IND vs ZIM:29 ಎಸೆತಗಳಲ್ಲಿ 60 ರನ್ ಸಿಡಿಸಿ ಎಂಎಸ್ ಧೋನಿಯ ದಾಖಲೆಯನ್ನು ಮುರಿದ ತಿಲಕ್ ವರ್ಮಾ!
ಜಿಂಬಾಬ್ವೆ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡುವ ಮೂಲಕ ಭಾರತ ತಂಡದ ಉಪ ನಾಯಕ ತಿಲಕ್ ವರ್ಮಾ ಅವರು, ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯನ್ನು ಮುರಿದಿದ್ದಾರೆ. ಅವರು ಆಡಿದ ಕೇವಲ 29 ಎಸೆತಗಳಲ್ಲಿ 200ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿ ಅಜೇಯ 60 ರನ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 90 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು.
ಎಂಎಸ್ ಧೋನಿ ದಾಖಲೆ ಮುರಿದ ತಿಲಕ್ ವರ್ಮಾ. -
ಹರಾರೆ: ಜಿಂಬಾಬ್ವೆ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ (IND vs ZIM) ಕೇವಲ 29 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿದ ಉಪ ನಾಯಕ ತಿಲಕ್ ವರ್ಮಾ (Tilak Verma), ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳನ್ನು ಕಲೆ ಹಾಕಿತ್ತು. ಅದರಲ್ಲಿಯೂ ಅವರು 206.90ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಅತ್ಯಂತ ವಿಶೇಷವಾಗಿತ್ತು. ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ತಿಲಕ್ ವರ್ಮಾ ಇದೀಗ ಏಳನೇ ಸ್ಥಾನಕ್ಕೇರಿದ್ದಾರೆ ಹಾಗೂ ಎಂಎಸ್ ಧೋನಿಯನ್ನು (MS Dhoni) ಹಿಂದಿಕ್ಕಿದ್ದಾರೆ. ತಿಲಕ್ 55 ಇನಿಂಗ್ಸ್‌ಗಳಲ್ಲಿ 1634 ರನ್‌ಗಳನ್ನು ಗಳಿಸಿದ್ದರೆ, ಎಂಎಸ್ 98 ಪಂದ್ಯಗಳ 85 ಇನಿಂಗ್ಸ್‌ಗಳಿಂದ 1617 ರನ್‌ಗಳನ್ನು ಗಳಿಸಿದ್ದಾರೆ.
ಎಂಎಸ್ ಧೋನಿ ಕೆಳ ಕ್ರಮಾಂಕದ ಬ್ಯಾಟರ್ ಆಗಿದ್ದು, ತಮ್ಮ ಸುದೀರ್ಘ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 1,282 ಎಸೆತಗಳನ್ನು ಎದುರಿಸಿದ್ದರು. ಮತ್ತೊಂದೆಡೆ, ತಿಲಕ್ ವರ್ಮಾ ಹೆಚ್ಚಿನ ಪಂದ್ಯಗಳಲ್ಲಿ ನಲ್ಕನೇ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, ಇದುವರೆಗೆ 1,124 ಎಸೆತಗಳನ್ನು ಎದುರಿಸಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ತಿಲಕ್ 2,000 ಟಿ20ಐ ರನ್‌ಗಳ ಗಡಿ ದಾಟುವ ಸಾಧ್ಯತೆಯಿದೆ.
IND vs ZIM: ಕಿಶನ್, ತಿಲಕ್ ಅಬ್ಬರಕ್ಕೆ ನಡುಗಿದ ಜಿಂಬಾಬ್ವೆ, ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!
ತಿಲಕ್ ಇದುವರೆಗೆ ತಮ್ಮ ಟಿ20ಐ ವೃತ್ತಿಜೀವನದಲ್ಲಿ 1,634 ರನ್‌ಗಳನ್ನು ಗಳಿಸಿದ್ದು, ಇದರಲ್ಲಿ ಎರಡು ಶತಕಗಳು ಹಾಗೂ ಒಂಬತ್ತು ಅರ್ಧಶತಕಗಳು ಸೇರಿವೆ. ಇದರಲ್ಲಿ ಅವರು 83 ಸಿಕ್ಸರ್‌ಗಳು ಮತ್ತು 126 ಬೌಂಡರಿಗಳನ್ನು ಬಾರಿಸಿದ್ದಾರೆ. ಇನ್ನೊಂದೆಡೆ, ಧೋನಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಅರ್ಧಶತಕಗಳನ್ನು ಮಾತ್ರ ದಾಖಲಿಸಿದ್ದು, ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಶತಕವನ್ನೂ ಗಳಿಸಲು ಸಾಧ್ಯವಾಗಿರಲಿಲ್ಲ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ನಾಯಕರಾದ ರೋಹಿತ್ ಶರ್ಮಾ, 159 ಪಂದ್ಯಗಳಲ್ಲಿ 4,231 ರನ್ ಗಳಿಸಿ ತಮ್ಮ ಟಿ20ಐ ವೃತ್ತಿಜೀವನವನ್ನು ಅಂತ್ಯಗೊಳಿಸಿದರು. ಅವರು ಐದು ಶತಕಗಳು ಮತ್ತು 32 ಅರ್ಧಶತಕಗಳನ್ನು ದಾಖಲಿಸಿದ್ದರು. ಅಲ್ಲದೆ, 12 ಇನಿಂಗ್ಸ್‌ಗಳಲ್ಲಿ ಖಾತೆ ತೆರೆಯದೇ ಔಟಾಗಿದ್ದರು.
FIFTY in just 2⃣3⃣ deliveries 🔥
— BCCI (@BCCI) July 25, 2026
A knock full of intent from vice-captain Tilak Varma 🫡
Updates ▶️ https://t.co/Z8UUziVx8d#TeamIndia | #ZIMvIND | @TilakV9 pic.twitter.com/FqNKtur3vM
4,188 ರನ್‌ಗಳೊಂದಿಗೆ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 3,272 ರನ್ ಗಳಿಸಿರುವ ಸೂರ್ಯಕುಮಾರ್ ಯಾದವ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲಿಸಿದರೂ, ಅವರನ್ನು ನಾಯಕತ್ವದಿಂದ ವಜಾಗೊಳಿಸಿ ಟಿ20 ತಂಡದಿಂದ ಕೈಬಿಡಲಾಯಿತು ಎಂಬುದು ಅಚ್ಚರಿಯ ಬೆಳವಣಿಗೆಯಾಯಿತು.