸರಣಿ ಜಯ ಇದಾಗಿದೆ. ಅಲ್ಲದೆ, 1999ರ ಬಳಿಕ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ 0-1 ಹಿನ್ನಡೆಯಾದ ನಂತರ ಸರಣಿಯನ್ನು ಗೆದ್ದ ಎರಡನೇ ಸಂದರ್ಭವೂ ಇದಾಗಿದೆ.
IND vs ENG ಒಡಿಐ ಸರಣಿಗೂ ಮುನ್ನ ರೋಹಿತ್ ಶರ್ಮಾಗೆ ಸುನೀಲ್ ಗವಾಸ್ಕರ್ ವಾರ್ನಿಂಗ್!
ಇನ್ನೊಂದೆಡೆ, ಇದು 2012ರ ಬಳಿಕ ಇಂಗ್ಲೆಂಡ್ ತಂಡ ತವರಿನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅನುಭವಿಸಿದ ಮೊದಲ ಸೋಲಾಗಿದೆ. ಜೊತೆಗೆ, ಇಂಗ್ಲೆಂಡ್ ತನ್ನ ಕೊನೆಯ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಏಳನೇ ಸೋಲನ್ನು ದಾಖಲಿಸಿದೆ.