ಸಂಜು ಸ್ಯಾಮ್ಸನ್ ನೆಟ್‌ವರ್ಥ್ ಎಷ್ಟು? ಆಸ್ತಿ, ಕಾರುಗಳು, ಐಪಿಎಲ್ ಸಂಬಳದ ಸಂಪೂರ್ಣ ಮಾಹಿತಿ!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರುವ ಮೂಲಕ ಭಾರತ ತಂಡದ ಗೆಲುವಿಗೆ ಸಂಜು ಸ್ಯಾಮ್ಸನ್ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ಇದೀಗ ಅವರ ಸಂಪೂರ್ಣ ಆಸ್ತಿ, ಸಂಬಳ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
ಸಂಜು ಸ್ಯಾಮ್ಸಾನ್ ನೆಟ್‌ವರ್ಥ್ ಎಷ್ಟು ಕೋಟಿ ರು? -
ಬೆಂಗಳೂರು: ಟೀಮ್ ಇಂಡಿಯಾದ ಪ್ರತಿಭಾನ್ವಿತ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಸಂಜು ಸ್ಯಾಮ್ಸನ್ (Sanju Samson), ಆಟದ ಮೈದಾನದಲ್ಲಿ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ (MS Dhoni) ಮಾದರಿ ಶಾಂತ ಸ್ವಭಾವ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಭಿಮಾನಿಗಳ ಜೊತೆಗೆ ತಮ್ಮ ಸುದೀರ್ಘ ಅವಧಿಯ ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಹಣ ಕೂಡ ಸಂಪಾದನೆ ಮಾಡಿದ್ದಾರೆ. ಹಾಗಿದ್ರೆ, ಸಂಜು ನೆಟ್‌ವರ್ತ್ ಎಷ್ಟು? ಈ ಲೇಖನದಲ್ಲಿ ಅದರ ಪಿನ್ ಟು ಪಿನ್ ಮಾಹಿತಿಯನ್ನು ನೀಡಿದ್ದೇನೆ, ಕೊನೆವರೆಗೂ ಓದಿ.
ಅಂಡರ್ 19 ಕ್ರಿಕೆಟ್‌ನಿಂದಲೇ ಸಾಕಷ್ಟು ಸದ್ದು ಮಾಡಿದ್ದ ಕೇರಳದ ಹುಡುಗ ಸಂಜು ಸ್ಯಾಮ್ಸನ್, ಈವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೀಡಿದ ನಿರಂತರ ಪ್ರದರ್ಶನದ ಮೂಲಕ ಗಣನೀಯ ಆರ್ಥಿಕ ಯಶಸ್ಸನ್ನೂ ಕಂಡಿದ್ದಾರೆ. ವಿವಿಧ ಮೂಲಗಳ ಆಧಾರದ ಮೇಲೆ, ಸಂಜು ಸ್ಯಾಮ್ಸನ್ ಅವರ ಅಂದಾಜು ಒಟ್ಟು ಸಂಪತ್ತು (ಅಂದ್ರೆ ನೆಟ್‌ವರ್ತ್) ಸುಮಾರು 86 ಕೋಟಿ ಎಂದು ಹೇಳಲಾಗುತ್ತಿದೆ. ಯಾವ ಯಾವ ಮೂಲಗಳಿಂದ ಎಷ್ಟು ಆದಾಯ ಬಂದಿದೆ, ಸಂಜು ಬಳಿ ಇರುವ ಆಸ್ತಿ ಏನೇನು ಎಲ್ಲರದ ಮಾಹಿತಿ ಇಂತಿದೆ.
ಹೈವೋಲ್ಟೇಜ್ ಭಾರತ-ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿ ಪಂದ್ಯದ ಪಿಚ್ ರಿಪೋರ್ಟ್
ಬಿಸಿಸಿಐ ಒಪ್ಪಂದ ಮತ್ತು ಪಂದ್ಯ ಶುಲ್ಕ
ಸಂಜು ಸ್ಯಾಮ್ಸನ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಗ್ರೇಡ್ 'ಸಿ' ಒಪ್ಪಂದ ಸಿಕ್ಕಿದ್ದು, ಇದರಿಂದ ವರ್ಷಕ್ಕೆ ಸುಮಾರು ಒಂದು ಕೋಟಿ ರು ವೇತನ ದೊರೆಯುತ್ತದೆ.
ಪಂದ್ಯ ಶುಲ್ಕ (ಅಂದಾಜು)
T20I – ₹3 ಲಕ್ಷ ಪ್ರತಿ ಪಂದ್ಯ
ODI – ₹6 ಲಕ್ಷ ಪ್ರತಿ ಪಂದ್ಯ
Test – ₹15 ಲಕ್ಷ ಪ್ರತಿ ಪಂದ್ಯ
ಪಂದ್ಯಗಳ ಸಂಖ್ಯೆ ಹಾಗೂ ಸರಣಿಗಳ ಆಧಾರದ ಮೇಲೆ ಈ ಆದಾಯ ಹೆಚ್ಚಾಗುತ್ತದೆ. ಇನ್ನು ಸಂಜು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. 2014ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಆರಂಭಿಸಿದ ಸಂಜು, ಈವರೆಗೆ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಮಾತ್ರವೇ ಟೀಮ್ ಇಂಡಿಯಾಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಐಪಿಎಲ್‌ನಿಂದ ಭಾರಿ ಆದಾಯ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ಆಟಗಾರರ ಜೀವನವನ್ನೇ ಬದಲಾಯಿಸಿದೆ. ಅದೆಷ್ಟೋ ಆಟಗಾರರು ಝೀರೋದಿಂದ ಹೀರೋ ಆದ ಕಥೆಗಳಿವೆ. ಇನ್ನು ಸಂಜು ಸ್ಯಾಮ್ಸನ್ ಅವರ ಪ್ರಮುಖ ಆದಾಯದ ಮೂಲ ಕೂಡ ಐಪಿಎಲ್. ಆರಂಭದಲ್ಲಿ ಕಡಿಮೆ ಮೊತ್ತದಿಂದ ಶುರುವಾದ ಅವರ ಸಂಬಳ, ನಂತರ ಗಣನೀಯವಾಗಿ ಏರಿಕೆಯಾಯಿತು. ಇತ್ತೀಚಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗೆ 18 ಕೋಟಿ ರೂ. ಸಂಭಾವನೆ ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕ್ಯಾಪ್ಟನ್ ಆಗಿದ್ದರು.
T20 World Cup: ಸಂಜು ಸ್ಯಾಮ್ಸನ್ ಬಗ್ಗೆ ಬಿಸಿಸಿಐಗೆ ಎಚ್ಚರಿಕೆ ನೀಡಿದ ಸೌರವ್ ಗಂಗೂಲಿ!
ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ವೇತನ
2013 – ₹10 ಲಕ್ಷ
2014 – ₹4 ಕೋಟಿ
2016 – ₹4 ಕೋಟಿ
2020 – ₹14 ಕೋಟಿ
2022 – ₹14 ಕೋಟಿ
2024 – ₹14 ಕೋಟಿ
2026 – ₹18 ಕೋಟಿ
ಐಪಿಎಲ್‌ನಲ್ಲಿ ಅವರ ನಾಯಕತ್ವ ಮತ್ತು ನಿರಂತರ ಪ್ರದರ್ಶನದಿಂದ ಈ ಸಂಬಳ ಏರಿಕೆಯಾಗಿದ್ದು ಗಮನಾರ್ಹ. ತಮ್ಮ ಕ್ಯಾಪ್ಟನ್ಸಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ ಹೆಗ್ಗಳಿಕೆ ಕೂಡ ಅವರದ್ದು. ಈಗ ಸಿಎಸ್‌ಕೆ ತಂಡದಲ್ಲಿ ಧೋನಿ ಸ್ಥಾನ ತುಂಬುವ ಭರವಸೆ ಮೂಡಿಸಿದ್ದಾರೆ.
ಸಂಜು ಕಾರುಗಳು ಮತ್ತು ಬೈಕ್‌ಗಳ ಸಂಗ್ರಹ
ಸಂಜು ಸ್ಯಾಮ್ಸನ್ ಲಕ್ಸುರಿ ಕಾರುಗಳ ಅಭಿಮಾನಿಯಾಗಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಹಲವು ಪ್ರೀಮಿಯಂ ಬ್ರ್ಯಾಂಡ್‌ಗಳ ಕಾರುಗಳಿವೆ.
* ರೇಂಜ್ ರೋವರ್ ಆಟೊಬಯೋಗ್ರಫಿ – ₹2.25 ಕೋಟಿ (ಅಂದಾಜು)
* ರೇಂಜ್ ರೋವರ್ ಸ್ಪೋರ್ಟ್ – ₹1.8 ಕೋಟಿ
* ಬಿಎಂಡಬ್ಲ್ಯು 5 ಸೀರೀಸ್ – ₹2.7 ಕೋಟಿ (ಅಂದಾಜು)
* ಔಡಿ ಎ6 – ₹60 ಲಕ್ಷ
* ಮರ್ಸೆಡೀಸ್ ಬೆನ್ಜ್ – ₹1.65 ಕೋಟಿ
* ಲೆಕ್ಸಸ್ ಇಎಸ್ 300ಎಚ್ – ₹2.65 ಕೋಟಿ
ಆಸ್ತಿ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ
* ಕೇರಳದಲ್ಲಿ ಸುಂದರ ಬಂಗಲೆ – ಸುಮಾರು ₹16–17 ಕೋಟಿ
* ಮುಂಬೈ, ಬೆಂಗಳೂರು, ಹೈದರಾಬಾದ್ ನಗರಗಳಲ್ಲಿ ಹೆಚ್ಚುವರಿ ಆಸ್ತಿಗಳು (ಅಂದಾಜು)
* ಕೇರಳದಲ್ಲಿ ಪಿತ್ರಾರ್ಜಿತವಾಗಿ ಬಂದ ಭೂಮಿ
ಈ ರೀತಿಯ ಸ್ಥಿರ ಆಸ್ತಿ ಹೂಡಿಕೆಗಳು ಅವರ ಆರ್ಥಿಕ ಸ್ಥಿರತೆಯನ್ನು ಮತ್ತು ಮೌಲ್ಯವನ್ನು ಮತ್ತಷ್ಟು ಬಲಪಡಿಸುತ್ತವೆ.
IND vs WI: ʻಫೋನ್ ಸ್ವಿಚ್ ಮಾಡಿ, ಸೋಶಿಯಲ್ ಮೀಡಿಯಾದಿಂದ ದೂರ ಇದ್ದೇನೆʼ,-ಸಂಜು ಸ್ಯಾಮ್ಸನ್!
ಬ್ರ್ಯಾಂಡ್ ಅಂಬಾಸಿಡರ್ ಮತ್ತು ಎಂಡೋರ್ಸ್‌ಮೆಂಟ್‌ಗಳು
ಸಂಜು ಸ್ಯಾಮ್ಸನ್ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳೊಂದಿಗೆ ಕೈಜೋಡಿಸಿದ್ದಾರೆ. ಇದರಿಂದಲೂ ಅವರಿಗೆ ಗಣನೀಯ ಆದಾಯ ಲಭ್ಯವಾಗುತ್ತದೆ.
ಅವರ ಪ್ರಮುಖ ಎಂಡೋರ್ಸ್‌ಮೆಂಟ್‌ಗಳು
* ಎಸಿಕ್ಸ್
* ಜಿಲೆಟ್
* ವಾಕ್‌ಮೇಟ್
* ಮಹಿಂದ್ರಾ
ಈ ಬ್ರಾಂಡ್‌ಗಳ ಜೊತೆಗಿನ ಒಡಂಬಡಿಕೆಗಳ ಮೂಲಕ ಸಂಜು ಸ್ಯಾಮ್ಸನ್ ಅವರಿಗೆ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ.
ಕ್ರಿಕೆಟ್ ಪ್ರತಿಭೆ, ಐಪಿಎಲ್ ಯಶಸ್ಸು, ಬ್ರ್ಯಾಂಡ್ ಒಪ್ಪಂದಗಳು ಮತ್ತು ಜಾಣ್ಮೆಯ ಹೂಡಿಕೆಗಳ ಸಂಯೋಜನೆಯಿಂದ ಸಂಜು ಸ್ಯಾಮ್ಸನ್ ಅವರು ಇಂದು ಕೋಟ್ಯಾಂತರ ರೂಪಾಯಿ ಸಂಪತ್ತಿನ ಮಾಲೀಕರಾಗಿದ್ದಾರೆ. ಅವರ ಪ್ರಯಾಣ ಯುವ ಕ್ರಿಕೆಟಿಗರಿಗೆ ಪ್ರೇರಣೆ, ಕಠಿಣ ಪರಿಶ್ರಮ ಮತ್ತು ಸತತ ಪ್ರದರ್ಶನದಿಂದ ಯಶಸ್ಸು ಸಾಧಿಸಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.